ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 1/8 ಪು. 14-15
  • ಸೀಸ ಹೇರಿದ ಜಗತ್ತೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೀಸ ಹೇರಿದ ಜಗತ್ತೋ?
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಸ್ಯೆ ಎಷ್ಟು ಗುರುತರ?
  • ಯಾವ ನಿರೀಕ್ಷೆಯಾದರೂ ಇದೆಯೇ?
  • ನಿಮ್ಮನ್ನು ರಕ್ಷಿಸಿಕೊಳ್ಳುವ ವಿಧಗಳು
  • ಸಂಭಾಷಣೆಯ ವಿಷಯ
    1990 ನಮ್ಮ ರಾಜ್ಯದ ಸೇವೆ
  • ಯೆಹೋವನು ತನ್ನ ಜನರನ್ನು ನಡಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಾಯಕತ್ವ ವಹಿಸುವವರಿಗೆ ವಿಧೇಯರಾಗಿರಿ
    ಕಾವಲಿನಬುರುಜು—1991
ಎಚ್ಚರ!—1992
g92 1/8 ಪು. 14-15

ಸೀಸ ಹೇರಿದ ಜಗತ್ತೋ?

ಅಮೆರಿಕದ ವಾಯುಸೇನೆಯ ಆಫೀಸರನೊಬ್ಬನಿಗೆ ಥಟ್ಟನೆ ಮತ್ತು ವಿವರಿಸಲಾಗದ ರೀತಿಯಲ್ಲಿ ವ್ಯಕ್ತಿತ್ವ ಬದಲಾವಣೆಯಾಯಿತು. ಅವನ ಮೈಭಾರ 14 ಕಿಲೊಗ್ರಾಮ್‌ ಕಡಮೆಯಾಯಿತು ಮತ್ತು ಅವನಿಗೆ ನಿದ್ರೆ ಬರುತ್ತಿರಲಿಲ್ಲ. ಅವನ ಹೆಂಡತಿ ರಕ್ತಹೀನಳೂ ನಿರ್ಜಲಳೂ ಆದಳು. ಆದದ್ದಾದರೂ ಏನು? ಇವರಿಬ್ಬರು ಯಾವುದೋ ದೇಶದಿಂದ ಕೊಂಡಿದ್ದ ಪಾತ್ರೆಗಳಿಗೆ ಕೊಟ್ಟಿದ್ದ ಗಾಜುಮೈ ಅಯೋಗ್ಯ ರೀತಿಯದ್ದಾಗಿತ್ತು. ಅವುಗಳಲ್ಲಿದ್ದ ಸೀಸ ದಂಪತಿಗಳ ಆಹಾರಕ್ಕೆ ಸೋರಿ ಹೋಗುತ್ತಿತ್ತು.

ಇನ್ನೊಂದು ಕೇಸಿನಲ್ಲಿ ಒಂದು ಹೆಣ್ಣು ಶಿಶುವಿನ ಬೆಳವಣಿಗೆಯೇ ಸುಮಾರಾಗಿ ನಿಂತುಹೋಗಿತ್ತು ಮತ್ತು ಅದು ಆಹಾರವನ್ನು ಸರಿಯಾಗಿ ಜೀರ್ಣಿಸತ್ತಿರಲಿಲ್ಲ. ಏಕೆ? ಅದರ ಮನೆಯ ನಳ್ಳಿಯ ನೀರು ಸೀಸದಿಂದ ಮಲಿನವಾಗಿತ್ತು. ಎರಡು-ವರ್ಷ ವಯಸ್ಸಿನ ಒಬ್ಬ ಹುಡುಗನು ತನ್ನ ಸ್ವಂತ ಹಿತ್ತಲಿನ ಮಣ್ಣಿನಿಂದ ಸೀಸ ವಿಷವನ್ನು ಪಡೆದನು. ಹತ್ತಿರದ ಹೆದ್ದಾರಿಯಿಂದ ಬಂದಿದ್ದ ಗ್ಯಾಸೊಲೀನ್‌ ಆವಿ ಸೀಸದಿಂದ ಮಣ್ಣನ್ನು ಮಲಿನ ಮಾಡಿತ್ತು.

ಸಮಸ್ಯೆ ಎಷ್ಟು ಗುರುತರ?

ಸೀಸವು ವಿಷಭರಿತವೆಂದು ಮನುಷ್ಯನಿಗೆ ಶತಮಾನಗಳಿಂದ ಗೊತ್ತಿತ್ತು. ರೋಮನ್‌ ಸಾಮ್ರಾಜ್ಯದ ಪತನಕ್ಕೂ ಸೀಸ ವಿಷವೇ ಸಹಾಯ ಮಾಡಿತೆಂದು ಕೆಲವು ಇತಿಹಾಸಗಾರರ ಅಭಿಪ್ರಾಯ. ರೋಮನರ ದ್ರಾಕ್ಷಾಮದ್ಯದ ಪಾತ್ರೆ, ಇತರ ಪಾತ್ರೆ, ಕಾಂತಿವರ್ಧಕ ವಸ್ತು ಮತ್ತು ವಿಶೇಷವಾಗಿ ದ್ರಾಕ್ಷಾಮದ್ಯದಲ್ಲಿ, ಸೀಸದ ವಿಸ್ತಾರ ಉಪಯೋಗವು ಅವರಿಗೆ ವ್ಯಾಪಕವಾದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತಂದಿದ್ದಿರಬೇಕು.

ಇಂದು ಏನು? ಸೆಸಿಲ್‌ ಟ್ಸೆಕ್ಟ್‌ ಬುಕ್‌ ಆಫ್‌ ಮೆಡಿಸಿನ್‌ ಎಂಬ ಪುಸ್ತಕದಲ್ಲಿ ಡಾ. ಡಾನಲ್ಡ್‌ ಲೂರಿಯ ಉತ್ತರಿಸಿದ್ದು: “ಒಂದು ಅರ್ಥದಲ್ಲಿ ನಮಗೆಲ್ಲರಿಗೂ ಸೀಸ ವಿಷ ಹಾಕಲ್ಪಡುತ್ತಾ ಇದೆ.” ಇಂದಿನ ಕೈಗಾರಿಕೆಯ ರಾಷ್ಟ್ರಗಳ ಜನರ ದೇಹಗಳಲ್ಲಿ ಕೈಗಾರಿಕೀಕರಣಕ್ಕೆ ಮೊದಲಿದ್ದ ಜನರಲ್ಲಿದ್ದುದಕ್ಕಿಂತ ನೂರು ಪಾಲು ಹೆಚ್ಚು ಸೀಸವಿದೆ. ಆದರೂ ವೈದ್ಯರು, ಸಾಮಾನ್ಯ ಜನರ ವ್ಯಾಪಕ ಕಾಯಿಲೆಯ ಕಾರಣ ಇದಾಗಿದೆಯೆಂದು ಇದುವರೆಗೆ ರುಜುವಾಗಿಲ್ಲವೆಂದು ಎಚ್ಚರ! ಕ್ಕೆ ಆಶ್ವಾಸನೆ ನೀಡುತ್ತಾರೆ.

ಸೀಸವು ವಿಶೇಷವಾಗಿ ಮಕ್ಕಳಿಗೆ ಅಪಾಯಕರ. ಅವರು ವಯಸ್ಕರಿಗಿಂತ ಹೆಚ್ಚು ಸಿದ್ಧವಾಗಿ ಅದನ್ನು ಹೀರಿಕೊಳ್ಳುತ್ತಾರೆ, ಮತ್ತು ಇದು ಅವರ ಮಾನಸಿಕ ಬೆಳವಣಿಗೆ ಮತ್ತು ಸಾಮರ್ಥ್ಯವನ್ನು, ಪ್ರಾಯಶಃ ಕಾಯಂ ಆಗಿ ದುರ್ಬಲ ಮಾಡಬಲ್ಲದು. ಉದಾಹರಣೆಗೆ, ಪ್ರತಿ ವರ್ಷ ಈ ಸೀಸ ವಿಷ ಅಮೆರಿಕದ 1,40,000 ಮಂದಿ ಮಕ್ಕಳ ಬುದ್ಧಿಶಕ್ತಿಯನ್ನು ಬುದ್ಧಿಸೂಕ್ಷ್ಮತೆಯ ಐಕ್ಯು (IQ) ಪಾಯಿಂಟುಗಳಲ್ಲಿ ಐದರಷ್ಟನ್ನು ಕಡಮೆ ಮಾಡಬಹುದು.

ಸೀಸದಿಂದ ಕಡಮೆ ಮಟ್ಟದಲ್ಲಿ ಮಲಿನವಾಗಿರುವ ನೀರು ಕೋಟ್ಯಂತರ ಮನೆಗಳಿಗೆ ಕುಡಿಯುವ ನೀರಿನ ಮೂಲಕ ಸ್ರವಿಸಿ ಹೋಗಿದೆ. ಏಕೆಂದರೆ 1940 ರ ದಶಕಗಳ ತನಕ ಸೀಸದ ಪೈಪುಗಳನ್ನೇ ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿತ್ತು. ಅಂದಿನಿಂದ ಉಪಯೋಗಿಸಲ್ಪಡುತ್ತಿರುವ ತಾಮ್ರದ ಪೈಪುಗಳು ಸಹ, ಕೆಲವು ವರ್ಷಗಳ ಹಿಂದೆ ಕೆಲವು ಸ್ಥಳಗಳಲ್ಲಿ ಸೀಸರಹಿತ ಬೆಸುಗೆಯ ಕಾನೂನು ಜಾರಿಗೆ ಬಂದಿರುವುದಾದರೂ, ಸೀಸ ಸೇರಿರುವ ಬೆಸುಗೆಯಿಂದ ಜೋಡಿಸಲ್ಪಟ್ಟಿವೆ. ಶಾಲೆ ಮತ್ತು ಆಫೀಸುಗಳಲ್ಲಿರುವ ನೀರಿನ ಕೊಳಾಯಿಗಳು ಸೀಸದ ಮೂಲಗಳೆಂದು ಎಣಿಸಲ್ಪಟ್ಟಿವೆ. ಸ್ಥಳೀಕ ನೀರು ಕಿಲುಬು ಹಿಡಿಸುವ ರೀತಿಯದ್ದಾಗಿರುವಲ್ಲಿ ಅದು ಪೈಪಿನ ಸೀಸವನ್ನು ಕರಗಿಸಿ ಬಿರುಡೆಯ ಮೂಲಕ ನಿಮ್ಮ ಕುಡಿಯುವ ಗ್ಲಾಸಿನೊಳಗೆ ಸೇರಿಸುತ್ತದೆ.

ಮಣ್ಣು ಮತ್ತು ದೂಳು ಸಹ ಸೀಸ ವಾಹಕಗಳು. ಉದುರುವ ಪೆಯಿಂಟ್‌ ಚೂರುಗಳು ಮತ್ತು ಉದ್ಯಮಗಳಲ್ಲಿರುವ ಸೀಸ ಕರಗಿಸುವ ಯಂತ್ರಗಳೂ ಇದರಲ್ಲಿ ಪಾತ್ರ ವಹಿಸಿವೆ. ಗ್ಯಾಸೊಲೀನ್‌ ಸಹ ಒಂದು ದೊಡ್ಡ ಅಪರಾಧಿ. 1920ರ ದಶಕದಲ್ಲಿ ವಾಹನಗಳ ಇಂಜಿನ್‌ ಬಡಿಯುವಿಕೆಯನ್ನು ನಿಲ್ಲಿಸಲು ಗ್ಯಾಸೊಲೀನಿಗೆ ಸೀಸವನ್ನು ಕೂಡಿಸಲಾಯಿತು. ಹೀಗೆ, ಕಾರುಗಳು ಮತ್ತು ಕಾರ್ಖಾನೆಗಳು ಕೋಟಿಗಟ್ಟಲೆ ಟನ್ನು ಸೀಸವನ್ನು ಗಾಳಿಗೆ ಚಿಮ್ಮಿವೆ, ಮತ್ತು ಅದು ನಮ್ಮ ಗ್ರಹದ ದೂಳು ಮತ್ತು ಕಸದಲ್ಲಿ ನೆಲೆಸಿದೆ. ಸೀಸವಿರುವ ದೂಳು ಹೀಗೆ ನಮ್ಮ ಆಹಾರದಲ್ಲಿಯೂ ನೆಲೆಸಬಹುದು.

ಯಾವ ನಿರೀಕ್ಷೆಯಾದರೂ ಇದೆಯೇ?

ಸೀಸದ ಅಪಾಯಗಳ ಕುರಿತು ಒಂದು ಸ್ಪಷ್ಟ ಅಪಾಯ ಸೂಚನೆಯು 1960 ಗಳಲ್ಲಿ ಮತ್ತು 70 ಗಳಲ್ಲಿ ಕೇಳಬಂತು, ಮತ್ತು ಅಂದಿನಿಂದ ಅನೇಕ ಪ್ರಾಮುಖ್ಯ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಪೆಯಿಂಟಿನಲ್ಲಿರುವ ಸೀಸವನ್ನು ತುಂಬ ಕಡಮೆ ಮಾಡಲಾಗಿದೆ. ಅನೇಕ ದೇಶಗಳು ಸೀಸವಿರುವ ಗ್ಯಾಸೊಲೀನನ್ನು ನಿಧಾನವಾಗಿ ಬದಲಾಯಿಸುವುದರಲ್ಲಿ ಪ್ರಗತಿ ಮಾಡಿ ಉತ್ತಮ ಪರಿಣಾಮ ಪಡೆದಿವೆ. ಉದಾಹರಣೆಗೆ, ಅಮೆರಿಕದಲ್ಲಿ ಮಾನವ ರಕ್ತದಲ್ಲಿರುವ ಸೀಸಾಂಶ, ಸರಾಸರಿ ಮೂರರಲ್ಲಿ ಒಂದಂಶ ಕೆಳಗಿಳಿದದೆ. ಯೂರೋಪಿನಲ್ಲಿ, 2000 ಇಸವಿಯೊಳಗೆ ಹೆಚ್ಚುಕಡಮೆ ಎಲ್ಲ ಗ್ಯಾಸೊಲೀನ್‌ ಸೀಸವಿಮುಕ್ತವಾಗುವುದೆಂದು ಮುಂತಿಳಿಸಲಾಗುತ್ತದೆ.

ಇಂಥ ಸುಧಾರಣೆಗಳ ಕಾರಣ ತೀವ್ರ ಪರಿಣಾಮದ ಸೀಸ ವಿಷ ಕೆಳಗಿಳಿದದೆ. ಹಾಗಾದರೆ, ಇನ್ನೂ ಅಪಾಯ ಸೂಚನೆ ಇದೆ ಎಂದು ಹೇಳುವುದೇಕೆ? ಏಕೆಂದರೆ, ಒಮ್ಮೇ ನಿರಪಾಯಕರವೆಂದು ವಿಜ್ಞಾನಿಗಳು ಎಣಿಸಿದ ಮಟ್ಟವನ್ನು ಈಗ ಅಪಾಯಕರವೆಂದು ಅವರು ಎಣಿಸುವುದರಿಂದಲೇ. ಮತ್ತು ಮನುಷ್ಯನು ಪರಿಸರಕ್ಕೆ ಸೀಸ ಚೆಲ್ಲುವುದನ್ನು ನಿಲ್ಲಿಸಿಲ್ಲ. ಮನುಷ್ಯನು ಈಗಲೂ ವಾತಾವರಣಕ್ಕೆ ಪ್ರತಿ ವರ್ಷ 4,00,000 ಟನ್ನು ಸೀಸವನ್ನು ಚಿಮ್ಮುತ್ತಾನೆಂಬ ಇತ್ತೀಚಿನ ಒಂದು ವರದಿಯನ್ನು ಎಫ್‌ಡಿಎ ಕನ್ಸೂಮರ್‌ ಉಲ್ಲೇಖಿಸುತ್ತದೆ.

ಭವಿಷ್ಯತ್ತಿನ ವಿಷಯವೇನು? ಮನುಷ್ಯನು ಜಗತ್ತನ್ನು ಸೀಸದಿಂದ ಬಳೆಯುವುದನ್ನು ಮುಂದುವರಿಸುವನೋ? ಸಂತೋಷದ ವಿಷಯವೇನಂದರೆ, ಭೂಮಿಗೆ ಮಾಡಿರುವ ಹೇರಳವಾದ ಹಾನಿಯನ್ನು ಸರಿಮಾಡಲು ನಾವು ಹತಾಶರಾಗುತ್ತಾ ಮಾನವ ಸಂತತಿಗಾಗಿ ಕಾಯಬೇಕೆಂದಿರುವುದಿಲ್ಲ. ಮನುಷ್ಯನ ಸದಾ ಭರವಸಯೋಗ್ಯ ಸೃಷ್ಟಿಕರ್ತನು, ತಾನೇ “ಲೋಕನಾಶಕರನ್ನು ನಾಶ” ಮಾಡುವನೆಂದು ಭರವಸೆ ನೀಡುತ್ತಾನೆ.—ಪ್ರಕಟನೆ 11:18.

ಆದರೆ ಈಗ ಏನು? ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಕಾಪಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವು ಪ್ರಾಯೋಗಿಕ ಹೆಜ್ಜೆಗಳಾವುವು?

ನಿಮ್ಮನ್ನು ರಕ್ಷಿಸಿಕೊಳ್ಳುವ ವಿಧಗಳು

ನೀರು: ನಿಮ್ಮ ನಳ್ಳಿಯ ನೀರಿನ ವಿಷಯ ಚಿಂತಿತರಾಗಲು ನಿಮಗೆ ಸಕಾರಣವಿರುವಲ್ಲಿ, ಅದು ಪರೀಕ್ಷಿಸಲ್ಪಡುವಂತೆ ನೀವು ಬಯಸಬಹುದು. ನಿಮ್ಮ ಮನೆಯ ಪೈಪುಗಳಿಂದ ಸೀಸ ನೀರಿಗೆ ತೂರಿಹೋಗುತ್ತಿರುವಲ್ಲಿ, ಅತಿ ಹೆಚ್ಚು ಬೆಲೆಯ ರಿವರ್ಸ್‌-ಆಸ್ಮೋಸಿಸ್‌ ಫಿಲ್ಟರ್‌ ಮಾತ್ರ ಅದನ್ನು ಕಾರ್ಯಸಾಧಕವಾಗಿ ತೆಗೆಯುವುದು. ಸಾಮಾನ್ಯವಾದ ಚಾರ್ಕೋಲ್‌ ಫಿಲ್ಟರುಗಳು ಅದನ್ನು ತೊಲಗಿಸುವುದಿಲ್ಲ. ಆದರೂ, ವಿಶೇಷವಾಗಿ ನೀರು ಹರಿಯದೆ ಪೈಪಿನಲ್ಲಿಯೇ ಇದ್ದಿರುವಲ್ಲಿ, ಕೆಲವು ನಿಮಿಷಗಳ ತನಕ ನೀರು ಸುರಿದು ಹೋಗುವಂತೆ ಬಿಟ್ಟರೆ ಅದರಲ್ಲಿರುವ ಸೀಸಾಂಶವನ್ನು ನೀವು ಕಡಮೆ ಮಾಡಬಲ್ಲಿರಿ. ಬಿಸಿಯಾಗಿರುವ ಟ್ಯಾಪ್‌ ನೀರಿನಲ್ಲಿ ಹೆಚ್ಚು ಸೀಸವಿರುವುದರಿಂದ ಅದನ್ನು ಕುಡಿಯಲಿಕ್ಕಾಗಲಿ ಆಹಾರ ತಯಾರಿಗಾಗಲಿ ಉಪಯೋಗಿಸಬೇಡಿರಿ.

ಆಹಾರ: ಸೀಸವಿರುವ ಗಾಜುಮೈಯ ಮಣ್ಣಿನ ಪಾತ್ರೆಗಳನ್ನು ಸಾಕಷ್ಟು ಉನ್ನತ ಶಾಖಕೊಟ್ಟು ತಯಾರಿಸದೇ ಇರುವಲ್ಲಿ ಅವು ಹಾನಿಕರ. ಅನೇಕ ದೇಶಗಳಲ್ಲಿ ಪಿಂಗಾಣಿ ಪಾತ್ರೆಯ ತಯಾರಿಕೆಯನ್ನು ನಿಯಂತ್ರಿಸುವ ಕಾಯಿದೆಗಳು ಇಲ್ಲದಿರುವುದರಿಂದ ಅಂಥ ದೇಶಗಳ ಪಾತ್ರೆಗಳನ್ನು ಕೊಳ್ಳುವುದರಲ್ಲಿ ಜಾಗ್ರತೆ ವಹಿಸಬೇಕು. ಸಮಯ ದಾಟಿದಂತೆ ಹೆಚ್ಚು ಸೀಸ ಸೋರಿಬರುವ ಕಾರಣ ಇಂಥ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಶೇಖರಿಸಿಡುವುದು ಬಳಸಲು ಉಪಯೋಗಿಸುವುದಕ್ಕಿಂತ ಹೆಚ್ಚು ಅಪಾಯಕರ. ಪಿಂಗಾಣಿ ಪಾತ್ರೆಯು ಸೀಸ ಮಾಲಿನ್ಯವನ್ನು ತರುತ್ತಾ ಇದೆ ಎಂದು ನೀವು ಸಂಶಯಿಸುವಲ್ಲಿ ಅದನ್ನು ಆಹಾರ ಶೇಖರಣೆಗಲ್ಲ, ಕೇವಲ ಅಲಂಕಾರಕ್ಕಾಗಿ ಉಪಯೋಗಿಸಲು ಬಯಸಬಹುದು.

ಫಲ ಮತ್ತು ತರಕಾರಿಗಳನ್ನು ತೊಳೆಯುವುದರಿಂದ ಅವುಗಳ ಮೇಲೆ ನೆಲೆಸಿರುವ ಸುಮಾರು ಅರ್ಧಾಂಶ ಸೀಸ ದೂಳು ನಷ್ಟವಾಗುತ್ತದೆ. ಮತ್ತು ಉತ್ತಮ ಪೋಷಕ ಆಹಾರ ಇನ್ನೊಂದು ಪ್ರತಿಬಂಧಕ ಹೆಜ್ಜೆ. ಉತ್ತಮ ಸಮತೆಯ ಆಹಾರವು ಸಾಧಾರಣವಾಗಿ ಯೋಗ್ಯ ಮಟ್ಟದ ಝಿಂಕ್‌, ಕಬ್ಬಿಣ ಮತ್ತು ಕ್ಯಾಲ್ಸಿಯಮ್‌ ಸ್ವತಗಳನ್ನು ಒದಗಿಸುತ್ತವೆ, ಮತ್ತು ಇವು ದೇಹದ ಸೀಸಮಟ್ಟವನ್ನು ನಿಯಂತ್ರಿಸಬಲ್ಲವು. ನಿಮ್ಮ ಮಕ್ಕಳು ಸೀಸದ ಆಟದ ಸಾಮಾನು ಮತ್ತು ಪೆಯಿಂಟ್‌ ದೂಳಿನಂಥ ಯಾವ ಸೀಸದ ಉತ್ಪನ್ನಗಳನ್ನೂ ಬಾಯಿಗೆ ಹಾಕದಂತೆ ನೋಡಿರಿ. ಸೀಸ ದೂಳು ಹೊಟ್ಟೆಗೆ ಹೋಗಬಹುದಾದ ಸ್ಥಳದಲ್ಲಿ ಅವರು ಆಡಬಾರದು.

ಹೀಗೆ, ಸೀಸದ ಈ ಸಮಸ್ಯೆಗೆ ದೇವರ ನೂತನ ಜಗತ್ತಿನಲ್ಲಿ ನಾವು ಕಾಯಂ ಪರಿಹಾರವನ್ನು ನಿರೀಕ್ಷಿಸುತ್ತೇವಾದರೂ, ನಮ್ಮನ್ನು ಈಗ ಕಾಪಾಡಿಕೊಳ್ಳಲು ಕೆಲವು ತತ್ಕಾಲದ ಕ್ರಮಗಳನ್ನು ಕೈಕೊಳ್ಳಬಲ್ಲೆವು. (g90 8/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ