ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 11/8 ಪು. 6-7
  • ನಿಜ ಕ್ರೈಸ್ತರು ಮತ್ತು ಯುದ್ಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಜ ಕ್ರೈಸ್ತರು ಮತ್ತು ಯುದ್ಧ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇಂದು ಯಾರಾದರೂ ನಿಜ ಕ್ರೈಸ್ತರು ಇದ್ದಾರೊ?
  • ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸಬಲ್ಲರೊ?
    ಎಚ್ಚರ!—1999
  • ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಯುದ್ಧಾಂತ್ಯಕ್ಕೆ ಯಾವ ನಿರೀಕ್ಷೆ?
    ಎಚ್ಚರ!—1993
  • ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
ಎಚ್ಚರ!—1994
g94 11/8 ಪು. 6-7

ನಿಜ ಕ್ರೈಸ್ತರು ಮತ್ತು ಯುದ್ಧ

ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾನ 13:34) ನಿಜ ಕ್ರೈಸ್ತರು ಒಬ್ಬರಿಗೊಬ್ಬರು ಅಂತಹ ಪ್ರೀತಿಯನ್ನು ಪ್ರದರ್ಶಿಸುತ್ತಾ, ಮತ್ತು ಅದೇ ಸಮಯದಲ್ಲಿ ಯುದ್ಧದಲ್ಲಿ ಭಾಗವಹಿಸಿ ಒಬ್ಬರನ್ನೊಬ್ಬರು ಕೊಲ್ಲಬಲ್ಲರೊ?

“ಕ್ರಿಸ್ತನು ವಿಭಾಗಿಸಲ್ಪಟ್ಟಿದ್ದಾನೊ?” ಎಂದು ಅಪೊಸ್ತಲ ಪೌಲನಿಂದ ಕೇಳಲ್ಪಟ್ಟ ಪ್ರಶ್ನೆಯನ್ನು ಸಹ ಪರಿಗಣಿಸಿರಿ. (1 ಕೊರಿಂಥ 1:13, ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಷನ್‌, ಕ್ಯಾತೊಲಿಕ್‌ ಎಡಿಷನ್‌) ನೀವು ಸ್ವತಃ ಕೇಳಿಕೊಳ್ಳಿರಿ: ‘ಒಂದೇ ಧರ್ಮದ ಸದಸ್ಯರಲ್ಲಿ ಒಬ್ಬರನ್ನೊಬ್ಬರು ಕೊಲ್ಲುವ ಮೂಲಕ ಫಲಿಸುವುದಕ್ಕಿಂತಲೂ ಹೆಚ್ಚು ಮಹತ್ತಾದ ಯಾವುದೇ ವಿಭಜನವು ಇರಸಾಧ್ಯವಿದೆಯೊ?’

ವಾಸ್ತವವಾಗಿ, ಆರಂಭದ ಕ್ರೈಸ್ತರು ಯುದ್ಧಗಳಲ್ಲಿ ಭಾಗವಹಿಸಲಿಲ್ಲ ಎಂಬುದನ್ನು ಕಲಿಯಲು ನಾವು ಆಶ್ಚರ್ಯಗೊಳ್ಳಬಾರದು. ಹೇಸ್ಟಿಂಗ್‌ನ ಪ್ರಸಿದ್ಧವಾದ ಎನ್‌ಸೈಕ್ಲೋಪೀಡಿಯ ಆಫ್‌ ರಿಲಿಜನ್‌ ಆ್ಯಂಡ್‌ ಎಥಿಕ್ಸ್‌ ದಾಖಲಿಸಿದ್ದು: “ಯುದ್ಧವು ವ್ಯವಸ್ಥಾಪಿತ ದುಷ್ಕೃತ್ಯವಾಗಿರುವುದರಿಂದ ಚರ್ಚು ಮತ್ತು ಕ್ರಿಸ್ತನ ಹಿಂಬಾಲಕರು ಅದರೊಂದಿಗೆ ಸಂಬಂಧವನ್ನು ಹೊಂದಿರಬಾರದು ಎಂಬ ವೀಕ್ಷಣವು ಆರಂಭದ ಕ್ರೈಸ್ತರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು.”

ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಯೇಸುವಿನ ಆಜೆಗ್ಞನುಸಾರ ಆರಂಭದ ಕ್ರೈಸ್ತರು ಜೀವಿಸಿದರು. ಜರ್ಮನ್‌ ದೇವತಾ ಶಾಸ್ತ್ರಜ್ಞನಾದ ಪೀಟರ್‌ ಮೈನ್‌ಹೋಲ್ಟ್‌ ವಿವರಿಸಿದ್ದು: “ಕ್ರೈಸ್ತರು ಸೈನಿಕರಾಗಬಹುದೋ ಬಾರದೋ ಮತ್ತು ಅವರು ಕ್ರೈಸ್ತರಾಗಿ ಪರಿಣಮಿಸಿದಾಗ ಸೈನ್ಯವನ್ನು ಬಿಟ್ಟುಬಿಡಬೇಕೋ ಬೇಡವೂ ಎಂಬ ಪ್ರಶ್ನೆಯನ್ನು ಕುರಿತು ತಿಳಿಸುವುದಿಲವ್ಲಾದರೂ, ಹಳೆಯ ಚರ್ಚು ಈ ವಿವಾದಾಂಶದಲ್ಲಿ ಒಂದು ನಿಲುವನ್ನು ತೆಗೆದುಕೊಂಡಿತು. ಒಬ್ಬ ಕ್ರೈಸ್ತನೂ ಮತ್ತು ಒಬ್ಬ ಸೈನಿಕನೂ ಆಗಿರುವುದು ಅಸಂಗತವೆಂದು ಪರಿಗಣಿಸಲ್ಪಟ್ಟಿತ್ತು.” ಆ “ಹಳೆಯ ಚರ್ಚಿ”ನಂತೆಯೇ ಇಂದು ಯಾರಾದರೂ ಒಂದು ನಿಲುವನ್ನು ತೆಗೆದುಕೊಳ್ಳುತ್ತಾರೊ?

ಇಂದು ಯಾರಾದರೂ ನಿಜ ಕ್ರೈಸ್ತರು ಇದ್ದಾರೊ?

ಎನ್‌ಸೈಕ್ಲೋಪೀಡಿಯ ಕೆನಡಿಯಾನ ಹೇಳುವುದು: “ಯೆಹೋವನ ಸಾಕ್ಷಿಗಳ ಕೆಲಸವು, ನಮ್ಮ ಶಕದ ಒಂದನೆಯ ಮತ್ತು ಎರಡನೆಯ ಶತಮಾನಗಳಲ್ಲಿ ಯೇಸುವಿನಿಂದ ಮತ್ತು ಆತನ ಶಿಷ್ಯರಿಂದ ಅಭ್ಯಸಿಸಲ್ಪಟ್ಟ ಪ್ರಾಚೀನ ಕ್ರೈಸ್ತತ್ವದ ಪುನರುಜ್ಜೀವನ ಮತ್ತು ಪುನಃ ಸ್ಥಾಪನೆಯಾಗಿದೆ. . . . ಎಲ್ಲರೂ ಸಹೋದರರು.”

ಇದು ವಾಸ್ತವವಾಗಿ ಹೇಗೆ ಅನ್ವಯಿಸಲ್ಪಡುತ್ತದೆ? “ಯೆಹೋವನ ಸಾಕ್ಷಿಗಳು ಯುದ್ಧದ ಸಮಯದಲ್ಲಿ ಕಟ್ಟುನಿಟ್ಟಿನ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ” ಎಂದು ಆಸ್ಟ್ರೇಲಿಯನ್‌ ಎನ್‌ಸೈಕ್ಲೋಪೀಡಿಯ ಟಿಪ್ಪಣಿ ಮಾಡುತ್ತದೆ. ಈ ನಿಲುವನ್ನು ತೆಗೆದುಕೊಳ್ಳಲು ಅವರು ವೈಯಕ್ತಿಕವಾಗಿ ಆಯ್ಕೆ ಮಾಡಬಹುದಾದರೂ, ತಾವು ಯಾವ ಸರಕಾರದ ಕೆಳಗೆ ಜೀವಿಸುತ್ತಾರೊ ಅದರ ವಿಷಯಗಳಲ್ಲಿ ಅವರು ಒಳಗೂಡುವುದಿಲ್ಲ. ಹೀಗೆ ಅವರು ಹಿಟ್ಲರನ ಯುದ್ಧವನ್ನು ಬೆಂಬಲಿಸಲಿಲ್ಲ, ಮತ್ತು ಇದರಿಂದಾಗಿ ನ್ಯುರೆಂಬರ್ಗ್‌ನ ವಿಚಾರಣೆಗಳ ಸಮಯದಲ್ಲಿ ಯುದ್ಧ ಪಾತಕಿಗಳೋಪಾದಿ ಅವರಲ್ಲಿ ಯಾರೂ ವಿಚಾರಣೆಗೊಳಪಡಲಿಲ್ಲ.

ನಾಜಿ ಪಕ್ಷದ ವಿದೇಶೀ ವಿಷಯಗಳ ಇಲಾಖೆಯ ಮುಖ್ಯಸ್ಥನಾದ ಆಲ್‌ಫ್ರಾಟ್‌ ರೋಸನ್‌ಬರ್ಗ್‌, ಅಪರಾಧಿಯೆಂದು ತೀರ್ಮಾನಿಸಲ್ಪಟ್ಟು ಗಲ್ಲಿಗೇರಿಸಲ್ಪಟ್ಟ ಒಬ್ಬ ಜರ್ಮನನಾಗಿದ್ದನು. ಯೆಹೋವನ ಸಾಕ್ಷಿಗಳನ್ನು ಸೆರೆಶಿಬಿರಗಳಲ್ಲಿ ಹಾಕುವುದರ ಕುರಿತಾದ ನಾಜಿ ಕಾರ್ಯನೀತಿಯನ್ನು ಸಮರ್ಥಿಸುತ್ತಾ, ತನ್ನ ವಿಚಾರಣೆಯ ಸಮಯದಲ್ಲಿ ರೋಸನ್‌ಬರ್ಗ್‌ ದೃಢೀಕರಿಸಿದನು: “ಅಮೆರಿಕನ್‌ ಸೇನಾ ಪಾದ್ರಿಯೊಬ್ಬನು, ನನ್ನ ಸೆರೆಕೋಣೆಯಲ್ಲಿ ನನಗೆ [ಒಹೈಯೊ] ಕೊಲಂಬಸ್‌ನಿಂದ ಬಂದ ಒಂದು ವಾರ್ತಾಪತ್ರಿಕೆಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದನು. ಯುದ್ಧದ ಸಮಯದಲ್ಲಿ ಅಮೆರಿಕ ಸಹ ಯೆಹೋವನ ಸಾಕ್ಷಿಗಳನ್ನು ಸೆರೆಹಿಡಿದಿತ್ತು ಮತ್ತು 1945ರ ದಶಂಬರದ ವರೆಗೆ, ಅವರಲ್ಲಿ 11,000 ಮಂದಿ ಇನ್ನೂ ಶಿಬಿರಗಳಲ್ಲಿ ಬಂದಿಯಾಗಿಡಲ್ಪಟ್ಟಿದ್ದರು ಎಂದು ನಾನು ಅದರಿಂದ ಊಹಿಸಿದೆ.” ಯೆಹೋವನ ಸಾಕ್ಷಿಗಳು ರಾಜಕೀಯ ವ್ಯಾಜ್ಯಗಳಲ್ಲಿ ಪಕ್ಷ ವಹಿಸದೆ ಕಟ್ಟುನಿಟ್ಟಾಗಿ ತಟಸ್ಥರಾಗಿದ್ದಾರೆ ಎಂಬುದು ಸತ್ಯ. ಎರಡನೆಯ ಲೋಕ ಯುದ್ಧದಲ್ಲಿ ಅಥವಾ ಇನ್ನಿತರ ಯಾವುದೇ ಯುದ್ಧದಲ್ಲಿ ಅವರು ಸ್ವಲ್ಪವೂ ರಕ್ತವನ್ನು ಹರಿಸಿಲ್ಲ.

ಹಂಗೆರಿಯಲ್ಲಿ, 1992, ನವಂಬರ 4ರ ರಿಂಗ್‌ ಪತ್ರಿಕೆಯಲ್ಲಿ ಬರಹಗಾರನೊಬ್ಬನು, ಯೆಹೋವನ ಸಾಕ್ಷಿಗಳ ಕುರಿತು ಹೇಳಿದ್ದು: “ಯಾರಾದರೊಬ್ಬರನ್ನು ಕೊಲ್ಲುವುದಕ್ಕೆ ಬದಲಾಗಿ ಅವರು ಸಾಯಲು ಇಷ್ಟಪಡುತ್ತಾರೆ. ಆದುದರಿಂದ ಕೇವಲ ಯೆಹೋವನ ಸಾಕ್ಷಿಗಳು ಮಾತ್ರವೇ ಭೂಮಿಯ ಮೇಲೆ ಜೀವಿಸಿದ್ದಾದರೆ, ಆಗ ಯುದ್ಧಗಳು ಎಲ್ಲಿಯೂ ತಲೆದೋರುತ್ತಿರಲಿಲ್ಲ ಎಂದು ನಾನು ಖಾತ್ರಿಯಿಂದಿದ್ದೇನೆ.” ನಿಜ ಕ್ರೈಸ್ತನೊಬ್ಬನು ಯುದ್ಧದಲ್ಲಿ ಭಾಗವಹಿಸಬಹುದೋ ಇಲ್ಲವೋ ಎಂಬುದರ ಕುರಿತು, ರಾಜಕೀಯ ವಿಜ್ಞಾನದ ಒಬ್ಬ ಪ್ರೊಫೆಸರರಾದ ರಿಯೊ ಎಮ್‌. ಕ್ರಿಸ್ಟನ್‌ಸನ್‌, ದ ಕ್ರಿಸಿಯ್ಟನ್‌ ಸೆಂಚುರಿಯಲ್ಲಿ ಚರ್ಚಿಸಿದರು, ಮತ್ತು ಅವರು ಮುಕ್ತಾಯಗೊಳಿಸಿದ್ದು:

“ಯೇಸುವು ತನ್ನ ವಿರೋಧಿಗಳ ಕಡೆಗೆ ಕೈ ಬಾಂಬ್‌ಗಳನ್ನು ಎಸೆಯುವುದನ್ನು, ಒಂದು ಮಷೀನ್‌ ಗನ್‌ ಉಪಯೋಗಿಸುವುದನ್ನು, ಉರಿ ಕಾರುವ ಯಂತ್ರವೊಂದನ್ನು ಕೌಶಲದಿಂದ ನಿರ್ವಹಿಸುವುದನ್ನು, ನ್ಯೂಕ್ಲಿಯರ್‌ ಬಾಂಬ್‌ಗಳನ್ನು ಎಸೆಯುವುದನ್ನು ಅಥವಾ ಸಾವಿರಾರು ತಾಯಂದಿರು ಮತ್ತು ಮಕ್ಕಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಐಸಿಬಿಎಮ್‌ಅನ್ನು ಉಡಾಯಿಸುವುದನ್ನು ಯಾರಾದರೊಬ್ಬರು ಗಂಭೀರವಾಗಿ ಊಹಿಸಿಕೊಳ್ಳಬಲ್ಲರೊ? ಪ್ರಶ್ನೆಯು ಎಷ್ಟು ಅಸಂಬದ್ಧವಾಗಿದೆಯೆಂದರೆ ಅದು ಉತ್ತರವನ್ನು ಪಡೆಯಲು ಅರ್ಹವಾಗಿಲ್ಲ. ಯೇಸು ಇದನ್ನು ಮಾಡಿರುವುದಿಲ್ಲವಾದರೆ ಮತ್ತು ತನ್ನ ನಿರೀಕ್ಷಣೆಗನುಸಾರ ನಂಬಿಗಸ್ತನಾಗಿರುವಲ್ಲಿ, ನಾವು ಅದನ್ನು ಮಾಡಿ ಆತನಿಗೆ ಹೇಗೆ ನಂಬಿಗಸ್ತರಾಗಿರಬಲ್ಲೆವು?” ಇದು ಆಲೋಚನೆಯನ್ನು ಉದ್ರೇಕಿಸುವ ಪ್ರಶ್ನೆಯಾಗಿದೆ.

ಆದರೂ, ಲೋಕದ ಧರ್ಮಗಳು ಯುದ್ಧದಲ್ಲಿ ಪಕ್ಷ ವಹಿಸುವುದನ್ನು ಮುಂದುವರಿಸುತ್ತವೆ. ಕ್ಯಾತೊಲಿಕರು ಕ್ಯಾತೊಲಿಕರನ್ನು ಕೊಲ್ಲುತ್ತಾ ಇರುತ್ತಾರೆ, ಮತ್ತು ಇತರ ಧರ್ಮಗಳವರು ತಮ್ಮ ಸ್ವಂತ ಧರ್ಮದ ಜನರನ್ನಾಗಲಿ ಅಥವಾ ಇತರ ಚರ್ಚುಗಳ ಸದಸ್ಯರನ್ನಾಗಲಿ ಕೊಲ್ಲುತ್ತಾರೆ. ಹಿಂಬಾಲಿಸುವ ನಿಜ ಕಥೆಯು ಹೊರಪಡಿಸುವಂತೆ, ಯೇಸು ಕ್ರಿಸ್ತನ ಬೋಧನೆಗಳನ್ನು ಅನುಸರಿಸಲು ದೃಢ ನಿಶಿತ್ಚಾಭಿಪ್ರಾಯ ಮತ್ತು ಧೈರ್ಯದ ಅಗತ್ಯವಿದೆ.

[ಪುಟ 7 ರಲ್ಲಿರುವ ಚಿತ್ರ]

ಯುದ್ಧದಲ್ಲಿ ಯೇಸುವು ಒಂದು ಮಷೀನ್‌ ಗನ್‌ ಉಪಯೋಗಿಸುವುದನ್ನು ಯಾರಾದರೊಬ್ಬರು ಗಂಭೀರವಾಗಿ ಊಹಿಸಬಲ್ಲರೊ?

[ಕೃಪೆ]

U.S. National Archives photo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ