ಅದು ಯಾವ ದೇಶವಾಗಿರಸಾಧ್ಯವಿದೆ?
ವಿಕಾಸಹೊಂದಿರುವ ದೇಶಗಳಲ್ಲಿನ ಜನರು ಲಂಚಗಾರಿಕೆ, ಭ್ರಷ್ಟಾಚಾರ, ಮತ್ತು ದಾರಿದ್ರ್ಯವನ್ನು ಸಾಮಾನ್ಯವಾಗಿ ಆಫ್ರಿಕನ್ ಮತ್ತು ಲ್ಯಾಟಿನ್-ಅಮೆರಿಕನ್ ದೇಶಗಳಲ್ಲಿರುವ ಜಾಡ್ಯವಾಗಿ ವೀಕ್ಷಿಸುತ್ತಾರೆ. ಹಾಗಾದರೆ ಕೆಳಗಿನ ಉದ್ಧರಣೆಯು ಯಾವ ದೇಶಕ್ಕೆ ಅನ್ವಯಿಸುತ್ತದೆ?
“ಸರಕಾರಿ ಮಂತ್ರಿಗಳು ಸುಳ್ಳಾಡುತ್ತಾರೆ, ವ್ಯಾಪಾರಸ್ಥರು ಭ್ರಷ್ಟಾಚಾರಕ್ಕಾಗಿ ಸೆರೆಮನೆಗೆ ಹಾಕಲ್ಪಡುತ್ತಾರೆ, ಪೌರಾಧಿಕಾರಿಗಳು ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬೀಳುತ್ತಾರೆ, ರಾಜಕೀಯವು ಕಳಂಕಿತವಾಗಿದೆ, ಮತ್ತು [ರಾಜಕಾರಣಿಗಳು] ನೀಚರಾಗಿ, ಮದ್ಯೋನ್ಮತ್ತರಾಗಿ, ಹಾಗೂ ಕಾಮಗೀಳಿನವರಾಗಿ ನೋಡಲ್ಪಡುತ್ತಾರೆ. . . . ದೇಶದಲ್ಲೆಲ್ಲೂ ಹೆದ್ದಾರಿ ದರೋಡೆಯು ಹಿಮ್ಮರಳಿದೆ. . . . ಸಾಮಾನ್ಯ ಪಾತಕವು ಕೈಗಾರಿಕೆಯಲ್ಲಿ, ಹಣಕಾಸಿನ ಆಡಳಿತದಲ್ಲಿ, ಮತ್ತು ಸಾರ್ವಜನಿಕ ಸೇವಾ ಖಾತೆಗಳಲ್ಲಿ ಭ್ರಷ್ಟಾಚಾರದ ಒಂದು ತೀವ್ರ ವೃದ್ಧಿಯೊಂದಿಗೆ ಜತೆಗೂಡಿದೆ. . . . ಈಗ ಒಂದು ಕೋಟಿ ಹತ್ತು ಲಕ್ಷ ಜನರು, ಜೀವನದ ಮೂಲಭೂತ ಆವಶ್ಯಕ ವಸ್ತುಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಆವಶ್ಯಕತೆಗಳ ಕೊರತೆಯಲ್ಲಿದ್ದಾರೆ, . . . ಮತ್ತು ಕಡು ಬಡತನದಲ್ಲಿ ಜೀವಿಸುವವರ—ಏಳು ಅಥವಾ ಅದಕ್ಕಿಂತ ಹೆಚ್ಚು ಆವಶ್ಯಕತೆಗಳ ಕೊರತೆಯಿರುವ—ಸಂಖ್ಯೆಯು, 25 ಲಕ್ಷದಿಂದ 35 ಲಕ್ಷಕ್ಕೇರಿರುತ್ತದೆ.”—ಫಿಲಿಪ್ ನೈಟ್ಲೀ, ದಿ ಆಸ್ಟ್ರೇಲಿಯನ್ ಮ್ಯಾಗಸಿನ್.
ನಿಮ್ಮ ಊಹೆ ಸರಿಯಾಗಿತ್ತೊ? ಉತ್ತರವು ಬ್ರಿಟನ್ ದೇಶವಾಗಿದೆ. ಆದರೆ ಮೇಲಿನ ಹೇಳಿಕೆಯನ್ನು ಡಸನ್ಗಟ್ಟಲೆ ದೇಶಗಳಿಗೆ ಅನ್ವಯಿಸಸಾಧ್ಯವಿದೆ ಎಂಬುದು ನಮ್ಮ ಕಾಲಾವಧಿಯ ಒಂದು ವಿಷಾದಕರ ಹೇಳಿಕೆ. ಎಷ್ಟು ನಿಕೃಷ್ಟವಾಗಿ ನಮಗೆಲ್ಲರಿಗೆ ಒಂದು ಒಳ್ಳೆಯ, ಪ್ರಾಮಾಣಿಕ, ಹಾಗೂ ನೀತಿಪರ ಆಡಳಿತದ ಅಗತ್ಯವಿದೆ! ಹೌದು, ಯಾವುದಕ್ಕಾಗಿ ಯೇಸು ತನ್ನ ಶಿಷ್ಯರಿಗೆ “ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸಲು ಕಲಿಸಿದನೊ, ಆ ರಾಜ್ಯದ ಮೂಲಕ ಬರುವ ದೇವರ ಆಡಳಿತವು ನಮಗೆ ಅಗತ್ಯವಾಗಿದೆ.—ಮತ್ತಾಯ 6:10.