ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 7/8 ಪು. 26-28
  • ನಾನು ಏಕೆ ಕಲಿಯಲಾರೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನು ಏಕೆ ಕಲಿಯಲಾರೆ?
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಭಾಯಿಸುವುದರ ಪಂಥಾಹ್ವಾನ
  • ಮನಸ್ಸನ್ನು ಕೇಂದ್ರೀಕರಿಸಲು ಕಲಿಯಿರಿ
  • ಚಡಪಡಿಸುವಿಕೆಯನ್ನು ಕಡಿಮೆಗೊಳಿಸುವುದು
  • ನಿಮ್ಮ ಸ್ವಗೌರವವನ್ನು ಕಾಪಾಡಿಕೊಳ್ಳಿರಿ
  • ಸತ್ಯದ ಹುಡುಕಾಟ . . .
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
    ಎಚ್ಚರ!—2009
  • ನಾನು ಸೋಲನ್ನು ಹೇಗೆ ಎದುರಿಸಬಲ್ಲೆ?
    ಎಚ್ಚರ!—2005
  • ಕಲಿಯುವ ಅಸಾಮರ್ಥ್ಯದೊಂದಿಗೆ ಜೀವಿಸುವುದು
    ಎಚ್ಚರ!—1997
ಇನ್ನಷ್ಟು
ಎಚ್ಚರ!—1996
g96 7/8 ಪು. 26-28

ಯುವ ಜನರು ಪ್ರಶ್ನಿಸುವುದು . . .

ನಾನು ಏಕೆ ಕಲಿಯಲಾರೆ?

“ನಾನು ಮನೆಗೆ ಬಂದು ನನ್ನ ಹೆತ್ತವರನ್ನು ಎದುರಿಸಲು ಬಯಸಲಿಲ್ಲ” ಎಂದು ಜೆಸಿಕಾ ಜ್ಞಾಪಿಸಿಕೊಳ್ಳುತ್ತಾಳೆ. “ಪುನಃ ಒಮ್ಮೆ ನಾನು ಅನೇಕ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದೆ.”a 15ರ ವಯಸ್ಸಿನಲ್ಲಿ ಜೆಸಿಕಾ, ಚುರುಕು ಮತ್ತು ಸುಂದರಳಾಗಿದ್ದಾಳೆ. ಆದರೆ ಅನೇಕ ಯೌವನಸ್ಥರಂತೆ, ತನ್ನ ಶಾಲಾ ಪಾಠಕ್ರಮದಲ್ಲಿ ಉತ್ತೀರ್ಣಳಾಗುವ ಗುಣಾಂಕಗಳನ್ನು ಕಾಪಾಡುವುದರಲ್ಲಿ ಅವಳಿಗೆ ತುಂಬ ಕಷ್ಟವಾಗುತ್ತದೆ.

ಶಾಲೆಯಲ್ಲಿನ ನ್ಯೂನ ನಿರ್ವಹಣೆಯು ಹೆಚ್ಚಾಗಿ ಶಿಕ್ಷಣ ಅಥವಾ ಒಬ್ಬನ ಶಿಕ್ಷಕನ ಕಡೆಗಿನ ಒಂದು ಉದಾಸೀನ ಮನೋಭಾವದ ಪರಿಣಾಮವಾಗಿರುತ್ತದೆ. ಆದರೆ ಇದು ಜೆಸಿಕಾಳೊಂದಿಗೆ ಸತ್ಯವಾಗಿರುವುದಿಲ್ಲ. ಭಾವವಾಚಿ ವಿಚಾರಗಳನ್ನು ಗ್ರಹಿಸುವುದನ್ನು ಅವಳು ಅತ್ಯಂತ ಕಷ್ಟಕರವಾಗಿ ಕಂಡುಕೊಳ್ಳುತ್ತಾಳೆ. ಸ್ವಾಭಾವಿಕವಾಗಿಯೇ, ಇದು ಜೆಸಿಕಾಳಿಗೆ ಗಣಿತದಲ್ಲಿ ಯಶಸ್ವಿಯಾಗಲು ಕಷ್ಟಕರವನ್ನಾಗಿ ಮಾಡಿತು. ಮತ್ತು ಓದುವುದರಲ್ಲಿ ತೊಂದರೆಯು ಇತರ ಪಾಠವಿಷಯಗಳಲ್ಲಿ ಚೆನ್ನಾಗಿ ಮಾಡಲು ಆಕೆಗೆ ಕಷ್ಟಕರವನ್ನಾಗಿ ಮಾಡಿತು.

ಇನ್ನೊಂದು ಕಡೆ, ಮಾರೀಯ ಸರಿಯಾಗಿ ಕಾಗುಣಿತ ಮಾಡಲಾರಳು. ಕ್ರೈಸ್ತ ಕೂಟಗಳಲ್ಲಿ ಅವಳು ಬರೆಯುವ ಟಿಪ್ಪಣಿಗಳನ್ನು ಅವಳು ಯಾವಾಗಲೂ ಅಡಗಿಸಿಡುತ್ತಾಳೆ, ಯಾಕಂದರೆ ಅವಳು ತನ್ನ ಕಾಗುಣಿತ ತಪ್ಪುಗಳ ವಿಷಯದಲ್ಲಿ ಲಜ್ಜಿತಳಾಗಿದ್ದಾಳೆ. ಆದಾಗಲೂ ಜೆಸಿಕಾ ಅಥವಾ ಮಾರೀಯಾ, ಇಬ್ಬರೂ ಬುದ್ಧಿಯಿಲ್ಲದವರಾಗಿರುವುದಿಲ್ಲ. ಜೆಸಿಕಾ ಜನರೊಂದಿಗೆ ಎಷ್ಟು ನಿಪುಣಳಾಗಿದ್ದಾಳೆಂದರೆ, ತನ್ನ ಶಾಲಾ ಸಂಗಾತಿಗಳ ನಡುವೆ ತೊಂದರೆಗಳೇಳುವಾಗ, ಅವಳು ಶಾಲಾ ನೇಮಿತ ಮಧ್ಯಸ್ಥಿಕೆ, ಅಥವಾ ಸಮಸ್ಯೆಯನ್ನು ಬಗೆಹರಿಸುವವಳಾಗಿ ಕಾರ್ಯನಡಿಸುತ್ತಾಳೆ. ಮತ್ತು ಮಾರೀಯ ತನ್ನ ತರಗತಿಯಲ್ಲಿ ಉತ್ತಮ ಗುಣಾಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳ 10 ಪ್ರತಿಶತದಲ್ಲಿ ಒಬ್ಬಳಾಗಿದ್ದಾಳೆ.

ಸಮಸ್ಯೆ: ಜೆಸಿಕಾ ಮತ್ತು ಮಾರೀಯರಿಗೆ ಕಲಿಯುವ ಅಸ್ವಸ್ಥತೆಗಳಿವೆ. ಎಲ್ಲಾ ಮಕ್ಕಳಲ್ಲಿ ಸುಮಾರು 3ರಿಂದ 10 ಪ್ರತಿಶತ ಮಕ್ಕಳಿಗೆ ಕಲಿಯುವುದರಲ್ಲಿ ತದ್ರೀತಿಯ ಕಷ್ಟಗಳಿರಬಹುದೆಂದು ಪರಿಣತರು ನಂಬುತ್ತಾರೆ. ತನ್ನ 20ಗಳ ಆದಿ ಭಾಗದಲ್ಲಿರುವ ಟಾನ್ಯಾ, ಯಾವುದನ್ನು ಕಡಿಮೆ ಗಮನದ ಅಧಿಕ ಚಟುವಟಿಕಾತ್ಮ ಅಸ್ವಸ್ಥತೆ [ಅಟೆನ್ಷನ್‌ ಡೆಫಿಸಿಟ್‌ ಹೈಪರ್‌ಆ್ಯಕ್ಟಿವಿಟಿ ಡಿಸ್‌ಆರ್ಡರ್‌] (ಎಡಿಎಚ್‌ಡಿ) ಎಂದು ಕರೆಯಲಾಗಿದೆಯೊ ಅದರಿಂದ ಕಷ್ಟಾನುಭವಿಸುತ್ತಿದ್ದಾಳೆ.b ಅವಳು ಹೇಳುವುದು: “ಗಮನವನ್ನು ಕೊಡುವ ಅಥವಾ ಸುಮ್ಮನೆ ಕುಳಿತುಕೂಳ್ಳುವ ನನ್ನ ಅಸಾಮರ್ಥ್ಯದಿಂದಾಗಿ ನನಗೆ ಕ್ರೈಸ್ತ ಕೂಟಗಳು, ವೈಯಕ್ತಿಕ ಅಧ್ಯಯನ ಮತ್ತು ಪ್ರಾರ್ಥನೆಗಳಲ್ಲಿ ತುಂಬ ಕಷ್ಟವಾಗುತ್ತದೆ. ನನ್ನ ಶುಶ್ರೂಷೆಯು ಭಾದಿಸಲ್ಪಡುತ್ತದೆ ಯಾಕಂದರೆ, ಯಾರಿಗೂ ಸಮಹೆಜ್ಜೆ ಹಾಕುತ್ತಾ ಹೋಗಲು ಕಷ್ಟವಾಗುವಷ್ಟು ವೇಗವಾಗಿ ನಾನು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹಾರುತ್ತೇನೆ.”

ಅಧಿಕ ಚಟುವಟಿಕೆಯೊಂದಿಗೆ ಜೊತೆಗೂಡಿಸಲ್ಪಡದಿರುವಾಗ, ಅಸ್ವಸ್ಥತೆಯು ಕಡಿಮೆ ಗಮನ ಅಸ್ವಸ್ಥತೆ [ಅಟೆನ್ಷನ್‌ ಡೆಫಿಸಿಟ್‌ ಡಿಸ್‌ಆರ್ಡರ್‌] (ಎಡಿಡಿ) ಎಂದು ಕರೆಯಲ್ಪಡುತ್ತದೆ. ಈ ಅಸ್ವಸ್ಥತೆ ಇರುವ ಜನರು ಹೆಚ್ಚಾಗಿ ಹಗಲುಗನಸುಗಾರರೆಂದು ವರ್ಣಿಸಲ್ಪಡುತ್ತಾರೆ. ಎಡಿಡಿ ಇರುವವರ ಕುರಿತಾಗಿ, ನರತಜ್ಞ ಡಾ. ಬ್ರೂಸ್‌ ರಾಸ್‌ಮ್ಯಾನ್‌ ಹೇಳಿದ್ದು: “ಅವರು ಒಂದು ಪುಸ್ತಕದ ಮುಂದೆ 45 ನಿಮಿಷ ಕುಳಿತಿರುತ್ತಾರೆ ಆದರೆ ಅವರು ಏನನ್ನೂ ಕಲಿಯುವುದಿಲ್ಲ.” ಯಾವುದೊ ಕಾರಣಕ್ಕಾಗಿ ಅವರಿಗೆ ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ತುಂಬ ಕಷ್ಟವಾಗುತ್ತದೆ.

ಈ ಸಮಸ್ಯೆಗಳನ್ನು ಯಾವುದು ಉಂಟುಮಾಡುತ್ತದೆಂಬುದನ್ನು ತಾವು ಇತ್ತೀಚೆಗೆ ತಿಳಿದುಕೊಳ್ಳಲು ಆರಂಭಿಸಿದ್ದೇವೆಂದು ವೈದ್ಯಕೀಯ ಸಂಶೋಧನಕಾರರು ನಂಬುತ್ತಾರೆ. ಆದರೂ, ಹೆಚ್ಚಿನದ್ದು ಇನ್ನೂ ಅಜ್ಞಾತವಾಗಿದೆ. ಮತ್ತು ಕಲಿಯುವಿಕೆಯೊಂದಿಗೆ ಹಸ್ತಕ್ಷೇಪ ಮಾಡುವ ವಿವಿಧ ಅಸ್ವಸ್ಥತೆಗಳು ಮತ್ತು ಅಸಾಮರ್ಥ್ಯಗಳ ನಡುವಿನ ಮಿತಗಳು ಯಾವಾಗಲೂ ಸ್ಪಷ್ಟವಾಗಿಲ್ಲ. ಒಂದು ನಿರ್ದಿಷ್ಟ ಅಸ್ವಸ್ಥತೆಗಿರುವ ನಿಖರವಾದ ಕಾರಣ ಅಥವಾ ಕೊಡಲ್ಪಟ್ಟ ಹೆಸರು ಯಾವುದೇ ಆಗಿರಲಿ—ಓದುವುದರಲ್ಲಿ, ನೆನಪಿನಲ್ಲಿಡುವುದರಲ್ಲಿ, ಗಮನವನ್ನು ಕೊಡುವುದರಲ್ಲಿ, ಅಥವಾ ಅಧಿಕ ಚಟುವಟಿಕಾತ್ಮಕವಾಗಿರುವುದೇ ಆಗಿರಲಿ—ಅಸ್ವಸ್ಥತೆಯು ಒಬ್ಬ ವ್ಯಕ್ತಿಯ ಶಿಕ್ಷಣದೊಂದಿಗೆ ಹಸ್ತಕ್ಷೇಪ ಮಾಡಬಲ್ಲದು ಮತ್ತು ತುಂಬ ಕಷ್ಟಾನುಭವವನ್ನು ಉಂಟುಮಾಡಬಲ್ಲದು. ನಿಮಗೆ ಕಲಿಯುವ ಒಂದು ಅಸಾಮರ್ಥ್ಯವಿರುವಲ್ಲಿ, ನೀವು ಅದನ್ನು ಹೇಗೆ ನಿಭಾಯಿಸಬಲ್ಲಿರಿ?

ನಿಭಾಯಿಸುವುದರ ಪಂಥಾಹ್ವಾನ

ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಜೆಸಿಕಾಳನ್ನು ಪರಿಗಣಿಸಿರಿ. ತನ್ನ ಓದುವ ಅಸಾಮರ್ಥ್ಯವನ್ನು ಜಯಿಸಲು ನಿರ್ಧರಿತಳಾಗಿದ್ದು, ಅವಳು ವಿಭಿನ್ನ ಪುಸ್ತಕಗಳನ್ನು ಓದುವುದನ್ನು ಪ್ರಯತ್ನಿಸುತ್ತಾ ಹೋದಳು. ಅವಳಿಗೆ ತುಂಬ ಆಸಕ್ತಿಭರಿತವಾಗಿದ್ದ ಕವಿತೆಗಳ ಒಂದು ಪುಸ್ತಕವನ್ನು ಅವಳು ಕಂಡುಹಿಡಿದಾಗ, ತಿರುಗು ಬಿಂದು ಬಂದಿತು. ಅವಳು ತದ್ರೀತಿಯ ಪುಸ್ತಕವೊಂದನ್ನು ಪಡೆದಳು, ಅದನ್ನೂ ಓದುವುದನ್ನು ಆಕೆ ಆನಂದಿಸಿದಳು. ಅನಂತರ ಅವಳು ಕಥೆ ಪುಸ್ತಕಗಳ ಒಂದು ಸರಣಿಯಲ್ಲಿ ಆಸಕ್ತಳಾದಳು, ಮತ್ತು ಓದುವಿಕೆಯು ಕ್ರಮೇಣವಾಗಿ ಒಂದು ಸಮಸ್ಯೆಯಾಗಿ ಉಳಿಯಲಿಲ್ಲ. ಕಲಿಯಬೇಕಾದ ಪಾಠವೇನಂದರೆ, ಪಟ್ಟುಹಿಡಿಯುವಿಕೆಯು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ನೀವು ಕೂಡ ಒಂದು ಕಲಿಯುವ ಅಸಾಮರ್ಥ್ಯವನ್ನು ಜಯಿಸಬಲ್ಲಿರಿ ಅಥವಾ ಬಿಟ್ಟುಕೊಡದಿರುವ ಮೂಲಕ ಆ ಕಡೆಗೆ ಕಡಿಮೆಪಕ್ಷ ಮಹತ್ತಾದ ಪ್ರಗತಿಯನ್ನು ಮಾಡಬಲ್ಲಿರಿ.—ಗಲಾತ್ಯ 6:9ನ್ನು ಹೋಲಿಸಿರಿ.

ಅಲ್ಪಾವಧಿಯ ಜ್ಞಾಪಕಶಕ್ತಿಯ ಸಮಸ್ಯೆಯೊಂದಿಗೆ ವ್ಯವಹರಿಸುವ ಕುರಿತಾಗಿ ಏನು? ಸಮಸ್ಯೆಯನ್ನು ಪರಿಹರಿಸುವುದಕ್ಕೆ ಒಂದು ಪ್ರಾಮುಖ್ಯ ಕೀಲಿ ಕೈಯು ಈ ನಾಣ್ನುಡಿಯಲ್ಲಿ ಅಡಕವಾಗಿದೆ: “ಪುನರಾವೃತ್ತಿಯು ಧಾರಣಕ್ಕೆ ಸಹಾಯಕ.” ತಾನು ಕೇಳಿರುವ ಮತ್ತು ಓದಿರುವ ವಿಷಯಗಳನ್ನು ತನ್ನಷ್ಟಕ್ಕೆ ಮೌಖಿಕವಾಗಿ ಪುನರಾವೃತ್ತಿಸುವುದು ತನಗೆ ವಿಷಯಗಳನ್ನು ನೆನಪಿನಲ್ಲಿಡಲು ಸಹಾಯ ಮಾಡಿತೆಂದು ನಿಕಿ ಕಂಡುಕೊಂಡನು. ಅದನ್ನು ಪ್ರಯತ್ನಿಸಿರಿ. ಅದು ನಿಮಗೂ ಸಹಾಯ ಮಾಡಬಹುದು. ಅರ್ಥಗರ್ಭಿತವಾಗಿ, ಬೈಬಲ್‌ ಸಮಯಗಳಲ್ಲಿ ಜನರು ತಮ್ಮಷ್ಟಕ್ಕೆ ಓದುತ್ತಿದ್ದಾಗಲೂ, ಮಾತುಗಳನ್ನು ಉಚ್ಚರಿಸುತ್ತಿದ್ದರು. ಹೀಗಿರಲಾಗಿ, ಯೆಹೋವನು ಬೈಬಲ್‌ ಲೇಖಕನಾದ ಯೆಹೋಶುವನಿಗೆ ಆಜ್ಞಾಪಿಸಿದ್ದು: “ನೀನು [ದೇವರ ನಿಯಮವನ್ನು] ಹಗಲಿರುಳು ತಗ್ಗುದನಿಯಲ್ಲಿ ಓದಬೇಕು.” (ಯೆಹೋಶುವ 1:8, NW; ಕೀರ್ತನೆ 1:2) ಆ ಮಾತುಗಳನ್ನು ಉಚ್ಚರಿಸುವುದು ಯಾಕೆ ಅಷ್ಟು ಪ್ರಾಮುಖ್ಯವಾಗಿತ್ತು? ಯಾಕಂದರೆ ಹಾಗೆ ಮಾಡುವುದು ಎರಡು ಜ್ಞಾನೇಂದ್ರಿಯಗಳನ್ನು—ಶ್ರವ್ಯ ಮತ್ತು ದೃಷ್ಟಿಸಂಬಂಧವಾದದ್ದನ್ನು—ತೊಡಗಿಸುತ್ತಿತ್ತು ಮತ್ತು ಓದುಗನ ಮನಸ್ಸಿನಲ್ಲಿ ಹೆಚ್ಚು ಆಳವಾದ ಅಚ್ಚನ್ನು ಬಿಟ್ಟುಹೋಗಲು ಸಹಾಯ ಮಾಡಿತ್ತು.

ಜೆಸಿಕಾಗೆ, ಗಣಿತವನ್ನು ಕಲಿಯುವುದು ಒಂದು ಬೃಹತ್ತಾದ ಕೆಲಸವಾಗಿತ್ತು. ಆದಾಗಲೂ, ಅವಳು ಗಣಿತದ ನಿಯಮಗಳನ್ನು ಪುನರಾವೃತ್ತಿಸುವ ಮೂಲಕ ಅವುಗಳನ್ನು ಕಲಿಯಲು ಪ್ರಯತ್ನಿಸಿದಳು—ಕೆಲವೊಮ್ಮೆ ಒಂದು ನಿಯಮಕ್ಕೆ ಒಂದರ್ಧ ತಾಸಿನಷ್ಟು ಹೆಚ್ಚು ಸಮಯವನ್ನು ಕಳೆಯುವ ಮೂಲಕವೇ. ಅವಳ ಪ್ರಯತ್ನಗಳು ಕಟ್ಟಕಡೆಗೆ ಒಳ್ಳೇ ಫಲಿತಾಂಶಗಳನ್ನು ತಂದವು. ಆದುದರಿಂದ ಪುನರಾವೃತ್ತಿಸಿರಿ, ಪುನರಾವೃತ್ತಿಸಿರಿ, ಪುನರಾವೃತ್ತಿಸಿರಿ! ತರಗತಿಯಲ್ಲಿ ಕಿವಿಗೊಡುತ್ತಿರುವಾಗ ಅಥವಾ ಓದುತ್ತಿರುವಾಗ ನೀವು ಟಿಪ್ಪಣಿಗಳನ್ನು ಬರೆಯಶಕ್ತರಾಗುವಂತೆ, ಕಾಗದ ಮತ್ತು ಒಂದು ಪೆನ್ಸಿಲನ್ನು ಕೈಗೆ ಹತ್ತಿರದಲ್ಲಿಡುವುದು ಒಂದು ವಿವೇಕಯುತವಾದ ರೂಢಿಯಾಗಿದೆ.

ಕಲಿಯುವಿಕೆಗೆ ನಿಮ್ಮನ್ನು ಅರ್ಪಿಸಿಕೊಳ್ಳುವುದು ಅತ್ಯಾವಶ್ಯಕ. ಶಾಲೆಯ ನಂತರ ಉಳಿದು ನಿಮ್ಮ ಶಿಕ್ಷಕರೊಂದಿಗೆ ಮಾತಾಡುವುದನ್ನು ಒಂದು ರೂಢಿಯನ್ನಾಗಿ ಮಾಡಿಕೊಳ್ಳಿರಿ. ಅವರ ಪರಿಚಯಮಾಡಿಕೊಳ್ಳಿರಿ. ನಿಮಗೆ ಕಲಿಯುವ ಒಂದು ಸಮಸ್ಯೆಯಿದೆ ಆದರೆ ಅದನ್ನು ಜಯಿಸಲು ನೀವು ನಿರ್ಧರಿತರಾಗಿದ್ದೀರೆಂದು ಅವರಿಗೆ ಹೇಳಿರಿ. ಹೆಚ್ಚಿನ ಶಿಕ್ಷಕರು ನೆರವು ನೀಡಲು ಕಾತುರರಾಗಿರುವರು. ಆದುದರಿಂದ ಅವರ ಸಹಾಯವನ್ನು ಸೇರಿಸಿರಿ. ಜೆಸಿಕಾ ಅದನ್ನು ಮಾಡಿದಳು ಮತ್ತು ಒಬ್ಬ ಸಹಾನುಭೂತಿಯ ಶಿಕ್ಷಕನಿಂದ ತುಂಬ ಅಗತ್ಯವಿದ್ದ ಬೆಂಬಲವನ್ನು ಪಡೆದಳು.

ಮನಸ್ಸನ್ನು ಕೇಂದ್ರೀಕರಿಸಲು ಕಲಿಯಿರಿ

ನಿಮಗಾಗಿ ಒಂದು ಗುರಿ ಹಾಗೂ ಬಹುಮಾನ ವ್ಯವಸ್ಥೆಯನ್ನು ಸ್ಥಾಪಿಸಿಕೊಳ್ಳುವುದು ಸಹ ಸಹಾಯ ಮಾಡುತ್ತದೆ. ಟೆಲಿವಿಷನನ್ನು ಅಥವಾ ನಿಮ್ಮ ಅಚ್ಚುಮೆಚ್ಚಿನ ಸಂಗೀತವನ್ನು ಆನ್‌ ಮಾಡುವ ಮುಂಚೆ ಒಂದು ನಿರ್ದಿಷ್ಟವಾದ ಗುರಿಯನ್ನು—ಶಾಲಾ ಮನೆಗೆಲಸದ ನೇಮಕದ ಒಂದು ಭಾಗವನ್ನು ಮುಗಿಸುವುದೆಂದು ಇಟ್ಟುಕೊಳ್ಳೋಣ—ಇಡುವುದು ನಿಮಗೆ ಮನಸ್ಸನ್ನು ಕೇಂದ್ರೀಕರಿಸಲು ಪ್ರಚೋದಿಸಸಾಧ್ಯವಿದೆ. ನೀವು ಇಡುವಂತಹ ಗುರಿಗಳು ಸಮಂಜಸವುಳ್ಳದ್ದಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.—ಫಿಲಿಪ್ಪಿ 4:5ನ್ನು ಹೋಲಿಸಿರಿ.

ನಿಮ್ಮ ಪರಿಸರದಲ್ಲಿ ಕೆಲವೊಮ್ಮೆ ರಚನಾತ್ಮಕವಾದ ಬದಲಾವಣೆಗಳನ್ನು ಮಾಡುವುದು ಸಹಾಯ ಮಾಡಸಾಧ್ಯವಿದೆ. ಹೆಚ್ಚು ಉತ್ತಮವಾಗಿ ಕೇಂದ್ರೀಕರಿಸುವಂತೆ ತರಗತಿಯಲ್ಲಿ ಮುಂದೆ, ಶಿಕ್ಷಕನ ಹತ್ತಿರ ಕುಳಿತುಕೊಳ್ಳುವಂತೆ ನಿಕಿ ಏರ್ಪಡಿಸಿಕೊಂಡನು. ಒಬ್ಬ ಅಧ್ಯಯನಶೀಲ ಸ್ನೇಹಿತೆಯೊಂದಿಗೆ ಶಾಲಾ ಮನೆಗೆಲಸವನ್ನು ಮಾಡುವುದನ್ನು ಜೆಸಿಕಾ ಪ್ರಯೋಜನಕಾರಿಯಾದದ್ದಾಗಿ ಕಂಡುಕೊಂಡಳು. ನಿಮ್ಮ ಕೋಣೆಯನ್ನು ಕೇವಲ ಹಿತಕರ ಮತ್ತು ಆರಾಮಕರವನ್ನಾಗಿ ಮಾಡುವುದು ಸಹಾಯಕರವೆಂಬುದನ್ನು ನೀವು ಕಂಡುಕೊಳ್ಳಬಹುದು.

ಚಡಪಡಿಸುವಿಕೆಯನ್ನು ಕಡಿಮೆಗೊಳಿಸುವುದು

ನೀವು ಅಧಿಕ ಚಟುವಟಿಕಾತ್ಮಕರಾಗಿರುವ ಪ್ರವೃತ್ತಿಯುಳ್ಳವರಾಗಿರುವುದಾದರೆ, ಕಲಿಯುವಿಕೆಯು ಒಂದು ವೇದನಾಭರಿತ ಪರೀಕ್ಷೆಯಾಗಿರಬಲ್ಲದು. ಆದಾಗಲೂ, ಕೆಲವು ಪರಿಣತರು ಹೇಳುವುದೇನಂದರೆ, ಅಧಿಕ ಚಟುವಟಿಕಾತ್ಮಕತೆಯನ್ನು ದೈಹಿಕ ವ್ಯಾಯಾಮಕ್ಕೆ ಹರಿಸಸಾಧ್ಯವಿದೆ. “ಹೊಸ ಮಾಹಿತಿಯನ್ನು ಪಾರಂಗತವಾಗಿಸುವ ಮತ್ತು ಹಳೆಯ ಮಾಹಿತಿಯನ್ನು ನೆನಪಿನಲ್ಲಿಡುವ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವು, ಆಮ್ಲಜನಕದ ಸೇವನೆಯನ್ನು ಹೆಚ್ಚಿಸುವ ವ್ಯಾಯಮದ ಮೂಲಕ ತರಲ್ಪಡುವ ಮಿದುಳಿನ ಜೀವವಿಜ್ಞಾನಿ ಬದಲಾವಣೆಗಳಿಂದ ಉತ್ತಮಗೊಳಿಸಲ್ಪಡುತ್ತದೆ ಎಂಬುದಕ್ಕೆ ಸಾಕ್ಷ್ಯವು ಹೆಚ್ಚುತ್ತಿದೆ” ಎಂದು ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಗಮನಿಸುತ್ತದೆ. ಹೀಗೆ, ಮಿತವಾದ ಮೊತ್ತದ ವ್ಯಾಯಾಮವು—ಈಜಾಡುವಿಕೆ, ಓಡುವಿಕೆ, ಚೆಂಡಾಡುವಿಕೆ, ಸೈಕಲ್‌ ಸವಾರಿ, ಜಾರಾಟ (ಸ್ಕೇಟಿಂಗ್‌) ಮತ್ತು ಮುಂತಾದವುಗಳು—ದೇಹಕ್ಕೂ ಮನಸ್ಸಿಗೂ ಉತ್ತಮವಾಗಿರಸಾಧ್ಯವಿದೆ.—1 ತಿಮೊಥೆಯ 4:8.

ಕಲಿಯುವಿಕೆಯ ಅಸ್ವಸ್ಥತೆಗಳಿಗೆ ನಿಯತಕ್ರಮವಾಗಿ ಔಷಧವನ್ನು ಗೊತ್ತುಮಾಡಲಾಗುತ್ತದೆ. ಎಡಿಎಚ್‌ಡಿಯೊಂದಿಗೆ ಬಾಧಿತರಾಗಿರುವ ಮತ್ತು ಪ್ರಚೋದಕ ಔಷಧಗಳು ಕೊಡಲ್ಪಟ್ಟಿರುವ ಎಳೆಯರಲ್ಲಿ ಸುಮಾರು 70 ಪ್ರತಿಶತ ಎಳೆಯರು ಪ್ರತಿಕ್ರಿಯಿಸಿದ್ದಾರೆಂದು ಹೇಳಲಾಗಿದೆ. ನೀವು ಔಷಧ ಚಿಕಿತ್ಸೆಯನ್ನು ಸ್ವೀಕರಿಸುತ್ತೀರೊ ಇಲ್ಲವೊ ಎಂಬುದು ನೀವು ಮತ್ತು ನಿಮ್ಮ ಹೆತ್ತವರು, ಸಮಸ್ಯೆಯ ತೀವ್ರತೆ, ಸಾಧ್ಯವಿರುವ ಅಡ್ಡಪರಿಣಾಮಗಳು, ಮತ್ತು ಇತರ ಅಂಶಗಳನ್ನು ಪರಿಗಣಿಸಿದ ಬಳಿಕ ನಿರ್ಣಯಿಸಬೇಕಾದ ಒಂದು ವಿಷಯವಾಗಿದೆ.

ನಿಮ್ಮ ಸ್ವಗೌರವವನ್ನು ಕಾಪಾಡಿಕೊಳ್ಳಿರಿ

ಕಲಿಯುವುದರಲ್ಲಿನ ಕಷ್ಟವು ಒಂದು ಭಾವನಾತ್ಮಕ ಸಮಸ್ಯೆಯಾಗಿ ಪರಿಗಣಿಸಲ್ಪಡದಿದ್ದರೂ, ಅದಕ್ಕೆ ಭಾವನಾತ್ಮಕ ಫಲಿತಾಂಶಗಳಿರಸಾಧ್ಯವಿದೆ. ಹೆತ್ತವರು ಮತ್ತು ಶಿಕ್ಷಕರಿಂದ ಸತತವಾದ ಅಸಮ್ಮತಿ ಮತ್ತು ಟೀಕೆ, ನ್ಯೂನವಾದ ಅಥವಾ ಮಧ್ಯಮ ಹಂತದ ಶಾಲಾ ಫಲಿತಾಂಶಗಳು, ಮತ್ತು ನಿಕಟವಾದ ಸ್ನೇಹಿತರ ಕೊರತೆಯ ಸಂಯೋಗವು, ಸುಲಭವಾಗಿ ಕಡಿಮೆಯುಳ್ಳ ಸ್ವಪ್ರತಿಷ್ಠೆಯನ್ನು ಉತ್ಪಾದಿಸಬಲ್ಲದು. ಕೆಲವು ಯುವಕರು ಈ ಅನಿಸಿಕೆಯನ್ನು ಕೋಪದಿಂದ ಮತ್ತು ಬೆದರಿಸುವಂತಹ ವಿಧದಲ್ಲಿ ವರ್ತಿಸುವ ಮೂಲಕ ಅಡಗಿಸಿಕೊಳ್ಳುತ್ತಾರೆ.

ಆದರೆ ಕಲಿಯುವಿಕೆಯ ಸಮಸ್ಯೆಗಳಿಂದಾಗಿ ನೀವು ಸ್ವಪ್ರತಿಷ್ಠೆಯನ್ನು ಕಳೆದುಕೊಳ್ಳಬೇಕಾಗಿಲ್ಲ.c “ನನ್ನ ಗುರಿಯು, ಜೀವನದ ಕಡೆಗಿರುವ ಅವರ ಮನೋಭಾವವನ್ನು ಬದಲಾಯಿಸುವುದಾಗಿದೆ—‘ನಾನು ಮೂರ್ಖನು, ಮತ್ತು ನಾನು ಏನನ್ನೂ ಸರಿಯಾಗಿ ಮಾಡಲಾರೆ’ . . . ಇದರಿಂದ ‘ನಾನು ಒಂದು ಸಮಸ್ಯೆಯನ್ನು ಜಯಿಸುತ್ತಿದ್ದೇನೆ, ಮತ್ತು ನಾನು ಮಾಡಸಾಧ್ಯವಿದೆ ಎಂದು ನಾನು ಎಂದೂ ನೆನಸಿದ್ದಕ್ಕಿಂತಲೂ ತುಂಬ ಹೆಚ್ಚನ್ನು ಮಾಡಸಾಧ್ಯವಿದೆ’ ಎಂಬ ಮನೋಭಾವನೆಗೆ” ಎಂದು ಕಲಿಯುವಿಕೆಯ ಸಮಸ್ಯೆಗಳಿರುವ ಯುವಕರೊಂದಿಗೆ ಕೆಲಸನಡಿಸುವ ಒಬ್ಬ ಕಸುಬುದಾರನು ಹೇಳುತ್ತಾನೆ.

ಇತರರ ಮನೋಭಾವಗಳ ಕುರಿತಾಗಿ ನೀವು ಹೆಚ್ಚೇನನ್ನು ಮಾಡಸಾಧ್ಯವಿರದಿದ್ದರೂ, ನೀವು ನಿಮ್ಮ ಸ್ವಂತ ಮನೋಭಾವವನ್ನು ಪ್ರಭಾವಿಸಬಲ್ಲಿರಿ. ಜೆಸಿಕಾ ಅದನ್ನು ಮಾಡಿದಳು. ಅವಳು ಹೇಳುವುದು: “ಶಾಲೆಯಲ್ಲಿದ್ದ ಮಕ್ಕಳು ಏನನ್ನು ಹೇಳಿದರೊ ಅದರ ಮೇಲೆ ಮತ್ತು ಅವರ ತೆಗಳುವಿಕೆಗಳ ಆಧಾರದ ಮೇಲೆ ನಾನು ನನ್ನ ಯೋಗ್ಯತೆಯನ್ನು ತೀರ್ಮಾನಿಸುತ್ತಿದ್ದಾಗ, ನಾನು ಶಾಲೆಯಿಂದ ಓಡಿಹೋಗಲು ಬಯಸುತ್ತಿದ್ದೆ. ಆದರೆ ಈಗ ನಾನು ಅವರು ಏನು ಹೇಳುತ್ತಾರೋ ಅದನ್ನು ಅಲಕ್ಷಿಸಲು ಪ್ರಯತ್ನಿಸುತ್ತಾ, ನನ್ನ ಅತ್ಯುತ್ತಮವಾದದ್ದನ್ನು ಮಾಡುತ್ತಾ ಇರುತ್ತೇನೆ. ಅದು ಕಷ್ಟಕರವಾಗಿದೆ, ಮತ್ತು ನಾನು ಸ್ವತಃ ನೆನಪಿಸಿಕೊಳ್ಳುತ್ತಾ ಇರಬೇಕು, ಆದರೆ ಅದು ಕಾರ್ಯಸಾಧಕವಾಗಿದೆ.”

ಜೆಸಿಕಾಗೆ ಇನ್ನೊಂದು ವಾಸ್ತವಿಕತೆಯೊಂದಿಗೆ ಹೋರಾಡಬೇಕಾಗಿತ್ತು. ಅವಳ ಅಣ್ಣನು, ಎ ಗುಣಾಂಕಗಳಿದ್ದ ಅತ್ಯುತ್ಕೃಷ್ಟ ವಿದ್ಯಾರ್ಥಿಯಾಗಿದ್ದನು. “ಅದು ನನ್ನ ಸ್ವಪ್ರತಿಷ್ಠೆಯನ್ನು ನಾಶಪಡಿಸುತ್ತಿತ್ತು,” ಅನ್ನುತ್ತಾಳೆ ಜೆಸಿಕಾ, “ನಾನು ಅವನೊಂದಿಗೆ ನನ್ನನ್ನು ಹೋಲಿಸುವುದನ್ನು ನಿಲ್ಲಿಸುವ ತನಕ.” ಆದುದರಿಂದ ನಿಮ್ಮನ್ನು ನಿಮ್ಮ ಸೋದರಸೋದರಿಯರೊಂದಿಗೆ ಹೋಲಿಸಿಕೊಳ್ಳಬೇಡಿರಿ.—ಹೋಲಿಸಿರಿ ಗಲಾತ್ಯ 6:4.

ಒಬ್ಬ ಭರವಸೆಯುಳ್ಳ ಸ್ನೇಹಿತನೊಂದಿಗೆ ಮಾತಾಡುವುದು ಸಹ ವಿಷಯಗಳನ್ನು ಸರಿಯಾದ ಯಥಾದೃಷ್ಟಿಯಲ್ಲಿಡುವಂತೆ ಸಹಾಯ ಮಾಡುವುದು. ನೀವು ಉತ್ತಮಗೊಳ್ಳಲು ಪ್ರಯತ್ನಿಸಿದಂತೆ ಒಬ್ಬ ನಿಜ ಸ್ನೇಹಿತನು ನಿಷ್ಠೆಯಿಂದ ನಿಮ್ಮೊಂದಿಗೆ ಅಂಟಿಕೊಂಡಿರುವನು. (ಜ್ಞಾನೋಕ್ತಿ 17:17) ಇನ್ನೊಂದು ಕಡೆ, ಒಬ್ಬ ಸುಳ್ಳು ಸ್ನೇಹಿತನು, ನಿಮ್ಮನ್ನು ಒಂದೋ ಕೆಡವಿಹಾಕುವನು ಅಥವಾ ನಿಮ್ಮ ಕುರಿತಾಗಿ ಒಂದು ಅಯೋಗ್ಯವಾದ ಉನ್ನತಿಗೇರಿಸುವ ನೋಟವನ್ನು ಕೊಡುವನು. ಹೀಗಿರುವುದರಿಂದ ನಿಮ್ಮ ಸ್ನೇಹಿತರನ್ನು ಜಾಗರೂಕತೆಯಿಂದ ಆರಿಸಿರಿ.

ನಿಮಗೆ ಕಲಿಯುವ ಒಂದು ಸಮಸ್ಯೆಯಿರುವುದಾದರೆ, ಇತರ ಯುವಕರಿಗಿಂತ ನಿಮಗೆ ಹೆಚ್ಚು ತಿದ್ದುಪಡಿಯು ಸಿಗುತ್ತಿರುವುದು ಸಂಭಾವ್ಯ. ಆದರೆ ಅದು ನಿಮಗೆ ನಿಮ್ಮ ಕುರಿತಾಗಿ ಒಂದು ನಕಾರಾತ್ಮಕ ನೋಟವನ್ನು ಕೊಡುವಂತೆ ಅನುಮತಿಸದಿರ್ರಿ. ಶಿಸ್ತನ್ನು ಒಂದು ದೈವಿಕ ವಿಧದಲ್ಲಿ, ತುಂಬ ಮೌಲ್ಯವುಳ್ಳ ಒಂದು ವಿಷಯದೋಪಾದಿ, ದೃಷ್ಟಿಸಿರಿ. ನೆನಪಿನಲ್ಲಿಡಿರಿ, ನಿಮ್ಮ ಹೆತ್ತವರಿಂದ ಕೊಡಲ್ಪಡುವ ಶಿಸ್ತು, ಅವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮಗಾಗಿ ಅತ್ಯುತ್ತಮವಾದದ್ದನ್ನು ಬಯಸುತ್ತಾರೆಂಬುದಕ್ಕೆ ಸಾಕ್ಷ್ಯವಾಗಿದೆ.—ಜ್ಞಾನೋಕ್ತಿ 1:8, 9; 3:11, 12; ಇಬ್ರಿಯ 12:5-9.

ಇಲ್ಲ, ನಿಮ್ಮ ಕಲಿಯುವಿಕೆಯ ಸಮಸ್ಯೆಗಳು ನಿಮ್ಮನ್ನು ನಿರುತ್ಸಾಹಗೊಳಿಸುವ ಅಗತ್ಯವಿಲ್ಲ. ನೀವು ಅವುಗಳ ವಿಷಯದಲ್ಲಿ ಏನಾದರೂ ಮಾಡಸಾಧ್ಯವಿದೆ ಮತ್ತು ಒಂದು ಉತ್ಪನ್ನದಾಯಕವಾದ ಜೀವಿತವನ್ನು ಜೀವಿಸಸಾಧ್ಯವಿದೆ. ಆದರೆ ನಿರೀಕ್ಷೆಗಾಗಿ ಇನ್ನೂ ಹೆಚ್ಚು ಮಹತ್ತಾದ ಕಾರಣವಿದೆ. ಎಲ್ಲಿ ಜ್ಞಾನವು ಹೇರಳವಾಗಿರುವದೊ ಮತ್ತು ಎಲ್ಲಿ ಮನಸ್ಸು ಹಾಗೂ ದೇಹದ ಪ್ರತಿಯೊಂದು ಅಸ್ವಸ್ಥತೆಯು ಸರಿಪಡಿಸಲಾಗುವುದೊ, ಆ ಒಂದು ನೀತಿಯ ಹೊಸ ಲೋಕವನ್ನು ಒಳತರಲು ದೇವರು ವಾಗ್ದಾನಿಸಿದ್ದಾನೆ. (ಯೆಶಾಯ 11:9; ಪ್ರಕಟನೆ 21:1-4) ಆದುದರಿಂದ ಯೆಹೋವ ದೇವರು ಮತ್ತು ಆತನ ಉದ್ದೇಶಗಳ ಕುರಿತಾಗಿ ಹೆಚ್ಚನ್ನು ಕಲಿಯಲು ನಿರ್ಧರಿತರಾಗಿರಿ ಮತ್ತು ಆ ಜ್ಞಾನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಿರಿ.—ಯೋಹಾನ 17:3.

[ಅಧ್ಯಯನ ಪ್ರಶ್ನೆಗಳು]

a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

b ನವೆಂಬರ್‌ 22, 1994ರ ಎಚ್ಚರ! (ಇಂಗ್ಲಿಷ್‌) ಸಂಚಿಕೆಯಲ್ಲಿ “ಕಷ್ಟಕರವಾದ ಮಕ್ಕಳನ್ನು ತಿಳಿಯುವುದು” ಎಂಬ ಸರಣಿಯನ್ನು ಮತ್ತು ಮೇ 8, 1983ರ ಸಂಚಿಕೆಯಲ್ಲಿನ “ನಿಮ್ಮ ಮಗುವಿಗೆ ಕಲಿಯುವ ಸಮಸ್ಯೆಗಳಿವೆಯೊ?” ಎಂಬ ಲೇಖನವನ್ನು ದಯವಿಟ್ಟು ನೋಡಿರಿ.

c 1983, ಎಪ್ರಿಲ್‌ 8ರ ಎಚ್ಚರ! (ಇಂಗ್ಲಿಷ್‌) ಸಂಚಿಕೆಯಲ್ಲಿನ “ಯುವ ಜನರು ಪ್ರಶ್ನಿಸುವುದು . . . ನಾನು ನನ್ನ ಸ್ವಗೌರವವನ್ನು ಹೇಗೆ ವರ್ಧಿಸಿಕೊಳ್ಳಬಲ್ಲೆ?” ಎಂಬ ಲೇಖನವನ್ನು ನೋಡಿರಿ.

[ಪುಟ 39 ರಲ್ಲಿರುವ ಚಿತ್ರ]

ಕಲಿಯುವಿಕೆಗೆ ನಿಮ್ಮನ್ನು ಅರ್ಪಿಸಿಕೊಳ್ಳಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ