ಯುವ ಜನರು ಪ್ರಶ್ನಿಸುವುದು . . .
ನನ್ನ ಸಮಸ್ಯೆಗಳನ್ನು ಬಗೆಹರಿಸಲು ನನಗೆ ಯಾರು ಸಹಾಯಮಾಡಬಲ್ಲರು?
“ಮನುಷ್ಯರು ಶ್ರಮೆಯನ್ನು ಅನುಭವಿಸುವದೂ ಸಹಜ.” ಯೋಬನೆಂಬ ಕಷ್ಟಕ್ಕೀಡಾದ ಒಬ್ಬ ಮನುಷ್ಯನು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಹೀಗೆಂದನು. (ಯೋಬ 5:7) ನಿಮ್ಮ ಜೀವನವು ಬಹುಶಃ ಯೋಬನಂತೆ ದುಃಖಕರವಾಗಿಲ್ಲ. ಆದರೆ ನಿಸ್ಸಂದೇಹವಾಗಿ ನಿಮಗೆ ಸಮಸ್ಯೆಗಳ ಹಾಗೂ ತೊಂದರೆಗಳ ತಕ್ಕಷ್ಟು ಮೊತ್ತವು ಇದೆ.
“ನಿಮ್ಮನ್ನು ಅತಿಯಾಗಿ ಪೀಡಿಸುವಂಥದ್ದು ಯಾವುದು?” ಎಂಬುದಾಗಿ ಅಮೆರಿಕನ್ ಯುವಕರ ಒಂದು ಗುಂಪನ್ನು ಕೇಳಿದಾಗ, ಅನೇಕರು ಶಾಲೆ, ಹೆತ್ತವರು, ಹಣ, ಗೆಳೆಯರು, ಮತ್ತು ಅಣತ್ಣಮ್ಮಂದಿರನ್ನು ಚಿಂತೆಯ ಉಗಮಗಳೆಂದು ಸೂಚಿಸಿದರು. ನಿಮ್ಮ ಕುರಿತೇನು? ನೀವು ಸಮಾನಸ್ಕಂಧರ ಒತ್ತಡವನ್ನು, ಹಣದ ಚಿಂತೆಗಳನ್ನು, ಯಾ ಶಾಲಾ ಸಮಸ್ಯೆಗಳನ್ನು ಎದುರಿಸಿದ್ದೀರೋ? ಪ್ರೌಢಾವಸ್ಥೆಯ ಶಾರೀರಿಕ ಮತ್ತು ಭಾವನಾತ್ಮಕ ಏರಿಳಿತಗಳೊಂದಿಗೆ ನಿಭಾಯಿಸುವುದು ಕಷ್ಟಕರವೆಂದು ನೀವು ಕಾಣುತ್ತಿದ್ದೀರೊ? ನಿಮ್ಮ ಭವಿಷ್ಯದ ಕುರಿತು ನೀವು ಚಿಂತಿತರಾಗಿದ್ದೀರೊ?
ಈ ಎಲ್ಲಾ ಸಮಸ್ಯೆಗಳು ನಿಮ್ಮ ತಲೆಯಲ್ಲಿ ಇರುವಾಗ, ಮನಗುಂದುವುದು ಮತ್ತು ಕುಗ್ಗಿತರಾಗುವುದು ಸುಲಭ. ವಾಸ್ತವದಲ್ಲಿ, ಇಂಥ ಚಿಂತೆಗಳನ್ನು ನೀವು ನಿಮ್ಮ ಮಟ್ಟಿಗೆ ಇಟ್ಟುಕೊಳ್ಳುವುದಾದರೆ, ನಿಮ್ಮನ್ನು ಇತರರಿಂದ ಭಾವನಾತ್ಮಕವಾಗಿ ಬೇರ್ಪಡಿಸಿಕೊಂಡಿದ್ದೀರೆಂದು ನೀವು ಕಂಡುಕೊಳ್ಳಬಹುದು. (ಹೋಲಿಸಿ ಜ್ಞಾನೋಕ್ತಿ 18:1.) ಹಾಗಾದರೆ, ನೀವು ವೈಯಕ್ತಿಕ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು? ನೀವು ನಿಜವಾಗಿಯೂ ಅವುಗಳನ್ನು ಒಬ್ಬಂಟಿಗರಾಗಿ ಎದುರಿಸಬೇಕೊ?
ಇಲ್ಲ, ಯಾಕೆಂದರೆ ನಿಮ್ಮ ಸಮಸ್ಯೆಗಳು—ಅವು ಅತಿ ದೊಡ್ಡದಾಗಿ ಕಂಡರೂ—ಅದ್ವಿತೀಯವಾದವುಗಳಲ್ಲ. ಮಾನವ ವರ್ತನೆಯನ್ನು ಜಾಗರೂಕತೆಯಿಂದ ಅಭ್ಯಾಸಿಸಿದ ಅನಂತರ, ವಿವೇಕಿಯಾದ ರಾಜ ಸೊಲೊಮೋನನು “ಲೋಕದಲ್ಲಿ ಹೊಸದೇನೂ ಇಲ್ಲ” ಎಂಬುದಾಗಿ ತೀರ್ಮಾನಿಸಿದನು. (ಪ್ರಸಂಗಿ 1:9) ಹೌದು, ನಿಮ್ಮಂತೆಯೇ ಇತರರು ಸಮಸ್ಯೆಗಳನ್ನು ಎದುರಿಸಿ, ಅವುಗಳನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ಆದುದರಿಂದ ನೀವು ಯಾವಾಗಲೂ ನೀವಾಗಿಯೇ ವಿಷಯಗಳನ್ನು ಸೃಷ್ಟಗೊಳಿಸಬೇಕಾಗಿಲ್ಲ; ಕೆಲವೊಮ್ಮೆ ಈಗಾಗಲೇ ಹಾಗೆ ಮಾಡಿರುವವರಿಂದ ಸಹಾಯವನ್ನು ನೀವು ಪಡೆಯಬಲ್ಲಿರಿ. ನೀವು ಗೊತ್ತಿರದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರೆ, ಅಲ್ಲಿಗೆ ಈಗಾಗಲೇ ಹೋಗಿ ಬಂದವರಿಂದ ಮಾರ್ಗದರ್ಶನಗಳನ್ನು ಪಡೆಯಲು ನೀವು ಪ್ರಯತ್ನಿಸುತ್ತಿರಲಿಲ್ಲವೆ? ಪ್ರಶ್ನೆಯು, ಇಂಥ ಸಹಾಯಕ್ಕಾಗಿ ನೀವು ಯಾರ ಕಡೆಗೆ ತಿರುಗಬೇಕು? ಎಂಬುದಾಗಿದೆ.
ಸಮಾನಸ್ಕಂಧರು—ಬುದ್ಧಿವಾದದ ಅತ್ಯುತ್ತಮ ಮೂಲವೊ?
ಅನೇಕ ಯುವಜನರು ತಮ್ಮ ತೊಂದರೆಗಳನ್ನು ತಮ್ಮ ಸಮಾನಸ್ಕಂಧರೊಂದಿಗೆ ಹಂಚಿಕೊಳ್ಳಲು ಆರಿಸುತ್ತಾರೆ. “ನಾನು ಅನುಭವಿಸುತ್ತಿರುವ ಕೆಲವೊಂದು ಬದಲಾವಣೆಗಳು ಅಪೂರ್ವವಾಗಿವೆ ಎಂದು ನಾನು ಕೆಲವೊಮ್ಮೆ ಯೋಚಿಸುತ್ತೇನೆ,” ಎಂಬುದಾಗಿ ಯುವತಿ ಅನಿಟಾ ವಿವರಿಸುತ್ತಾಳೆ. “‘ಬೇರೆ ಯಾರಾದರೂ ಇದನ್ನು ಅನುಭವಿಸುತ್ತಾರೆಯೇ?’ ಎಂಬುದಾಗಿ ನನಗೆ ಅನಿಸುತ್ತದೆ. ಈ ರೀತಿ ಅನಿಸುವುದಕ್ಕಾಗಿ ನಾನು ಮೂರ್ಖಳೊ ಎಂಬುದಾಗಿ ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ.” ನಿಮ್ಮ ಸ್ವಂತ ವಯಸ್ಸಿನವರು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದೆಂದು ಮತ್ತು ವಯಸ್ಕರೊಬ್ಬರು—ವಿಶೇಷವಾಗಿ ಒಬ್ಬ ಹೆತ್ತವರು—ಅತಿಯಾಗಿ ಟೀಕಿಸುವವರು, ಯಾ ವಿಮರ್ಶಿಸುವವರು ಆಗಿರುವರೆಂದು ನಿಮಗೆ ಅನಿಸಬಹುದು.
ನಿಮ್ಮ ಸಮಾನಸ್ಕಂಧರು ಗ್ರಹಿಸಿ, ಅನುಭೂತಿ ಹಾಗೂ ಅನುಕಂಪ ತೋರಿಸಬಹುದಾದರೂ, ಅವರು ಯಾವಾಗಲೂ ಅತ್ಯಂತ ಸ್ವಸ್ಥಕರವಾದ ಬುದ್ಧಿವಾದವನ್ನು ನೀಡಲಾರರು. ಬೈಬಲ್ ವಿವರಿಸುವಂತೆ, “ಪ್ರಾಯಸ್ಥರು . . . ಜ್ಞಾನೇಂದ್ರಿಯಗಳನ್ನು . . . ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಾಗಿದ್ದಾರೆ.” ಹೇಗೆ? ಬೈಬಲ್ ಉತ್ತರಿಸುತ್ತದೆ: “ಸಾಧನೆಯಿಂದ,” ಅಂದರೆ, ಅನುಭವದಿಂದ! (ಇಬ್ರಿಯ 5:14; ದ ನ್ಯೂ ಇಂಗ್ಲಿಷ್ ಬೈಬಲ್) ಇಂತಹ ಅನುಭವವಿಲ್ಲದೆ, ಯುವ ಜನರು ತಮ್ಮ “ಸುಜ್ಞಾನವನ್ನೂ ಬುದ್ಧಿಯನ್ನೂ” ವಯಸ್ಕರ ಮಟ್ಟಕ್ಕೆ ವಿಕಾಸಿಸಿರುವುದು ವಿರಳ. (ಜ್ಞಾನೋಕ್ತಿ 3:21) ಆದುದರಿಂದ ಒಬ್ಬ ಜೊತೆ ಯುವ ವ್ಯಕ್ತಿಯ ಬುದ್ಧಿವಾದವನ್ನು ಆಲಿಸುವುದು ಅಪಾಯಕಾರಿಯಾಗಿದೆ. ಜ್ಞಾನೋಕ್ತಿ 11:14 ಎಚ್ಚರಿಸುವುದು: “ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವದು.”
ದೇವ ಭಯವಿರುವ ಹೆತ್ತವರ ಮೌಲ್ಯ
ಕುಶಲ ಮಾರ್ಗದರ್ಶನವನ್ನು ಕೊಡಲು ವಯಸ್ಕರು ಸಾಮಾನ್ಯವಾಗಿ ಉತ್ತಮ ಸ್ಥಾನದಲ್ಲಿರುತ್ತಾರೆ. ನೀತಿವಂತ ಯೋಬನು ಇದನ್ನು ಈ ರೀತಿಯಲ್ಲಿ ಹೇಳಿದನು: “ವೃದ್ಧರಲ್ಲಿ ವಿವೇಕವು ಮತ್ತು ದೀರ್ಘಾಯುವಿನಲ್ಲಿ ತಿಳಿವಳಿಕೆಯು ಇರುವುದಿಲ್ಲವೇ?” (ಯೋಬ 12:12, NW) ಬಹುಶಃ, ಈ ವಿಷಯದಲ್ಲಿ ನಿಮಗೆ ಸಹಾಯ ನೀಡಲು ಅತ್ಯುತ್ತಮ ಅರ್ಹತೆಯನ್ನು ಪಡೆದವರು ದೇವ ಭಯವುಳ್ಳ ನಿಮ್ಮ ಹೆತ್ತವರಾಗಿದ್ದಾರೆ. ಒಂದು ವಿಷಯವೇನಂದರೆ, ಬೇರೆ ಯಾವುದೇ ವ್ಯಕ್ತಿಯು ಅರಿತಿರುವುದಕ್ಕಿಂತ ಉತ್ತಮವಾಗಿ ಅವರು ನಿಮ್ಮನ್ನು ಅರಿತಿರುತ್ತಾರೆ. ನೀವು ಈಗ ಎದುರಿಸುತ್ತಿರುವ ಅದೇ ಸನ್ನಿವೇಶಗಳಲ್ಲಿ ಕೆಲವನ್ನು ಈಗಾಗಲೇ ಎದುರಿಸಿದರ್ದಿಂದ, ತೊಂದರೆಯನ್ನು ತೊರೆಯುವಂತೆ ನಿಮ್ಮನ್ನು ಸಹಾಯಿಸಲು ಅವರು ಹೆಚ್ಚನ್ನು ಮಾಡಬಲ್ಲರು. ಒಬ್ಬ ಹೆತ್ತವನೋಪಾದಿ ಮಾತಾಡುತ್ತಾ, ಸೊಲೊಮೋನನು ಹೇಳಿದ್ದು: “ಮಕ್ಕಳಿರಾ, ತಂದೆಯ ಶಿಕ್ಷಣವನ್ನು ಕೇಳಿರಿ. ವಿವೇಕವನ್ನು ಗ್ರಹಿಸಲಿಕ್ಕೆ ಕಿವಿಗೊಡಿರಿ. ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ.”—ಜ್ಞಾನೋಕ್ತಿ 4:1, 2.
ಸ್ಯಾಮುವೆಲ್ ಎಂಬ ಘಾನಾದ ಒಬ್ಬ ಯೌವನಸ್ಥನನ್ನು ಪರಿಗಣಿಸಿರಿ. ಮಾಧ್ಯಮಿಕ ಶಾಲೆ (ಹೈಸ್ಕೂಲ್)ಯಲ್ಲಿರುವಾಗ, ಐಹಿಕ ಶಿಕ್ಷಣವನ್ನು ಮುಂದುವರಿಸುವುದೋ ಅಥವಾ ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕನಂತೆ ಜೀವನೋಪಾಯವನ್ನು ಮುಂದುವರಿಸುವುದೋ ಎಂಬುದನ್ನು ಅವನು ನಿರ್ಣಯಿಸಬೇಕಿತ್ತು. “ನನ್ನದು ಒಳ್ಳೆಯ ಸಂಸರ್ಗವಿರುವ ಅನ್ಯೋನ್ಯ ಕುಟುಂಬವಾಗಿದ್ದ ಕಾರಣ,” ಅವನು ವಿವರಿಸುತ್ತಾನೆ, “ನನ್ನ ಹೆತ್ತವರಲ್ಲಿ ಅಂತರಂಗದಲಿದ್ಲದ್ದನ್ನು ಹೇಳಿಕೊಳ್ಳುವುದು ಸುಲಭವಾಗಿತ್ತು.” ಸ್ಯಾಮುವೆಲ್ನ ಮನೆಯವರು ಅವನನ್ನು ಪೂರ್ಣ ಸಮಯದ ಶುಶ್ರೂಷೆ—ಅವನು ಅಭಿವೃದ್ಧಿ ಹೊಂದಲು ಮುಂದುವರಿಯುತ್ತಾ ಇರುವ ಜೀವನೋಪಾಯದ ಕಡೆಗೆ ನಡೆಸಿದರು. “ಜೀವನದಲ್ಲಿ ಅವರು ಹೆಚ್ಚು ಅನುಭವ ಪಡೆದಿದ್ದಾರೆ ಮತ್ತು ಅದೇ ಸಮಸ್ಯೆಗಳನ್ನು ಎದುರಿಸಿದಿರ್ದಬಹುದು . . . ಮತ್ತು ವಿಷಯದ ಎರಡೂ ಪಕ್ಷಗಳ ಸ್ಪಷ್ಟವಾಗಿದ ನೋಟವನ್ನು ಕೊಡುವ ಉತ್ತಮ ಸ್ಥಾನದಲ್ಲಿ ಇರುವುದರಿಂದ,” ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಎಳೆಯರು ತಮ್ಮ ಹೆತ್ತವರನ್ನು ಒಳಗೂಡಿಸಬೇಕೆಂದು ಸ್ಯಾಮುವೆಲ್ ಶಿಫಾರಸ್ಸು ಮಾಡುತ್ತಾನೆ.
ಆಶ್ಚರ್ಯಕರವಾಗಿ, ಇತ್ತೀಚೆಗಿನ ಒಂದು ಗ್ಯಾಲಪ್ ಸಮೀಕ್ಷೆಯ ಅನುಸಾರ, ಯುವ ಜನರ ಒಂದು ದೊಡ್ಡ ಸಂಖ್ಯೆಯು, ಅಮಲೌಷಧಗಳು, ಶಾಲೆ, ಮತ್ತು ಲೈಂಗಿಕತೆಯಂತಹ ವಿಷಯಗಳ ಮೇಲೆಯೂ ಹೆತ್ತವರ ಮಾರ್ಗದರ್ಶನವನ್ನು ಬಯಸುತ್ತಾರೆ.
‘ಅವರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ!’
ದುಃಖಕರವಾಗಿ, ಅನೇಕ ಯುವ ಜನರು ತಮ್ಮ ಹದಿವಯಸ್ಸನ್ನು ಪ್ರಾರಂಭಿಸುವಾಗ ತಮ್ಮ ಹೆತ್ತವರಿಂದ ಪ್ರತ್ಯೇಕಗೊಳ್ಳುತ್ತಾರೆ. “ದರ್ಜೆಗಳ ಕುರಿತು ನಾನು ಎಷ್ಟು ಭಯಪಡುತ್ತೇನೆಂದು ಮತ್ತು ಈ ಶಾಲೆಯು ಬಹಳ ಕಠಿನವಾಗಿದೆ ಎಂದು ನಾನು ಯೋಚಿಸುತ್ತಿರುವ ಕುರಿತು ನನ್ನ ಹೆತ್ತವರೊಂದಿಗೆ ಮಾತಾಡಲು ನಾನು ಪ್ರಯತ್ನಿಸಿದ್ದೇನೆ, ಆದರೆ ಅವರು ನಾನು ಸೋಮಾರಿಯಾಗಿದ್ದೇನೆ ಮತ್ತು ಹೆಚ್ಚು ಅಭ್ಯಾಸ ಮಾಡಬೇಕೆಂದು ಮಾತ್ರ ಹೇಳುತ್ತಾರೆ,” ಎಂಬುದಾಗಿ ಹೇಳಿದ ಒಬ್ಬ ಹದಿವಯಸ್ಕ ಹುಡುಗನಂತೆ ಕೆಲವರಿಗೆ ಅನಿಸುತ್ತದೆ. ಸಮಾನವಾದ ಚಿಂತೆಯನ್ನು ವ್ಯಕ್ತಪಡಿಸುತ್ತಾ, ಆಫ್ರಿಕದಲ್ಲಿನ ಒಬ್ಬಾಕೆ ಯುವ ಕ್ರೈಸ್ತ ಹುಡುಗಿಯು ಹೇಳಿದ್ದು: “ನನ್ನ ಅಂತರ್ಯದಲ್ಲಿ, ನನಗೆ ಸಹಾಯವು ಬೇಕಾಗಿರುವ ವೈಯಕ್ತಿಕ ಸಮಸ್ಯೆಗಳು ನನಗಿವೆ ಎಂದು ನನಗೆ ಗೊತ್ತಿದೆ, ಆದರೆ ನನ್ನ ಹೆತ್ತವರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲವೆಂದು ನಾನು ಭಯಪಡುತ್ತೇನೆ.”
ನಿಸ್ಸಂದೇಹವಾಗಿ, ದೇವ ಭಯವುಳ್ಳ ಹೆತ್ತವರು ಕೂಡ ಕೆಲವೊಮ್ಮೆ ಗುರಿ ಮುಟ್ಟದೆ ಇರುತ್ತಾರೆ. ಅವರು ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಕಿವಿಗೊಡಲು ತಪ್ಪಿಹೋಗಬಹುದು, ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು, ಯಾ ನಿರ್ಣಯಾತ್ಮಕರಾಗಿರಬಹುದು. ಅವರನ್ನು ನಿಮ್ಮ ಜೀವನದಿಂದ ಹೊರಗೆ ತಳ್ಳಿಬಿಡಬೇಕೆಂಬುದನ್ನು ಇದು ಅರ್ಥೈಸುವುದಿಲ್ಲ. ಯೇಸು ಕ್ರಿಸ್ತನು ಅಪರಿಪೂರ್ಣರಾಗಿದ್ದ ಹೆತ್ತವರಿಂದ ಬೆಳೆಸಲ್ಪಟ್ಟನು. ಆದರೂ ಯೇಸು “ಅವರಿಗೆ ಅಧೀನನಾಗಿದ್ದ”ನೆಂದು ಬೈಬಲ್ ತೋರಿಸುತ್ತದೆ. ನಿಸ್ಸಂದೇಹವಾಗಿ ಅವರ ಪ್ರಭಾವವು ಅವನನ್ನು “ಜ್ಞಾನದಲ್ಲಿಯೂ . . . ವೃದ್ಧಿಯಾಗುತ್ತಾ . . . ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ” ಬರುವಂತೆ ಸಹಾಯ ಮಾಡಿತು.—ಲೂಕ 2:51, 52.
ನಿಮ್ಮ ಸ್ವಂತ ಹೆತ್ತವರ ವಿವೇಕ ಮತ್ತು ಅನುಭವದಿಂದ ನೀವು ಪ್ರಯೋಜನ ಪಡೆಯುತ್ತಿದ್ದೀರೊ? ಇಲ್ಲವಾದರೆ, ಈಸ್ಟ್ವುಡ್ ಅಟ್ವೊಟರ್ರಿಂದ ಬರೆಯಲಾದ ಆ್ಯಡಲೆಸನ್ಸ್ ಎಂಬ ಪುಸ್ತಕದಲ್ಲಿ ಹೇಳಿದ್ದ ವಿಷಯವನ್ನು ಪರಿಗಣಿಸಿರಿ: “ಹದಿವಯಸ್ಕರು ಅನುಚಿತವಾಗಿ ತಮ್ಮ ಸಮಾನಸ್ಕಂಧರಿಂದ ಪ್ರಭಾವಿತರಾದಾಗ, ಅದು ಸಮಾನಸ್ಕಂಧರ ಹೆಚ್ಚಿನ ಆಕರ್ಷಣೆಗಿಂತ ಹೆತ್ತವರ-ಹರೆಯದವರ ಸಂಬಂಧದಲ್ಲಿ ಯಾವುದೊ ಕೊರತೆಯಿಂದಿರುವ ಕಾರಣ ಇಂತಹ ಸಾಧ್ಯತೆಯು ಹೆಚ್ಚಾಗಿರುತ್ತದೆ.” ನಿಮ್ಮ ಹೆತ್ತವರೊಂದಿಗೆ ಯಾವ ರೀತಿಯ ಸಂಬಂಧ ನಿಮಗಿದೆ? (ಗಲಾತ್ಯ 6:5) ಇತ್ತೀಚೆಗೆ ಅವರೊಂದಿಗೆ ಸಂಸರ್ಗ ಮಾಡುವುದನ್ನು ನೀವು ತೊರೆದಿದ್ದೀರೊ? ಹಾಗಾದರೆ ವಿಷಯಗಳನ್ನು ಉತ್ತಮಗೊಳಿಸಲು ನಿಮಗೆ ಸಾಧ್ಯವಾದದ್ದನ್ನು ಮಾಡಬಾರದೇಕೆ?a ಇದು ಒಬ್ಬ ಹೆತ್ತವರ “ಕೋಮಲನಾದ ಏಕಪುತ್ರನು” ಯಾ ಪುತ್ರಿಯಾಗಿರುವುದೆಂದು ಸೊಲೊಮೋನನು ಕರೆದುದರ್ದ ಒಂದು ಭಾಗವಾಗಿದೆ.—ಜ್ಞಾನೋಕ್ತಿ 4:3.
ಈಗ ಅಮೆರಿಕದಲ್ಲಿ ಜೀವಿಸುತ್ತಿರುವ ಘಾನದ ಒಬ್ಬ ಯುವಕನಾದ ಮಾಲ್ಕಮ್, ತನ್ನ ಹೆತ್ತವರು ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲವ್ಲೆಂದು ಒಮ್ಮೆ ನೆನಸಿದ. ಆದರೆ ಅವರು ತಮ್ಮ ಜೀವನದ ಅನುಭವವನ್ನೂ ದೇವರ ವಾಕ್ಯದ ಶಿಸ್ತನ್ನೂ ಅವನಿಗೆ ತಿಳಿಸುವುದರಲ್ಲಿ ದೃಢವಾಗಿದ್ದರು. ತನ್ನ ಹೆತ್ತವರಿಗೆ ಇತ್ತೀಚೆಗಿನ ಪತ್ರವೊಂದರಲ್ಲಿ, ಮಾಲ್ಕಮ್ ಬರೆದದ್ದು: “ಪೂರ್ವದಲ್ಲಿ ನಮ್ಮೊಳಗೆ ಭಿನ್ನಾಭಿಪ್ರಾಯಗಳು ಇದ್ದವೆಂದು ನನಗೆ ಗೊತ್ತಿದೆ. ಆದರೆ ಹಿಂದಿನ ವಿಷಯಗಳನ್ನು ಯೋಚಿಸುವಾಗ, ನೀವು ನನ್ನ ಹಟಮಾರಿತನವನ್ನು ಸೈರಿಸಿಕೊಂಡು, ನಾನು ಮಾಡಿದ ಕೆಲವೊಂದು ನಿರ್ಣಯಗಳನ್ನು ಶಾಂತವಾಗಿ ಸ್ವೀಕರಿಸಿದ ರೀತಿಯಿಂದ ನಾನು ವಿಸ್ಮಯಗೊಳ್ಳುತ್ತೇನೆ. ನನ್ನನ್ನು ನಂಬಿ, ಬೇರೆ ಮನೆಗಳಲ್ಲಿ ಏನು ಸಂಭವಿಸುತ್ತದೆ ಎಂಬುದು ನನಗೆ ಗೊತ್ತಿದೆ, ಮತ್ತು [ನಮ್ಮ] ಮನೆಯಲ್ಲಿ ಬೈಬಲ್ ಖಂಡಿತವಾಗಿಯೂ ಒಂದು ವ್ಯತ್ಯಾಸವನ್ನುಂಟುಮಾಡಿತು. ಮತ್ತೆ ಉಪಕಾರಗಳು.”
ಪ್ರಾಯೋಗಿಕ ಜ್ಞಾನವನ್ನು ಸ್ವತಃ ನೀವೇ ಪಡೆಯಿರಿ!
ನಿಮ್ಮ ಬೆಳವಣಿಗೆಯನ್ನು ಅದುಮುವ ಬದಲು, ನಿಮ್ಮ ಹೆತ್ತವರ ಮಾರ್ಗದರ್ಶನವನ್ನು ಸ್ವೀಕರಿಸುವುದು ಬಲಿತ ಪ್ರೌಢಾವಸ್ಥೆಗೆ ಅತ್ಯಂತ ಶೀಘ್ರವಾದ ಪಥವಾಗಿರಬಹುದು. ಸಕಾಲದಲ್ಲಿ ನೀವು ಕೂಡ ‘ಜಾಣತನ, ಜ್ಞಾನ, ಮತ್ತು ಯೋಚನಾ ಸಾಮರ್ಥ್ಯ’ವನ್ನು ವಿಕಸಿಸಿಕೊಳ್ಳಬಲ್ಲಿರಿ. (ಜ್ಞಾನೋಕ್ತಿ 1:4) ಸಮಸ್ಯೆಗಳನ್ನು ವಿಶೇಷ್ಲಿಸಲು ಮತ್ತು ಅವುಗಳನ್ನು ಹೇಗೆ ಬಗೆಹರಿಸುವುದು ಎಂಬುದರ ಕುರಿತು ಸ್ವಸ್ಥಕರವಾದ ತೀರ್ಮಾನಗಳನ್ನು ಮಾಡಲು ನೀವು ಸನ್ನದ್ಧರಾಗಿರುವಿರಿ.
ದೇವ ಭಯವುಳ್ಳ ಹೆತ್ತವರಿಂದ ಎಲ್ಲಾ ಯುವ ಜನರು ಆಶೀರ್ವದಿಸಲ್ಪಟ್ಟಿಲ್ಲ ಎಂಬುದು ಸತ್ಯ. ನಿಮ್ಮ ಹೆತ್ತವರು ಕ್ರೈಸ್ತರಾಗಿರದ ಕಾರಣದಿಂದ ಅವರು ಹೇಳಿದ ವಿಷಯಗಳಿಗೆ ಕಡಿಮೆ ಗಮನವನ್ನು ನೀವು ಕೊಡಬೇಕೆಂದು ನಿರ್ಣಯಿಸುವುದಾದರೊ ತಪ್ಪಾಗಿರುವುದು. ಅವರು ಇನ್ನೂ ನಿಮ್ಮ ಹೆತ್ತವರಾಗಿದ್ದಾರೆ, ಮತ್ತು ಅದಕ್ಕೆ ತಕ್ಕಂತೆ ಅವರು ಗೌರವಿಸಲ್ಪಡಬೇಕು. (ಎಫೆಸ 6:1-3) ಅಲ್ಲದೆ, ನೀವು ಅವರಿಗೆ ಒಂದು ಅವಕಾಶವನ್ನು ಕೊಡುವುದಾದರೆ, ಪ್ರಾಯೋಗಿಕ ಬುದ್ಧಿವಾದದ ರೀತಿಯಲ್ಲಿ ನೀಡಲು ಅವರಲ್ಲಿ ಹೆಚ್ಚಿನದು ಇದೆ ಎಂಬುದನ್ನು ನೀವು ಕಂಡುಹಿಡಿಯಬಹುದು. ಆತ್ಮಿಕ ಮಾರ್ಗದರ್ಶನೆ ನಿಮಗೆ ಬೇಕಾದಲ್ಲಿ, ಕ್ರೈಸ್ತ ಸಭೆಯ ಭರವಸೆಯುಳ್ಳ ಒಬ್ಬ ಸದಸ್ಯನಲ್ಲಿ ಅಂತರಂಗದಲಿದ್ಲದ್ದನ್ನು ಹೇಳಿಕೊಳ್ಳಲು ಪ್ರಯತ್ನಿಸಿರಿ. ಅಲ್ಲಿ, ವಿವೇಚನೆ ಮತ್ತು ಅನುಕಂಪವುಳ್ಳ ಹೃದಯದೊಂದಿಗೆ ಲಕ್ಷ್ಯಗೊಟ್ಟು ಕೇಳುವ ದೇವ ಭಯವುಳ್ಳ ಒಬ್ಬ ವಯಸ್ಕನನ್ನು ಕಾಣುವುದು ಕಷ್ಟವಾಗಿರಬಾರದು.
ಕೇಳುವವರಿಗಾಗಿ ಯೆಹೋವನ ಆತ್ಮವು ಸಹಾಯ ಮತ್ತು ಬಲದ ಸದಾ ಸಿದ್ಧವಾಗಿರುವ ಮೂಲವಾಗಿದೆ ಎಂಬುದನ್ನು ಕೂಡ ನೆನಪಿನಲ್ಲಿಡಿ. (ಲೂಕ 11:13) ಬೈಬಲಿನಲ್ಲಿ ಮತ್ತು ವಾಚ್ ಟವರ್ ಸೊಸೈಟಿಯ ಬೈಬಲಾಧಾರಿತ ಪ್ರಕಾಶನಗಳಲ್ಲಿ ನಿಮಗೆ ಲಭ್ಯವಿರುವ ಮಾಹಿತಿಯ ಒಂದು ಭಂಡಾರವನ್ನು ಕೂಡ ಯೆಹೋವನು ಒದಗಿಸಿದ್ದಾನೆ. ಹೌದು, ತಮ್ಮ ಸಮಸ್ಯೆಗಳಿಗೆ ಪ್ರಾಯೋಗಿಕ ಉತ್ತರಗಳನ್ನು ಪಡೆಯುವಂತೆ ಈ ಶ್ರೇಣಿಯೇ ಸಾವಿರಾರು ಯುವ ಜನರಿಗೆ ಸಹಾಯ ನೀಡಿದೆ! ಪರಿಶೋಧಿಸಲು ಮತ್ತು ಸಂಶೋಧನೆಯನ್ನು ಮಾಡಲು ಕಲಿಯುವ ಮೂಲಕ, ಅನೇಕ ಸಮಸ್ಯೆಗಳನ್ನು ನೀವಾಗಿಯೇ ಬಗೆಹರಿಸಲು ನೀವು ಶಕ್ತರಾಗಬಹುದು.—ಜ್ಞಾನೋಕ್ತಿ 2:4.
ಸಮಸ್ಯೆಗಳನ್ನು ಅನುಭವಿಸುವುದು ಜೀವನದ ಒಂದು ಭಾಗವಾಗಿದೆ, ನಿಜ. ಆದರೆ ಕೀರ್ತನೆಗಾರನು ಹೊಂದಿದ್ದ ಸಕಾರಾತ್ಮಕ ನೋಟವನ್ನು ಹೊಂದಿರಲು ಅದು ಸಹಾಯ ಮಾಡುತ್ತದೆ. ಅವನು ಬರೆದದ್ದು: “ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.” (ಕೀರ್ತನೆ 119:71) ಹೌದು, ಸಮಸ್ಯೆಗಳನ್ನು ಬಗೆಹರಿಸುವುದು ನಿಮ್ಮನ್ನು ರೂಪಿಸಿ ತರಬೇತಿಗೊಳಿಸಬಲ್ಲದು. ಆದರೆ ನೀವು ಅವುಗಳನ್ನು ಒಬ್ಬಂಟಿಗರಾಗಿ ಎದುರಿಸಬೇಕಾಗಿಲ್ಲ. ಸಹಾಯವನ್ನು ಹುಡುಕಿರಿ. ಸಾಮಾನ್ಯವಾಗಿ ಅದು ಸುಲಭವಾಗಿ ದೊರೆಯುತ್ತದೆ. (g93 12/8)
[ಅಧ್ಯಯನ ಪ್ರಶ್ನೆಗಳು]
a ಈ ವಿಷಯದಲ್ಲಿ ಅನೇಕ ಸಹಾಯಕಾರಿ ಸಲಹೆಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಇವರಿಂದ ಪ್ರಕಟಿಸಲಾದ ಕ್ವೆಶ್ಚನ್ಸ್ ಯಂಗ್ ಪೀಪಲ್ಸ್ ಆಸ್ಕ್—ಆನ್ಸರ್ಸ್ ದ್ಯಾಟ್ ವರ್ಕ್ ಎಂಬ ಪುಸ್ತಕದ 2ನೆಯ ಅಧ್ಯಾಯವನ್ನು ನೋಡಿರಿ.
[ಪುಟ 19 ರಲ್ಲಿರುವ ಚಿತ್ರ]
ಹೆತ್ತವರ ಮಾರ್ಗದರ್ಶನವನ್ನು ಸ್ವೀಕರಿಸುವುದು ಬಲಿತ ಪ್ರೌಢಾವಸ್ಥೆಗೆ ಅತ್ಯಂತ ಶೀಘ್ರವಾದ ಪಥವಾಗಿರಬಹುದು