ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 5/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1994
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1994
g94 5/8 ಪು. 30

ನಮ್ಮ ವಾಚಕರಿಂದ

ಯುದ್ಧ ದೇವರೊ? ಫೆಬ್ರವರಿ 8, 1994ರ ಎಚ್ಚರ!ದಲ್ಲಿರುವ “ಬೈಬಲಿನ ದೃಷ್ಟಿಕೋನ . . . ಯೆಹೋವನು ಒಬ್ಬ ಯುದ್ಧ ದೇವರೋ?” ಎಂಬ ಉತ್ತಮ ಲೇಖನಕ್ಕಾಗಿ ಉಪಕಾರಗಳು. ಅನೇಕ ವರ್ಷಗಳಿಂದ ಬಹಳ ಜನರು ಕೇಳಿರುವ ಪ್ರಶ್ನೆಯು ಅದಾಗಿದೆ. ಕುಟುಂಬದೋಪಾದಿ ಕೆಲವು ಸಂದರ್ಭಗಳಲ್ಲಿ ನಾವು ಅದನ್ನು ಚರ್ಚಿಸುತ್ತಿದ್ದೆವು. ನಾನು ಮಾಡಿರುವ ಇತರ ಸಂಶೋಧನೆಯೊಂದಿಗೆ ನಿಮ್ಮ ಲೇಖನವು, ನನ್ನ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಸಹಾಯ ಮಾಡಿದೆ.

ಎಸ್‌. ಟಿ., ಅಮೆರಿಕ

ಮೊಲೆಯುಣಿಸುವಿಕೆ “ತಾಯಿಯ ಹಾಲಿನ ಪರವಾದ ಪ್ರಮಾಣ” ಎಂಬ ಲೇಖನವನ್ನು ಓದುವುದರಲ್ಲಿ ನಾವು ಆನಂದಿಸಿದೆವು. (ಜನವರಿ 8, 1994) ನನ್ನ ಹೆಂಡತಿಯು ಸದ್ಯದಲ್ಲಿ ನಮ್ಮ ಮಗುವಿಗೆ ಮೊಲೆಯುಣಿಸುತಿದ್ತಾಳ್ದೆ. ಮೊಲೆಯುಣಿಸುವಿಕೆಯು ತಾಯಿಯನ್ನು ಶಾರೀರಿಕವಾಗಿ ಶಕ್ತಿ ಇಲ್ಲದವಳಂತೆ ಮಾಡುತ್ತದೆ ಎಂಬ ಸಂಗತಿಯ ಕುರಿತಾದರೊ ಲೇಖನದಲ್ಲಿ ಹೇಳಲಾಗಿಲ್ಲ. ಬಹುಶಃ ಪ್ರತಿಯೊಬ್ಬ ಹೆಂಗಸಿಗೆ ರಾತ್ರಿಯಲ್ಲಿ ಮೊಲೆಯುಣಿಸಲು ಸಾಧ್ಯವಿಲ್ಲ. ನಮ್ಮ ವಿಷಯದಲ್ಲಿ, ಉದಾಹರಣೆಗೆ, ನನ್ನ ಹೆಂಡತಿಗೆ ತೀರ ಕಡಿಮೆ ನಿದ್ರೆ ಬರುವುದಾದರೆ, ಆಕೆಗೆ ಬಹಳ ಕಷ್ಟವಾಗುತ್ತದೆ.

ಟಿ. ಕೆ., ಜರ್ಮನಿ

ನಿಮ್ಮ ಅವಲೋಕನಗಳಿಗಾಗಿ ಧನ್ಯವಾದಗಳು. ಈ ವಿಷಯದಲ್ಲಿ ಹೊಸ ತಾಯಂದಿರು ಅನುಭವಿಸಬಹುದಾದ ಕೆಲವು ತೊಂದರೆಗಳ ಕುರಿತು ಹಿಂದಿನ ಲೇಖನಗಳು ವ್ಯವಹರಿಸಿವೆ. ಉದಾಹರಣೆಗೆ, ಸಪ್ಟಂಬರ 8, 1984ರ ಅವೇಕ್‌! ಮತ್ತು ಮಾರ್ಚ್‌ 22, 1986ರ ಅವೇಕ್‌! ಪತ್ರಿಕೆಗಳನ್ನು ನೋಡಿರಿ.—ಸಂ.

ಬಹು ದೂರ? “ಯುವ ಜನರು ಪ್ರಶ್ನಿಸುತ್ತಾರೆ . . . ‘ಬಹು ದೂರ’ ಎಂದರೆ ಎಷ್ಟು ದೂರ?” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ ಸಲ್ಲಿಸಲು ನಾನು ಬಯಸುತ್ತೇನೆ. (ಫೆಬ್ರವರಿ 8, 1994) ಈಗ ಸುಮಾರು ಒಂದು ವರ್ಷ ಕಾಲ ನಾನು ದೀಕ್ಷಾಸ್ನಾನ ಪಡೆದ ಕ್ರೈಸ್ತ ವ್ಯಕ್ತಿಯಾಗಿದ್ದೇನೆ, ಮತ್ತು ಅನೇಕ ವೇಳೆ ಈ ವಿಷಯದಲ್ಲಿ ಯೆಹೋವನ ದೃಷ್ಟಿಕೋನದ ಕುರಿತು ಯೋಚಿಸಿದ್ದೇನೆ. ಈ ವಿಷಯಕ್ಕೆ ನೀವು ಲಕ್ಷ್ಯಕೊಟ್ಟ ಸಂಗತಿಯನ್ನು ನಾನು ಬಹಳವಾಗಿ ಗಣ್ಯಮಾಡುತ್ತೇನೆ. ಅದು ಸರಳವಾಗಿರದಿದ್ದರೂ, ಯೆಹೋವನ ಮಟ್ಟಗಳಿಗನುಸಾರವಾಗಿ ಜೀವಿಸಲು ನಾನು ನಿಶ್ಚಯ ಮಾಡಿಕೊಂಡಿದ್ದೇನೆ.

ಸಿ. ಎಸ್‌., ಅಮೆರಿಕ

ಅನೇಕ ತಿಂಗಳಿಂದ ಇಂತಹ ಲೇಖನಕ್ಕಾಗಿ ನಾನು ಎದುರುನೋಡುತ್ತಾ ಇದ್ದೆ. ಒಂಬತ್ತು ತಿಂಗಳುಗಳಿಂದ ನಾನು ವಿಹಾರಮಾಡುತ್ತಾ ಇದ್ದೇನೆ, ಮತ್ತು ಲೇಖನವು ತಲಪಿದ ಕೂಡಲೇ ನನ್ನ ಗೆಳೆಯನಿಗೆ ಫೋನ್‌ ಮಾಡಿದೆ. ಈ ಸೂಕ್ಷ್ಮವಾದ ಹಾಗೂ ನಾಜೂಕಾದ ವಿಷಯಗಳ ಕುರಿತು ನಮಗೆ ಉಪದೇಶಿಸುವುದಕ್ಕಾಗಿ ತುಂಬ ಉಪಕಾರಗಳು.

ಎ. ಪಿ. ಜಿ. ಎಸ್‌., ಬ್ರೆಜಿಲ್‌

ಲೇಖನಕ್ಕಾಗಿ ನನ್ನ ಹೃದಯದಾಳದಿಂದ ನಾನು ನಿಮಗೆ ಉಪಕಾರ ಸಲ್ಲಿಸುತ್ತೇನೆ. ನನಗೆ ಅಗತ್ಯವಿದ್ದಾಗ ಅದು ಬಂತು. ನಾನು 16 ವರ್ಷ ಪ್ರಾಯದವಳಾಗಿದ್ದೇನೆ, ಮತ್ತು ನಾನು ಇಷ್ಟಪಡುವ ಒಬ್ಬ ಹುಡುಗನಿದ್ದಾನೆ. ಅವನ್ನೊಂದಿಗೆ ಸ್ನೇಹ ಸಂಧಾನ ಮಾಡುವುದರ ಕುರಿತು ನಾನು ಯೋಚಿಸುತ್ತಿದ್ದೆ. ಹಾದರವು ತಪ್ಪೆಂದು ನನಗೆ ನಿಶ್ಚಯವಾಗಿಯೂ ಗೊತ್ತು, ಆದರೆ ಮುದ್ದಿಸುವುದು ಮತ್ತು ತಬ್ಬಿಕೊಳ್ಳುವುದು ನಿಜವಾಗಿಯೂ ಬಹು ದೂರ ಹೋಗುವ ಸಂಗತಿಗಳಲವ್ಲೆಂದು ನಾನು ನೆನೆಸಿದೆ. ಆದರೆ ಈ ಲೇಖನದಿಂದ, ನಾನು ಮದುವೆಯಾಗುವ ಪ್ರಾಯವನ್ನು ತಲಪುವ ತನಕ, ಇಂತಹ ವಿಷಯಗಳು ಖಂಡಿತವಾಗಿ ಬಹು ದೂರ ಹೋಗುವ ವಿಷಯಗಳಾಗಿವೆ ಎಂಬುದನ್ನು ನಾನು ನೋಡಬಲ್ಲೆ!

ಎಮ್‌. ಎಚ್‌., ಜಪಾನ್‌

ನಾನು ಯುವ ವ್ಯಕ್ತಿಯಲ್ಲ, ಆದರೆ ನಾನಿನ್ನೂ ಅವಿವಾಹಿತಳಾಗಿದ್ದೇನೆ, ಮತ್ತು ನಾನು ಅದೇ ಪ್ರಶ್ನೆಯನ್ನು ಕೇಳಿದ್ದೇನೆ. ನಾನು ಒಬ್ಬರೊಂದಿಗೆ ವಿಹಾರ ಮಾಡುತ್ತಿದ್ದೇನೆ, ಮತ್ತು ಒಬ್ಬಾಕೆ ಪೂರ್ಣ ಸಮಯದ ಸೌವಾರ್ತಿಕಳೋಪಾದಿ, ನನಗೆ ಉತ್ತರವು ತಿಳಿದಿರಬೇಕು. ಆದರೆ ನೀವು ಭಾವನಾತ್ಮಕವಾಗಿ ಒಳಗೊಳ್ಳುವುದಾದರೆ, ನಿಮ್ಮ ನಿರ್ಣಯವು ಅಸ್ಪಷ್ಟವಾಗಿಗಬಲ್ಲದು. ಲೇಖನವು ಬಹಳ ಸಮಯೋಚಿತವಾಗಿತ್ತು ಮತ್ತು ಈ ವಿಷಯದ ಕುರಿತು ನಾನು ವಿಹಾರಮಾಡುತ್ತಿರುವ ಕ್ರೈಸ್ತ ಪುರುಷನೊಂದಿಗೆ ಮಾತಾಡುವುದರಲ್ಲಿ ನನಗೆ ಮಹತ್ತರವಾಗಿ ಸಹಾಯ ಮಾಡಿದೆ. ನಾವು ಅದನ್ನು ಜೊತೆಯಾಗಿ ಓದಿದ್ದೇವೆ ಮತ್ತು ಎಲ್ಲರ ಎದುರಿನಲ್ಲಿ ವಿಷಯಗಳನ್ನು ಗೌರವಾರ್ಹವಾಗಿಡಲು ಬಯಸುತ್ತೇವೆ.

ಎಮ್‌. ಆರ್‌., ಅಮೆರಿಕ

ಈ ವಿಷಯದ ಕುರಿತು ವಿವರಣೆಯನ್ನು ಪಡೆಯಲು ನಾನು ಪ್ರಾರ್ಥಿಸುತ್ತಾ ಇದ್ದೆ. ಲೇಖನದ ಮುಖ್ಯ ವಿಷಯವನ್ನು ನಾನು ನೋಡಿದಾಗ, ನಾನು ಅತ್ಯಾಶ್ಚರ್ಯಗೊಂಡೆ. ಲೇಖನವನ್ನು ನಾನು ಅತ್ಯಾಸಕಿಯ್ತಿಂದ ಓದಿದೆ, ಮತ್ತು ಹೇಗೆ ವರ್ತಿಸಬೇಕೆಂದು ನನಗೆ ಈಗ ನಿಖರವಾಗಿ ಗೊತ್ತಿದೆ.

ಎಸ್‌. ಜಿ., ಇಟಲಿ

ರಕ್ತರಹಿತ ವೈದ್ಯಕೀಯ ನಿರ್ವಹಣೆ “ಯೆಹೋವನ ಸಾಕ್ಷಿಗಳು ಮತ್ತು ವೈದ್ಯಕೀಯ ವೃತ್ತಿಯವರು ಸಹಕರಿಸುತ್ತಾರೆ” ಎಂಬ ಲೇಖನಕ್ಕಾಗಿ ಬಹಳಷ್ಟು ಉಪಕಾರಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ. (ಮಾರ್ಚ್‌ 8, 1994) ಅದನ್ನು ಓದಿದಂತೆ, ಗಣ್ಯತೆಯ ಕಣ್ಣೀರು ನನ್ನ ಕಣ್ಣುಗಳಲ್ಲಿ ತುಂಬಿಕೊಂಡವು. ನಮಗೆ ಈ ಸಮಸ್ಯೆ ಎಂದೂ ಇರದಿದ್ದ ಕಾರಣ, ನಮ್ಮಲ್ಲಿ ಅನೇಕರಿಗೆ ಗೊತ್ತಿರದ ಕೆಲವೊಂದು ಕಠಿನ ಕೆಲಸದ ಕುರಿತು ಲೇಖನವು ವರ್ಣಿಸಿತು. ಆದರೆ ನಮ್ಮೊಳಗೆ ರಕ್ತದ ವಿವಾದಾಂಶದಲ್ಲಿ ನಂಬಿಕೆಯ ಪರೀಕ್ಷೆಯನ್ನು ಒಂದು ದಿನ ಎದುರಿಸಬೇಕಾದವರಿಗೆ ನಮ್ಮ ಪರವಾಗಿ ನಮ್ಮ ಸಹೋದರರು ಶ್ರದ್ಧೆಯಿಂದ ಕೆಲಸಮಾಡುತ್ತಿದ್ದಾರೆ ಎಂಬ ಅರಿವು ಬಹಳ ಸಾಂತ್ವನಗೊಳಿಸುವಂಥದ್ದಾಗಿದೆ.

ಬಿ. ಬಿ., ಅಮೆರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ