ಸಿರ್ಕ ಸ್ಫರ್ಶಿಸಬಹುದಾದ ಆಮ್ಲ
ಫ್ರಾನ್ಸ್‌ನ ಎಚ್ಚರ!ದ ಬಾತ್ಮೀದಾರನಿಂದ
ಸಿರ್ಕದ ಉಪಯೋಗವು ಬಹಳ ಪುರಾತನದಿಂದಲೇ ಇದೆ. ರೋಮನ್ ಸೈನ್ಯ ದಳವು ಸಿರ್ಕ ಮತ್ತು ನೀರನ್ನು ಬೆರಸಿ ಕುಡಿಯಿತು. ಸಿರ್ಕಕ್ಕೆ ಅವರ ಹೆಸರು ಏಸ್‌ಟುಮ್.
ನಾವು ಇಂದು “ಏಸಿಟಿಕ್ ಆ್ಯಸಿಡ್” ಎಂಬ ಪದವನ್ನು ಉಪಯೋಗಿಸಿ, ಸಿರ್ಕದ ಮೂಲ ಘಟಕಾಂಶವನ್ನು ವಿವರಿಸುತ್ತೇವೆ, ಯಾಕಂದರೆ ದ್ರಾಕ್ಷಿ ಮದ್ಯದಂಥಹ (ವೈನ್) ಮದ್ಯಸಾರದ ದ್ರವಗಳ ಆಮ್ಲೀಯ ಹುದುಗೆಬ್ಬಿಸುವದರ ಮೂಲಕ ಸಿರ್ಕವನ್ನು ಪಡೆಯಲಾಗುತ್ತದೆ.
ನಮ್ಮ ಇಂಗ್ಲಿಷ್ ಶಬ್ದವಾದ “ವಿನೆಗರ್“ ಎರಡು ಫ್ರೆಂಚ್ ಶಬ್ದಗಳಿಂದ ಬಂದಿದೆ: ಯಿನ್ (ವೈನ್) ಮತ್ತು ಎಐಗ್ರೆ (ಹುಳಿ). ಆದರೆ ದ್ರಾಕ್ಷಿ ಮದ್ಯ ಹುಳಿಯಾಗಿ, ಸಿರ್ಕವಾಗಿ ಪರಿಣಮಿಸುವದಾದರೂ ಹೇಗೆ?
ಏಕಾಣುಜೀವಿಯ ಒಂದು ಉತ್ಪಾದನೆ
ಕೆಲವು ವಾರಗಳ ತನಕ ಬೆಚ್ಚಗೆನ ಕೋಣೆಯಲ್ಲಿ ತೆರೆದಿಟ್ಟ ಒಂದು ದ್ರಾಕ್ಷಿ ಮದ್ಯ ಸೀಸೆಯನ್ನು ಬಿಡುವದಾದರೆ, ದ್ರಾಕ್ಷಿ ಮದ್ಯದ ಮೇಲ್ಭಾಗದಲ್ಲಿ ಒಂದು ತೆಳು ಪೊರೆಯು ರೂಪುಗೊಳ್ಳುತ್ತದೆ. ಈ ಪೊರೆಯು, ಗಾಳಿಯಲ್ಲಿರುವ ಅತಿ ಸೂಕ್ಷ್ಮಾಣುಗಳಿಂದ ಒಟ್ಟಿಗೆ ಸಂಗ್ರಹಿತವಾದ ಕಣಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಅವು ದ್ರಾಕ್ಷಿ ಮದ್ಯದ ಮೇಲೆ ನೆಲಸಿವೆ ಯಾಕಂದರೆ ಸಂಖ್ಯೆಯಲ್ಲಿ ಬೆಳೆಯಲು ಇದು ಅವರಿಗೆ ಅತ್ಯಂತ ಉತ್ತಮವಾದ ಪರಿಸರವಾಗಿರುತ್ತದೆ.
ನಾವೊಂದು ತೊಟ್ಟಿನ ರುಚಿನೋಡೋಣ. ಎಂಥಹ ನಿರಾಶಜನಕ! ನಮ್ಮ ದ್ರಾಕ್ಷಿ ಮದ್ಯ ಹುದುಗೆಬ್ಬಿಕೊಂಡು, ಈಗ ಹುಳಿಯಾಗಿರುತ್ತದೆ. ಅದು ಸಿರ್ಕವಾಗಿ ಪರಿವರ್ತನೆಗೊಂಡಿರುತ್ತದೆ. ಹೀಗೆ ಹುಳಿಯಾಗಲು ಕಾರಣವೇನು? ಏಸಿಟೊಬಾಕ್ಟರ್ ಏಸಿಟಿ ಎಂದು ಕರೆಯಲ್ಪಡುವ ಒಂದು ಸೂಕ್ಷ್ಮಾಣುಜೀವಿಯಾಗಿದೆ. ಅದಕ್ಕೆ ನೀವು ಎಷ್ಟೇ ಪ್ರಮಾಣದಲ್ಲಿ ದ್ರಾಕ್ಷಿ ಮದ್ಯ, ಏಲ್ ಮದ್ಯ, ಇಲ್ಲವೇ ಸೇಬು ಮದ್ಯವನ್ನು ಕೊಡಿರಿ; ಶೇಕಡ 12ಕ್ಕಿಂತ ಹೆಚ್ಚು ಮದ್ಯಸಾರ ಇಲ್ಲದಿದ್ದರೆ, ಅದು ಹುಲುಸಾಗಿ ವೃದ್ಧಿಯಾಗುತ್ತದೆ.
ವಿಜ್ಞಾನಿಗಳು ಅದನ್ನು ಮತ್ತು ಅದರ ಕುಟುಂಬವನ್ನು ವಾಯ್ವಣುಜೀವಿಗಳು (ಏಅರೋಬ್) ಎಂದು ಪರಿಗಣಿಸುತ್ತಾರೆ. ಅದರ ಅರ್ಥ ಅವುಗಳು ಆಮ್ಲಜನಕವಿಲ್ಲದೆ ಪಾರಾಗಿ ಉಳಿಯಲು ಶಕ್ಯವಾಗಿಲ್ಲ. ಆದುದರಿಂದ ಈ ಸೂಕ್ಷ್ಮ ಏಕಾಣುಗಳು ದ್ರವದ ಮೇಲ್ಭಾಗದಲ್ಲಿ ಮಾತ್ರ ಕಾರ್ಯ ನಿರ್ವಹಿಸಶಕ್ಯವಾಗಿವೆ, ಅವು ಮುಳುಗಿದರೆ, ಉಸಿರುಕಟ್ಟಿ ಸಾಯುತ್ತವೆ. ಅದು ಮದ್ಯಸಾರದ ಪಾನೀಯಗಳನ್ನು ಸಿರ್ಕವಾಗಿ ಮಾಡುವದರ ಕಾರ್ಯಗತಿಗೆ ಅಂತ್ಯ ತರುತ್ತದೆ.
ಏಸಿಟೊಬಾಕ್ಟರ್ ಏಸಿಟಿ ಮತ್ತು ಅದರ ಮಿತ್ರರುಗಳು ದೊಡ್ಡ ಸಂಖ್ಯೆಯಲ್ಲಿ ದ್ರಾಕ್ಷಿ ಮದ್ಯದ ಮೇಲ್ಭಾಗದಲ್ಲಿ ಒಟ್ಟಾಗಿ ಜಮೆಗೊಳ್ಳುತ್ತವೆ, ಮತ್ತು ಹೀಗೆ ಸಿರ್ಕದ ತಾಯಿ (ಮದರ್ ಆಫ್ ವಿನೆಗರ್) ಎಂದು ಕರೆಯಲ್ಪಡುವ ತೆಳು ಪೊರೆಯನ್ನು ಅವುಗಳು ರಚಿಸುತ್ತವೆ. ಚಳಿಗೆ ಸೂಕ್ಷ್ಮಸಂವೇದಿಗಳಾಗಿದ್ದು, 30 ಡಿಗ್ರಿ ಸೆಂಟಿಗ್ರೇಡ್ (86 ಡಿಗ್ರಿ F) ಶಾಕಾಂಶವು ಅವುಗಳಿಗೆ ತಕ್ಕದ್ದಾಗಿರುತ್ತದೆ.
ಈಗ ನಿಮಗೆ ಸಿರ್ಕದ ಕುರಿತು ಸ್ವಲ್ಪ ಹೆಚ್ಚು ತಿಳಿದದೆ, ಆದುದರಿಂದ ಫ್ರಾನ್ಸಿನ ಸಿರ್ಕ ಉದ್ದಿಮೆಯ ಕೇಂದ್ರವಾಗಿರುವ ಒರ್ಲಿನ್ಸ್‌ನ ಒಂದು ಸಾಂಪ್ರದಾಯಿಕ ಯಂತ್ರಾಗಾರಕ್ಕೆ ನಾವು ಭೇಟಿಯನ್ನು ನೀಡೋಣ.
ಒರ್ಲಿನ್ಸ್‌ನ ಕಾರ್ಯವಿಧಾನ
ಎಲ್ಲಾ ಆಕಾರದ ಮತ್ತ ಪ್ರಮಾಣದ ಪೀಪಾಯಿಗಳು, ಬ್ಯಾರೆಲ್ಸ್ (ಉರುಳೆಗಳು), ಮತ್ತು ತೊಟ್ಟಿಗಳು (ವ್ಯಾಟ್ಸ್) ಇರುವ ಒಂದು ದೊಡ್ಡ ಪ್ರಮಾಣದ ದಾಸ್ತಾನುಗೃಹಕ್ಕೆ ನಾವು ಪ್ರವೇಶಿಸುತ್ತೇವೆ. ಕೆಲವು ಓಕ್ ಮರದಿಂದ ಮತ್ತು ಇನ್ನಿತರವುಗಳು ತುಕ್ಕು ಹಿಡಿಯದ ಉಕ್ಕಿನಿಂದ ಮಾಡಲ್ಪಟ್ಟವುಗಳಾಗಿವೆ. ದ್ರಾಕ್ಷಿ ಮದ್ಯವು (ವೈನ್) ಬಂದಂತೆ ದಾಸ್ತಾನು ಇಡಲು ಅವುಗಳಲ್ಲಿ ಹಲವನ್ನು ಉಪಯೋಗಿಸಲಾಗುತ್ತದೆ. ಇಲ್ಲಿ ಸಿರ್ಕ-ಮಾಡುವ ಕುಶಲಿಯ ಅವನ ಸುಗ್ಗಿಯ ದ್ರಾಕ್ಷಿಮದ್ಯವನ್ನು ಮಿಶ್ರಗೊಳಿಸುತ್ತಾನೆ ಮತ್ತು ಸಂಮಿಳಿತಗೊಳಿಸುತ್ತಾನೆ ಮತ್ತು ಮದ್ಯಸಾರದ ಮಟ್ಟವನ್ನು 8 ಯಾ 9 ಶೇಕಡಕ್ಕೆ ಅಳವಡಿಸುತ್ತಾನೆ. ಇತರ ತೊಟ್ಟಿಗಳು ದಾಸ್ತಾನು ಇಡಲು ಮತ್ತು ಸಿರ್ಕವನ್ನು ಬಲಿತದ್ದಾಗಿ ಮಾಡಲು ಬಳಸಲಾಗುತ್ತದೆ. ಕೊನೆಗೆ, ನಾವು ಒಂದು ಪ್ರಾಮುಖ್ಯ ವಿಭಾಗಕ್ಕೆ ಬರುತ್ತವೆ, ಇಲ್ಲಿ 225 ಲಿಟರುಗಳ ಬ್ಯಾರೆಲ್‌ಗಳನ್ನು ಉಪಯೋಗಿಸಿ ದ್ರಾಕ್ಷಿ ಮದ್ಯವನ್ನು ಸಿರ್ಕವನ್ನಾಗಿ ಪರಿವರ್ತಿಸಲಾಗುತ್ತದೆ.
ಈ ದೊಡ್ಡ ಬ್ಯಾರೆಲ್‌ಗಳನ್ನು ಸಾಲಾಗಿ ಪಕ್ಕವನ್ನು ಮೇಲ್ಮುಖವಾಗಿ ಇಡಲಾಗಿವೆ. ಇದರಿಂದ ಒಳಗಿನ ದ್ರವ ಹೆಚ್ಚು ಗಾಳಿಗೆ ಒಡ್ಡಲ್ಪಡುವಂತಾಗುತ್ತದೆ. ಗಾಳಿಯು ಬ್ಯಾರೆಲ್‌ನ ಮೇಲ್ಭಾಗದಲ್ಲಿರುವ “ಕಣ್ಣಿನ” ಮೂಲಕ ಯಾ ಸಣ್ಣ ತೂತಿನ ಮೂಲಕ ಪ್ರವೇಶಿಸುತ್ತದೆ. ಈ ತೂತು, ಸಿರ್ಕ ತಯಾರಕನಿಗೆ ಹುದುಗೆಬ್ಬಿದ್ದನ್ನು ಪರೀಕ್ಷಿಸಲು ಸಾಧ್ಯಮಾಡುತ್ತದೆ. ಇದೆಲ್ಲವನ್ನು ಮಾಡಲು, ಬ್ಯಾರೆಲ್‌ನ ಅದರ ಸಾಮರ್ಥ್ಯದ ಐದರಲ್ಲಿ ನಾಲ್ಕು ಅಂಶಗಳನ್ನು ಮಾತ್ರ ತುಂಬಲಾಗುತ್ತದೆ. ದ್ರಾಕ್ಷಿ ಮದ್ಯವನ್ನು ಸುಮಾರು 30 ಡಿಗ್ರಿ ಸೆಂಟಿಗ್ರೇಡ್ (86 ಡಿಗ್ರಿ F) ಶಾಕಾಂಶದಲ್ಲಿ ಸುರಿಯಲಾಗುತ್ತದೆ, ಮತ್ತು ಚಿಕ್ಕ ಪ್ರಮಾಣದ ಸಿರ್ಕವು ಇದರಲ್ಲಿ ಮಿಶ್ರಣಗೊಳಿಸಲಾಗುತ್ತದೆ. ಏಕಾಣುಜೀವಿಯು ಕಾರ್ಯವೆಸಗಲು ತೊಡಗುತ್ತದೆ, ಮತ್ತು ಮೂರು ಯಾ ನಾಲ್ಕು ದಿನಗಳ ನಂತರ, ಸಿರ್ಕದ ತಾಯಿಯು ದ್ರಾಕ್ಷಿ ಮದ್ಯದ ಮೇಲ್ಭಾಗವನ್ನು ಆವರಿಸುತ್ತದೆ.
ಎರಡರಿಂದ ಮೂರು ವಾರಗಳೊಳಗೆ, ಸಿರ್ಕದ ಮೊದಲನೆಯ ತಂಡವು ಸಿದ್ಧವಾಗುತ್ತದೆ. ಸುಮಾರು 50 ಲಿಟರುಗಳನ್ನು ಬ್ಯಾರೆಲ್‌ನ ಕೆಳಭಾಗದಲ್ಲಿರುವ ಬಿರಡೆಯ ಮೂಲಕ ತೆಗೆಯಲಾಗುತ್ತದೆ. ಇದನ್ನು ಅಷ್ಟೇ ಮೊತ್ತದ ದ್ರಾಕ್ಷಿ ಮದ್ಯದಿಂದ ತುಂಬಲಾಗುತ್ತದೆ, ಆಗ ಮೇಲ್ಭಾಗದಲ್ಲಿರುವ ಸೂಕ್ಷ್ಮಾಣುಜೀವಿಗಳ ತೆಳು ಪೊರೆಯನ್ನು ಒಡೆಯದಂತೆ ಜಾಗ್ರತೆಯನ್ನು ವಹಿಸಲಾಗುತ್ತದೆ.
ಮೂರು ವಾರಗಳ ನಂತರ, ಪುನಃ ಅಷ್ಟೇ ಮೊತ್ತದ ಸಿರ್ಕವನ್ನು ತೆಗೆಯಲಾಗುತ್ತದೆ, ಮತ್ತು ಹೀಗೆಯೇ ಮುಂದರಿಯುತ್ತದೆ. ಈ ವಿಧಾನದ ಮೂಲಕ ಪ್ರತಿದಿನ ಪ್ರತಿ ಬ್ಯಾರೆಲ್‌ನಿಂದ ಎರಡರಿಂದ ಮೂರು ಲಿಟರ್ ಸಿರ್ಕವನ್ನು ಉತ್ಪಾದಿಸಲಾಗುತ್ತದೆ. ಇದು ಕೊಂಚವೆಂದು ಭಾಸವಾಗಬಹುದು, ಆದರೆ ನಾವು ಸಂದರ್ಶಿಸಿದ ಫ್ಯಾಕ್ಟರಿಯಲ್ಲಿ 2,500 ಬ್ಯಾರೆಲ್‌ಗಳಿದ್ದವು, ಮತ್ತು ವಾರ್ಷಿಕ ಉತ್ಪಾದನೆಯ ಕೆಲವು ನೂರು ಸಾವಿರ ಲಿಟರುಗಳಷ್ಟು ಆಗುತ್ತದೆ.
ಈಗ ಅನೇಕ ಇತರ ವಿಧಾನಗಳು ಆವಶ್ಯಕವಾಗಿವೆ, ಅದು ಬಯಸುವ ಗುಣಮಟ್ಟದ ಮೇಲೆ ಹೊಂದಿಕೊಂಡಿರುತ್ತದೆ. ಉದಾಹರಣೆಗೆ, ಅಶುದ್ಧತೆಗಳನ್ನು ತೆಗೆಯಲಾಗುತ್ತದೆ ಮತ್ತು ಶುಭ್ರಗೊಳಿಸಲು ಸಿರ್ಕವನ್ನು ಸೋಸಲಾಗುತ್ತದೆ. ಅನಂತರ ಸಿರ್ಕವನ್ನು ದೊಡ್ಡ ಓಕ್ ಮರದ ಬ್ಯಾರೆಲ್‌ಗಳಲ್ಲಿ ಕೆಲವು ತಿಂಗಳುಗಳ ತನಕ ಶೇಖರಿಸಿ, ಅದನ್ನು ಬಲಿತದ್ದಾಗಿ ಮಾಡಲಾಗುತ್ತದೆ. ಅನಂತರ, ಅದನ್ನು ಸೀಸೆಗಳಲ್ಲಿ ತುಂಬಿಸಿ, ಲೋಕದ ಎಲ್ಲೆಡೆಗಳಲ್ಲಿ ರವಾನಿಸಲಾಗುತ್ತದೆ.
ಒರ್ಲಿನ್ಸ್‌ನ ಕಾರ್ಯವಿಧಾನವನ್ನು ಇನ್ನೂ ಸಿರ್ಕ ಮಾಡಲು ಬಳಸಲಾಗುತ್ತದೆ, ಆದರೆ ಗತಿಸಿದ ವರ್ಷಗಳಲ್ಲಿ ಇತರ ವಿಧಾನಗಳನ್ನು, ಆಮ್ಲೀಕರಣಮಾಡುವದನ್ನು ಪ್ರಗತಿ ಮಾಡಲು ಮತ್ತು ಇನ್ನಷ್ಟು ವೇಗಗೊಳಿಸಲು ಕಂಡುಹಿಡಿಯಲಾಗಿದೆ. ಇದು ಮುಳುಗಿಸಿಟ್ಟು ಹುದುಗೆಬ್ಬಿಸುವ ಕಾರ್ಯವಿಧಾನವಾಗಿದೆ. ವಾಯುವನ್ನು ಸತತವಾಗಿ ಬಿಡಲಾಗುತ್ತದೆ, ಇದರಿಂದ ಗಾಳಿಯ ಗುಳೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಉಂಟಾಗಿ, ಮದ್ಯಸಾರದ ಮಿಶ್ರಣದಲ್ಲಿರುವ ಏಕಾಣುಜೀವಿಗಳಿಗೆ, ಅವುಗಳ ತೀವ್ರ ಬೆಳವಣಿಗೆಗೆ ಅಮ್ಲಜನಕವನ್ನು ಒದಗಿಸುತ್ತವೆ. ಈ ರೀತಿಯಲ್ಲಿ ಹೆಚ್ಚು ಸಿರ್ಕವು ಕಡಿಮೆ ಸಮಯದಲ್ಲಿ ಉತ್ಪಾದಿಸಲ್ಪಡುತ್ತದೆ.
ಬಹುವಿಧದ ಉಪಯೋಗಗಳು
ಸಿರ್ಕಕ್ಕೆ ಒಂದು ದೀರ್ಘಕಾಲದ ಇತಿಹಾಸವಿದೆ. ಹಿಬ್ರೂ ಮತ್ತು ಗ್ರೀಕ್ ಶಾಸ್ತ್ರವಚನಗಳೆರಡಲ್ಲಿಯೂ ಬೈಬಲು ಇದನ್ನು ಉಲ್ಲೇಖಿಸಿದೆ. (ಅರಣ್ಯಕಾಂಡ 6:3; ಯೋಹಾನ 19:29, 30) ಶತಮಾನಗಳಿಂದ ಅದರ ವೈದ್ಯಕೀಯ ಮೌಲ್ಯವನ್ನು ಪರಿಗಣಿಸಲಾಗಿದೆ. ಹಿಪ್ಪೊಕ್ರಟಸ್‌ನು ಅದನ್ನು ತನ್ನ ರೋಗಿಗಳಿಗೆ ಕೊಟ್ಟನು. ಮೂಸುಪ್ಪುವಿನಂತೆಯೇ, ಅದನ್ನು ಉತ್ತೇಜಕ ಮತ್ತು ಪುನರಾರೋಗ್ಯದಾಯಕವಾಗಿ ಬಳಸಲಾಗಿದೆ. ನೀರಿನಲ್ಲಿ ಅದನ್ನು ತೆಳು ಮಾಡಿ, ಮೃದು ಪೂತಿ ನಾಶಕವಾಗಿ (ಕೊಳೆತವನ್ನು ತಡೆಯುವ, ಅ್ಯಂಟಿಸೆಪ್ಟಿಕ್) ಉಪಯೋಗಿಸಲಾಗಿದೆ. ಮನೆಗಳಲ್ಲಿ, ಸಲಾಡ್ ತರಕಾರಿಗಳನ್ನು ತೊಳೆಯಲು ಮತ್ತು ಒಂದು ಮನೆವಾರ್ತೆಯ ಸಾಮಾನ್ಯ ಶುದ್ಧಕಾರಕವಾಗಿ ಉಪಯೋಗಿಸಲಾಗುತ್ತದೆ.
ಆದರೆ ಸಿರ್ಕವನ್ನು ಮುಖ್ಯವಾಗಿ ಅಡಿಗೆಯ ಉದ್ದೇಶಕ್ಕಾಗಿ ಬಳಸುತ್ತಾರೆ. ಅದು ಅತಿ ಸೂಕ್ಷ್ಮಾಣುಜೀವಿಗಳು ಬೆಳೆಯುವದನ್ನು ತಡೆಯುವದರಿಂದ, ಇದನ್ನು ಮಾಂಸದ, ಮೀನಿನ, ಹಣ್ಣಿನ ಮತ್ತು ಇತರ ನೀರುಳ್ಳಿ, ತೊಂಡೆಕಾಯಿ ಮತ್ತು ಹೂವುಕೋಸುವಿನಂತಹ (ಕಾಲಿಫವ್ಲರ್) ಅನೇಕ ತರಕಾರಿಗಳ ಉಪ್ಪಿನಕಾಯಿಯ ದ್ರಾವಣದಲ್ಲಿ ಉಪಯೋಗಿಸಲಾಗುತ್ತದೆ. ಮತ್ತು ಸಿರ್ಕವು ಸಲಾಡ್‌ಗಳ, ಸಾಸ್‌ಗಳ (ರುಚಿಕಟ್ಟಿನ ದ್ರವರೂಪದ ವ್ಯಂಜನ), ನಿಧಾನ ಬೇಯಿಸಿದ ಸ್ಟ್ಯೂಗಳ ಮತ್ತು ಇತರ ಭಕ್ಷ್ಯಗಳ ಸುವಾಸನೆಯನ್ನು ಹೆಚ್ಚಿಸುತ್ತದೆ.
ಹಾಗಾದರೆ, ಮುಂದಿನ ಸಮಯ ಊಟಕ್ಕಾಗಿ ಕುಳಿತಾಗ, ಈ ಸ್ಫರ್ಶಿಸಬಹುದಾದ ಆಮ್ಲ, ಸಿರ್ಕದಿಂದ ಅದರ ರುಚಿಯನ್ನು ವರ್ಧಿಸಿರಬಹುದು ಎಂಬದನ್ನು ನೆನಪಿಸಿರಿ. (g90 8/8)