ಜಗತ್ತನ್ನು ಗಮನಿಸುವುದು
ಹೊಸದಾದ ಮತ್ತು ಪುನಃ ತಲೆದೋರುತ್ತಿರುವ ರೋಗಗಳು
ಹೊಸ ರೋಗಗಳನ್ನೂ ಒಳಗೊಂಡು, ರೋಗಗಳ ತಲೆದೋರುವಿಕೆಗಳು ಲಕ್ಷಾಂತರ ಜನರ ಜೀವಗಳಿಗೆ ಬೆದರಿಕೆ ಹಾಕುತ್ತವೆ ಎಂದು ಲೋಕಾರೋಗ್ಯ ಸಂಸ್ಥೆಯು (ಡಬ್ಲ್ಯೂಏಚ್‌ಓ) ಎಚ್ಚರಿಕೆ ಕೊಡುತ್ತದೆ. ಅತ್ಯಂತ ನಾಟಕೀಯವಾದ ಉದಾಹರಣೆಯು ಒಂದು ವೈರಸ್‌ನಿಂದ ಉಂಟುಮಾಡಲ್ಪಡುವ ರೋಗವಾದ, ಹತ್ತು ವರ್ಷಗಳ ಹಿಂದೆ ಕಾರ್ಯತಃ ಅಜ್ಞಾತವಾಗಿದ್ದ ಏಯ್ಡ್ಸ್ ರೋಗವೇ ಆಗಿದೆ. ಇತ್ತೀಚೆಗೆ ನೈರುತ್ಯ ಅಮೆರಿಕದಲ್ಲಿ ಕಂಡುಹಿಡಿಯಲ್ಪಟ್ಟ ಹಾಂಟವೈರಸ್ ಪುಲ್ಮೊನರಿ ಸಿಂಡ್ರೋಮ್ ಇನ್ನೊಂದು ರೋಗವಾಗಿದೆ. ಕಾಲರ ರೋಗದ ಸಂಪೂರ್ಣ ಹೊಸತಾದ ಒಂದು ತಳಿ ಏಷ್ಯಾದಲ್ಲಿ ಉದಯಿಸಿದೆ. ಎರಡು ವಿಧದ ರಕ್ತಸ್ರಾವದ ಜ್ವರಗಳು—ಎರಡೂ ಮಾರಕವಾದವುಗಳು—ದಕ್ಷಿಣ ಅಮೆರಿಕದಲ್ಲಿ ವಿಕಸಿಸಿವೆ. 1993ರಲ್ಲಿ ಸುವಿದಿತವಾಗಿ ತಲೆದೋರಿದ ಸಾಂಕ್ರಾಮಿಕ ರೋಗಗಳ ಉದಾಹರಣೆಗಳಲ್ಲಿ, ಲ್ಯಾಟಿನ್ ಅಮೆರಿಕದಲ್ಲಿ ಕಾಲರ, ಕೆನ್ಯದಲ್ಲಿ ಪೀತ ಜ್ವರ, ಕಾಸ್ಟರೀಕದಲ್ಲಿ ಡೆಂಗಿ ಜ್ವರ, ಮತ್ತು ರಶ್ಯದಲ್ಲಿ ಡಿಫ್ತೀರಿಯ (ಗಳಚರ್ಮರೋಗ)ಗಳು ಒಳಗೊಂಡಿವೆ. ಹೊಸದಾದ ಮತ್ತು ಪುನಃ ತಲೆದೋರುತ್ತಿರುವ ರೋಗಗಳನ್ನು ಗುರುತಿಸುವಂತೆ ಮತ್ತು ಎದುರಿಸುವಂತೆ, ಒಂದು ಭೌಗೋಲಿಕ ಕೇಂದ್ರಗಳ ಜಾಲಕ್ಕೆ ಡಬ್ಲ್ಯೂಏಚ್‌ಓ ಕರೆಕೊಡುತ್ತಿದೆ. (g94 12⁄22)
ಧೂಮಪಾನವನ್ನು ಪ್ರವರ್ಧಿಸುವ ಕಾರ್ ರೇಸ್‌ಗಳು
ಸಾಂಪ್ರದಾಯಿಕವಾಗಿ, ಯೂರೋಪಿಯನ್ ದೇಶಗಳು ಜನಪ್ರಿಯವಾದ ಫಾರ್ಮ್ಯುಲ ವನ್ ಗ್ರಾನ್ ಪ್ರೀ (ಗ್ರಾಂಡ್ ಪ್ರಿಕ್ಸ್) ಕಾರ್ ರೇಸ್‌ಗಳನ್ನು ಏರ್ಪಡಿಸಿವೆ. ಆದರೂ, ಈಗ ವ್ಯವಸ್ಥಾಪಕರು ಈ ಘಟನೆಗಳನ್ನು ಜಪಾನ್ ಮತ್ತು ಚೈನಾದಂತಹ ಏಷ್ಯಾದ ದೇಶಗಳಲ್ಲಿ ನಡೆಸಲು ಇಷ್ಟಪಡುತ್ತಾರೆ. ಏಕೆ? ಹೊಗೆಸೊಪ್ಪಿನ ಜಾಹೀರಾತಿನ ಮೇಲೆ ಯೂರೋಪಿನ ಹೆಚ್ಚು ಕಠಿನವಾದ ನಿರ್ಬಂಧಗಳ ಕಾರಣದಿಂದಲೇ. ರೇಸ್‌ಗಳ ಪ್ರಮುಖ ಪ್ರಾಯೋಜಕಗಳು ಹೊಗೆಸೊಪ್ಪಿನ ಕಂಪೆನಿಗಳಾಗಿವೆ, ಆದುದರಿಂದ ರೇಸಿನ ಕಾರುಗಳು ಹೊಗೆಸೊಪ್ಪಿನ ಜಾಹೀರಾತುಗಳನ್ನು ಪ್ರಧಾನವಾಗಿ ಪ್ರದರ್ಶಿಸುತ್ತವೆ. ಜಪಾನಿನ ಆಸಾಹಿ ಈವ್ನಿಂಗ್ ನ್ಯೂಸ್‌ಗನುಸಾರವಾಗಿ, ಹೊಗೆಸೊಪ್ಪಿನ ಒಂದು ಕಂಪೆನಿಯು “ಎರಡು ತಂಡಗಳಿಗೆ ಹಣಕಾಸು ಒದಗಿಸುತ್ತಾ ವಾರ್ಷಿಕವಾಗಿ ಅನೇಕ ನೂರು ಕೋಟಿ ಯೆನ್ ವಿನಿಯೋಗಿಸುತ್ತದೆ.” ಯೂರೋಪಿನಲ್ಲಿ ರೇಸು ನಡೆಸುವಾಗ ರೇಸಿನ ಕಾರುಗಳ ಮೇಲಿರುವ ಜಾಹೀರಾತುಗಳನ್ನು ಅಳಿಸಿಹಾಕಲೇ ಬೇಕು ಅಥವಾ ಮುಚ್ಚಬೇಕು. ಸಿಗರೇಟ್ ಜಾಹೀರಾತಿನ ಮೇಲೆ ನಿಷೇಧದ ಕಾರಣದಿಂದ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಗ್ರಾನ್ ಪ್ರೀ ಬಹುಮಟ್ಟಿಗೆ ರದ್ದುಮಾಡಲ್ಪಟ್ಟಿತು. ಎಲ್ಲಾ ವಯಸ್ಕ ಪುರುಷರಲ್ಲಿ 60 ಪ್ರತಿಶತ ಧೂಮಪಾನ ಮಾಡುವ, ಏಷ್ಯಾದ ರಾಷ್ಟ್ರಗಳು, ರೇಸಿನ ಕಾರುಗಳ ಮೇಲೆ ಸಿಗರೇಟ್‌ಗಳನ್ನು ಜಾಹೀರುಪಡಿಸಲು ಹೆಚ್ಚು ಉತ್ತಮ ಸ್ಥಳಗಳಾಗಿ ಈಗ ಪರಿಗಣಿಸಲ್ಪಡುತ್ತಿವೆ. (g94 12⁄22)
ಎವರೆಸ್ಟ್ ಪರ್ವತದ ಮೇಲೆ ಚೊಕ್ಕಟಗೊಳಿಸುವಿಕೆ
ಯುನೆಸ್ಕೊ (UNESCO) ಸೋರ್ಸಸ್ ಪತ್ರಿಕೆಗನುಸಾರ, ಪ್ರಪಂಚದ ಅತ್ಯಂತ ಎತ್ತರವಾದ ಶಿಖರವಾಗಿರುವುದಲ್ಲದೆ, ಎವರೆಸ್ಟ್ ಪರ್ವತವು ಈಗ ಪ್ರಪಂಚದ “ಅತ್ಯಂತ ದೊಡ್ಡ ಕಸದ ಅಂಗಣ”ವಾಗಿ ಸಹ ಪ್ರಸಿದ್ಧವಾಗಿದೆ. ಕಳೆದ 40 ವರ್ಷಗಳಲ್ಲಿ, ಪರ್ವತನಿವಾಸಿಗಳು ಸುಮಾರು 20 ಟನ್‌ಗಳಷ್ಟು ಆಮ್ಲಜನಕದ ಸೀಸೆಗಳು, ಗುಡಾರಗಳು, ಮಲಗುವ ಚೀಲಗಳು, ಮತ್ತು ಆಹಾರದ ಹೊದಿಕೆಯಿಂದ ಎವರೆಸ್ಟನ್ನು ಗಲೀಜು ಮಾಡಿದ್ದಾರೆ. ಟಿಷ್ಯು ಕಾಗದದ ಹಾರಾಡುತ್ತಿರುವ ತುಣುಕುಗಳಿಂದ ಭೂ ದೃಶ್ಯವು ಗುರುತಿಸಲ್ಪಟ್ಟಿರುವ ಕೆಳಗಿನ ಇಳಿಜಾರುಗಳಲ್ಲಿ, ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುವ ದಾರಿಯು ಈಗ “ಟ್ಲಾಯೆಟ್ ಕಾಗದದ ದಾರಿಯೆಂದು ಪ್ರಸಿದ್ಧವಾಗಿದೆ.” ಪರ್ವತದ ಮೇಲಿನ ಭಗ್ನಾವಶೇಷಗಳ ಪ್ರಮಾಣವು ಸ್ಥೆರ್ಯಗೆಡಿಸುವಂತಹದ್ದಾಗಿದೆ. “ಎವರೆಸ್ಟ್‌ನ ಕುರಿತು, ಮಾನವ ಅಡ್ಡೈಸುವಿಕೆಯಿಲ್ಲದ ಹಿಂದಿನ ನಿರ್ಮಲ ಸ್ಥಿತಿಯ ನಿರ್ಜನ ಪ್ರದೇಶದೋಪಾದಿ ಮಾನಸಿಕ ಚಿತ್ರಣಗಳನ್ನು ಹೊಂದಿರುವವರಿಗೆ, ಈ ದೃಶ್ಯಗಳ ಛಾಯಾಚಿತ್ರಗಳು ಒಂದು ಆಘಾತದೋಪಾದಿ ಇವೆ” ಎಂದು ಯುನೆಸ್ಕೊ (UNESCO) ಸೋರ್ಸಸ್ ಬರೆಯುತ್ತದೆ. ಪರ್ವತದಿಂದ ಈ ಅಸಹ್ಯವಾದ ವಸ್ತುವನ್ನು ತೊಡೆದುಹಾಕಲಿಕ್ಕಾಗಿ, “ಚೊಕ್ಕಟಗೊಳಿಸುವಿಕೆ”ಯ ಅನೇಕ ಯಾತ್ರೆಗಳನ್ನು ನೇಪಾಲ್ ಸರಕಾರವು ಮಂಜೂರು ಮಾಡಿದೆ. (g94 12⁄22)
ಸಾಕಷ್ಟು ಆಹಾರವಿಲ್ಲ—ಬೇಕಾದಷ್ಟು ಬಿಯರ್ ಇದೆ
ವೆನಿಸ್ವೇಲದ ವಾರ್ತಾಪತ್ರಿಕೆಯಾದ ಎಲ್ ಯೂನಿವರ್ಸಲ್‌ಗನುಸಾರ, ವೆನಿಸ್ವೇಲದಲ್ಲಿ ನ್ಯೂನ ಪೋಷಣೆಯ ಕಾರಣದಿಂದ, ಆರು ವರ್ಷ ಪ್ರಾಯದವರು ಮತ್ತು ಅದಕ್ಕಿಂತಲೂ ಚಿಕ್ಕವರಾದ 7,26,000 ಮಕ್ಕಳು, ಅವರ ವಯಸ್ಸಿಗೆ ಅವರು ಇರಬೇಕಾದುದಕ್ಕಿಂತಲೂ ಹೆಚ್ಚು ಗಿಡ್ಡವಾಗಿದ್ದಾರೆ. ಆ ವಯೋವರ್ಗದಲ್ಲಿರುವ ಮಕ್ಕಳಲ್ಲಿ ಇದು ಗಾಬರಿ ಹುಟ್ಟಿಸುವ 23.8 ಪ್ರತಿಶತವಾಗಿದೆ, ಪ್ರತಿ 4 ಮಕ್ಕಳಲ್ಲಿ 1. ಮಕ್ಕಳಿಗೆ ಉಣಿಸಲಿಕ್ಕಾಗಿ ಸಾಕಷ್ಟು ಪುಷ್ಟಿಕರವಾದ ಆಹಾರವು ಅಲ್ಲಿ ಇಲ್ಲದಿರುವಾಗ್ಯೂ, ದೇಶದಲ್ಲಿ ಬೇಕಾದಷ್ಟು ಬಿಯರ್ ಇರುವಂತೆ ಭಾಸವಾಗುತ್ತದೆ. ಲ್ಯಾಟಿನ್-ಅಮೆರಿಕನ್ ದೇಶಗಳ ನಡುವೆ, ಬಿಯರ್ ಬಳಕೆಯಲ್ಲಿ ವೆನಿಸ್ವೇಲ ಪ್ರಥಮ ಸ್ಥಾನದಲ್ಲಿದೆ ಎಂದು ಎಲ್ ಯೂನಿವರ್ಸಲ್ ವರದಿ ಮಾಡುತ್ತದೆ. 1991ರಲ್ಲಿ ವೆನಿಸ್ವೇಲದವರು—ಒಬ್ಬೊಬ್ಬ ವ್ಯಕ್ತಿಯೂ—ಸರಾಸರಿ 75 ಲೀಟರ್‌ಗಳಷ್ಟು ಕುಡಿದರು.
ಕಣ್ಣುಗಳಲ್ಲಿ ಹೊಗೆ
ಆಸ್ಟ್ರೇಲಿಯದ ನ್ಯಾಷನಲ್ ವಿಷನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೇಲ್ವಿಚಾರಕರಾದ ಪ್ರೊಫೆಸರ್ ರಾಬರ್ಟ್ ಅಗಸ್ಟೀನ್, ಸಿಗರೇಟ್ ಹೊಗೆಯಿಂದ ಬರುವ ರಾಸಾಯನಿಕಗಳು ಕ್ಯಾಟರ್ಯಾಕ್ಟನ್ನು ಉಂಟುಮಾಡುತ್ತವೆ ಎಂಬುದಕ್ಕೆ ನಿರ್ವಿವಾದದ ಸಾಕ್ಷ್ಯವನ್ನು ಹೊಂದಿರುವುದಾಗಿ ಪ್ರತಿಪಾದಿಸುತ್ತಾರೆ. ಧೂಮಪಾನ ಮಾಡದವರಿಗಿಂತಲೂ ಧೂಮಪಾನ ಮಾಡುವವರು ಎರಡು ಅಥವಾ ಮೂರರಷ್ಟು ಹೆಚ್ಚು ಕ್ಯಾಟರ್ಯಾಕ್ಟನ್ನು ವಿಕಸಿಸುವ ಸಂಭವವಿದೆ ಎಂದು ಒಂದು ಅಧ್ಯಯನವು ತೋರಿಸುತ್ತದೆ. ಸಿಗರೇಟ್ ಹೊಗೆಯಿಂದ ರಾಸಾಯನಿಕಗಳು ಪ್ರಥಮವಾಗಿ ದೇಹದಿಂದ ಹೀರಲ್ಪಡುತ್ತವೆ, ಆದರೆ ಅನಂತರ ಅವು ಕಣ್ಣಿನ ಬಳಿಗೆ ಸಾಗುತ್ತವೆ, ಅಲ್ಲಿ ಕಣ್ಣಿನಲ್ಲಿರುವ ಮಸೂರದಿಂದ ಹೆಚ್ಚಿನ ಉಪ್ಪು ಮತ್ತು ನೀರನ್ನು ಹೀರಿಹಾಕುವ “ಪಂಪು”ಗಳನ್ನು ಹಾಳುಮಾಡುತ್ತವೆ. ಪರಿಣಾಮವಾಗಿ ಜೀವಕೋಶಗಳಲ್ಲಿ ಊತ ಮತ್ತು ಬಿರಿತವು ಕ್ಯಾಟರ್ಯಾಕ್ಟನ್ನು ಉಂಟುಮಾಡುತ್ತದೆ. “ನಾನು ಸಂಪೂರ್ಣವಾಗಿ ಸಂತೃಪ್ತನಾಗಿದ್ದೇನೆ. ಸಿಗರೇಟ್ ಹೊಗೆಯಲ್ಲಿರುವ ಯಾವುದೋ ಒಂದು ವಿಷಯವು ಮಸೂರಗಳಲ್ಲಿ ಕಾರ್ಯನಡಿಸುವುದರಿಂದ ಪಂಪುಗಳನ್ನು ತಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಪ್ರೊಫೆಸರ್ ಅಗಸ್ಟೀನ್ ವಿವರಿಸುತ್ತಾರೆ. (g94 12⁄22)
ಮಿದುಳು ವ್ಯಾಯಾಮ
“ನ್ಯೂನತೆಯಿರುವ ಒಂದು ಜ್ಞಾಪಕ ಶಕ್ತಿಯು ಸಾಮಾನ್ಯವಾಗಿ ಅದೃಷ್ಟದ ಅಲ್ಲ, ನ್ಯೂನ ತರಬೇತಿಯ ಪ್ರಶ್ನೆಯಾಗಿರುತ್ತದೆ” ಎಂದು ಜರ್ಮನ್ ಆರೋಗ್ಯ-ವಿಮೆಯ ಒಂದು ಪ್ರಕಾಶನವಾದ ಡಿಎಕೆ ಮಾಗಾಟ್ಸೀನ್ ವರದಿ ಮಾಡುತ್ತದೆ. ಅಕ್ರಿಯತೆಯಿಂದ ಸ್ನಾಯುಗಳು ಕ್ಷಯಿಸಿ ಹೋಗುವಂತೆಯೇ, ಮಿದುಳಿಗೆ ವ್ಯಾಯಾಮವು ಕೊಡಲ್ಪಡುವುದಿಲ್ಲವಾದರೆ ಅದು ಜಡಗಟ್ಟಿದ್ದಾಗಿ ಪರಿಣಮಿಸುತ್ತದೆ ಮತ್ತು ಕಡಿಮೆ ದತ್ತಾಂಶವನ್ನು ಸಂಗ್ರಹಿಸುತ್ತದೆ. ಮುಖ್ಯವಾಗಿ ಈ ಸಮಸ್ಯೆಯು ವೃದ್ಧರ ಕುರಿತಾಗಿದೆಯೆ? ನಿಶ್ಚಯವಾಗಿ ಇಲ್ಲ! “ಆಲೋಚಿಸುವುದು ಅನೇಕವೇಳೆ ನಮಗೆ ಸುಲಭವಾಗಿ ಅಥವಾ ಅತ್ಯಾಧಿಕ್ಯವಾಗಿಯೂ ಮಾಡಲ್ಪಡುವುದರಿಂದ,” ತಮ್ಮ ಮನಸ್ಸುಗಳನ್ನು ಸರಿಯಾಗಿ ಆವರಿಸಲ್ಪಡದೆ ಇಡುವುದರಿಂದ ಯುವ ಜನರೂ ಜಡಗಟ್ಟಿದ ಜ್ಞಾಪಕ ಶಕ್ತಿಯನ್ನು ವಿಕಸಿಸಿಕೊಳ್ಳುವ ಅಪಾಯವನ್ನು ಹೊಂದಿದ್ದಾರೆ ಎಂದು ಪತ್ರಿಕೆಯು ಹೇಳಿಕೆಯನ್ನೀಯುತ್ತದೆ. ಯಾವುದು ಸಹಾಯ ಮಾಡಬಲ್ಲದು? ಮನಸ್ಸು ಮತ್ತು ಜ್ಞಾಪಕ ಶಕ್ತಿಯನ್ನು ಪ್ರಚೋದಿಸಲಿಕ್ಕಾಗಿ, ಸಂಖ್ಯೆಗಳು ಮತ್ತು ವರ್ಣಮಾಲೆಯ ಅಕ್ಷರಗಳನ್ನು ಒಳಗೊಂಡಿರುವ ಗೂಢ ಪ್ರಶ್ನೆಗಳಂತಹ, ಮಾನಸಿಕ ಆಟಗಳನ್ನು ಉಪಯೋಗಿಸುವ ಮೂಲಕ ಮಿದುಳು ವ್ಯಾಯಾಮವನ್ನು ಪತ್ರಿಕೆಯು ಶಿಫಾರಸ್ಸು ಮಾಡುತ್ತದೆ. ಹಾಗೂ, “ಪದಬಂಧದ ಗೂಢ ಪ್ರಶ್ನೆಗಳು ಸಹಾಯಕಾರಿಯಾಗಿರಸಾಧ್ಯವಿದೆ.” (g95 1⁄8)
ಏಯ್ಡ್ಸ್ ಆಫ್ರಿಕದಲ್ಲಿ ಬಹಳ ಮಂದಿಯನ್ನು ಕೊಲ್ಲುತ್ತದ
ಲೋಕಾರೋಗ್ಯ ಸಂಸ್ಥೆಯ ಅಂದಾಜುಗಳಿಗನುಸಾರ, ಲೋಕದಲ್ಲಿ ಏಯ್ಡ್ಸ್‌ನ 1 ಕೋಟಿ 50 ಲಕ್ಷ ವಿದಿತ ಕೇಸುಗಳಲ್ಲಿ, ಸುಮಾರು ಒಂದು ಕೋಟಿ ಕೇಸುಗಳು ಆಫ್ರಿಕದಲ್ಲಿದ್ದು ಅದನ್ನು ಲೋಕದ ಅತ್ಯಂತ ಹೆಚ್ಚು ಬಾಧಿತ ಭೂಖಂಡವನ್ನಾಗಿ ಮಾಡಿದೆ. ಏಯ್ಡ್ಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲಿಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಸೂಕ್ತಕ್ರಮಗಳನ್ನು “ಸದಾ ಉಕ್ಕೇರುವ ನದಿಗಳನ್ನು ಹತೋಟಿಯಲ್ಲಿಡಲು ಪ್ರಯತ್ನಿಸುವ, ಮರಳಿನ ಸಣ್ಣ ದಂಡೆದಾರಿಗಳು” ಎಂದು ಪ್ರೊಫೆಸರ್ ನಾಟಾನ್ ಕ್ಲ್ಯೂಮೆಕ್ ವಿವರಿಸುತ್ತಾರೆ. ಪ್ಯಾರಿಸ್ ದಿನಪತ್ರಿಕೆಯಾದ ಲ ಮಾಂಡ್‌ನಲ್ಲಿ ಪ್ರಕಟಿಸಲ್ಪಟ್ಟ ಸಂದರ್ಶನದಲ್ಲಿ, ಆಫ್ರಿಕದಲ್ಲಿ ವೈರಸ್ ಉಂಟುಮಾಡಲಿರುವ ವಿನಾಶವನ್ನು ರಾಷ್ಟ್ರಪತಿಗಳು ಇನ್ನೂ ಸಂಪೂರ್ಣವಾಗಿ ಗ್ರಹಿಸಿಲ್ಲ ಎಂದು ಪ್ರೊಫೆಸರ್ ಕ್ಲ್ಯೂಮೆಕ್ ಹೇಳಿದರು. 1987ರಲ್ಲಿ, ಭೂಖಂಡದ 10 ಪ್ರತಿಶತವು ಏಯ್ಡ್ಸ್‌ನಿಂದ ಸೋಂಕಿತವಾಗಬಹುದೆಂದು ಪ್ರೊಫೆಸರ್ ಕ್ಲ್ಯೂಮೆಕ್ ಅಂದಾಜುಮಾಡಿದಾಗ, ಅದು ಅತಿಶಯೋಕ್ತಿಯೆಂದು ಅನೇಕರು ಅಭಿಪ್ರಯಿಸಿದರು. ಇಂದು ಆಫ್ರಿಕದ ಜನಸಂಖ್ಯೆಯ 20ರಿಂದ 40 ಪ್ರತಿಶತವು ಆ ಮಾರಕ ವೈರಸ್‌ನಿಂದ ಕೊಂಚ ಮಟ್ಟಿಗಾದರೂ ಸೋಂಕನ್ನು ಹೊಂದುವದೆಂದು ಅಂದಾಜುಮಾಡಲ್ಪಡುತ್ತದೆ. (g95 1⁄8)
ಹೆಚ್ಚಾಗಿ ಮೀನು ಹಿಡಿಯುವುದು ಸಮುದ್ರಗಳನ್ನು ಬರಿದುಮಾಡುತ್ತಿದೆ
“‘ಬೇಕಾದಷ್ಟು ಹೆಚ್ಚು ಮೀನುಗಳು ಸಮುದ್ರದಲ್ಲಿವೆ’ ಎಂದು ಒಂದು ಇಂಗ್ಲಿಷ್ ನಾಣ್ಣುಡಿಯು ಹೇಳುತ್ತದೆ. ಆದರೆ ಇದು ತಪ್ಪಾಗಿದೆ” ಎಂದು ದಿ ಈಕಾನೊಮಿಸ್ಟ್ ಟಿಪ್ಪಣಿ ಮಾಡುತ್ತದೆ. “ಸಮುದ್ರದಲ್ಲಿ ಮೀನುಗಳು ಸಮೃದ್ಧವಾಗಿವೆ, ಆದರೆ ಇವನ್ನು ಸ್ವಪ್ರಯೋಜನಕ್ಕಾಗಿ ವಿಪರೀತವಾಗಿ ಉಪಯೋಗಿಸಲಾಗಿದೆ.” 1989ರಲ್ಲಿ ಅದರ ಪರಮಾವಧಿಯೊಂದಿಗೆ, ಲೋಕದ ಕಡಲ ಮೀನಿನ ಹಿಡಿತವು ಕ್ಷೀಣಿಸುತ್ತಿದೆ. ಕಾರಣವು ಸರಳವಾಗಿದೆ: “ತತ್ತಿ ಹಾಕುವಿಕೆಯ ಸಂಗ್ರಹಗಳನ್ನು ಉಳಿಸಿಕೊಂಡು ಬರಲಿಕ್ಕಾಗಿ ತೀರ ಕೆಲವು ಮೀನುಗಳು ಸಮುದ್ರದಲ್ಲಿ ಬಿಡಲ್ಪಟ್ಟಿವೆ. ಮೀನಿನ ಸಂತಾನೋತ್ಪತ್ತಿಗಾಗಿ ಅಗತ್ಯವಾಗಿರುವ ಮೀನುಗಳನ್ನು ಮೀನುಗಾರರು ಬಳಸುತ್ತಿದ್ದಾರೆ.” ವಿಶ್ವಸಂಸ್ಥೆಯ ಆಹಾರ ಮತ್ತು ವ್ಯವಸಾಯ ಸಂಸ್ಥೆಗನುಸಾರ, ಪ್ರಪಂಚದ 17 ಪ್ರಮುಖವಾದ ಮೀನು ಹಿಡಿಯುವ ಸ್ಥಳಗಳಲ್ಲಿ 13 ಸ್ಥಳಗಳು ಗಂಭೀರವಾದ ಒಂದು ಅಪಾಯದಲ್ಲಿವೆ—ಅವುಗಳಲ್ಲಿ 4 ವಾಣಿಜ್ಯ ರೀತಿಯಲ್ಲಿ ಬರಿದಾದವುಗಳಾಗಿ ವರ್ಗೀಕರಿಸಲ್ಪಟ್ಟಿವೆ. ಸೋನಾರ್ ಮತ್ತು ಉಪಗ್ರಹ ಸಂಪರ್ಕ ಸಾಧನಗಳಂತಹ ಅತ್ಯಾಧುನಿಕ ತಾಂತ್ರಿಕತೆಯು ಮೀನುಗಾರರು ಅತ್ಯಂತ ದೂರದ ಕ್ಷೇತ್ರಗಳಲ್ಲಿ ಮೀನನ್ನು ಗುರುತಿಸುವಂತೆ ಮತ್ತು ಮೀನು ಹಿಡಿಯುವ ನಿರ್ದಿಷ್ಟ ಸ್ಥಳಗಳಿಗೆ ಹಿಂದಿರುಗುವಂತೆ ಮಾಡಿದೆ. ಮೀನು ಕೆಡದಂತೆ ಮಾಡುವ ಸಾಧನಗಳಿರುವ, ಕಾಲ್ಚೆಂಡಾಟದ ಮೈದಾನಗಳಷ್ಟು ದೊಡ್ಡ ಗಾತ್ರದ ಬಲೆ ದೋಣಿಗಳು, ಹಾಗೂ ಇನ್ನೂ ದೊಡ್ಡ ಬಲೆಗಳು ವಿಪರೀತ ಪ್ರಮಾಣಗಳಲ್ಲಿ ಮೀನುಗಳನ್ನು ಸೆಳೆಯುತ್ತವೆ. ಹಾಳುಮಾಡುವಿಕೆಗಾಗಿ ಸರಕಾರಗಳ ಮೇಲೆ ತಪ್ಪು ಹೊರಿಸಬೇಕು ಎಂದು ದಿ ಈಕಾನೊಮಿಸ್ಟ್ ಹೇಳುತ್ತದೆ, ಏಕೆಂದರೆ ತಮಗೆ ಪರಮಾಧಿಕಾರವಿದೆ ಎಂದು ಸಮರ್ಥಿಸುವ, ಕೆಲವು ದೇಶಗಳ ತೀರಗಳ 370 ನೌಕಾ ಕಿಲೊಮೀಟರ್‌ಗಳೊಳಗೆ ಲೋಕದ 90 ಪ್ರತಿಶತ ಮೀನುಹಿಡಿತವು ಕಂಡುಬರುವುದರಿಂದಲೇ. ಸರಕಾರಗಳು ಇತರ ದೇಶಗಳ ಮೀನುಹಿಡಿಯುವ ಹಡಗುಗಳನ್ನು ಒಳಕ್ಕೆ ಬಿಡುವುದಿಲ್ಲ, ಆದರೆ ಸ್ವದೇಶದ ಹಡಗುಗಳನ್ನು ವಿಸ್ತರಿಸುವಂತೆ ಅನುಮತಿಸುತ್ತವೆ, ಮತ್ತು ಸಾರ್ವಜನಿಕ ಬಂಡವಾಳದೊಂದಿಗೆ ಅವುಗಳಿಗೆ ನೆರವನ್ನೂ ನೀಡು ತ್ತವೆ. (g95 1⁄8)
ರೈಲಿನ ಟಾಯೆಟ್ ಕಾಗದದ ಸುರುಳಿಯ ಸಂದೇಶ
ಅತ್ಯಂತ ಆಧುನಿಕ ಉಪಕರಣಗಳು ಪ್ರಾರಂಭಿಸಲ್ಪಡುವ ವರೆಗೆ, ಬಹುಮಟ್ಟಿಗೆ ಯಾವುದೇ ಇಟ್ಯಾಲಿಯನ್ ರೈಲಿನಲ್ಲಿ ಒಂದು ತುರ್ತಿನ ಸಂದರ್ಭದಲ್ಲಿ, ರೈಲಿನ ನಿರ್ವಾಹಕನು ಅಧಿಕಾರಿಗಳಿಗೆ ತಿಳಿಯಪಡಿಸಬಲ್ಲ ಒಂದೇ ಒಂದು ಮಾರ್ಗವು ಈ ಕೆಳಗಿನಂತಿದೆ: ಒಂದು ಟಿಪ್ಪಣಿಯನ್ನು ಬರೆಯಿರಿ, ಟ್ಲಾಯೆಟ್ ಕಾಗದದ ಒಂದು ಸುರುಳಿಯಲ್ಲಿ ಅದನ್ನು ಇಡಿರಿ, ಮತ್ತು ಅದನ್ನು ಕಂಡುಹಿಡಿಯಲಾಗುವುದು ಮತ್ತು ಅಧಿಕಾರಿಗಳು ತಿಳಿದುಕೊಳ್ಳುವರು ಎಂಬ ನಿರೀಕ್ಷೆಗಳಿಂದ, ವೇಗವಾಗಿ ಚಲಿಸುತ್ತಿರುವ ರೈಲಿನಿಂದ ಮುಂದಿನ ರೈಲು ನಿಲ್ದಾಣದಲ್ಲಿ ಅದನ್ನು ಜೋರಾಗಿ ಎಸೆಯಿರಿ. “ಸ್ವತಃ ರೈಲ್ವೆಗಳಷ್ಟೇ ಹಳೆಯದಾಗಿರುವ” ಈ ವ್ಯವಸ್ಥೆಯು ಅಧಿಕೃತ ರೈಲುಮಾರ್ಗ ನಿಬಂಧನೆಗಳಿಂದ ನಿಯಮಿಸಲ್ಪಡುತ್ತದೆ. ಇದು “ಇನ್ನೂ ಒಂದು ಕಾರ್ಯಸಾಧಕವಾದ, ರುಜುವಾಗಿರುವ ವಿಧಾನವಾಗಿದೆ” ಎಂದು ಇಟ್ಯಾಲಿಯನ್ ಸ್ಟೇಟ್ ರೈಲ್ವೆಗಳ ಅಧಿಕಾರಿಯು ಹೇಳುತ್ತಾನೆ, ಆದರೂ “ರೈಲುಗಳಲ್ಲಿ ಸಂಪರ್ಕ ವ್ಯವಸ್ಥೆಯು ಬಹಳ ಗಂಭೀರವಾದ ಒಂದು ಸಮಸ್ಯೆಯಾಗಿದೆ” ಎಂದು ಅವನು ಒಪ್ಪಿಕೊಳ್ಳುತ್ತಾನೆ. ಪ್ರಯಾಣಿಕನೊಬ್ಬನ ಅಸ್ವಸ್ಥತೆ, ಸಂದೇಹಿಸಲ್ಪಟ್ಟ ಒಂದು ಸಾಮಾನಿನ ಗಂಟು, ಆಕ್ರಮಣದ ಒಂದು ಕೃತ್ಯ, ಅಥವಾ ಒಂದು ಕಳ್ಳತನದೊಂದಿಗೆ ಎದುರಿಸಲ್ಪಡುವಾಗ, ಅವರು ಅಡ್ಡಬರಲು ಅಧಿಕಾರವನ್ನು ಹೊಂದಿರದ ಕಾರಣದಿಂದ “ಸ್ಟೇಟ್ ರೈಲ್ವೆಗಳ ಸಿಬ್ಬಂದಿಗಳು ವಾಸ್ತವವಾಗಿ ಅಸಮರ್ಥರಾಗಿದ್ದಾರೆ” ಎಂದು ಇಟ್ಯಾಲಿಯನ್ ವಾರ್ತಾಪತ್ರಿಕೆಯಾದ ಕೊರೀಎರೇ ಡೆಲ ಸೇರ ಹೇಳುತ್ತದೆ. ಸಂಪರ್ಕ ಸಾಧನದ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ, ಸಮೀಪ ಭವಿಷ್ಯತ್ತಿನಲ್ಲಿ ಒಯ್ಯಲು ಅನುಕೂಲವಾದ ಅವಿಚ್ಛಿನ್ನ ವಿದ್ಯುತ್‌ವೃತ್ತ ಟೆಲಿಫೋನ್‌ಗಳನ್ನು ಹೊಂದಿಸಿಕೊಳ್ಳಲು ಇಟ್ಯಾಲಿಯನ್ ಸ್ಟೇಟ್ ರೈಲ್ವೆಗಳು ಉದ್ದೇಶಿಸಿವೆ. (g95 1⁄8)
ಹೆಚ್ಚು ಉತ್ತಮವಾದ ನಿದ್ರಿಸುವ ಹವ್ಯಾಸಗಳು
“ನಿರ್ನಿದ್ರತೆಯು ಅನೇಕ ಜನರಿಗೆ ಉತ್ಪನ್ನಕಾರಕವಾಗಿ ಕಂಡುಬರಬಹುದು, ಆದರೆ ದೇಹದ ನಿದ್ರಿಸುವ ತಾಸುಗಳನ್ನು ನಿರಾಕರಿಸುವುದರ ಪರಿಣಾಮಗಳು ಹೆಚ್ಚಾಗಿ ಉತ್ಪನ್ನಕಾರಕವಲ್ಲದವುಗಳಾಗಿ ಕೊನೆಗೊಳ್ಳುವುವು” ಎಂದು ಬ್ರೆಜಿಲಿಯನ್ ಪತ್ರಿಕೆಯಾದ ಎಕ್ಸಾಮಿ ಹೇಳುತ್ತದೆ. ನರರೋಗ ಶಾಸ್ತ್ರಜ್ಞ ರೂಬೆನ್ಸ್ ರೇಮಾವ್ ವಿವರಿಸುವುದು: “ವ್ಯಕ್ತಿಯೊಬ್ಬನು ದೇಹಕ್ಕೆ ಕೊಡಬೇಕಾಗಿರುವ ನಿದ್ರೆಯ ತಾಸುಗಳನ್ನು ಅದು ಮರೆಯುವುದಿಲ್ಲ. ಅದಕ್ಕೆ ಬದಲಾಗಿ, ದೇಹವು ಯಾವಾಗಲೂ ಜ್ಞಾಪಿಸಿಕೊಳ್ಳುತ್ತದೆ ಮತ್ತು ಆ ಕೂಡಲೆ ಆ ವ್ಯಕ್ತಿಯು ಅದರ ಬೆಲೆಯನ್ನು ತೆರುವಂತೆ ಅಗತ್ಯಪಡಿಸುತ್ತದೆ. ಜ್ಞಾಪಕಶಕ್ತಿಯ ನಷ್ಟಗಳು, ಚಿತ್ತೈಕಾಗ್ರತೆಯ ಸಮಸ್ಯೆಗಳು, ಮತ್ತು ನಿಧಾನವಾದ ಆಲೋಚನಾ ಸಾಮರ್ಥ್ಯದಿಂದ ಅದು ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ.” ವಿಪರೀತ ಖಿನ್ನತೆಯನ್ನು ತಡೆಯಲಿಕ್ಕಾಗಿ, ಡಾ. ರೇಮಾವ್ ಶಿಫಾರಸ್ಸು ಮಾಡುವುದು: “ಕೆಲಸದ ಸಮಸ್ಯೆಗಳನ್ನು ಬಗೆಹರಿಸುವುದನ್ನು ಅಥವಾ ಅವುಗಳ ಕುರಿತು ಆಲೋಚಿಸುವುದನ್ನು ನೀವು ಕೆಲಸ ಮಾಡುವ ಸಮಯಕ್ಕೆ ಬಿಡಿರಿ.” ನೀವು ವಿಶ್ರಾಂತಿ ಪಡೆಯಲು ಮತ್ತು ಹೆಚ್ಚು ಉತ್ತಮವಾಗಿ ನಿದ್ರಿಸಲು ಕ್ರಮವಾದ ವ್ಯಾಯಾಮ, ಹಿತವಾದ ಸಂಗೀತ, ಕಡಿಮೆ ತೀಕ್ಷೈತೆಯುಳ್ಳ ಬೆಳಕು, ಮತ್ತು ಒಳ್ಳೆಯ ಆಲೋಚನೆಗಳನ್ನು ಎಕ್ಸಾಮಿ ಸೂಚಿಸುತ್ತದೆ. (g95 1⁄8)
ನಪುಂಸಕರ ಒಂದು ಪಂಥ
ಭಾರತದಲ್ಲಿ ಹತ್ತು ಲಕ್ಷಗಳಿಗಿಂತಲೂ ಹೆಚ್ಚು ನಪುಂಸಕರು ಇದ್ದಾರೆಂದು ಮುಂಬಯಿಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡುತ್ತದೆ. ಇವರಲ್ಲಿ, ಕೇವಲ 2 ಪ್ರತಿಶತ ಮಂದಿ ಈ ಸ್ಥಿತಿಯಲ್ಲಿ ಜನಿಸಿದರು. ಉಳಿದವರು ನಿವೀರ್ಯಗೊಳಿಸಲ್ಪಟ್ಟರು. ಎಕ್ಸ್‌ಪ್ರೆಸ್‌ಗನುಸಾರ, ಸ್ಫುರದ್ರೂಪವುಳ್ಳ ಹುಡುಗರನ್ನು ದುರ್ಮಾರ್ಗಕ್ಕೆ ಎಳೆದು ಅಥವಾ ಬಲಾತ್ಕಾರ ಹರಣ ಮಾಡಿ ಮತ್ತು ನಪುಂಸಕರಾಗಿ ಮಾಡುವ, ಭಾರತದಲ್ಲಿರುವ ಅನೇಕ ಕೇಂದ್ರಗಳಲ್ಲಿ ಒಂದಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ “ರಾಜಯೋಗ್ಯ ಉಪಚಾರ”ವನ್ನು ಒಳಗೊಂಡಿರುವ ಮತ್ತು ಅವರ ವೃಷಣಗಳ ತೆಗೆದುಹಾಕುವಿಕೆಯಲ್ಲಿ ಅಂತ್ಯಗೊಳ್ಳುವ ಒಂದು ಕರ್ಮಾಚರಣೆಗೆ ಹುಡುಗರನ್ನು ಒಳಪಡಿಸಲಾಗುತ್ತದೆ. ತದನಂತರ, “ತಾಯಿ-ಮಗಳ” ಒಂದು ಸಂಬಂಧವನ್ನು ಸ್ಥಾಪಿಸುತ್ತಾ, ಒಬ್ಬ ದೊಡ್ಡ ನಪುಂಸಕನಿಂದ ಹೊಸದಾಗಿ ಮಾಡಲ್ಪಟ್ಟ ನಪುಂಸಕನನ್ನು ದತ್ತಕ್ಕೆ ತೆಗೆದುಕೊಳ್ಳಲಾಗುತ್ತದೆ. ಈ ನಪುಂಸಕರಿಗೆ ಸ್ತ್ರೀಯರ ಹೆಸರುಗಳನ್ನು ಕೊಡಲಾಗುತ್ತದೆ ಮತ್ತು ಅವರು ತರುವಾಯ ಸ್ತ್ರೀಯರಂತೆ ವಸ್ತ್ರ ಧರಿಸುತ್ತಾರೆ ಮತ್ತು ವರ್ತಿಸುತ್ತಾರೆ. ಅಧಿಕಾಂಶ ನಪುಂಸಕರು ಮುಖ್ಯ ದೇವತೆಯಿರುವ ಒಂದು ಪಂಥವಾಗಿ ವ್ಯವಸ್ಥಾಪಿಸಲ್ಪಡುತ್ತಾರೆ. ಒಂದು ವಾರ್ಷಿಕ ಹಬ್ಬದ ಸಮಯದಲ್ಲಿ ನಪುಂಸಕರು ಗೌರವಿಸಲ್ಪಡುವ ಮತ್ತು ದಿವ್ಯ ಸ್ವರೂಪವೆಂದು ಪೂಜ್ಯ ಭಾವನೆಯಿಂದ ಕಾಣುವಂತಹ ಅನೇಕ ದೇವಾಲಯಗಳು ಭಾರತದಾದ್ಯಂತ ಇವೆ. (g95 1⁄8)