ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 11/8 ಪು. 22-23
  • ಗುಬ್ಬಚ್ಚಿ ಮಿತ್ರನೋ ಶತ್ರುವೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗುಬ್ಬಚ್ಚಿ ಮಿತ್ರನೋ ಶತ್ರುವೋ?
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಧೂರ್ತನಾಗಿ ಕಾಣಲ್ಪಡುವುದರ ಕಾರಣ
  • ಒಳ್ಳೆಯ ಲಕ್ಷಣಗಳು
  • ನಮ್ಮನ್ನು ಅಮೂಲ್ಯವೆಂದೆಣಿಸುವ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರು!
    ಎಚ್ಚರ!—1999
  • ಜೀವನ ಸಾರ್ಥಕ ಎನ್ನಲು ಕಾರಣಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
ಇನ್ನಷ್ಟು
ಎಚ್ಚರ!—1992
g92 11/8 ಪು. 22-23

ಗುಬ್ಬಚ್ಚಿ ಮಿತ್ರನೋ ಶತ್ರುವೋ?

ಹೊಸ ನೆರೆಯವರು ಈಗಷ್ಟೆ ಒಳಸೇರಿದ್ದರು. ಮುಂಚಿನ ಒಕ್ಕಲುಗಳನ್ನು ಹೊರಹಾಕಿ, ಯಾವುದೇ ಕುತೂಹಲವುಳ್ಳ ಪ್ರೇಕ್ಷಕರನ್ನು ದೂರ ಓಡಿಸಿ, ಕುಟುಂಬವನ್ನು ಬೆಳೆಯಿಸುವ ಮತ್ತು ಪೋಷಿಸುವ ದಿನನಿತ್ಯದ ವ್ಯವಹಾರದಲ್ಲಿ ಅವರು ನೆಲೆಸಿದರು.

ಗುಬ್ಬಚ್ಚಿಯೆಂಬ ಅವರ ಹೆಸರು, ಅನೇಕ ವಿವಿಧ ಹಕ್ಕಿಗಳಿಗೆ ಅನ್ವಯಿಸುತ್ತದೆ, ಆದರೆ ಸಾಮಾನ್ಯವಾಗಿ ಇದು ಜೇಡರ ಹಕ್ಕಿಯ ಕುಟುಂಬದ ಸದಸ್ಯರನ್ನು ಸೂಚಿಸುತ್ತದೆ. ಗುಬ್ಬಚ್ಚಿಗಳು ನರೆಬಣ್ಣ, ಕಂದು ಬಣ್ಣ, ಮತ್ತು ಕಪ್ಪು ಬಣ್ಣದ ಗರಿಗಳ, ಸಾಮಾನ್ಯವಾಗಿ ಸಣ್ಣ, ಅಪ್ರಸಿದ್ಧ ಹಕ್ಕಿಗಳಾಗಿವೆ. ಅನೇಕ ಹಕ್ಕಿಗಳು ಕುಶಲ ಹಾಡುಹಕ್ಕಿಗಳಾಗಿವೆ.

ಆದರೂ, ಒಂದು ವೇಳೆ ಗುಬ್ಬಚ್ಚಿಗಳು ನೀವು ಆರಿಸುವಂಥಾ ನೆರೆಯವರಾಗಿರಲಿಕ್ಕಿಲ್ಲ. ಯಾಕಂದರೆ ಅವುಗಳ ಧೈರ್ಯ ಮತ್ತು ಹೊಂದಿಸಿಕೊಳ್ಳುವಿಕೆಯು ಕೆಲವರಿಂದ ಮೆಚ್ಚಲ್ಪಟ್ಟಿರುವಾಗ, ಕೆಲವು ಕಡೆಗಳಲ್ಲಿ ಈ ಸಣ್ಣ ಹಕ್ಕಿಗಳು ಜನಪ್ರಿಯವಾಗಿರುವುದಿಲ್ಲ.

ಧೂರ್ತನಾಗಿ ಕಾಣಲ್ಪಡುವುದರ ಕಾರಣ

ವಿನಾಶಕಾರಿಯಾದ ಕ್ಯಾಂಕರ್‌ಹುಳಗಳಿಂದ ಮರಗಳನ್ನು ಮುಕ್ತಗೊಳಿಸುವುವೆಂಬ ನಿರೀಕ್ಷೆಯಲ್ಲಿ, ಮನೆ ಗುಬ್ಬಚ್ಚಿ (Passer domesticus), ಯಾ ಇಂಗ್ಲಿಷ್‌ ಸ್ಪ್ಯಾರೋವನ್ನು, 1851ರಲ್ಲಿ ಯೂರೋಪಿನಿಂದ ದಕ್ಷಿಣ ಅಮೆರಿಕಕ್ಕೆ ಕೊಂಡೊಯ್ಯಲಾಯಿತು. ಹೇಗೂ, ಹಳ್ಳಿ ವಾಸಕ್ಕಿಂತ ನಗರ ವಾಸವು ಸುಲಭವಾಗಿದೆಯೆಂದು ಗುಬ್ಬಚ್ಚಿಗಳು ಬೇಗನೆ ಕಲಿತವು. ಹೀಗೆ ಸಣ್ಣ ಹುಳಗಳನ್ನು ತಿನ್ನುವ ಬದಲಿಗೆ, ಅವು ಊಟದ ತುಣುಕುಗಳನ್ನು ತಿನ್ನಲು ತಿರುಗಿದವು ಮತ್ತು ಕಸದ ಡಬ್ಬಿಗಳ ಮೇಲೆ ದಾಳಿ ನಡೆಸುವ ಕಲೆಯಲ್ಲಿ ಬೇಗನೆ ನಿಪುಣತೆ ಪಡೆದವು. ಮನೆ ಗುಬ್ಬಚ್ಚಿಯ “ಹೊಂದಿಸಿಕೊಳ್ಳುವಿಕೆ ಮತ್ತು ಆಕ್ರಮಿಸುವಿಕೆಯು, ವಲಸೆ ಬಂದ ತುಪ್ಪುಳು ಚರ್ಮದ ಕಂದು ಇಲಿ, ಕಪ್ಪು ಇಲಿ, ಮತ್ತು ಮನೆ ಮೂಷಕದ ವ್ಯೆಲಕ್ಷಣ್ಯಕ್ಕೆ ಸರಿಹೋಲುತ್ತದೆ,” ಎಂದು ನಾರ್ತ್‌ ಅಮೆರಿಕನ್‌ ಬರ್ಡ್ಸ್‌ ಪುಸ್ತಕವು ಗಮನಿಸಿತು.

ಗುಬ್ಬಚ್ಚಿಗಳು ತಮ್ಮ ಅವ್ಯವಸ್ಥೆಯ, ಚೊಕ್ಕವಲ್ಲದ ಮನೆಗಳನ್ನು ಪ್ರತಿಯೊಂದು ಕಡೆಮೂಲೆ ಮತ್ತು ಸಂದಿನಲ್ಲಿ ಕಟ್ಟುತ್ತವೆ. ಗೂಡು ಕಟ್ಟುವಲ್ಲಿ ಅವು ಮೆಚ್ಚುವ ಸಾಮಗ್ರಿಗಳಲ್ಲಿ ಗರಿಗಳು, ಉಣ್ಣೆ, ಮತ್ತು ತ್ಯಜಿಸಿದ ಬಟ್ಟೆಯು ಸೇರಿವೆ. ಅನೇಕ ಬಾರಿ ಅವುಗಳು ಸ್ಥಳೀಯ ಹಕ್ಕಿಗಳನ್ನು ಓಡಿಸುತ್ತವೆ ಮತ್ತು ಹೊರಗಟ್ಟಲ್ಪಟ್ಟ ಒಕ್ಕಲುಗಳ ಮೊಟ್ಟೆಗಳನ್ನು ಹೊರಗುರುಳಿಸಿ, ಧಾರ್ಷ್ಟ್ಯತನದಿಂದ ಅವುಗಳ ಗೂಡುಗಳನ್ನು ವಶಪಡಿಸಿಕೊಳ್ಳುತ್ತವೆ. ಇದಲ್ಲದೆ, ಗುಬ್ಬಚ್ಚಿಗಳು ವಿವಿಧ ಹಣ್ಣುಗಳನ್ನು ಧ್ವಂಸಗೊಳಿಸುವವುಗಳಾಗಿವೆ ಮತ್ತು ಅವು ಹಣ್ಣಾಗುವ ಬೀಜಗಳನ್ನು ಮತ್ತು ಹಸಿದಾದ, ಎಳೆಯ ತರಕಾರಿಗಳನ್ನು ತಿನ್ನುತ್ತವೆ.

ಮನೆ ಗುಬ್ಬಿಯನ್ನು ಉದ್ದೇಶಪೂರ್ವಕವಾಗಿ ಒಳಸೇರಿಸಿದಂಥಾ ಬ್ರೆಸೀಲ್‌ನಲ್ಲಿಯೂ, ಅದು ಬೆಳೆಗಳಿಗೆ ಹಾನಿಯನ್ನುಂಟು ಮಾಡಿದ್ದಷ್ಟೇಯಲ್ಲ, ಅಕ್ಕರೆಯ ಟೀಕು-ಟೀಕು ಹಕ್ಕಿಯನ್ನು ಕೂಡ ಅದು ಹೊರ ಅಟ್ಟಿತು. ಟೀಕು-ಟೀಕು ಹಕ್ಕಿಯು ಗುಬ್ಬಚ್ಚಿಯಷ್ಟೇ ಗಾತ್ರ ಮತ್ತು ಬಣ್ಣದ್ದಾಗಿದ್ದು, ಬೆಳೆಗಳಿಗೆ ಅಪಾಯಕರವಾದ ಕೀಟಗಳನ್ನು ನಾಶಪಡಿಸುವ ಉಪಯುಕ್ತ, ಸಂಗಶೀಲ, ಸಣ್ಣ ಹಕ್ಕಿಯಾಗಿದೆ.

ಒಳ್ಳೆಯ ಲಕ್ಷಣಗಳು

ಆದರೂ ಗುಬ್ಬಚ್ಚಿಗಳು ಕೀಚುದನಿಯ ಮತ್ತು ಚಿಲಿಪಿಲಿಗುಟ್ಟುವ ವಿನೋದ ಪ್ರಿಯ ಹಕ್ಕಿಗಳಾಗಿವೆ, ಮತ್ತು ಅವುಗಳ ಎತ್ತರ ಸ್ಥಾನದಿಂದ ನೆಲಕ್ಕೆ ಮತ್ತು ಪುನಃ ಮೇಲಕ್ಕೆ ಅವುಗಳು ರೆಕ್ಕೆಯೊದರುವುದನ್ನು ನೋಡುತ್ತಿರಲು ಅನೇಕ ಜನರು ಆನಂದಿಸುತ್ತಾರೆ. ಒಬ್ಬ ಹಕ್ಕಿ-ಗಮನಿಸುವಾತನು ಹೇಳುವುದು: “ನಮ್ಮ ಮನೆಯ ಹತ್ತಿರದ ಪರಿಸರದಲ್ಲಿ ಸುಮಾರು ಏಳು ಗುಬ್ಬಿ ಗೂಡುಗಳು ಇವೆ. . . . ಹಕ್ಕಿಗಳ ಒಂದು ಗುಂಪು ನೀರಿನಲ್ಲಿ ಆಡುವುದನ್ನು ಅದೇ ಸಮಯದಲ್ಲಿ, ಆ ಕಾರ್ಯಗತಿಯಲ್ಲಿ ಒಂದಕ್ಕೊಂದು ಡಿಕ್ಕಿಹೊಡೆಯುವುದನ್ನು ಕಂಡುಕೊಳ್ಳಬಹುದು. ಅವುಗಳು ಚಿತ್ತಭ್ರಮಣೆಯಿಂದ ಉದ್ರೇಕಗೊಳ್ಳುತ್ತವೆ. ಅವು ಮುಳುಕುತ್ತವೆ ಮತ್ತು ಮಿಡಿಯುತ್ತವೆ, ಮತ್ತು ಜಲಭರಿತರಾಗುವಷ್ಟರ ಮಟ್ಟಿಗೆ ಪುಕ್ಕಗಳನ್ನು ಕೆದರಿಕೊಂಡು, ಬದಿಯಿಂದ ಬದಿಗೆ ನುಲಿಯುತ್ತವೆ. ನಂತರ, ಅವು ಬೇಲಿಯ ಮೇಲೆ ಕುಪ್ಪಳಿಸಿ, ತಮ್ಮ ಕೊಕ್ಕುಗಳನ್ನು ಒರಸಿ, ನಾಯಿಯು ಮಾಡುವಂತೆ ತಮ್ಮನ್ನು ಜಾಡಿಸಿಕೊಂಡು, ನೀರಿನ ಕಡೆಗೆ ಇಣಿಕಿ ನೋಡುತ್ತವೆ ಮತ್ತು ಇನ್ನೊಂದು ಮುಳುಕು ಹೊಡೆಯುತ್ತವೆ. ಇದು ಒಮ್ಮೆಗೆ ಒಂದು ತಾಸಿನಷ್ಟು ಸಮಯ ಮುಂದುವರಿಯಬಹುದು, ಮತ್ತು ನಂತರ ಅವುಗಳು ಹಾರಿಹೋಗಿ ಕೇವಲ ಒಂದೆರಡು ತಾಸುಗಳಲ್ಲಿ ಹಿಂದಿರುಗುತ್ತವೆ.” ಕೆಲವೊಮ್ಮೆ ಗುಬ್ಬಚ್ಚಿಗಳು ರಸ್ತೆ ಬದಿಯ ಒಣ ಮಣ್ಣಿನಲ್ಲಿ ಯಾ ಹೂವಿನ ಪಾತಿಯಲ್ಲಿ ಧೂಳಿನ ಸ್ನಾನ ಮಾಡುವುದನ್ನು ಕಾಣಬಹುದು.

ಅಭಿರುಚಿಕರವಾಗಿಯೆ, ಗುಬ್ಬಚ್ಚಿಗಳನ್ನು ಬೈಬಲಿನಲ್ಲಿ ಉಲ್ಲೇಖಿಸಲಾಗಿದೆ. ಎರಡು ಸಲ ಯೇಸುವು ಈ ಅಲ್ಪವೆಂದೆಣಿಸಲ್ಪಡುವ ಹಕ್ಕಿಗಳನ್ನು ದೇವರ ಕೋಮಲ ಪರಾಮರಿಕೆಗೆ ದೃಷ್ಟಾಂತಿಸಿದ್ದಾನೆ. ತನ್ನ 12 ಅಪೊಸ್ತಲರನ್ನು ಸಾರಲು ಕಳುಹಿಸುತ್ತಿರುವಾಗ, ಯೇಸುವು ಅವರಿಗೆ ಕೇಳಿದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ?” ಮತ್ತು ನಂತರ ಆತನು ವಿವರಿಸಿದ್ದು: “ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” ಬಳಿಕ ತನ್ನ ಶುಶ್ರೂಷೆಯಲ್ಲಿ, ಯೇಸುವು ಈ ದೃಷ್ಟಾಂತವನ್ನು ಪುನರಾವರ್ತಿಸಿ ಹೇಳಿದನು, ಹೀಗೆ ದೇವರು ಒಂದೇ ಒಂದು ಗುಬ್ಬಚ್ಚಿಯನ್ನು ಕೂಡ ಮರೆತುಬಿಡದೆ ಇರುವಾಗ, ತನ್ನನ್ನು ಸೇವಿಸುವವರನ್ನು ಮರೆತುಬಿಡಲಾರನು ಎಂದು ಒತ್ತಿ ಹೇಳಿದನು.—ಮತ್ತಾಯ 10:29, 31; ಲೂಕ 12:6, 7.

ಯೆಹೋವ ದೇವರು ಸಣ್ಣದು ಮತ್ತು ದೊಡ್ಡದು ಎರಡೂ ಸೇರಿರುವ ತನ್ನ ಸೃಷ್ಟಿಗಳೆಲ್ಲವನ್ನು ಬೆಲೆಯುಳ್ಳದೆಂದು ಎಣಿಸುತ್ತಾನೆಂಬುದು ಸ್ಪಷ್ಟ. ಮತ್ತು ನಿರ್ದಿಷ್ಟ ಸೃಷ್ಟಿಗಳ ವೈಲಕ್ಷಣ್ಯಗಳು ನಮಗೆ ಯಾವಾಗಲೂ ಅಕ್ಕರೆಗೊಳಿಸುವಂಥಾದ್ದಾಗಿರಲಿಕ್ಕಿಲವ್ಲಾದರೂ, ಅನೇಕ ಮತ್ತು ವಿವಿಧ ಬಗೆಗಳ ಜೀವಿಗಳು ನಮ್ಮ ಮಹಾ ಸೃಷ್ಟಿಕರ್ತನ ವಿವೇಕವನ್ನು ಪ್ರತಿಬಿಂಬಿಸುತ್ತವೆ.—ಕೀರ್ತನೆ 104:24. (g91 10/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ