ಬೈಬಲಿನ ದೃಷ್ಟಿಕೋನ
ದೇವರ ಕ್ಷಮಾಪಣೆಯು ಎಷ್ಟು ಸಮಗ್ರವಾಗಿದೆ?
“ದೇವರು ನನ್ನ ಪಾಪಗಳನ್ನು ಎಂದೂ ಕ್ಷಮಿಸಲಾರನೆಂದು ನನಗನಿಸುತ್ತದೆ. ನಾನು ಮಾಡಿದ ಸಂಗತಿಗಾಗಿ ಆತನು ಎಂದಿಗೂ ನನ್ನನ್ನು ಅಪೇಕ್ಷಿಸಲಾರನು.”—ಗ್ಲೋರಿಯ.
ಇತರರ ಪಾಪಗಳನ್ನು ಯೆಹೋವನು ಕ್ಷಮಿಸಬಲ್ಲನೆಂದು ಅವರಿಗೆ ಹೇಳುವುದರಲ್ಲಿ ಗ್ಲೋರಿಯಳಿಗೆ ಯಾವ ಸಮಸ್ಯೆಯು ಇರಲಿಲ್ಲ.a ಆದರೆ ಆಕೆಯ ಸ್ವಂತ ತಪ್ಪುಗಳ ಕುರಿತು ಅವಳು ಪ್ರತಿಬಿಂಬಿಸಿದಾಗ, ಗ್ಲೋರಿಯ ದೂಷಿತ ಭಾವನೆಯನ್ನು ಅನುಭವಿಸಿದಳು. ಯೆಹೋವನ ಕ್ಷಮಾಪಣೆಯು ಎಟಕಲಾರದಂತೆ ತೋರಿತು.
ತಪ್ಪಾದ ಒಂದು ಕ್ರಿಯೆ ಯಾ ಜೀವನ ಕ್ರಮದ ಅಂಗೀಕಾರವು ಮನಸ್ಸಾಕ್ಷಿಯನ್ನು ಕೆರಳಿಸಬಲ್ಲದು. “ದಿನವೆಲ್ಲಾ ಅತ್ತ ಕಾರಣ ನಾನು ಕುಗ್ಗಿಹೋಗಿದ್ದೆ,” ಎಂಬುದಾಗಿ ತಾನು ಪಾಪಗೈದ ತರುವಾಯ ದಾವೀದನು ಬರೆದನು. “ನನ್ನ ಬಲವು ಸಂಪೂರ್ಣವಾಗಿ ಬಸಿದುಹೋಗಿತ್ತು.” (ಕೀರ್ತನೆ 32:3, 4, ಟುಡೇಸ್ ಇಂಗ್ಲಿಷ್ ವರ್ಷನ್; ಹೋಲಿಸಿ ಕೀರ್ತನೆ 51:3.) ಸಂತೋಷಕರವಾಗಿ, ತಪ್ಪನ್ನು ಮನ್ನಿಸುವುದರಲ್ಲಿ ಯೆಹೋವನು ಹರ್ಷಿಸುತ್ತಾನೆ. ಆತನು “ಕ್ಷಮಿಸಲು ಸಿದ್ಧನಾಗಿದ್ದಾನೆ.”—ಕೀರ್ತನೆ 86:5, NW; ಯೆಹೆಜ್ಕೇಲ 33:11.
ಹಾಗಿದ್ದರೂ, ಯೆಹೋವನು ಹೃದಯವನ್ನು ನೋಡುತ್ತಾನೆ. ಆತನ ಕ್ಷಮಾಪಣೆಯು ಕೇವಲ ಭಾವಾತಿರೇಕದ ಮೇಲೆ ಆಧಾರಿತವಾಗಿಲ್ಲ. (ವಿಮೋಚನಕಾಂಡ 34:7; 1 ಸಮುವೇಲ 16:7) ಪಾಪಿಯು ತನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು, ಯಥಾರ್ಥವಾದ ವಿಷಾದವನ್ನು ತೋರಿಸಬೇಕು, ಮತ್ತು ತನ್ನ ಕೆಟ್ಟ ಜೀವನ ಕ್ರಮವನ್ನು ಅಸಹ್ಯವಾದ ಮತ್ತು ದ್ವೇಷಭರಿತವಾದ ಜೀವನವೆಂಬಂತೆ ನಿರಾಕರಿಸಬೇಕು. (ಕೀರ್ತನೆ 32:5; ರೋಮಾಪುರ 12:9; 2 ಕೊರಿಂಥ 7:11) ಆಗ ಮಾತ್ರ ಒಬ್ಬ ತಪ್ಪಿತಸ್ಥನು ಕ್ಷಮಿಸಲ್ಪಡುವನು ಮತ್ತು ಯೆಹೋವನಿಂದ “ವಿಶ್ರಾಂತಿಕಾಲ”ವನ್ನು ಅನುಭವಿಸಬಲ್ಲನು.—ಅ. ಕೃತ್ಯಗಳು 3:19.
ಪಶ್ಚಾತ್ತಾಪವನ್ನು ಮಾಡಿದ ಅನಂತರವೂ ಕೂಡ ದೂಷಿತ ಭಾವನೆಯನ್ನು ಕೆಲವರು ಅನುಭವಿಸುತ್ತಾರೆ. ದೋಷದ ಹೊರೆಯನ್ನು ಅವರು ಸದಾಕಾಲ ಹೊರಬೇಕೊ? ಅವರ ಪಾಪಗಳಿಗೆ ಪಶ್ಚಾತಾಪ್ತವನ್ನು ಸೂಚಿಸಿ ಅವುಗಳನ್ನು ತೊರೆದರೂ, ಇನ್ನೂ ಹೃದಯದಲ್ಲಿ ಬಾಧಿಸಲ್ಪಡುವವರಿಗಾಗಿ ಬೈಬಲಿನಲ್ಲಿ ಯಾವ ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ?—ಕೀರ್ತನೆ 94:19.
ಭಾರವನ್ನು ಎತ್ತುವುದು
ತನ್ನ ತಪ್ಪುಗಳ ಕಾರಣ ದುಃಖಿತನಾಗಿ, ದಾವೀದನು ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ನಾನು ಕುಗ್ಗಿರುವದನ್ನೂ ಕಷ್ಟಪಡುವದನ್ನೂ ನೋಡಿ ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.” (ಕೀರ್ತನೆ 25:18) ಯೆಹೋವನು ಕ್ಷಮಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವಂತೆ ದಾವೀದನು ಇಲ್ಲಿ ವಿನಂತಿಸಿದನು. ಯೆಹೋವನು ತನ್ನ ಪಾಪಗಳನ್ನು “ಮನ್ನಿಸುವಂತೆ”, ಅವುಗಳನ್ನು ಎತ್ತುವಂತೆ ಯಾ ಹೊರುವಂತೆ, ಹೊತ್ತುಕೊಳ್ಳುವಂತೆ ಅವನು ಕೇಳಿಕೊಂಡನು. ಪಾಪಕ್ಕೆ ತೀವ್ರವಾದ ಪರಿಣಾಮಗಳಿವೆ, ಮತ್ತು ನಿಸ್ಸಂದೇಹವಾಗಿ ದಾವೀದನ ವಿಷಯದಲ್ಲಿ ಇದು ವ್ಯಥೆಗೊಂಡಂಥ ಒಂದು ಮನಸ್ಸಾಕ್ಷಿಯ ಹೊರೆಯನ್ನು ಒಳಗೊಂಡಿತ್ತು.
ಯೆಹೋವನು ಜನಾಂಗದ ಪಾಪಗಳನ್ನು ಹೊತ್ತುಕೊಳ್ಳಸಾಧ್ಯವಿತ್ತೆಂದು ಪ್ರತಿ ವರ್ಷ ಇಸ್ರಾಯೇಲ್ಯರು ಪ್ರತ್ಯಕ್ಷವಾಗಿ ಜ್ಞಾಪಿಸಲ್ಪಟ್ಟರು. ದೋಷ ಪರಿಹಾರ ದಿನದಂದು, ಮಹಾ ಯಾಜಕನು ಒಂದು ಹೋತದ ತಲೆಯ ಮೇಲೆ ತನ್ನ ಕೈಗಳನ್ನಿಟ್ಟು, ಅದರ ಮೇಲೆ ಜನರ ಪಾಪಗಳನ್ನು ನಿವೇದಿಸಿ, ಹೋತವನ್ನು ಅರಣ್ಯದೊಳಗೆ ಬಹು ದೂರ ಹೋಗುವಂತೆ ಬಿಟ್ಟುಬಿಡುತ್ತಿದ್ದನು. ಉಪಸ್ಥಿತದಿದ್ದವರು ಜನಾಂಗದ ಪಾಪಗಳ ತೆಗೆಯುವಿಕೆಯನ್ನು ಚಿತ್ರಿಸಿಕೊಳ್ಳಬಹುದಿತ್ತು.—ಯಾಜಕಕಾಂಡ 16:20-22.
ಆದುದರಿಂದ ತಮ್ಮ ಪಾಪಗಳ ಕುರಿತಾಗಿ ಪಶ್ಚಾತಾಪ್ತ ಪಟ್ಟಿರುವ ವ್ಯಕ್ತಿಗಳು ಸಾಂತ್ವನವನ್ನು ಪಡೆದುಕೊಳ್ಳಬಲ್ಲರು. ದೋಷ ಪರಿಹಾರ ದಿನದ ಕಾರ್ಯಕಲಾಪಗಳು ಪಾಪವನ್ನು ಹೊರಲಿಕ್ಕಾಗಿದ್ದ ಅತ್ಯಂತ ಮಹಾ ಒದಗಿಸುವಿಕೆಯನ್ನು—ಯೇಸು ಕ್ರಿಸ್ತನ ಪ್ರಾಯಶ್ಚಿತ ಬಲಿಯನ್ನು ಮುನ್ಚಿತ್ರಿಸಿದವು. ಯೇಸುವಿನ ಕುರಿತು ಯೆಶಾಯನು ಪ್ರವಾದನಾತ್ಮಕವಾಗಿ ಬರೆದದ್ದು: “ಬಹು ಜನ ದ್ರೋಹಿಗಳ ಪಾಪವನ್ನು ಹೊತ್ತನು.” (ಯೆಶಾಯ 53:12) ಆದಕಾರಣ, ಗತಕಾಲದ ಪಾಪಗಳು ಮನಸ್ಸಾಕ್ಷಿಯನ್ನು ಜಗ್ಗಿಸುವ ಅಗತ್ಯವಿಲ್ಲ. ಆದರೆ ತದನಂತರದ ಸಮಯದಲ್ಲಿ ಯೆಹೋವನು ಈ ಪಾಪಗಳನ್ನು ಮನಸ್ಸಿಗೆ ತಂದುಕೊಳ್ಳುವನೊ?
ಸಾಲವನ್ನು ತೊಡೆದುಹಾಕುವುದು
ಅವನ ಮಾದರಿ ಪ್ರಾರ್ಥನೆಯಲ್ಲಿ, ಯೇಸು ಅಂದದ್ದು: “ನಮ್ಮ ತಪ್ಪುಗಳನ್ನು ಕ್ಷಮಿಸು.” (ಮತ್ತಾಯ 6:12) “ಕ್ಷಮಿಸು” ಎಂಬುದಾಗಿ ಇಲ್ಲಿ ಭಾಷಾಂತರಿಸಲಾದ ಗ್ರೀಕ್ ಪದವು, “ಬಿಡುಗಡೆ ಮಾಡು” ಎಂಬ ಅರ್ಥ ಕೊಡುವ ಕ್ರಿಯಾಪದದ ಒಂದು ರೂಪವಾಗಿದೆ. ಹೀಗೆ, ಪಾಪದ ಕ್ಷಮಾಪಣೆಯು, ಸಾಲದ ಬಿಟ್ಟುಬಿಡುವಿಕೆ ಯಾ ತೊಡೆದುಹಾಕುವಿಕೆಗೆ ಹೋಲಿಸಲ್ಪಟ್ಟಿದೆ.—ಹೋಲಿಸಿ ಮತ್ತಾಯ 18:23-25.
“ಆದದರಿಂದ ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತಾಪ್ತಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ,” ಎಂಬುದಾಗಿ ಹೇಳಿದಾಗ, ಪೇತ್ರನು ಇದನ್ನು ವಿಸ್ತರಿಸಿದನು. (ಅ. ಕೃತ್ಯಗಳು 3:19) “ಅಳಿಸಿಬಿಡು” ಎಂದರೆ ನಾಶ ಮಾಡು, ಯಾ ತೊಡೆದುಹಾಕು ಎಂಬ ಅರ್ಥವನ್ನು ಕೊಡುತ್ತದೆ. ಅದು ಒಂದು ಲಿಖಿತ ದಾಖಲೆಯ ಉಜ್ಜಿಹಾಕುವಿಕೆ, ಹಿಂದಿನ ಸಾಲಗಳ ರದ್ದುಮಾಡುವಿಕೆಯನ್ನು ಸೂಚಿಸುತ್ತದೆ.—ಹೋಲಿಸಿ ಕೊಲೊಸ್ಸೆ 2:13, 14.
ಆದುದರಿಂದ, ಪಶ್ಚಾತಾಪ್ತ ಪಟ್ಟಿರುವವರು, ಆತನು ರದ್ದುಮಾಡಿರುವ ಸಾಲಕ್ಕಾಗಿ ದೇವರು ಸಂದಾಯವನ್ನು ಕೇಳುವನು ಎಂಬುದಾಗಿ ಭಯಪಡುವ ಅಗತ್ಯವಿಲ್ಲ. ಆತನು ಹೇಳುವುದು: “ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.” (ಯೆಶಾಯ 43:25; ರೋಮಾಪುರ 4:7, 8) ಪಶ್ಚಾತಾಪ್ತ ಪಟ್ಟಿರುವ ಪಾಪಿಗಾಗಿ ಇದು ಯಾವ ಅರ್ಥದಲ್ಲಿದೆ?
ಕಲೆಯನ್ನು ತೆಗೆಯುವುದು
ಪ್ರವಾದಿಯಾದ ಯೆಶಾಯನ ಮುಖಾಂತರ, ಯೆಹೋವನಂದದ್ದು: “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.”—ಯೆಶಾಯ 1:18.
ಒಂದು ಉಡುಪಿನಿಂದ ಆಳವಾದೊಂದು ಕಲೆಯನ್ನು ತೆಗೆಯುವ ಪ್ರಯತ್ನಗಳು ಅನೇಕ ವೇಳೆ ವ್ಯರ್ಥವಾಗಿರುತ್ತವೆ. ಬಹಳ ಹೆಚ್ಚೆಂದರೆ ಕಲೆಯು ಮಾಸಿಹೋಗಬಹುದಾದರೂ ಗಮನವನ್ನು ಸೆಳೆಯುವಂಥದ್ದಾಗಿರುತ್ತದೆ. ಕಡು ಕೆಂಪು ಯಾ ಕಿರಮಂಜಿಬಣ್ಣದ ಹಾಗೆ ಪ್ರಕಾಶಿಸುವ ಪಾಪಗಳನ್ನು ಯೆಹೋವನು ತೆಗೆದುಕೊಂಡು ಅವುಗಳನ್ನು ಹಿಮದಂತೆ ಬಿಳುಪಾಗಿಸಬಲ್ಲನೆಂಬ ಸಂಗತಿಯು ಎಷ್ಟು ಸಾಂತ್ವನದಾಯಕವಾಗಿದೆ.—ಹೋಲಿಸಿ ಕೀರ್ತನೆ 51:7.
ಹೀಗೆ, ತನ್ನ ಜೀವನದ ಉಳಿದ ಕಾಲಕ್ಕೆ ಒಂದು ಕಲೆಯನ್ನು ಅವನು ಹೊಂದಿದ್ದಾನೆಂದು ಒಬ್ಬ ಪಶ್ಚಾತಾಪ್ತ ಪಟ್ಟಿರುವ ಪಾಪಿಗೆ ಅನಿಸುವ ಅಗತ್ಯವಿಲ್ಲ. ಪಶ್ಚಾತಾಪ್ತ ಪಟ್ಟಿರುವವನನ್ನು ನಿರಂತರವಾದ ಅವಮಾನದಲ್ಲಿ ಜೀವಿಸುವಂತೆ ಮಾಡುತ್ತಾ, ಯೆಹೋವನು ತಪ್ಪುಗಳನ್ನು ಕೇವಲ ಮಬ್ಬಾಗಿಸುವುದಿಲ್ಲ.—ಹೋಲಿಸಿ ಅ. ಕೃತ್ಯಗಳು 22:16.
ಇತರರಿಂದ ಬೆಂಬಲ
ಯೆಹೋವನು ಭಾರವನ್ನೆತ್ತಿ, ಸಾಲವನ್ನು ರದ್ದುಗೊಳಿಸಿ, ಪಾಪದ ಕಲೆಯನ್ನು ತೆಗೆಯುವುದಾದರೂ, ಪಶ್ಚಾತಾಪ್ತಿಯು ಕೆಲವೊಮ್ಮೆ ತೀಕ್ಷೈ ಪರಿತಾಪದಿಂದ ಭಾವಪರವಶನಾಗಬಹುದು. ದೇವರಿಂದ ಕ್ಷಮಿಸಲ್ಪಟ್ಟ ಆದರೆ “ಅಧಿಕವಾದ ದುಃಖದಲ್ಲಿ ಮುಳುಗಿಹೋಗಬಹುದಿದ್ದ [“ಸಂಪೂರ್ಣವಾಗಿ ತೊರೆದು ಬಿಡುವಷ್ಟು ದುಃಖಿತವಾಗುವುದು,” ಟಿಇವಿ]” ಕೊರಿಂಥದಲ್ಲಿನ ಸಭೆಯಲ್ಲಿದ್ದ ಒಬ್ಬ ಪಶ್ಚಾತಾಪ್ತಿ ತಪ್ಪಿತಸ್ಥನ ಕುರಿತು ಪೌಲನು ಬರೆದನು.—2 ಕೊರಿಂಥ 2:7.
ಈ ವ್ಯಕ್ತಿಯು ಹೇಗೆ ಸಹಾಯಿಸಲ್ಪಡಬಹುದಿತ್ತು? ಪೌಲನು ಮುಂದುವರಿಸುವುದು: “ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (2 ಕೊರಿಂಥ 2:8) “ನಿಶ್ಚಯಪಡಿಸಿ” ಎಂಬುದಾಗಿ ಪೌಲನು ಉಪಯೋಗಿಸಿದ ಪದವು, “ಕಾನೂನು ಸಮ್ಮತಮಾಡು” ಎಂಬ ಅರ್ಥಕೊಡುವ ನ್ಯಾಯಶಾಸ್ತ್ರದ ಪದವಾಗಿದೆ. ಹೌದು, ಯೆಹೋವನ ಕ್ಷಮಾಪಣೆಯನ್ನು ಪಡೆದಿರುವ ಪಶ್ಚಾತಾಪ್ತ ಪಟ್ಟವರಿಗೆ ಜೊತೆ ಕ್ರೈಸ್ತರಿಂದ ಅನುಗ್ರಹದ ಮುದ್ರೆ, ಯಾ ಸ್ವೀಕರಣೆಯ ಅಗತ್ಯ ಕೂಡ ಇದೆ.
ಗ್ರಾಹ್ಯವಾಗಿಯೇ ಇದಕ್ಕೆ ಸಮಯ ಹಿಡಿಯಬಹುದು. ಪಶ್ಚಾತಾಪ್ತಿಯು ಅವನ ಪಾಪದ ಕಳಂಕವನ್ನು ನಿರ್ಮೂಲಮಾಡಬೇಕು ಮತ್ತು ಮನಗಾಣಿಸತಕ್ಕ ನೀತಿಯ ದಾಖಲೆಯನ್ನು ರಚಿಸಬೇಕು. ತನ್ನ ಪೂರ್ವದ ತಪ್ಪುಗಳಿಂದ ವೈಯಕ್ತಿಕವಾಗಿ ಪ್ರಭಾವಿಸಲ್ಪಟ್ಟ ಯಾವುದೇ ವ್ಯಕ್ತಿಯ ಅನಿಸಿಕೆಗಳನ್ನು ಅವನು ಸೈರಣೆಯಿಂದ ತಾಳಿಕೊಳ್ಳಬೇಕು. ಈ ನಡುವೆ, ಅವನು ದಾವೀದನಂತೆ ಯೆಹೋವನ ಸಂಪೂರ್ಣ ಕ್ಷಮಾಪಣೆಯ ಬಗೆಗೆ ಭರವಸೆಯುಳ್ಳವನಾಗಿರಬಹುದು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೂ ನಮ್ಮ ದ್ರೋಹಗಳನ್ನು [ಯೆಹೋವನು] ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.”—ಕೀರ್ತನೆ 103:12. (g93 12/8)
[ಅಧ್ಯಯನ ಪ್ರಶ್ನೆಗಳು]
a ಹೆಸರನ್ನು ಬದಲಾಯಿಸಲಾಗಿದೆ.
[ಪುಟ 18 ರಲ್ಲಿರುವ ಚಿತ್ರ ಕೃಪೆ]
Return of the Prodigal Son by Rembrandt: Scala/Art Resource, N.Y.