ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 11/8 ಪು. 3-4
  • ಮಾತುಗಳು ಆಯುಧಗಳಾಗುವಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾತುಗಳು ಆಯುಧಗಳಾಗುವಾಗ
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾತುಗಳ ಗಾಯಗಳು
  • ಮನನೋಯಿಸದೆ ಮಾತಾಡೋದು ಹೇಗೆ?
    ಎಚ್ಚರ!—2013
  • ನಾಲಗೆಯನ್ನು ನಿಯಂತ್ರಿಸುವ ಮೂಲಕ ಪ್ರೀತಿಗೌರವ ತೋರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ನೋಯಿಸುವ ನುಡಿಗಳಿಂದ ಗುಣವಾಗಿಸುವ ನುಡಿಗಳಿಗೆ
    ಎಚ್ಚರ!—1996
  • ನಿಂದಾತ್ಮಕ ಮಾತಿನ ಮೂಲಗಳನ್ನು ಬಯಲುಪಡಿಸುವುದು
    ಎಚ್ಚರ!—1996
ಇನ್ನಷ್ಟು
ಎಚ್ಚರ!—1996
g96 11/8 ಪು. 3-4

ಮಾತುಗಳು ಆಯುಧಗಳಾಗುವಾಗ

“ಕತ್ತಿಯೊಂದರ ತಿವಿತಗಳೊಂದಿಗೋ ಎಂಬಂತೆ ನಿರ್ಲಕ್ಷ್ಯದಿಂದ ಮಾತಾಡುವವರಿದ್ದಾರೆ.”—ಜ್ಞಾನೋಕ್ತಿ 12:18, NW.

“ವಿವಾಹವಾದ ಬಳಿಕ ಕೆಲವೊಂದು ವಾರಗಳೊಳಗೇ ಅದು ಆರಂಭವಾಯಿತು,” ಎಂದು ಇಲೇನ್‌ ಹೇಳುತ್ತಾಳೆ.a “ನಿರ್ದಯವಾದ ಟೀಕೆಗಳು, ಕಡೆಗಣಿಸುವ ಹೇಳಿಕೆಗಳು, ಮತ್ತು ನನ್ನನ್ನು ಅವಮಾನಿಸಲಿಕ್ಕಾಗಿ ಮಾಡಿದ ಪ್ರಯತ್ನಗಳು. ನಾನು ನನ್ನ ಗಂಡನಿಗೆ ಸರಿಜೋಡಿಯಾಗಿರಲಿಲ್ಲ. ಅವನ ಚುರುಕಾದ ಮನಸ್ಸು ಹಾಗೂ ಚುರುಕಾದ ನಾಲಿಗೆಯು, ನಾನು ಹೇಳಿದ ಎಲ್ಲಾ ವಿಷಯವನ್ನು ತಿರುಚಲು ಹಾಗೂ ತಪ್ಪಭಿಪ್ರಯಿಸಲು ಸಾಧ್ಯವಿತ್ತು.”

ಅವಳ ವಿವಾಹದಾದ್ಯಂತ ಇಲೇನ್‌, ಯಾವುದೇ ಶಾರೀರಿಕ ಕಲೆಗಳನ್ನು ಉಳಿಸದಿರುವ ಹಾಗೂ ಸಹಾನುಭೂತಿಯನ್ನು ಹೊರಡಿಸದಂತಹ ರೀತಿಯ ದ್ರೋಹದ ಆಕ್ರಮಣಕ್ಕೆ ಒಳಪಡಿಸಲ್ಪಟ್ಟಳು. ದುಃಖಕರವಾಗಿಯೇ, ಅವಳ ಸನ್ನಿವೇಶವು ಸಮಯದ ಗತಿಸುವಿಕೆಯಿಂದಾಗಿ ಉತ್ತಮಗೊಂಡಿಲ್ಲ. “ನಾವು ಈಗ 12 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ವಿವಾಹಿತರಾಗಿದ್ದೇವೆ” ಎಂದು ಅವಳು ಹೇಳುತ್ತಾಳೆ. “ಕಟುವಾದ, ಅಸಭ್ಯ ಮಾತನ್ನು ಉಪಯೋಗಿಸುತ್ತಾ, ಅವನು ನನ್ನನ್ನು ಟೀಕೆಮಾಡದೆ ಮತ್ತು ಅಣಕದ ಮಾತನ್ನಾಡದೆ ಒಂದು ದಿನವೂ ಕಳೆಯುವುದಿಲ್ಲ.”

ನಾಲಿಗೆಯು “ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ” ಎಂಬುದಾಗಿ ಬೈಬಲು ಹೇಳುವಾಗ, ಅದು ವಿಷಯವನ್ನು ಅತಿಶಯಿಸುತ್ತಿಲ್ಲ. (ಯಾಕೋಬ 3:8; ಕೀರ್ತನೆ 140:3ನ್ನು ಹೋಲಿಸಿರಿ.) ಇದು ವಿಶೇಷವಾಗಿ ವಿವಾಹದಲ್ಲಿ ಸತ್ಯವಾಗಿದೆ. “‘ಕೋಲುಗಳೂ ಕಲ್ಲುಗಳೂ ನನ್ನ ಮೂಳೆಗಳನ್ನು ಮುರಿಯಬಲ್ಲವಾದರೂ, ಮಾತುಗಳು ಎಂದಿಗೂ ನನಗೆ ನೋವನ್ನುಂಟುಮಾಡಲಾರವು’ ಎಂಬುದಾಗಿ ಯಾರೇ ಹೇಳಿರಲಿ, ಅದು ಸಂಪೂರ್ಣವಾಗಿ ತಪ್ಪಾಗಿತ್ತು” ಎಂದು ಲೀಸ ಎಂಬ ಹೆಸರಿನ ಒಬ್ಬ ಹೆಂಡತಿಯು ಹೇಳುತ್ತಾಳೆ.—ಜ್ಞಾನೋಕ್ತಿ 15:4.

ಗಂಡಂದಿರು ಸಹ ಶಾಬ್ದಿಕ ಆಕ್ರಮಣಕ್ಕೆ ಗುರಿಹಲಗೆಯಾಗಿರಸಾಧ್ಯವಿದೆ. “ನಿರಂತರವಾಗಿ ನಿಮ್ಮನ್ನು ಒಬ್ಬ ಸುಳ್ಳುಗಾರನೆಂದು, ಒಬ್ಬ ಮಂಕು ಬುದ್ಧಿಯ ಪೆದ್ದನೆಂದು ಅಥವಾ ಇನ್ನೂ ಕೆಟ್ಟದ್ದಾದ ಹೆಸರಿನಿಂದ ಕರೆಯುತ್ತಿರುವ ಒಬ್ಬ ಸ್ತ್ರೀಯೊಂದಿಗೆ ಜೀವಿಸುವುದು ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆಯೊ?” ಎಂಬುದಾಗಿ, ಟ್ರೇಸಿಯೊಂದಿಗಿನ ನಾಲ್ಕು ವರ್ಷದ ವಿವಾಹ ಸಂಬಂಧವು, ಈಗ ವಿಚ್ಛೇದದ ಕಡೆಗೆ ಸಾಗುತ್ತಿರುವ ಮೈಕ್‌ ಕೇಳುತ್ತಾನೆ. “ಗೌರವಾನಿತ್ವರಾದ ಜೊತೆಗಾರರ ಮುಂದೆ ಅವಳು ನನಗೆ ಹೇಳುವ ವಿಷಯಗಳನ್ನು ನಾನು ಪುನರಾವರ್ತಿಸಲಾರೆ. ಆದುದರಿಂದಲೇ ನಾನು ಅವಳೊಂದಿಗೆ ಮಾತಾಡಲಾರೆ ಮತ್ತು ಆ ಕಾರಣದಿಂದಲೇ ನಾನು ಅಷ್ಟು ತಡವಾಗಿ ಕೆಲಸದ ಸ್ಥಳದಲ್ಲಿ ಉಳಿಯುತ್ತೇನೆ. ಮನೆಗೆ ಬರುವುದಕ್ಕಿಂತಲೂ ಇದು ಬಹಳ ಹೆಚ್ಚು ಸುರಕ್ಷಿತವಾದದ್ದಾಗಿದೆ.”—ಜ್ಞಾನೋಕ್ತಿ 27:15.

ಸಕಾರಣದಿಂದಲೇ, ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದ ಹೇಳಿದ್ದು: “ಕೂಗಾಟ ಮತ್ತು ನಿಂದಾತ್ಮಕ ಮಾತು ನಿಮ್ಮಿಂದ ದೂರಮಾಡಲ್ಪಡಲಿ.” (ಎಫೆಸ 4:31, NW) ಆದರೆ “ನಿಂದಾತ್ಮಕ ಮಾತು” ಎಂದರೇನು? ಕೇವಲ ಧ್ವನಿಯನ್ನು ಎತ್ತರಿಸುವುದನ್ನು ಸೂಚಿಸುವ “ಕೂಗಾಟ” (ಗ್ರೀಕ್‌, ಕ್ರಾಗೆ)ದಿಂದ ಪೌಲನು ಪ್ರತ್ಯೇಕವಾಗಿ ಇದರ ವ್ಯತ್ಯಾಸತೋರಿಸುತ್ತಾನೆ. “ನಿಂದಾತ್ಮಕ ಮಾತು” (ಗ್ರೀಕ್‌, ಬ್ಲಾಸ್ಫೀಮಿಯ) ಹೆಚ್ಚಾಗಿ ಸಂದೇಶದಲ್ಲಿ ಅಡಕವಾಗಿರುವ ವಿಷಯಕ್ಕೆ ಸೂಚಿತವಾಗಿದೆ. ಅದು ಪೀಡಕವಾದದ್ದೂ, ದುರುದ್ದೇಶವುಳ್ಳದ್ದೂ, ಹೀನಾಯವಾದದ್ದೂ, ಅಥವಾ ಅವಮಾನಿಸುವಂತಹದ್ದೂ ಆಗಿರುವುದಾದರೆ, ಅದು ಗಟ್ಟಿಧ್ವನಿಯಲ್ಲಿ ಹೊರಬರಲಿ ಅಥವಾ ಪಿಸುಮಾತಿನಲ್ಲಿ ಹೊರಬರಲಿ, ಅದು ನಿಂದಾತ್ಮಕ ಮಾತಾಗಿದೆ.

ಮಾತುಗಳ ಗಾಯಗಳು

ಮಹಾಸಾಗರದ ಅಲೆಗಳು ಘನವಾದ ಬಂಡೆಯನ್ನು ಸವೆಯಿಸಸಾಧ್ಯವಿರುವಂತೆಯೇ, ಕಟುವಾದ ಮಾತಿನ ನಮೂನೆಯು ವಿವಾಹವೊಂದನ್ನು ದುರ್ಬಲಗೊಳಿಸಬಲ್ಲದು. “ಹೆಚ್ಚು ತೀಕ್ಷ್ಣವಾಗಿ, ವಿಸ್ತೃತಗೊಂಡಷ್ಟು, ಅಪಾಯವು ಹೆಚ್ಚಾಗಿರುತ್ತದೆ. . . . ನಿತ್ಯಗಟ್ಟಳೆಯ ಟೀಕೆ ಮತ್ತು ತಾತ್ಸಾರ ಅಥವಾ ಜಿಗುಪ್ಸೆಗಳು ಅಪಾಯದ ಸಂಕೇತಗಳಾಗಿವೆ, ಯಾಕೆಂದರೆ ಒಬ್ಬ ಗಂಡ ಅಥವಾ ಹೆಂಡತಿಯು ತಮ್ಮ ಆಲೋಚನೆಗಳಲ್ಲಿ ಈಗಾಗಲೇ ತಮ್ಮ ಸಹಭಾಗಿಯನ್ನು ಖಂಡಿಸಿದ್ದಾರೆಂಬುದನ್ನು ಅವು ಸೂಚಿಸುತ್ತವೆ” ಎಂದು ಡಾ. ಡ್ಯಾನಿಯೆಲ್‌ ಗೋಲ್ಮನ್‌ ಬರೆಯುತ್ತಾರೆ. ಒಂದು ಪುಸ್ತಕವು ಹೇಳುವಂತೆ, ಮಮತೆಯು ಕ್ಷೀಣಿಸಿದಂತೆ, ಗಂಡಹೆಂಡತಿಯರು “ಕಾನೂನುಬದ್ಧವಾಗಿ ವಿವಾಹಿತ”ರಾಗುತ್ತಾರೆ, “ಆದರೆ ಭಾವನಾತ್ಮಕವಾಗಿ ಅಲ್ಲ.” ಸಕಾಲದಲ್ಲಿ, ಅವರು ಇನ್ನುಮುಂದೆ ಎಂದಿಗೂ ವಿವಾಹಿತರಾಗಿರದಿರಬಹುದು.

ಹಾಗಿದ್ದರೂ, ಕುಚೋದ್ಯದ ಮಾತು, ಸ್ವತಃ ವಿವಾಹಕ್ಕಿಂತಲೂ ಹೆಚ್ಚಿನ ವಿಷಯದ ಮೇಲೆ ಪರಿಣಾಮಬೀರಬಲ್ಲದು. ಒಂದು ಬೈಬಲ್‌ ಜ್ಞಾನೋಕ್ತಿ ಹೇಳುವುದು: “ಹೃದಯದ ವೇದನೆಯ ಕಾರಣದಿಂದ ಆತ್ಮಭಂಗ.” (ಜ್ಞಾನೋಕ್ತಿ 15:13, NW) ವೇದನಾಭರಿತ ಮಾತುಗಳ ಸತತವಾದ ಸುರಿಮಳೆಯಿಂದ ಫಲಿಸುವ ಒತ್ತಡವು, ಒಬ್ಬನ ಆರೋಗ್ಯದ ಮೇಲೆ ದುರ್ಭರವಾದ ವಿನಾಶಕರ ಬೆಲೆಯನ್ನು ತೆಗೆದುಕೊಳ್ಳಸಾಧ್ಯವಿದೆ. ಉದಾಹರಣೆಗಾಗಿ, ಯೂನಿವರ್ಸಿಟಿ ಆಫ್‌ ವಾಷಿಂಗ್ಟನ್‌ (ಅಮೆರಿಕ)ನಿಂದ ನಡೆಸಲ್ಪಟ್ಟ ಒಂದು ಅಧ್ಯಯನವು ಪ್ರಕಟಪಡಿಸಿದ್ದೇನಂದರೆ, ಸತತವಾದ ಬೈಯುವಿಕೆಯನ್ನು ಅನುಭವಿಸುವ ಒಬ್ಬ ಸ್ತ್ರೀಯು, ನೆಗಡಿಗಳು, ಮೂತ್ರಕೋಶದ ಸಮಸ್ಯೆಗಳು, ಕಾಂತಿಕಬೇನೆಗಳು ಮತ್ತು ಜಠರಕರುಳಿನ ಅವ್ಯವಸ್ಥೆಗಳನ್ನು ಹೆಚ್ಚಾಗಿ ಪಡೆದುಕೊಳ್ಳುವ ಪ್ರವೃತ್ತಿಯುಳ್ಳವಳಾಗಬಹುದು.

ಶಾಬ್ದಿಕ ಹಾಗೂ ಶಾರೀರಿಕ—ಎರಡೂ ರೀತಿಯ ಹೊಡೆತವನ್ನು ತಾಳಿಕೊಂಡಿರುವ ಅನೇಕ ಹೆಂಡತಿಯರು, ಮುಷ್ಟಿಹೊಡೆತಗಳಿಗಿಂತಲೂ ಹೆಚ್ಚಾಗಿ ಮಾತುಗಳು ವೇದನೆಯನ್ನುಂಟುಮಾಡಬಲ್ಲವು ಎಂದು ಹೇಳುತ್ತಾರೆ. “ಅವನ ಹೊಡೆತಗಳಿಂದಾದ ಜಜ್ಜುಗಾಯಗಳು ಕಾಲಕ್ರಮೇಣ ವಾಸಿಯಾಗಿಹೋಗಸಾಧ್ಯವಿತ್ತು, ಆದರೆ ನನ್ನ ತೋರಿಕೆ, ನಾನು ಅಡಿಗೆಮಾಡುವ ರೀತಿ, ನಾನು ಮಕ್ಕಳನ್ನು ನೋಡಿಕೊಳ್ಳುವ ರೀತಿಯ ಕುರಿತಾಗಿ ಅವನು ಹೇಳಿರುವ ಅತಿರೇಕ ವಿಷಯಗಳನ್ನು ನಾನು ಎಂದೆಂದಿಗೂ ಮರೆಯಲಾರೆ” ಎಂಬುದಾಗಿ ಬೆವರ್ಲಿ ಹೇಳುತ್ತಾಳೆ. ಜೂಲಿಯಳಿಗೂ ಹೆಚ್ಚುಕಡಿಮೆ ಅದೇ ರೀತಿಯ ಅನಿಸಿಕೆಯಾಗುತ್ತದೆ. “ಇದು ಹುಚ್ಚುತನವಾಗಿ ಕಂಡುಬರುತ್ತದೆಂದು ನನಗೆ ಗೊತ್ತು, ಆದರೂ ಈ ಮಾನಸಿಕ ಆಟಗಳನ್ನು ಅನೇಕ ತಾಸುಗಳ ವರೆಗೆ ಆಡುವುದಕ್ಕೆ ಬದಲಾಗಿ, ಅವನು ನನಗೆ ಹೊಡೆದು, ಅದನ್ನು ಕೊನೆಗಾಣಿಸುವುದು ಯುಕ್ತವಾದದ್ದೆಂದು ಎಣಿಸುತ್ತೇನೆ” ಎಂದು ಅವಳನ್ನುತ್ತಾಳೆ.

ಆದರೆ ಕೆಲವು ಜನರು ತಾವು ಪ್ರೀತಿಸುತ್ತೇವೆಂದು ಹೇಳಿಕೊಳ್ಳುವವರನ್ನೇ ಆಕ್ರಮಿಸಿ, ಬೈಯುವುದೇಕೆ? ಮುಂದಿನ ಲೇಖನವು ಈ ಪ್ರಶ್ನೆಯನ್ನು ಉದ್ದೇಶಿಸಿ ಮಾತಾಡುತ್ತದೆ.

[ಪಾದಟಿಪ್ಪಣಿ]

a ಈ ಲೇಖನಗಳ ಸರಣಿಯಲ್ಲಿರುವ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಈ ಮಾನಸಿಕ ಆಟಗಳನ್ನು ಅನೇಕ ತಾಸುಗಳ ವರೆಗೆ ಆಡುವುದಕ್ಕೆ ಬದಲಾಗಿ, ಅವನು ನನಗೆ ಹೊಡೆದು, ಅದನ್ನು ಕೊನೆಗಾಣಿಸುವುದು ಯುಕ್ತವೆಂದೆಣಿಸುತ್ತೇನೆ”

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿರಂತರವಾಗಿ ನಿಮ್ಮನ್ನು ಒಬ್ಬ ಸುಳ್ಳುಗಾರನೆಂದು, ಒಬ್ಬ ಮಂಕು ಬುದ್ಧಿಯ ಪೆದ್ದನೆಂದು, ಅಥವಾ ಇನ್ನೂ ಕೆಟ್ಟದ್ದಾದ ಹೆಸರಿನಿಂದ ಕರೆಯುತ್ತಿರುವ ಒಬ್ಬ ಸ್ತ್ರೀಯೊಂದಿಗೆ ಜೀವಿಸುವುದು ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆಯೊ?”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ