ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 2/8 ಪು. 12-14
  • “ಬಹು ದೂರ” ಎಂದರೆ ಎಷ್ಟು ದೂರ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಬಹು ದೂರ” ಎಂದರೆ ಎಷ್ಟು ದೂರ?
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೆಳೆಯುತ್ತಿರುವುದರ ಒಂದು ಭಾಗವೊ?
  • ಒಂದು ಮುದ್ದಿನಲೇನ್ಲಿದೆ?
  • “ಬಹು ದೂರ” ಎಂದರೇನು?
  • ಮದುವೆ ಮುಂಚಿನ ಸೆಕ್ಸ್‌ ಮದುವೆ ಮುಂಚಿನ ಸೆಕ್ಸ್‌
    ಎಚ್ಚರ!—2013
  • ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ?
    ಎಚ್ಚರ!—2004
  • ಪ್ರೇಮಿಗಳು ವಿವಾಹಪೂರ್ವ ಸಂಭೋಗದಲ್ಲಿ ಒಳಗೂಡುವುದು ಸರಿಯೋ?
    ಎಚ್ಚರ!—2007
  • ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸುವುದು ಯಾಕೆ ಅಷ್ಟೊಂದು ಕಠಿನವಾಗಿದೆ?
    ಎಚ್ಚರ!—1994
ಎಚ್ಚರ!—1994
g94 2/8 ಪು. 12-14

ಯುವ ಜನರು ಪ್ರಶ್ನಿಸುವುದು . . .

“ಬಹು ದೂರ” ಎಂದರೆ ಎಷ್ಟು ದೂರ?

“ಬಹು ದೂರ ಹೋಗುವುದರ ಅಪಾಯಗಳ ಕುರಿತು ನೀವು ದಯಮಾಡಿ ಜನರಿಗೆ ಎಚ್ಚರಿಸಸಾಧ್ಯವೊ? . . . ‘ಸಂಭೋಗಕ್ಕೆ ಮುಂಚಿತವಾಗಿ ಸಂಭವಿಸುವ’ ಎಲ್ಲಾ ಶಾರೀರಿಕ ಸಂಪರ್ಕಗಳನ್ನು ತಿಳಿಸುವ ಅಗತ್ಯವಿದೆ, ಯಾಕೆಂದರೆ ಅದು ತಾನೇ ಲೈಂಗಿಕತೆಗೆ ಮುನ್ನಡಿಸುತ್ತದೆ. ಇದಕ್ಕೆ ಮಿತಿ ಎಲ್ಲಿದೆ? ಎಂಬುದೆ ನನ್ನ ಪ್ರಶ್ನೆಯಾಗಿದೆ.”

ಹದಿವಯಸ್ಕರಿಗಾಗಿರುವ ಒಂದು ಪತ್ರಿಕೆಗೆ ಹುಡುಗಿಯೊಬ್ಬಳು ಕೇಳಿದ್ದು ಇದನ್ನೇ. ಆದರೆ ಪ್ರಾಯಶಃ ನೀವು ಕೂಡ ಅದರ ಕುರಿತು ಸೋಜಿಗಪಡುವ ಒಂದು ಪ್ರಶ್ನೆಯು ಇದಾಗಿದೆ.

ನೀವು ಒಬ್ಬ ಕ್ರೈಸ್ತರಾಗಿರುವುದಾದರೆ, 1 ಥೆಸಲೊನೀಕ 4:3-6ರ ಮಾತುಗಳನ್ನು ಗಂಭೀರವಾಗಿ ನೀವು ಪರಿಗಣಿಸುತ್ತೀರಿ: “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. . . . ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡಬಾರದು. ನಾವು ಮುಂಚೆ ತಿಳಿಸಿ ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವವನಾಗಿದ್ದಾನೆ.”

ಅವಿವಾಹಿತ ಕ್ರೈಸ್ತರಿಂದ ಲೈಂಗಿಕ ಸಂಭೋಗವು ನಡಿಸಲ್ಪಡುವುದು ತಪ್ಪಾಗಿದೆ ಎಂದು ನೀವು ಗ್ರಹಿಸಿಕೊಂಡಿರಬಹುದಾದರೂ, ವಿರುದ್ಧ ಲಿಂಗದ ಯಾರನ್ನಾದರೂ ಮುತ್ತಿಡುವುದು, ಅಪ್ಪಿಕೊಳ್ಳುವುದು, ಅಥವಾ ಮುದ್ದಾಡುವುದನ್ನು ದೇವರು ಹೇಗೆ ದೃಷ್ಟಿಸುತ್ತಾನೆ ಎಂದು ತಿಳಿಯಲು ನೀವು ಇನ್ನೂ ಕುತೂಹಲಿಗಳಾಗಿರಬಹುದು.

ಬೆಳೆಯುತ್ತಿರುವುದರ ಒಂದು ಭಾಗವೊ?

ಪ್ರಥಮವಾಗಿ, ಲೈಂಗಿಕ ದೋಷಾರೋಪಣೆಗಳಿಂದ ಹೊರತಾಗಿರುವ ನ್ಯಾಯಸಮ್ಮತವಾದ, ಪ್ರೀತಿಯ ಶುದ್ಧವಾದ ಅಭಿವ್ಯಕ್ತಿಗಳನ್ನು ಬೈಬಲ್‌ ಖಂಡಿಸುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡುವುದು ಸಮರ್ಪಕವಾದದ್ದಾಗಿದೆ. ಪುರಾತನ ಕ್ರೈಸ್ತರು ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಹೆಚ್ಚಾಗಿ ಪ್ರದರ್ಶಿಸುವವರಾಗಿದ್ದರು. ಅವರು ಸಾಮಾನ್ಯವಾಗಿ “ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸು,”ತ್ತಿದ್ದರು. (ರೋಮಾಪುರ 16:16; 1 ಕೊರಿಂಥ 16:20) ಒಂದೇ ಲಿಂಗಜಾತಿಯ ಕ್ರೈಸ್ತರು ಕೂಡ ಮುದ್ದಿಡುತ್ತಿದ್ದರು ಅಥವಾ ಅಪ್ಪಿಕೊಳ್ಳುತ್ತಿದ್ದರು.—ಹೋಲಿಸಿ ಅ. ಕೃತ್ಯಗಳು 20:37.

ಹಲವಾರು ಸಂಸ್ಕೃತಿಗಳಲ್ಲಿ, ಮುದ್ದಿಡುವುದು ಮತ್ತು ಆಲಿಂಗಿಸುವುದು, ಬೇರೊಬ್ಬರಿಗೆ ಪ್ರೀತಿಯನ್ನು ತೋರ್ಪಡಿಸುವ ಸೂಕ್ತ ವಿಧಾನಗಳಾಗಿ ಇನ್ನೂ ಪರಿಗಣಿಸಲ್ಪಡುತ್ತಿವೆ. ಆದರೂ, ಇಂದು ಅನೇಕ ಮಂದಿ ಯುವಜನರು ಯಾವುದು ಯುಕ್ತವಾಗಿದೆಯೊ ಅದರ ಒಂದು ಸಮಂಜಸವಾದ ಅರ್ಥನಿರೂಪಣೆಯನ್ನು ಮೀರುವ ವಿಧಾನಗಳಲ್ಲಿ ಪ್ರೀತಿಯನ್ನು ತೋರ್ಪಡಿಸುತ್ತಾರೆ. ದೇಹದ ಗುಪ್ತ ಭಾಗಗಳನ್ನು ಸ್ಪರ್ಶಿಸುವುದನ್ನೂ ಒಳಗೊಂಡಿದ್ದ ಕೆಲವೊಂದು ವಿಧದ ಮುದ್ದಿಸುವಿಕೆಗಳಲ್ಲಿ ತಾವು ಪ್ರವೃತ್ತರಾಗಿದ್ದೇವೆಂದು, ಎಣಿಸಲ್ಪಟ್ಟ ಮೂರರಲ್ಲಿ ಎರಡು ಭಾಗಕ್ಕಿಂತಲೂ ಹೆಚ್ಚು ಹದಿವಯಸ್ಕರು ಹೇಳಿದರೆಂದು ಅಮೆರಿಕದ ಸಮೀಕ್ಷೆಯೊಂದು ಕಂಡುಕೊಂಡಿತು. ಇನ್ನೊಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ, ಸೇಕಡ 49ರಷ್ಟು ಮಂದಿ ಲೈಂಗಿಕ ಸಂಭೋಗೋದ್ರೇಕದ ಬಿಂದುವಿನ ತನಕ ಮುದ್ದಿಸುವಿಕೆಗಳಲ್ಲಿ ಒಳಗೂಡಿದ್ದರು.

ಅಂತಹ ಲೈಂಗಿಕ ಪ್ರಯೋಗ ಪರೀಕ್ಷೆಯು ಬೆಳೆಯುತ್ತಿರುವುದರ ಒಂದು ಭಾಗವಾಗಿದೆ ಎಂದು ಕೆಲವರು ಸಮರ್ಥಿಸುತ್ತಾರೆ. ತಾರುಣ್ಯದ ಕುರಿತಾದ ಕುಟುಂಬ ಕರಪುಸ್ತಕ (ದ ಫ್ಯಾಮಿಲಿ ಹ್ಯಾಂಡ್‌ಬುಕ್‌ ಆಫ್‌ ಆ್ಯಡಲೆಸನ್ಸ್‌) ಪುಸ್ತಕಕ್ಕೆ ಅನುಸಾರವಾಗಿ, “ಲೈಂಗಿಕ ಆಟ ಮತ್ತು ಪರಿಶೋಧನೆಗಳು ಕಾರ್ಯತಃ ಎಲ್ಲಾ ಹದಿವಯಸ್ಕರ ನಡುವೆ ಸರ್ವಸಾಮಾನ್ಯವಾಗಿವೆ.” ಕೆಲವು ಜನರು ಮುದ್ದಿಸುವಿಕೆಯನ್ನು ಸಹ ಶಿಫಾರಸ್ಸು ಮಾಡುತ್ತಾರೆ. ಕ್ಯಾತ್‌ರಿನ್‌ ಬರ್ಕ್‌ಹಾರ್ಟ್‌ರಿಂದ ಬರೆಯಲ್ಪಟ್ಟ, ಗ್ರೋಯಿಂಗ್‌ ಇಂಟು ಲವ್‌ ಪುಸ್ತಕವು ಸಮರ್ಥಿಸುವುದು: “ಸಂಭೋಗದಲ್ಲಿ ಕೊನೆಮುಟ್ಟದೆ ಇರುವುದರಿಂದ, ಅಧಿಕಾಂಶ ಮುದ್ದಿಸುವಿಕೆಯನ್ನು ವ್ಯಾಕುಲತೆಯಿಲ್ಲದೆ ಅನುಭವಿಸಸಾಧ್ಯವಿದೆ ಮತ್ತು ಅದು ಲೈಂಗಿಕ ಶಕ್ತಿಗೆ ಒಂದು ಅದ್ಭುತಕರವಾದ ಹೊರಮಾರ್ಗವಾಗಿ ಕಾರ್ಯನಿರ್ವಹಿಸಬಲ್ಲದು.”

ಆದರೂ, ಅಂತಹ ನಡವಳಿಕೆಯನ್ನು ದೇವರು ಹೇಗೆ ವೀಕ್ಷಿಸುತ್ತಾನೆ? ಎಂಬುದೆ ಪ್ರಶ್ನೆಯಾಗಿದೆ.

ಒಂದು ಮುದ್ದಿನಲೇನ್ಲಿದೆ?

ನೀವು ‘ಯೌವನಾವಸ್ಥೆ’ಯಲ್ಲಿರುವಾಗ, ಲೈಂಗಿಕ ಅಪೇಕ್ಷೆಗಳು ತೀವ್ರವಾಗಿರುತ್ತವೆ. (1 ಕೊರಿಂಥ 7:36) ಆದುದರಿಂದ, ವಿರುದ್ಧ ಲಿಂಗದ ಯಾರಾದರೊಬ್ಬರನ್ನು ಸ್ಪರ್ಶಿಸುವಾಗ ಅಥವಾ ಮುದ್ದಿಡುವಾಗ ಯಾವ ಅನಿಸಿಕೆಯಾಗುತ್ತದೆ ಎಂಬುದರ ಕುರಿತು ಕುತೂಹಲರಾಗಿರುವುದು ಕೇವಲ ಸ್ವಾಭಾವಿಕವಾದದ್ದಾಗಿದೆ. ಆದರೆ “ಕೆಲವೊಮ್ಮೆ ಭಾವನಾತ್ಮಕ ಪ್ರೌಢತೆಗಿಂತ ಅನೇಕ ವರ್ಷಗಳಿಗೆ ಮೊದಲು ಲೈಂಗಿಕ ಸಾಮರ್ಥ್ಯವು ಬರುತ್ತದೆ,” ಎಂದು ದ ಫ್ಯಾಮಿಲಿ ಹ್ಯಾಂಡ್‌ಬುಕ್‌ ಆಫ್‌ ಆ್ಯಡಲೆಸನ್ಸ್‌ ನಿರ್ದೇಶಿಸುತ್ತದೆ. ವಾಸ್ತವವಾಗಿ, ಒಂದು ಮುತ್ತು ಅಥವಾ ಚುಂಬನ ಬಲವಾದ ಭಾವೋದ್ರೇಕದ ಭಾವನೆಗಳನ್ನು ಅಥವಾ ಲೈಂಗಿಕ ಪ್ರೇರಣೆಗಳನ್ನು ಉದ್ರೇಕಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಅನೇಕ ಯುವಜನರು ಸಂಪೂರ್ಣವಾಗಿ ಗಣ್ಯಮಾಡುವುದಿಲ್ಲ.

ಆದುದರಿಂದ, ಲೈಂಗಿಕ ಭಾವನೆಗಳನ್ನು ಉದ್ರೇಕಿಸುವ ನಡವಳಿಕೆಯಲ್ಲಿ ಒಳಗೂಡುವುದರ ಕುರಿತಾದ ಪರಿಣಾಮಗಳನ್ನು ನೀವು ವಿವೇಕದಿಂದ ಪರಿಗಣಿಸಬೇಕು. ವಿವಾಹವಾಗಲು ನೀವು ತೀರ ಚಿಕ್ಕವರಾಗಿರುವುದಾದರೆ ಆಗೇನು? ಹಾಗಾದರೆ ನಿಮ್ಮನ್ನು ಲೈಂಗಿಕವಾಗಿ ಉದ್ರೇಕಗೊಳಿಸುವಂತಹ ರೀತಿಯಲ್ಲಿ ಮುತ್ತು ಕೊಡುವುದು ಅಥವಾ ಇನ್ನೇನನ್ನಾದರೂ ಏಕೆ ಮಾಡಬೇಕು? ಇದು ಕೇವಲ ನೀವು ಆಶಾಭಂಗಹೊಂದುವದನ್ನು ಸಾಧಿಸುವುದು. ಇದು ಒಬ್ಬ ಕ್ರೈಸರೋಪಾದಿ ನೀವು ಆ ಭಾವೋದ್ರೇಕವನ್ನುಂಟುಮಾಡುವ ಭಾವನೆಗಳನ್ನು ಅವುಗಳ ತರ್ಕಸರಣಿಯ ಫಲಿತಾಂಶವಾದ ಲೈಂಗಿಕ ಸಂಭೋಗಕ್ಕೆ ಕೊಂಡೊಯ್ಯಲು ನಿಮಗೆ ಯಾವುದೇ ಮಾರ್ಗವು ಇಲ್ಲದಿರುವುದರಿಂದಲೇ ಆಗಿದೆ. ವಿವಾಹದೊಳಗೆ ಮಾತ್ರ ಅಂತಹ ಸಂಬಂಧಗಳು ಯುಕ್ತವಾದವುಗಳೆಂದು ಬೈಬಲ್‌ ಸ್ಪಷ್ಟಪಡಿಸುತ್ತದೆ.—1 ಕೊರಿಂಥ 6:18.

ನಿಮ್ಮ ಭಾವೋದ್ರೇಕವನ್ನುಂಟುಮಾಡುವ ಕಾರ್ಯಚಟುವಟಿಕೆಯಿಂದ ಲೈಂಗಿಕವಾಗಿ ಉದ್ರೇಕಗೊಳ್ಳಬಹುದಾದ ಬೇರೊಬ್ಬ ವ್ಯಕ್ತಿಯನ್ನೂ ಪರಿಗಣಿಸಿರಿ. ಸಮರ್ಥರಾದ ವಿವಾಹ ಜೊತೆಯೋಪಾದಿ ಇನ್ನೂ ಗಂಭೀರವಾಗಿ ಪರಿಗಣಿಸಲ್ಪಟ್ಟಿರದ ಅಥವಾ ವಿವಾಹವಾಗುವಂತಹ ಒಂದು ಸ್ಥಿತಿಯಲ್ಲಿ ನೀವು ಇಲ್ಲದಿರುವಂತಹ ಯಾರನ್ನಾದರೂ ಮುತ್ತಿಡುವುದು ಅಥವಾ ಚುಂಬಿಸುವುದು, ಕ್ರೂರವಾದದ್ದೂ ಮೋಸಗಾರಿಕೆಯೂ ಆಗಿಲ್ಲವೊ? (ಹೋಲಿಸಿ ಜ್ಞಾನೋಕ್ತಿ 26:18, 19.) “ಕ್ರೂರನು ತನ್ನ ಶರೀರವನ್ನೂ ಹಿಂಸಿಸುವನು,” ಎಂದು ಬೈಬಲ್‌ ಎಚ್ಚರಿಸುತ್ತದೆ.—ಜ್ಞಾನೋಕ್ತಿ 11:17.

ಒಂದು ಭಾವೋದ್ರೇಕತೆಯ ಸ್ಪರ್ಶ ಅಥವಾ ಒಂದು ಮುತ್ತು ಬಲವಾದ ಲೈಂಗಿಕ ಅಪೇಕ್ಷೆಯನ್ನು ಉದ್ರೇಕಿಸಬಲ್ಲದು ಎಂಬುದು ಬೈಬಲ್‌ ವಿದ್ಯಾರ್ಥಿಯೊಬ್ಬನಿಗೆ ರಹಸ್ಯವಾಗಿರಬಾರದಾಗಿದೆ. ವೇಶ್ಯೆಯೊಬ್ಬಳಿಂದ ಒಬ್ಬ ಯೌವನಸ್ಥನು ದುರ್ಮಾರ್ಗಕ್ಕೆ ಪ್ರೇರಿತನಾಗುವುದರ ಕುರಿತು ಬೈಬಲ್‌ ತಿಳಿಸುತ್ತದೆ. ಅದು ಹೇಳುವುದು: “ಅವಳು ಅವನನ್ನು ಹಿಡಿದು ಮುದ್ದಾಡುತ್ತಾಳೆ.” (ಜ್ಞಾನೋಕ್ತಿ 7:13) ಅಂತಹ ಒಂದು ಮುದ್ದು ಅಥವಾ ಸ್ಪರ್ಶವು ಒಂದು ಅಗಾಧವಾದ ಶಾರೀರಿಕ ಪ್ರತಿಕ್ರಿಯೆಯ ಹಿಡಿತವನ್ನು ಸಡಿಲಿಸಸಾಧ್ಯವಿದೆ. ಇಂತಹ ಅಕ್ರಮ ಸಂಬಂಧಗಳು ಪ್ರಗತಿಯಾದಂತೆ ಒಬ್ಬ ಹುಡುಗ ಅಥವಾ ಹುಡುಗಿ ಹೆಚ್ಚು ಉದ್ರೇಕಿತರಾಗುತ್ತಾರೆ. ಸ್ಪಷ್ಟವಾಗಿಗಿ, ದೇಹವು ಲೈಂಗಿಕ ಸಂಭೋಗಕ್ಕಾಗಿ ಸನ್ನದ್ಧವಾಗುತ್ತಿದೆ.

ಒಬ್ಬ ದಂಪತಿಗಳು ವಿವಾಹಿತರಾಗಿರುವಲ್ಲಿ, ಅವರ ಲೈಂಗಿಕ ಅಪೇಕ್ಷೆಗಳನ್ನು ಅವರು ಒಂದು ಆನಂದಕರ ಮತ್ತು ಗೌರವಾರ್ಹ ವಿಧಾನದಲ್ಲಿ ತೃಪ್ತಿಪಡಿಸಸಾಧ್ಯವಿದೆ. ಆದರೆ ಒಂದು ಅವಿವಾಹಿತ ದಂಪತಿಗಳು ಭಾವೋದ್ರೇಕಗೊಳಿಸುವ ಲೈಂಗಿಕ ಆಟದಲ್ಲಿ ಲೋಲುಪರಾಗುವಾಗ, ಖಂಡಿತವಾಗಿ ಸಮಸ್ಯೆಗಳು ಉದ್ಭವಿಸುವವು. ಸಮೀಕ್ಷೆಯೊಂದರಲ್ಲಿ ಬರಹಗಾರ್ತಿ ನ್ಯಾನ್ಸಿ ವನ್‌ ಪೆಲ್ಟ್‌ ಕಂಡುಕೊಂಡದ್ದೇನಂದರೆ, ಮುದ್ದಿಸುವಿಕೆಯಲ್ಲಿ ಒಳಗೂಡಿದ್ದ ಅನೇಕ ಯುವಜನರು ತಾವು ಕೇವಲ “ನಿಯಂತ್ರಣವನ್ನು ಕಳೆದು”ಕೊಂಡೆವೆಂದು ಬಹಿರಂಗವಾಗಿ ಒಪ್ಪಿದರು. ತಾನು ಹಿಂದೆಂದಿಗಿಂತಲೂ ಬಹುದೂರ ಹೋಗುವಂತೆ ಒತ್ತಾಯಪಡಿಸಲ್ಪಟ್ಟ ಯುವತಿಯೊಬ್ಬಳ ಉದಾಹರಣೆಯು ಲಾಕ್ಷಣಿಕವಾದದ್ದಾಗಿದೆ. ತಾನು ಲೈಂಗಿಕ ಸಂಭೋಗದಲ್ಲಿ ಒಳಗೂಡದಿದ್ದಾಗ್ಯೂ, ಹುಡುಗನು ತನ್ನನ್ನು ಅಕ್ರಮವಾಗಿ ಸ್ಪರ್ಶಿಸುವಂತೆ ಅವಳು ಬಿಟಳ್ಟು. ಅವಳು ಹೇಳುವುದು: “ಈಗ ನನಗೆ ಬಹಳ ಭಯವಾಗುತ್ತದೆ.” ಹುಡುಗನು ಅವಳಿಗೆ ಹಾಗೆ ಮಾಡುವಂತೆ ಅವಳು ಅನುಮತಿಸಿದ್ದು ವಾಸ್ತವವಾಗಿ ತಪ್ಪಾಗಿತ್ತೋ?

“ಬಹು ದೂರ” ಎಂದರೇನು?

ಲೈಂಗಿಕ ಸಂಭೋಗದಲ್ಲಿ ತಾವು ಒಳಗೂಡದಿರುವ ತನಕ ತಾವು ಬಹುದೂರ ಹೋಗಿರುವುದಿಲ್ಲ, ತಾವೇನು ಮಾಡುತ್ತೇವೋ ಅದು ವಾಸ್ತವವಾಗಿ ತಪ್ಪಾಗಿಲ್ಲವೆಂದು ಕೆಲವು ಯುವಜನರು ನಂಬುತ್ತಾರೆ. ಬೈಬಲ್‌ ಬೇರೆ ರೀತಿಯಾಗಿ ತೋರಿಸುತ್ತದೆ. ಗಲಾತ್ಯದವರಿಗೆ 5:19-21ರಲ್ಲಿ ಅಪೊಸ್ತಲ ಪೌಲನು ಅಂದದ್ದು: “ಶರೀರ ಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವೆಂದರೆ—ಜಾರತ್ವ ಬಂಡುತನ ನಾಚಿಕೆಗೇಡಿತನ . . . ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”

ಜಾರತ್ವ ಎಂದರೇನು? ಜಾರತ್ವದ ಮೂಲ ಗ್ರೀಕ್‌ ಪದ ಪೋರ್ನೀಯವಾಗಿದೆ. ವಿವಾಹ ಬಂಧಗಳ ಹೊರಗೆ ನಿರ್ವಹಿಸಲ್ಪಡುವ, ಜನನಾಂಗಗಳ ಪ್ರಯೋಗವನ್ನು ಒಳಗೊಂಡಿರುವ ಲೈಂಗಿಕ ಕಾರ್ಯಚಟುವಟಿಕೆಗೆ ಇದು ಅನ್ವಯಿಸುತ್ತದೆ. ಸೆವೆಂಟೀನ್‌ನಲ್ಲಿ ಉದಾಹರಿಸಲ್ಪಟ್ಟ ಹುಡುಗಿಯೊಬ್ಬಳು ಬಾಯಿಯ ಮೂಲಕ ಸಂಭೋಗವನ್ನು ನಡೆಸುವುದರಲ್ಲಿ ಅವಳ ಇನಿಯನು ಅವಳನ್ನು ಒತ್ತಾಯಿಸುವಂತೆ ಬಿಟ್ಟುಕೊಟ್ಟಳು. “ತಾವು ಅದನ್ನು ತಮ್ಮ ಸ್ನೇಹಿತರೊಂದಿಗೆ ಮಾಡುತ್ತಾರೆ ಮತ್ತು ನಾನು ಹಾಗೆ ಮಾಡದಿದ್ದರೆ ನಾನವನನ್ನು ಕಳೆದುಕೊಳ್ಳುವೆನೆಂದು ನನ್ನ ಗೆಳತಿಯರೆಲ್ಲರೂ ಹೇಳುವುದರಿಂದ, ನಿಜವಾಗಿಯೂ ನಾನು ಅವಿವೇಕಿಯೆಂದು ನನಗನಿಸುತ್ತದೆ,” ಎಂದು ಅವಳನ್ನುತ್ತಾಳೆ. ಗಾಬರಿಗೊಳಿಸುವ ಸಂಖ್ಯೆಗಳಲ್ಲಿ ಯುವಜನರು ಅಂತಹ ರೀತಿಯ ಅನೈತಿಕತೆಯಲ್ಲಿ ಪ್ರವೃತ್ತರಾಗಿದ್ದಾರೆಂದು ಸಂಶೋಧನೆಯು ತೋರಿಸುತ್ತದೆ. ಆದರೂ, ಅಂತಹ ಕೃತ್ಯಗಳು ಪೋರ್ನೀಯವನ್ನು ನಿಯೋಜಿಸುತ್ತವೆ ಮತ್ತು ದೇವರ ಅಸಮ್ಮತಿಯನ್ನು ತರುತ್ತವೆ.

ಅಪೊಸ್ತಲ ಪೌಲನು ಜಾರತ್ವವನ್ನು “ಅಶುದ್ಧತೆ,”ಯೊಂದಿಗೆ ಕೂಡ ಸಂಬಂಧಿಸುತ್ತಾನೆ. ಅಕತಾರ್ಸೀಯ ಎಂಬ ಮೂಲ ಗ್ರೀಕ್‌ ಪದವು, ಮಾತು ಮತ್ತು ಕ್ರಿಯೆಯಲ್ಲಿರುವ ಯಾವುದೇ ರೀತಿಯ ಅಶುದ್ಧತೆಯನ್ನು ಆವರಿಸುತ್ತದೆ. ಒಬ್ಬನ ಕೈಗಳು ಯಾರಾದರೊಬ್ಬರ ವಸ್ತ್ರದ ಕೆಳಗೆ ಅಲೆಯುವಂತೆ ಬಿಡುವುದು, ಬೇರೊಬ್ಬರ ವಸ್ತ್ರವನ್ನು ಕಳಚುವುದು, ಅಥವಾ ಸ್ತನಗಳಂತಹ, ಇತರರ ದೇಹದ ಗುಪ್ತ ಭಾಗಗಳನ್ನು ಸ್ಪರ್ಶಿಸುವಂತೆ ಬಿಡುವುದು ಖಂಡಿತವಾಗಿ ಅಶುದ್ಧವಾದದ್ದಾಗಿದೆ. ಬೈಬಲಿನಲ್ಲಿ ಸ್ತನಗಳ ಮುದ್ದಾಡುವಿಕೆಯು ವಿವಾಹಿತ ದಂಪತಿಗಳಿಗೆ ಮೀಸಲಾಗಿಡಲ್ಪಟ್ಟ ಸುಖಾನುಭವಗಳೊಂದಿಗೆ ಜತೆಗೂಡಿಸಲ್ಪಟ್ಟಿದೆ.—ಜ್ಞಾನೋಕ್ತಿ 5:18, 19; ಹೋಲಿಸಿ ಹೋಶೇಯ 2:2.

ಆದಾಗ್ಯೂ ಈ ದೈವಿಕ ಮಟ್ಟಗಳನ್ನು ಕೆಲವು ಯುವಜನರು ಭಂಡತನದಿಂದ ನಿರ್ಲಕ್ಷಿಸುತ್ತಾರೆ. ಉದ್ದೇಶಪೂರ್ವಕವಾಗಿ ಅವರು ಬಹುದೂರ ಹೋಗುತ್ತಾರೆ, ಅಥವಾ ಅವರು ತೀವ್ರಾಭಿಲಾಷೆಯುಳ್ಳವರಾಗಿ ಲೈಂಗಿಕ ಅಶುದ್ಧತೆಯನ್ನು ನಡೆಸಸಾಧ್ಯವಿರುವ ಅನೇಕ ಮಂದಿ ಜೊತೆಗಾರರನ್ನು ಹುಡುಕಿಕೊಂಡುಹೋಗುತ್ತಾರೆ. ಅಪೊಸ್ತಲ ಪೌಲನು “ಸಡಿಲು ನಡತೆ” ಎಂದು ಯಾವುದನ್ನು ಕರೆದನೋ ಅದರ ದೋಷಿಗಳು ಅವರಾಗಿದ್ದಾರೆ.

ವಿವಿಧ ಪ್ರಮಾಣ-ಗ್ರಂಥಗಳು ತೋರಿಸುವುದೇನಂದರೆ “ಸಡಿಲು ನಡತೆ”ಯ ಕುರಿತಾದ ಗ್ರೀಕ್‌ ಪದ (ಎಸೆಲ್‌ಜೀಯ) ಅಂದರೆ ‘ಘೋರ ಕೃತ್ಯಗಳು, ಅತಿಕ್ರಮಿಸುವಿಕೆ, ದುರಹಂಕಾರ, ಅಂಕೆಯಿಲ್ಲದ ಭೋಗಾಸಕ್ತಿ, ಮತ್ತು ಅಶ್ಲೀಲತೆ.’ ಸಡಿಲುನಡತೆಯನ್ನು ಅಭ್ಯಾಸಿಸುತ್ತಿರುವ ಯುವಜನರು ಪೌಲನು ನಿರ್ದೇಶಿಸುವಂತಹ ವಿಧರ್ಮಿಗಳಂತಿದ್ದಾರೆ. “ತಮ್ಮ ಹೃದಯದ ಕಾಠಿಣ್ಯದ” ನಿಮಿತ್ತದಿಂದ ಆ ವಿಧರ್ಮಿಗಳು “ತಮ್ಮನ್ನು ಬಂಡುತನಕ್ಕೆ [ಸಡಿಲು ನಡತೆ, NW] ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.” (ಎಫೆಸ 4:17-19) ಅಂತಹ ತೆಗಳಿಕೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ನೀವು ಖಂಡಿತವಾಗಿಯೂ ಅಪೇಕ್ಷಿಸುವಿರಿ!

ಆದುದರಿಂದ, ಯೆಹೋವನ ದೃಷ್ಟಿಕೋನದಿಂದ “ಬಹುದೂರ” ಹೋಗಲು ಒಬ್ಬನು ಲೈಂಗಿಕ ಸಂಭೋಗದಲ್ಲಿ ಒಳಗೂಡಬೇಕಾಗಿಲ್ಲ ಎಂಬುದನ್ನು ಗಮನದಲ್ಲಿಡಬೇಕು. ವಿವಾಹವಾಗಲು ನೀವು ಇನ್ನೂ ಚಿಕ್ಕವರಾಗಿರುವುದಾದರೆ, ಭಾವೋದ್ರೇಕದ ಸ್ಪರ್ಶ ಅಥವಾ ಮುದ್ದಿಡುವುದರಲ್ಲಿ ಪ್ರವೃತ್ತರಾಗಬಾರದು. ಮತ್ತು ಪ್ರಣಯಾಚರಣೆಯನ್ನು ನಡೆಸುತ್ತಿರುವವರು ತಮ್ಮ ಪ್ರೀತಿಯ ವ್ಯಕ್ತಪಡಿಸುವಿಕೆಗಳಲ್ಲಿ ಅಶುದ್ಧರಾಗದಂತೆ ಜಾಗ್ರತೆವಹಿಸಬೇಕು. ಅನುಗ್ರಹಿಸಲ್ಪಟ್ಟ ದೈವಿಕ ಮಟ್ಟಗಳಿಗೆ ಭದ್ರವಾಗಿ ಅಂಟಿಕೊಳ್ಳುವುದು ಸುಲಭವಾಗಿರುವುದಿಲ್ಲ. ಆದರೆ ಯೆಶಾಯ 48:17ರಲ್ಲಿ ದೇವರು ಹೀಗನ್ನುತ್ತಾನೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಗಲಾತ್ಯ 5:16ನ್ನೂ ನೋಡಿರಿ. (g93 10/22)

[ಪುಟ 13 ರಲ್ಲಿರುವ ಚಿತ್ರಗಳು]

ನೀವು ಅವಿವಾಹಿತರಾಗಿರುವುದಾದರೆ, ಲೈಂಗಿಕ ಭಾವೋದ್ರೇಕವನ್ನುಂಟುಮಾಡುವ ನಡವಳಿಕೆಯಲ್ಲಿ ಒಳಗೂಡುವುದು ಆಶಾಭಂಗ ಮತ್ತು ಅದಕ್ಕಿಂತಲೂ ಹೀನ ಸ್ಥಿತಿಗೆ ಮುನ್ನಡಿಸಸಾಧ್ಯವಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ