ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 9/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಸ ಬೈಬಲ್‌ ಭಾಷಾಂತರಗಳು
  • ಭೂಕಂಪದಿಂದ ದೃಷ್ಟಿ
  • ಮೊಲೆಯೂಟ ಕಾಪಾಡುತ್ತದೆ
  • ವಿನಾಯಿತಿ ಮಾಡುವುದು
  • ಕೂಸು ಬದುಕಿ ಉಳಿಯುವಿಕೆ
  • ದಯವಿಟ್ಟು ನಗದು ಕೊಡಬೇಡಿ!
  • ಜಗತ್ತನ್ನು ಗಮನಿಸುವುದು
    ಎಚ್ಚರ!—2002
  • ಪೊಲೀಸ್‌ ಸಂರಕ್ಷಣೆ ನಿರೀಕ್ಷೆಗಳು ಮತ್ತು ಭಯಗಳು
    ಎಚ್ಚರ!—2002
  • ಕಳ್ಳರಿಲ್ಲದ ಒಂದು ಲೋಕ
    ಕಾವಲಿನಬುರುಜು—1993
  • ಪೊಲೀಸರು ಅವರ ಭವಿಷ್ಯವೇನು?
    ಎಚ್ಚರ!—2002
ಎಚ್ಚರ!—1991
g91 9/8 ಪು. 28

ಜಗತ್ತನ್ನು ಗಮನಿಸುವುದು

ಹೊಸ ಬೈಬಲ್‌ ಭಾಷಾಂತರಗಳು

ಪೂರ್ಣ ಬೈಬಲು ಯಾ ಭಾಗಗಳು 1,928 ವಿವಿಧ ಭಾಷೆಗಳಿಗೆ ತರ್ಜುಮೆಯಾಗಿರುವುದರಿಂದ ಈಗ ಅಂಶಿಕವಾಗಿ ಯಾ ಪೂರ್ತಿಯಾಗಿ ಜಗತ್ತಿನ ಜನಸಂಖ್ಯೆಯಲ್ಲಿ ಸೇಕಡ 98 ಜನರಿಗೆ ದೊರೆಯುತ್ತದೆ. 1989ರಲ್ಲಿ ಬೈಬಲಿನ 21 ಹೊಸ ಭಾಷಾಂತರಗಳು ಪ್ರಕಟಿಸಲ್ಪಟ್ಟವೆಂದು ಫ್ರೆಂಚ್‌ ವಾರ್ತಾಪತ್ರಿಕೆ ಲ್ರಕ್ವಾ ತಿಳಿಸಿತು. ಈ ಹೊಸ ಭಾಷಾಂತರಗಳಲ್ಲಿ ಪಾಪ್ವ ನ್ಯೂಗಿನಿಯ ಕೆಲವು ಭಾಗಗಳಲ್ಲಿ ಮಾತಾಡುವ ಪಿಡಿನ್ಜ್‌ ಇಂಗ್ಲಿಷ್‌ ರೀತಿಯ ಟಾಕ್‌ ಪಿಸಿನ್‌ ಭಾಷೆ; ಸೌತ್‌ ಪೆಸಿಫಿಕ್‌ನ ಟ್ರೂಕ್‌ ಮತಿತ್ತರ ದ್ವೀಪಗಳಲ್ಲಿ ಮಾತನಾಡುವ ಟ್ರೂಕೀಸ್‌ ಭಾಷೆ; ಆಗ್ನೇಯ ಏಷ್ಯಾದ ಚೈನೀಸ್‌ ಭಾಷೆಗೆ ಸೇರದ ಸೈನೊ-ಟಿಬೆಟನ್‌ ಭಾಷೆಯಾದ ಲಾಹು; ಮತ್ತು ಬಾಂಗ್ಲಾದೇಶದಲ್ಲಿ ಮಾತಾಡುವ ಬಾಮ್‌ ಸೇರಿವೆ. ರಷ್ಯಾ ಮತ್ತು ಸ್ಕ್ಯಾಂಡಿನೇವಿಯದ ಕೆಲವು ಭಾಗಗಳಲ್ಲಿ ಮಾತಾಡುವ ಲ್ಯಾಷಿ ಮತ್ತು ಜಿಪ್ಸಿಗಳ ಭಾಷೆಯಾದ ರೋಮನಿಯಲ್ಲಿ ಈಗ ಭಾಷಾಂತರದ ಕೆಲಸ ನಡೆಯುತ್ತಿದೆ. (g90 7/8)

ಭೂಕಂಪದಿಂದ ದೃಷ್ಟಿ

ಆಸ್ಟ್ರೇಲಿಯದ ನ್ಯೂಕಾಸ್‌ಲ್‌ನ 84 ವಯಸ್ಸಿನ ನಿವಾಸಿಗೆ ಕೆಲವು ತಿಂಗಳುಗಳ ಹಿಂದೆ ನಡೆದ ವಿಪತ್ಕಾರಕ ಭೂಕಂಪದಿಂದಾಗಿ ಥಟ್ಟನೆ ದೃಷ್ಟಿ ಪುನಃ ದೊರಕಿತು. ಮೂರು ವರ್ಷಗಳಲ್ಲಿ ಇವಳು ಕೇವಲ ಕಪ್ಪು ಆಕೃತಿಗಳನ್ನು ಮಾತ್ರ ನೋಡುತ್ತಿದ್ದಳು, ಆದರೆ ಭೂಕಂಪದ ಬಳಿಕ ಅವಳಿಗೆ ವಾರ್ತಾಪತ್ರಿಕೆಯನ್ನೂ ಓದಲು ಸಾಧ್ಯವಾಯಿತು. ಭೂಕಂಪದಿಂದಾದ ಅಕರ್ಮಣ್ಯತೆಯಿಂದಾಗಿ ಆ್ಯಡ್ರೀನಲಿನ್‌ ಅವಳ ಕಣ್ಣುಗಳಿಗೆ ಹರಿದು ಅವಳಿಗೆ ದೃಷ್ಟಿ ಕೊಟ್ಟಿತೆಂದು ಅವಳ ಡಾಕ್ಟರರ ಅಭಿಪ್ರಾಯ. ಅವಳು ಹೀಗೆಂದಳೆಂದು ದ ವೆಸ್ಟ್‌ ಆಸ್ಟ್ರೇಲಿಯನ್‌ ಪತ್ರಿಕೆ ವರದಿ ಮಾಡಿತು: “ನಾನು ಸ್ಪಷ್ಟವಾಗಿ ಕಂಡೆ, ಅಷ್ಟೆ. ಕೆಲವೇ ಸೆಕೆಂಡುಗಳಲ್ಲಿ ಇದು ನಡೆಯಿತು. ನನ್ನ ಕಣ್ಣು ಅಗಲವಾಗಿ ತೆರೆಯಿತೆಂಬಂತೆ ಭಾಸವಾಯಿತು. ಅದು ಹಾಗೆ ತೆರೆಯಲಿಲ್ಲವೆಂಬುದು ನಿಜ. ಆದರೆ ನಾನು ನೋಡತೊಡಗಿದೆ ಮತ್ತು ಅಂದಿನಿಂದ ಅದು ಹಾಗೆಯೆ ಉಳಿದದೆ.” (g90 6/22)

ಮೊಲೆಯೂಟ ಕಾಪಾಡುತ್ತದೆ

ತಮ್ಮ ಶಿಶುಗಳಿಗೆ ಮೊಲೆಯುಣಿಸುವ ತಾಯಂದಿರು ಅವುಗಳಿಗೆ ಒಂದು ಗಮನಾರ್ಹ ಪ್ರಯೋಜನವನ್ನು—ರೋಗದ ಸೋಂಕಿನಲ್ಲಿ ಕಮ್ಮಿಯನ್ನು—ಕೊಡುತ್ತಾರೆಂದು ಸ್ಕಾಟ್ಲೆಂಡಿನ ಡಂಡಿಯ ನೈನ್ವೆಲ್ಸ್‌ ಹಾಸ್ಪಿಟಲ್‌ ಮತ್ತು ಮೆಡಿಕಲ್‌ ಸ್ಕೂಲಿನ ಪ್ರೊಫೆಸರ್‌ ಪೀಟರ್‌ ಹವಿಯ ನಾಯಕತ್ವದ ಡಾಕ್ಟರರ ಒಂದು ತಂಡ ತೀರ್ಮಾನಿಸಿತು. ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ, ಶಿಶುಗಳ ಪ್ರಥಮ ವರ್ಷದ ಒಂದು ಅಧ್ಯಯನ, ಜೀವನದ ಪ್ರಥಮ 13 ವಾರಗಳಲ್ಲಿ ಮೊಲೆಯುಣಿಸಲ್ಪಟ್ಟ ಶಿಶುಗಳು ಸೀಸೆಯೂಟ ಮಾಡಿದ ಶಿಶುಗಳಿಗಿಂತ ಮೂರರಲ್ಲಿ ಒಂದಂಶಕ್ಕಿಂತಲೂ ಕಡಿಮೆ ಜಠರಾಂತ್ರ ರೋಗಗಳಿಗೆ ತುತ್ತಾಗುತ್ತವೆಂದು ವರದಿ ಮಾಡಿತು. ಮೊಲೆ ಕುಡಿಸುವುದರಿಂದ ಉಸಿರಾಟದ ಸಮಸ್ಯೆಗಳಲ್ಲಿಯೂ ಇದೇ ರೀತಿಯ ಆದರೆ ಚಿಕ್ಕ ಪರಿಣಾಮವಾಗುತ್ತದೆ. ಮಕ್ಕಳಿಗೆ ಈ ಪ್ರಯೋಜನಗಳು ಬರಬೇಕಾದರೆ ತಾಯಂದಿರು “ಕಡಿಮೆ ಪಕ್ಷ ಮೂರು ತಿಂಗಳು ಮೊಲೆಯುಣಿಸಬೇಕು” ಎಂದು ಡಾಕ್ಟರರು ತೀರ್ಮಾನಿಸಿದರು. (g90 7/8)

ವಿನಾಯಿತಿ ಮಾಡುವುದು

ವಿನಂತಿಸುವಲ್ಲಿ, ಪ್ರಭು ಭೋಜನದ ಸಮಯ ಪಾದ್ರಿಗಳು ಮದ್ಯರಹಿತ ದ್ರಾಕ್ಷಾರಸವನ್ನು ಕುಡಿಯಲು ಅನುಮತಿಸುವುದು ವ್ಯಾಟಿಕನಿನ ಸ್ಥಾಪಿತ ಪಾಲಿಸಿ. ಆದರೆ ಇತ್ತೀಚೆಗೆ, ಇಟೆಲಿಯ ಇಡೀ ಫ್ರುಯ್ಲಿ ಪ್ರದೇಶದ ಪಾದ್ರಿಗಳಿಗೆ ಪ್ರಭು ಭೋಜನದ ಸಮಯದಲ್ಲಿ ಹುಳಿ ಹಿಡಿಸದ ದ್ರಾಕ್ಷಾರಸವನ್ನು ಕುಡಿಯಲು ಅನುಮತಿ ದೊರಕಿದೆ. ಇದೇಕೆ? ಕ್ಯಾಥಲಿಕ್‌ ಹೆರಲ್ಡ್‌ ಪತ್ರಿಕೆಗನುಸಾರ, ಪಾದ್ರಿಗಳಲ್ಲಿ ಮದ್ಯರೋಗಿಗಳು ಪ್ರಭು ಭೋಜನದಲ್ಲಿ ಒಂದು ಗುಟುಕು ದ್ರಾಕ್ಷಾಮದ್ಯ ತೆಗೆದುಕೊಳ್ಳುವುದರಿಂದ “ಭಾರಿ ಕುಡಿತಕ್ಕೆ ಹಿಂದೆ” ಹೋಗಾರು ಎಂಬ ಭಯದಿಂದ ಪಾದ್ರಿಗಳು ಈ ವಿನಂತಿ ಮಾಡಿದರು. ಈ ಕ್ಯಾಥಲಿಕ್‌ ಪತ್ರಿಕೆ ಮತ್ತೂ ಗಮನಿಸಿದ್ದು: “ಫ್ರುಯ್ಲಿ ಪ್ರದೇಶದ ಜನಸಂಖ್ಯೆಯಲ್ಲಿ 15 ಪ್ರತಿಶತಕ್ಕೆ ಕುಡಿಯುವ ಸಮಸ್ಯೆ ಇದೆ ಮತ್ತು ಈ ಪ್ರದೇಶದ 400 ಪಾದ್ರಿಗಳು ದೊಡ್ಡ ಅಪಾಯದ ಮಟ್ಟದಲ್ಲಿದ್ದಾರೆ.” (g90 4/22)

ಕೂಸು ಬದುಕಿ ಉಳಿಯುವಿಕೆ

ಡಚ್‌ ಡೆಮೊಗ್ರ್ಯಾಫಿಕ್‌ ಇನ್‌ಸಿಟ್ಟ್ಯೂಟಿನ ಪ್ರಕಟನೆಯಾದ ಡೆಮೊಸ್‌ ಬುಲೆಟಿನಿಗನುಸಾರ ಪ್ರತಿದಿನ, ಲೋಕವ್ಯಾಪಕವಾಗಿ, ಸರಾಸರಿ 381,000 ಕೂಸುಗಳು ಜನಿಸುತ್ತವೆ. ಆದರೆ ಅವು ಎಷ್ಟು ಕಾಲ ಬದುಕುತ್ತವೆಂಬುದು ಅಧಿಕಾಂಶ ಅವು ಹುಟ್ಟುವುದೆಲ್ಲಿ ಎಂಬುದರ ಮೇಲೆ ಹೊಂದಿಕೊಂಡಿದೆ. ಜಪಾನಿನಲ್ಲಿ ಶಿಶುಮರಣ ಲೋಕದಲ್ಲಿಯೆ ಅತಿ ಕಡಿಮೆ. ಅಲ್ಲಿ, ಅವುಗಳ ಪ್ರಥಮ ವರ್ಷದ ಜೀವಿತದಲ್ಲಿ 1,000 ಶಿಶುಗಳಲ್ಲಿ 5 ಮಾತ್ರ ಸಾಯುತ್ತವೆ. ಇತರ ದೇಶಗಳಲ್ಲಿ ಶಿಶುಮರಣದ ಪ್ರಮಾಣ ಎಷ್ಟೊ ಹೆಚ್ಚು. ಸೀಲಿನಲ್ಲಿ, ಪ್ರಥಮ ವರ್ಷದಲ್ಲಿ 1,000 ಶಿಶುಗಳಲ್ಲಿ 71 ಸಾಯುವಾಗ, ಪೂರ್ವ ಮತ್ತು ಪಶ್ಚಿಮ ಆಫ್ರಿಕದಲ್ಲಿ 1,000 ಶಿಶುಗಳಲ್ಲಿ 110 ಸಾಯುತ್ತವೆ. ಅಫಾನ್ಗಿಸ್ತಾನಿನಲ್ಲಿ, ಶಿಶು ಬದುಕಿ ಉಳಿಯುವುದು ಇನ್ನೂ ಕೆಳಮಟ್ಟದಲ್ಲಿದೆ. ಅಲ್ಲಿ, 1,000 ಕೂಸುಗಳಲ್ಲಿ 194 ಸಾಯುತ್ತವೆ. ಲೋಕವ್ಯಾಪಕವಾಗಿ, ಪ್ರತಿ ದಿನ ಸುಮಾರು 31,000 ಶಿಶುಗಳು ಸಾಯುತ್ತವೆ. (g90 6/22)

ದಯವಿಟ್ಟು ನಗದು ಕೊಡಬೇಡಿ!

ದಕ್ಷಿಣ ಆಫ್ರಿಕದ ಜೊಹಾನೆಸ್‌ಬರ್ಗಿನ ಒಂದು ಫರ್ನಿಚರ್‌ ಫ್ಯಾಕ್ಟರಿಯ ಷೋರೂಮಿಗೆ ಬರುವ ಗಿರಾಕಿಗಳನ್ನು “ನಾವು ನಗದು ಹಣ ತಕ್ಕೊಳ್ಳುವುದಿಲ್ಲ. ಚೆಕ್‌ ಯಾ ಕ್ರೆಡಿಟ್‌ ಕಾರ್ಡ್‌ ಮಾತ್ರ” ಎಂಬ ಬರಹ ಎದುರಿಸುತ್ತದೆ. ಜೊಹಾನೆಸ್‌ಬರ್ಗಿನ ದ ಸ್ಟಾರ್‌ ಪತ್ರಿಕೆಗನುಸಾರ, ನಗದು, ಹಿಂದಾಕ್ರಮಣಗಾರರನ್ನೂ ದರೋಡೆಕೋರರನ್ನೂ ಆಕರ್ಷಿಸುವುದರಿಂದ ಖಜಾನೆಯಲ್ಲಿ ಹಣ ಇಡುವುದಿಲವ್ಲೆಂದೂ ಹಣವನ್ನು ಬ್ಯಾಂಕಿಗೆ ಒಯ್ಯುವುದಿಲ್ಲವೆಂದೂ ಅದರ ಧಣಿಯ ಅಭಿಪ್ರಾಯವಂತೆ. ಹೀಗೆ, ಸರ್ವ ವ್ಯಾಪಾರ ಕೇವಲ ಚೆಕ್‌ ಯಾ ಕ್ರೆಡಿಟ್‌ ಕಾರ್ಡಿನಲ್ಲಿ ನಡೆಯುತ್ತದೆ. ಕೆಲಸಗಾರರಿಗೆ ಸಾಪ್ತಾಹಿಕ ವೇತನವೂ ಚೆಕ್‌ಗಳಲ್ಲಿ ದೊರೆಯುತ್ತದೆ. ಧಣಿ ತನ್ನ ಕೆಲಸಗಾರರ ಕುರಿತು ಹೇಳುವುದು: “ಪ್ರತಿ ಸಾರಿ ಅಪರಿಚಿತನೊಬ್ಬನು ಒಳಬಂದಾಗ ಅವರು ಕಳವಳಗೊಳ್ಳತ್ತಿದ್ದರು. ಆದರೆ ಈಗ ನಗದು ಇಲ್ಲದ ಈ ಪಾಲಿಸಿಯ ಕಾರಣ ಅವರು ಹೆಚ್ಚು ಹಗುರ ಮನಸ್ಸಿನವರಾಗಿದ್ದಾರೆ.” (g90 6/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ