ಬೈಬಲಿನ ದೃಷ್ಟಿಕೋನ
ಮಂತ್ರವಿದ್ಯೆಯನ್ನು ಆಚರಿಸುವುದರಲ್ಲಿ ಅಪಾಯವಿದೆಯೋ?
‘ಮಂತ್ರದ ವಾತಾವರಣವಿದೆ. ಥಟ್ಟನೆ, ಒಂದು ಡಮರುಗವು ನಿಶಬ್ಧತೆಯನ್ನು ಭಂಗಪಡಿಸುತ್ತದೆ. ಬಂದೂಕುಗಳನ್ನು ಹೊತ್ತುಕೊಂಡಿರುವ ಸಮವಸ್ತ್ರ ಧರಿಸಿದ್ದ ಇಬ್ಬರು ಗಂಡಸರ ಮೇಲೆ ಎಲ್ಲರ ಕಣ್ಣುಗಳು ಮಗ್ನವಾಗಿ ಇರಿಸಲಾಗಿವೆ. ತಮ್ಮ ಭುಜಕ್ಕೆ ಬಂದೂಕುಗಳನ್ನು ಏರಿಸುತ್ತಾ, ಅತ್ಯುತ್ತಮವಾಗಿ ಪರಿಷ್ಕರಿಸಿ, ಉಡುಪನ್ನು ಧರಿಸಿದ್ದ ಚೀನಾದ ಮಂತ್ರವಾದಿಯ ಕಡೆಗೆ ಗುರಿಯನ್ನಿಡುತ್ತಾರೆ. ಅವನು ತನ್ನ ಎದೆಯ ಮುಂದೆ ಒಂದು ಪಿಂಗಾಣಿ ಪೇಟ್ಲನ್ನು ಹಿಡಿದುಕೊಳ್ಳುತ್ತಾನೆ. ಬಂದೂಕುಗಳು ಬೆಂಕಿಯ ಕಿಡಿಯನ್ನು ಸೂಸುತ್ತವೆ. ತಕ್ಷಣ ಮಂತ್ರವಾದಿಯು ಭಾರಿಯಾಗಿ ರಕ್ತವನ್ನು ಸುರಿಸುತ್ತಾ, ನೆಲಕ್ಕೆ ಬೀಳುತ್ತಾನೆ. ಸಿಡಿಗುಂಡನ್ನು ಹಿಡಿಯುವ ಭ್ರಮೆಯು ದುರಂತವಾಗಿ ಪರಿಣಮಿಸುತ್ತದೆ.’ ಬಂದೂಕುಗಳಲ್ಲಿ ಒಂದರ ತಪ್ಪಾದ ಯಾಂತ್ರಿಕ ಕೌಶಲವು ಸಿಡಿಗುಂಡು ಹೊರಬಂದು ಮಂತ್ರವಾದಿಯ ಎದೆಯನ್ನು ನಾಟುವಂತೆ ಮಾಡಿತು. ಹೀಗೆಂದು ಹೆನ್ರಿ ಗಾರ್ಡನ್ಸ್ ವರ್ಲ್ಡ್ ಆಫ್ ಮ್ಯಾಜಿಕ್ ಎಂಬ ಪುಸ್ತಕವು ಹೇಳುತ್ತದೆ.
ಆ ರೀತಿಯ ಮಂತ್ರದೊಂದಿಗೆ ಬರುವ ಪ್ರತೀಕ್ಷೆ, ರೋಮಾಂಚನ, ಮತ್ತು ಮನೋರಂಜನೆಗಾಗಿ—ಜೀವದ ಕೊಡುಗೆಯ ಎಂಥ ಒಂದು ಅಪವ್ಯಯ. ನೀವು ಈ ರೀತಿಯಾಗಿ ಪ್ರತಿಕ್ರಿಯಿಸುತ್ತೀರೊ? ಯಾ ಅದು ಇಂಥ ಒಂದು ಪ್ರದರ್ಶನದೊಂದಿಗೆ ಜೊತೆಗೂಡಿರುವ ಗಂಡಾಂತರದ ಕೇವಲ ಒಂದು ಭಾಗವಾಗಿದೆ ಎಂದು ನಿಮಗನ್ನಿಸುತ್ತದೊ? ನಿಮ್ಮ ಪ್ರತ್ಯುತ್ತರವು ಏನೇ ಆಗಿರಲಿ, ಈ ಭ್ರಮೆಯು ವಿಫಲಗೊಂಡಾಗ ಅದು ಮಾರಕವಾಗಿ ಅಪಾಯಕಾರಿಯಾಗಿತ್ತು. ಮಂತ್ರದ ಆಚರಣೆಯೊಂದಿಗೆ ಜೊತೆಗೂಡಿರುವ ಹೆಚ್ಚು ನವಿರಾದ ಒಂದು ಅಪಾಯವು ಇದೆಯೊ? ಎಂದು ನಾವು ಕೇಳುವಂತೆ ಅದು ಮಾಡುತ್ತದೆ. ಉತ್ತರಕ್ಕಾಗಿ, ಈ ಪ್ರಾಚೀನ ಕಲೆಯ ಬೇರುಗಳನ್ನು ನಾವು ವೀಕ್ಷಿಸೋಣ.
ಇತಿಹಾಸದ ಉದ್ದಕ್ಕೂ ಮಂತ್ರವಿದ್ಯೆಯ ಪ್ರಭಾವ
ಇತಿಹಾಸದ ಅರುಣೋದಯದಿಂದ, ಮನುಷ್ಯನು ಮಂತ್ರವಿದ್ಯೆಯ ರಹಸ್ಯದ ಮೂಲಕ ಅಧೀನಗೊಳಿಸಲ್ಪಟ್ಟಿದ್ದಾನೆ ಮತ್ತು ಪ್ರಭಾವಿಸಲ್ಪಟ್ಟಿದ್ದಾನೆ. ಆರಾಧನಾ ಚಟುವಟಿಕೆಗಳಲ್ಲಿ ವಿಶೇಷತನವನ್ನು ಹೊಂದಿದ್ದ ಒಂದು ಪ್ರಾಚೀನ ಪರ್ಷಿಯನ್ ಪೌರೋಹಿತ್ಯ ಜಾತಿಯ, “ಮ್ಯಾಜಿ” ಎಂಬ ಹೆಸರಿನಿಂದ, ಇಂಗ್ಲಿಷ್ ಪದವಾದ “ಮ್ಯಾಜಿಕ್” ಬಂದಿದೆ. ಅದರ ಅತಿ ಮೂಲಭೂತ ಅರ್ಥದಲ್ಲಿ, ಮಂತ್ರವಿದ್ಯೆಯು, ಮನುಷ್ಯನಿಗೆ ಸೇವೆ ಸಲ್ಲಿಸಲು ಸ್ವಾಭಾವಿಕವಾದ ಯಾ ಪ್ರಕೃತ್ಯತೀತ ಶಕ್ತಿಗಳನ್ನು ನಿಯಂತ್ರಿಸುವ ಯಾ ಒತ್ತಯಾ ಪಡಿಸುವ ಒಂದು ಪ್ರಯತ್ನವಾಗಿದೆ. ಸಾ. ಶ. ಪೂ. 18ನೆಯ ಶತಮಾನದ ಐಗುಪ್ತ್ಯವು, ಮಂತ್ರವನ್ನು ಆಚರಿಸುವ ಪುರೋಹಿತರನ್ನು ಬಳಸಿತು. ಸಾ. ಶ. ಪೂ. ಎಂಟನೆಯ ಶತಮಾನದಲ್ಲಿ, ಬ್ಯಾಬಿಲೋನಿಯದ ಪ್ರಾಚೀನ ಕಸೀಯ್ದರ ಧರ್ಮದಲ್ಲಿ ಮಂತ್ರವಿದ್ಯೆಯು ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸಿತು. (ಆದಿಕಾಂಡ 41:8, 24; ಯೆಶಾಯ 47:12-14; ದಾನಿಯೇಲ 2:27; 4:7) ಈ ಪ್ರಭಾವವು ಪ್ರಾಚೀನ ಗ್ರೀಕರು ಮತ್ತು ರೋಮನರ ಮಧ್ಯೆ ಹೆಚ್ಚು ಬಳಕೆಯಲ್ಲಿದ್ದು, ಮಧ್ಯ ಯುಗಗಳ ಉದ್ದಕ್ಕೂ ಮತ್ತು ನಮ್ಮ 20ನೆಯ ಶತಮಾನದಲ್ಲಿಯೂ ಕೂಡ ಬಳಕೆಯಲ್ಲಿದೆ.
ಮಂತ್ರವಿದ್ಯೆಯ ವಿಭಿನ್ನ ಬಗೆಗಳನ್ನು ಹಲವಾರು ರೀತಿಗಳಲ್ಲಿ ವಿಂಗಡಿಸಬಹುದು. ದ ಮ್ಯಾಜಿಶಿಯನ್ ಎಂಬ ತನ್ನ ಪುಸ್ತಕದಲ್ಲಿ ರಾಬರ್ಟ್ ಎ. ಸೇಬ್ಟಿನ್ಸ್, ಮಂತ್ರವಿದ್ಯೆಯನ್ನು ಮೂರು ವರ್ಗಗಳಲ್ಲಿ ವರ್ಗೀಕರಿಸುತ್ತಾನೆ.
ಮಂತ್ರವಿದ್ಯೆಯ ಮೂರು ಬಗೆಗಳು
ರಹಸ್ಯ ಮಂತ್ರವಿದ್ಯೆಯು “ಗೋಪ್ಯವಾದದ ಒಂದು ಅಭಿವ್ಯಕ್ತಿಯಾಗಿದೆ.” “ಸಾಮಾನ್ಯ ಪ್ರಜ್ಞೆಯ ಜ್ಞಾನವನ್ನು ಯಾ ವೈಜ್ಞಾನಿಕ ಜ್ಞಾನವನ್ನು ವಿರೋಧಿಸುವ ಘಟನೆಗಳು ಯಾ ಪ್ರಕ್ರಿಯೆಗಳು ಸತ್ಯವಾಗಿವೆ ಯಾ ಸಮಂಜಸವಾಗಿವೆ” ಎಂದು ಅದು ಸಾಧಿಸುತ್ತದೆ. “ರಹಸ್ಯ ಮಂತ್ರವಿದ್ಯೆಯು ಮಾಟ, . . . ಮೋಡಿ, ರಸವಾದ, ಮತ್ತು ಕೆಲವು ಖಂಡಿತವಾದ ಪರಿಸ್ಥಿತಿಗಳ ಕೆಳಗೆ ಧರ್ಮದ ದಾಸಿಯಾಗಿದೆ,” ಎಂದು ಸೇಬ್ಟಿನ್ಸ್ ಇನ್ನೂ ಹೆಚ್ಚಾಗಿ ವಿವರಿಸುತ್ತಾರೆ.
ಸ್ವಪ್ರಯೇಜನಕ್ಕಾಗಿರುವ ಮಂತ್ರವಿದ್ಯೆಯೊಂದಿಗೆ, “ಆಚರಿಸುವವರು ನೋಡುವವರ ನಿಜತ್ವದ ಗ್ರಹಿಕೆಯನ್ನು ತಮ್ಮ ಸ್ವಂತ ಪ್ರತಿಷ್ಠೆಗಾಗಿ ಅಧೀನಪಡಿಸಿಕೊಳ್ಳುತ್ತಾರೆ ಯಾ ಅಪ್ರಾಮಾಣಿಕವಾಗಿ ಉಪಯೋಗಿಸುತ್ತಾರೆ.” ಸಾರ್ವಜನಿಕರನ್ನು ಅವರು ಮೋಸಗೊಳಿಸುತ್ತಿದ್ದಾರೆಂದು ಅವರಿಗೆ ಗೊತ್ತು, ಆದರೆ ಸೇಬ್ಟಿನ್ಸ್ಗನುಸಾರ, “ಮಂತ್ರವಿದ್ಯೆಯನ್ನು ನೋಡುವವರು ಬೇರೆ ರೀತಿಯಾಗಿ ನಂಬುವಂತೆ—ಅಂದರೆ, ಮಂತ್ರವಾದಿಗಳೋಪಾದಿ, ಅವರಿಗೆ ಪ್ರಕೃತ್ಯತೀತ ಶಕ್ತಿಗಳು ಇವೆ ಯಾ ಅಂಥ ಶಕ್ತಿ ಇರುವವರೊಂದಿಗೆ ಅವರಿಗೆ ವಿಶೇಷವಾದ ಸಂಬಂಧವಿದೆ ಎಂಬುದನ್ನು ನಂಬುವಂತೆ, ಅವರು ಉತ್ತೇಜಿಸುತ್ತಾರೆ.”
ಮನೋರಂಜನಾ ಮಂತ್ರವಿದ್ಯೆ ಪ್ರಭಾವ ಬೀರುವ ವಂಚನೆಯ ಮುಖಾಂತರ ಆಶ್ಚರ್ಯವನ್ನು ತುಂಬಲು ಉದ್ದೇಶಿಸುತ್ತದೆ. ಅದು ಐದು ಮೂಲಭೂತ ಮತ್ತು ಮೇಲುಸೇರುವೆಯಾಗುವ ವಿಧಾನಗಳಲ್ಲಿ ವಿಂಗಡವಾಗುತ್ತದೆ: “ವೇದಿಕೆಯ ಮೇಲೆ ಮಾಡಲಾದ ಮಂತ್ರವಿದ್ಯೆ (ಸ್ಟೇಜ್ ಮ್ಯಾಜಿಕ್), ಸಣ್ಣ ಸಭೆಯ ಮುಂದೆ ಸಾಮೀಪ್ಯದಲ್ಲಿ ಮಾಡಲಾದ ಮಂತ್ರವಿದ್ಯೆ (ಕ್ಲೋಸ್ ಅಪ್), ಕೈಚಳಕ, ಭ್ರಮೆ, ಮತ್ತು ದೂರ ಮನಸ್ಪರ್ಶನ (ಮೆಂಟಲಿಜಮ್).”
ಕ್ರೈಸ್ತರಿಗೆ ಅಪಾಯವಿದೆಯೋ?
ನಾವು ಮೊದಲು ರಹಸ್ಯ ಮಂತ್ರವಿದ್ಯೆಯನ್ನು ಪರೀಕ್ಷಿಸೋಣ. ರಹಸ್ಯ ಮಂತ್ರವಿದ್ಯೆಯನ್ನು ವಿಭಿನ್ನ ವಿಧಗಳಲ್ಲಿ ಆಹ್ವಾನಿಸಲಾಗುತ್ತದೆ. ಉದಾಹರಣೆಗೆ, “ಕೆಡಕು ಮಾಟ” (ಬ್ಲ್ಯಾಕ್) ಮತ್ತು “ಒಳ್ಳೆಯ ಮಾಟ” (ವೈಟ್)ವನ್ನು ಆಚರಿಸುವ ಸೈತಾನವಾದಿಗಳು ಅಸ್ತಿತ್ವದಲ್ಲಿದ್ದಾರೆ. “ಕೆಡಕು” ಮಂತ್ರವು, ಒಬ್ಬನ ವೈರಿಗಳಿಗೆ ಹಾನಿಯನ್ನು ತರಲು ವಶೀಕರಣ ಮಂತ್ರಗಳನ್ನು, ವಿಶೇಷವಾದ ಶಾಪಗಳನ್ನು, ಮತ್ತು ಕೆಡುಕು ನೋಟ ಹಾಕುವುದನ್ನು ಒಳಗೊಂಡಿದೆ. “ಒಳ್ಳೆಯ” ಮಂತ್ರವಾದರೊ, ಇನ್ನೊಂದು ಕಡೆಯಲ್ಲಿ, ವಶೀಕರಣ ಮಂತ್ರಗಳನ್ನು ಮುರಿಯಲು ಮತ್ತು ಶಾಪಗಳನ್ನು ರದ್ದುಮಾಡಿ ಒಳ್ಳೆಯ ಫಲಿತಾಂಶಗಳನ್ನು ಉತ್ಪಾದಿಸುವಂತೆ ಉದ್ದೇಶಿಸಲಾಗಿದೆ. ಆದರೂ, ಎರಡೂ ಗೋಪ್ಯವಾದದ ಯಾ ರಹಸ್ಯಮಂತ್ರವಿದ್ಯೆಯ ಅಭಿವ್ಯಕ್ತಿಗಳಾಗಿವೆ. ರಹಸ್ಯ ಮಂತ್ರವಿದ್ಯೆಯನ್ನು, ಒಂದು ಒಳ್ಳೆಯ ಕೊಯ್ಲನ್ನು ಪಡೆಯಲು ಯಾ ಅಂಗಸಾಧನೆಯ ಸ್ಪರ್ಧೆಯನ್ನು ಗೆಲ್ಲಲು ಪ್ರಯತ್ನಿಸುವಂತೆ ಕೂಡ ಕೆಲವು ಸಂದರ್ಭಗಳಲ್ಲಿ ಕೋರಲಾಗುತ್ತದೆ. ಏನೇ ಆಗಲಿ, ಆತ್ಮವಾದದ ಈ ರೀತಿಯ ಮಂತ್ರದ ಕುರಿತು, ಬೈಬಲ್ ಮರೆಮಾಜದೆ ಮಾತಾಡುತ್ತದೆ: “ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.”—ಯಾಜಕಕಾಂಡ 19:26; ಧರ್ಮೋಪದೇಶಕಾಂಡ 18:9-14; ಅ. ಕೃತ್ಯಗಳು 19:18, 19.
ಸ್ವಪ್ರಯೇಜನ ಪಡೆಯುವ ಮಂತ್ರವಿದ್ಯೆಯಲ್ಲಿ ಅಪಾಯವು ಎಲ್ಲಿ ಅಡಗಿಕೊಂಡಿರುತ್ತದೆ? ಕೆಲವನ್ನು ಹೆಸರಿಸಲು, ಹಸ್ತವನ್ನು ಓದುವವರು, ಕಣಿ ಹೇಳುವವರು, ಭಕ್ತಿ ಚಿಕಿತ್ಸಕರು, ತಮ್ಮ ಸ್ವಂತ ಅಭಿರುಚಿಗಳನ್ನು ಮುಂಬರಿಸಲು, ಸ್ವಪ್ರಯೇಜನ ಪಡೆಯುವ ಮಂತ್ರವಿದ್ಯೆಯನ್ನು ಅನ್ವಯಿಸುತ್ತಾರೆ. ಅವರು ತಮ್ಮ ವೃತ್ತಿಯ ಮೂಲಕ ಸುಳ್ಳಿನ ಬದುಕನ್ನು ಜೀವಿಸುತ್ತಾ ಇಲ್ಲವೋ? ದೇವರ ವಾಕ್ಯವು ಹೇಳುವುದು: “ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು.”—ಯಾಜಕಕಾಂಡ 19:11.
ಎನ್ಸೈಕ್ಲೊಪಿಡೀಯ ಅಮೆರಿಕಾನ ಹೇಳುವುದು: “ಕೆಲವು ಸಂದರ್ಭಗಳಲ್ಲಿ, ಮಾಂತ್ರಿಕ ಕ್ರಿಯೆಗಳು ಆತ್ಮಗಳನ್ನು ನಿರ್ಬಂಧಪಡಿಸಲು ಕಾರ್ಯ ಮಾಡಬಹುದು.” ಇಂಥ ಕಾರ್ಯಕ್ಷೇತ್ರದಲ್ಲಿ ಕೇವಲ ವಿನೋದಕ್ಕಾಗಿ ಪರೋಕ್ಷವಾಗಿ ತೊಡಗುವ ಮೂಲಕವೂ ಕೂಡ ದುರಾತ್ಮಗಳಿಂದ ತೊಂದರೆಯನ್ನು ಆಮಂತ್ರಿಸಲು ನೀವು ಬಯಸುತ್ತೀರೊ? ಅವಕಾಶ ಕೊಡಲ್ಪಟ್ಟಲ್ಲಿ, ದೆವ್ವಗಳು ನಮ್ಮಿಂದ ಪ್ರಯೋಜನವನ್ನು ಪಡೆಯಬಲ್ಲವು ಮತ್ತು ಪಡೆಯುವವು. ಅವು ‘ಅನುಕೂಲವಾದ ಸಮಯಗಳಿಗೆ’ ನೋಡುತ್ತವೆ ಮತ್ತು ತಮ್ಮ ಪ್ರಯತ್ನಗಳಲ್ಲಿ ನಿಷ್ಠುರವಾಗಿವೆ.—ಲೂಕ 4:13; ಯಾಕೋಬ 1:14.
ವಂಚನೆ ಮತ್ತು ಭ್ರಮೆಯ ಕಲೆಯಲ್ಲಿ ನಿಪುಣನಾದವನು ಬೇರೆ ಯಾರೂ ಅಲ್ಲ ಪಿಶಾಚನಾದ ಸೈತಾನನೇ ಆಗಿದ್ದಾನೆ. ಏದೆನ್ ತೋಟದಲ್ಲಿ ಒಬ್ಬ ಮಾನವನ ಎದುರು ತನ್ನ ಪ್ರಥಮ ಪ್ರದರ್ಶನದಿಂದ ಅವನು ಈ ಕಲೆಯನ್ನು ಆಚರಿಸುತ್ತಾ ಇದ್ದಾನೆ. (ಆದಿಕಾಂಡ 3:1-19) ಯಾವ ಕ್ರೈಸ್ತನು ಅವನಂತೆ ಇರಲು ಬಯಸುವನು? ಬದಲಿಗೆ, ಕ್ರೈಸ್ತರಿಗೆ “ದೇವರನ್ನು ಅನುಸರಿಸುವವರಾಗಿರಿ” ಮತ್ತು “ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ,” ಎಂಬುದಾಗಿ ಸಲಹೆ ನೀಡಲಾಗಿದೆ.—ಎಫೆಸ 5:1, NW; ಯಾಕೋಬ 4:7.
ಅನೇಕ ಜನರಾದರೊ, “ಮಂತ್ರವಿದ್ಯೆ” ಎಂಬ ಪದವನ್ನು ಮನೋರಂಜನೆಯೊಂದಿಗೆ ಕೂಡಿಸುತ್ತಾರೆ. ಕೈಯು ಕಣ್ಣಿಗಿಂತ ವೇಗವಾಗಿ ಕಾರ್ಯಮಾಡುತ್ತದೆ ಎಂಬುದನ್ನು ಮನಸ್ಸಿನಲ್ಲಿಡುತ್ತಾ, ವ್ಯಕ್ತಿಯೊಬ್ಬನು ತನ್ನ ಕೈಚಳಕದಿಂದ ಭ್ರಮೆಗಳನ್ನು ಸೃಷ್ಟಿಸಬಹುದು. ಇದಕ್ಕೆ ಬೈಬಲಿನ ಯಾವ ಅಡಿಯ್ಡು ಇರಲಿಕ್ಕಿಲ್ಲ. ಹಾಗಿದ್ದರೂ, ಗೋಪ್ಯವಾದ ಮಂತ್ರದ ಪ್ರದರ್ಶನ ಇರುವುದಾದರೆ, ಯಾವುದೊ ಪ್ರಕೃತ್ಯತೀತ, ವಿವರಿಸಲಾಗದ ಶಕ್ತಿಯನ್ನು ಹೊಂದಿರುವ ಅಭಿಪ್ರಾಯವನ್ನು ನೀಡಲು ಒಬ್ಬ ಕ್ರೈಸ್ತನು ಎಂದಾದರೂ ಬಯಸುವನೊ? “ಮಾಂತ್ರಿಕ” ಪ್ರದರ್ಶನದಿಂದ ಇತರರಿಗೆ ತಪ್ಪಾದ ಅಭಿಪ್ರಾಯ ನೀಡಲ್ಪಡುವುದಾದರೆ, ಇತರರನ್ನು ಎಡವಿಸಬಾರದೆಂಬ ಉದ್ದೇಶದಿಂದ ಒಬ್ಬ ಕ್ರೈಸ್ತನು ಇಂಥ ಮನೋರಂಜನೆಯನ್ನು ತ್ಯಜಿಸಲು ಬಯಸದಿರುವನೊ? (1 ಕೊರಿಂಥ 10:29, 31-33) ಜೊತೆಗೆ, ಇನ್ನು ಮುಂದೆ ಹೋಗಲು, ಮಾಂತ್ರಿಕ ಕಲೆಗಳಲ್ಲಿ ಆಳವಾಗಿ ಹೋಗುವಂತೆ ಒಬ್ಬ ವ್ಯಕ್ತಿಯು ಶೋಧಿಸಲ್ಪಡುವ ಅಪಾಯದ ಸಾಧ್ಯತೆಯೂ ಇದೆ.
ಆದುದರಿಂದ, ಪ್ರೇತವಾದದೊಂದಿಗೆ ಸ್ಪಷ್ಟವಾಗಿಗಿ ಸಂಬಂಧಿಸಿದ ಮಂತ್ರವಿದ್ಯೆಯ ವಿಷಯಕ್ಕೆ ಬಂದಾಗ, ನಿಜ ಕ್ರೈಸ್ತರು ಅದನ್ನು ಆಚರಿಸುವುದನ್ನು ವಿವೇಕಪ್ರದವಾಗಿ ಹೋಗಲಾಡಿಸುತ್ತಾರೆ. ಅದನ್ನು ಮೀರಿ, ಒಬ್ಬ ಕ್ರೈಸ್ತನ ಜೀವಿತದ ಎಲ್ಲಾ ವಿಷಯಗಳಲ್ಲಿ—ಉದ್ಯೋಗ, ಮನೋರಂಜನೆ ಯಾ ವಿನೋದವು ಒಳಗೊಂಡಿರಲಿ ಯಾ ಇಲ್ಲದೆ ಇರಲಿ—ದೇವರು ಯಾ ಮನುಷ್ಯನ ವಿರುದ್ಧ ಅಪರಾಧವನ್ನು ಅನುಮತಿಸದ ಒಂದು ಮನಸ್ಸಾಕ್ಷಿಯನ್ನು, “ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಹೊಂದಿರಲು” ಅವನು ಬಯಸುವನು.—1 ಪೇತ್ರ 3:16; ಅ. ಕೃತ್ಯಗಳು 24:16. (g93 9/8)
[ಪುಟ 23 ರಲ್ಲಿರುವ ಚಿತ್ರ ಕೃಪೆ]
The Bettmann Archive
ಬೆಟ್ಮನ್ ಆರ್ಕೈವ್