ಕ್ಲೇಶಮುಕ್ತ ಪ್ರಮೋದವನ ಬೇಗನೆ ವಾಸ್ತವಿಕತೆಯಾಗಲಿದೆ
“ನನ್ನ ಸಂಗಡ ಪರದೈಸಿನಲ್ಲಿರುವಿ [“ಪ್ರಮೋದವನದಲ್ಲಿರುವಿ,” NW].” ಅಪರಾಧದ ದಾಖಲೆಯಿದ್ದ ಆ ಮನುಷ್ಯನಿಗೆ ಆ ಮಾತುಗಳು ಎಷ್ಟು ಆಶ್ವಾಸನದಾಯಕವಾಗಿದ್ದವು! ತಾನು ಸತ್ತಾಗ, ಅಗ್ನಿಮಯ ನರಕಕ್ಕೆ ಹೋಗುವುದನ್ನು ತಡೆದು, ಸ್ವರ್ಗಕ್ಕೆ ಹೋಗುವೆನೆಂದು ಅವನು ಅಭಿಪ್ರಯಿಸಲಿಲ್ಲ. ಬದಲಿಗೆ, ಯೇಸುವಿನ ಪಕ್ಕದಲ್ಲಿದ್ದ ಆ ಕಳ್ಳನು, ಈ ಗ್ರಹಕ್ಕೆ ಪ್ರಮೋದವನವು ಪುನಸ್ಸ್ಥಾಪಿಸಲ್ಪಟ್ಟಾಗ, ತನಗೆ ಜೀವಕ್ಕಾಗಿ ಪುನರುತ್ಥಾನವಾಗುವುದೆಂಬುದರಿಂದ ಸಾಂತ್ವನವನ್ನು ಪಡೆದನು. ಪ್ರಮೋದವನದ ಕುರಿತಾಗಿ ಅಂತಹ ಧೈರ್ಯದ ಹೇಳಿಕೆಯನ್ನು ಯಾರು ಕೊಟ್ಟನೆಂಬುದನ್ನೂ ದಯವಿಟ್ಟು ಗಮನಿಸಿರಿ—ದೇವರ ಸ್ವಂತ ಕುಮಾರನಾದ ಯೇಸುಕ್ರಿಸ್ತನು.—ಲೂಕ 23:43.
ಕ್ರಿಸ್ತನ ಆ ಪ್ರಮೋದವನದ ವಾಗ್ದಾನವನ್ನು ಯಾವುದು ಪ್ರೇರಿಸಿತು? ಆ ಕಳ್ಳನು ಹೀಗೆ ಕೇಳಿಕೊಂಡಿದ್ದನು: “ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” (ಲೂಕ 23:42) ಈ ರಾಜ್ಯವು ಏನಾಗಿದೆ ಮತ್ತು ಅದಕ್ಕೂ ಒಂದು ಭೂಪ್ರಮೋದವನಕ್ಕೂ ಯಾವ ಸಂಬಂಧವಿದೆ? ಪ್ರಮೋದವನವು ಕ್ಲೇಶಮುಕ್ತವಾಗಿರುವುದೆಂಬುದಕ್ಕೆ ಇದು ಯಾವ ಖಾತರಿಯನ್ನು ಕೊಡುತ್ತದೆ?
ಪ್ರಮೋದವನದ ಹಿಂದಿರುವ ಶಕ್ತಿ
ಈಗಿನ ಸಕಲ ಕ್ಲೇಶಗಳು ಇಲ್ಲದೆ ಹೋಗುವಾಗ ಮಾತ್ರ ಒಂದು ನಿಜ ಪ್ರಮೋದವನ ಬರಬಲ್ಲದೆಂದು ನೀವು ಒಪ್ಪುವಿರಿ. ಅವುಗಳನ್ನು ತೊಲಗಿಸಲು ಮಾಡಿರುವ ಮಾನವ ಪ್ರಯತ್ನಗಳು, ಇತಿಹಾಸವು ಸಮರ್ಪಕವಾಗಿ ಸಾಕ್ಷಿನೀಡುವಂತೆ, ಈ ತನಕ ವಿಫಲಗೊಂಡಿವೆ. ಹೀಬ್ರು ಪ್ರವಾದಿ ಯೆರೆಮೀಯನು ಒಪ್ಪಿಕೊಂಡದ್ದು: “ಯೆಹೋವನೇ, . . . ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಹಾಗಾದರೆ, ಇಂದಿನ ಕ್ಲೇಶಗಳನ್ನೆಲ್ಲ ಯಾರು ಅಳಿಸಿಹಾಕಬಲ್ಲರು?
ವಿಪರೀತ ಹವಾಮಾನಗಳು ಮತ್ತು ಮಾಲಿನ್ಯ. ಗಲಿಲಾಯ ಸಮುದ್ರದಲ್ಲಿ ಎದ್ದ ತೀಕ್ಷ್ಣ ಬಿರುಗಾಳಿ, ದೋಣಿಯನ್ನು ಒಡೆಯುವಷ್ಟು ದೊಡ್ಡ ಅಲೆಗಳನ್ನು ಎಬ್ಬಿಸಿದಾಗ, ನಾವಿಕರು ತಮ್ಮ ಜೊತೆ ಸಂಚಾರಿಯನ್ನು ನಿದ್ದೆಯಿಂದ ಎಬ್ಬಿಸಿದರು. ಇದಕ್ಕೆ ಪ್ರತಿಯಾಗಿ, ಅವನು ಸಮುದ್ರಕ್ಕೆ ಕೇವಲ, “ಸುಮ್ಮನಿರು, ಪ್ರಶಾಂತವಾಗು” (NW) ಎಂದು ಹೇಳಿದನು. ಮಾರ್ಕನ ಸುವಾರ್ತಾ ವೃತ್ತಾಂತವು ಏನಾಯಿತೆಂದು ತಿಳಿಸುತ್ತದೆ: “ಗಾಳಿ ನಿಂತುಹೋಗಿ ಎಲ್ಲಾ ಶಾಂತವಾಯಿತು.” (ಮಾರ್ಕ 4:39) ಆ ಜೊತೆಸಂಚಾರಿ ಬೇರೆ ಯಾರೂ ಅಲ್ಲ, ಯೇಸುವೇ ಆಗಿದ್ದನು. ಅವನಿಗೆ ಹವಾಮಾನವನ್ನು ನಿಯಂತ್ರಿಸುವ ಶಕ್ತಿಯಿತ್ತು.
ದೇವರು “ಲೋಕನಾಶಕರನ್ನು ನಾಶ” ಮಾಡುವ ಸಮಯವು ಬರುವುದೆಂಬುದನ್ನು ಅಪೊಸ್ತಲ ಯೋಹಾನನ ಮೂಲಕ ಮುಂತಿಳಿಸಿದ್ದು ಈ ಯೇಸುವೇ. (ಪ್ರಕಟನೆ 1:1; 11:18) ನೋಹನ ದಿನಗಳ ಜಲಪ್ರಳಯದಲ್ಲಿ ಭಕ್ತಿಹೀನ ಮಾನವರ ಇಡೀ ಲೋಕವನ್ನೇ ಇಲ್ಲವಾಗಿಸಿದಾತನಿಗೆ ಇದೊಂದು ಅಸಾಧ್ಯವಾದ ಕಾರ್ಯವಲ್ಲ.—2 ಪೇತ್ರ 3:5, 6.
ಪಾತಕ ಮತ್ತು ಹಿಂಸಾಚಾರ. ಬೈಬಲು ವಾಗ್ದಾನಿಸುವುದು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:9, 11) ಪುನಃ, ಸಕಲ ಅಪರಾಧ ಮತ್ತು ಹಿಂಸಾಚಾರವನ್ನು ತೆಗೆದು, ದೀನರಿಗೆ ಪ್ರಮೋದವನವನ್ನು ಕಾದಿರಿಸಲು ವಚನಕೊಡುವಾತನು ದೇವರಾದ ಯೆಹೋವನೇ.
ಬಡತನ ಮತ್ತು ಹಸಿವು. ಪ್ರಸ್ತುತ ಸಮಯದ ಅನ್ಯಾಯವು, ಲೋಕದ ಒಂದು ಪ್ರದೇಶದ ಸರಕಾರಗಳು ಆಹಾರ ಪದಾರ್ಥಗಳನ್ನು ಮಿಗುತಾಯದ “ಪ್ರಮಾಣಗಳಲ್ಲಿ” ಶೇಖರಿಸುವ ಅದೇ ಸಮಯದಲ್ಲಿ, ಬಡದೇಶಗಳು ಬಡತನದಲ್ಲಿ ಹೆಣಗಾಡುವಂತೆ ಅನುಮತಿಸುತ್ತದೆ. ಲೋಕವ್ಯಾಪಕವಾಗಿ ಚಿಂತಿತರಾಗಿರುವ ಜನರು ಬೆಂಬಲಿಸುವ ಪರಿಹಾರ ಸಂಘಗಳು, ಮೂಲಾವಶ್ಯಕತೆಗಳನ್ನು ಸರಬರಾಯಿಮಾಡಲು ಪ್ರಯತ್ನಿಸುತ್ತವಾದರೂ, ನಿಯಮ ಮತ್ತು ಶಿಸ್ತುಪಾಲನೆಯ ಕೊರತೆಯಿಂದ ವಿತರಣ ಯೋಜನೆಗಳು ಶಿಥಿಲಗೊಳ್ಳುವ ಕಾರಣ ಅನೇಕ ವೇಳೆ ವಿಫಲಗೊಳ್ಳುತ್ತವೆ. ಇದನ್ನು ಪ್ರವಾದಿ ಯೆಶಾಯನು ದಾಖಲೆಮಾಡಿದ ವಿಷಯದೊಂದಿಗೆ ಹೋಲಿಸಿರಿ: “ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.” (ಯೆಶಾಯ 25:6) ಬರಗಾಲ ಮತ್ತು ಹೊಟ್ಟೆಗಿಲ್ಲದಿರುವಿಕೆ ಇನ್ನಿರದು ಎಂಬಂತೆ ಅದು ಧ್ವನಿಸುವುದಿಲ್ಲವೆ? ನಿಶ್ಚಯವಾಗಿ.
ಯುದ್ಧ. ಈ ಭೂಗೋಳವನ್ನು ರಾಷ್ಟ್ರಾತೀತ ಅಧಿಕಾರದಿಂದ ಆಡಳಿತ ಮಾಡಲು ಮಾಡಿರುವ ಪ್ರಯತ್ನಗಳು ಯಶಸ್ವಿರಹಿತವಾಗಿ ಪರಿಣಮಿಸಿವೆ. 1920ರಲ್ಲಿ ಸ್ಥಾಪನೆಗೊಂಡ ಜನಾಂಗ ಸಂಘವು IIನೆಯ ಲೋಕ ಯುದ್ಧವು ಆರಂಭಗೊಳ್ಳುವುದನ್ನು ತಡೆಗಟ್ಟಲು ವಿಫಲಗೊಂಡು ಕುಸಿದುಬಿತ್ತು. ಶಾಂತಿಗಿರುವ ಅತ್ಯುತ್ತಮ ನಿರೀಕ್ಷೆಯೆಂದು ಎಷ್ಟೋ ಸಲ ಸಂಬೋಧಿಸಲ್ಪಟ್ಟ ವಿಶ್ವ ಸಂಸ್ಥೆಯು, ಹೋರಾಟದ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳನ್ನು ಪ್ರತ್ಯೇಕವಾಗಿಡಲು ಹೆಣಗಾಡುತ್ತದೆ. ಅದರ ಪ್ರಕಟಿತ ಶಾಂತಿ ಪ್ರಯತ್ನಗಳ ಮಧ್ಯೆಯೂ, ಆಂತರಿಕ, ಕುಲಸಂಬಂಧವಾದ ಅಥವಾ ಸಾಮುದಾಯಿಕ ಯುದ್ಧಗಳು ಸಮೃದ್ಧವಾಗಿ ನಡೆಯುತ್ತಿವೆ. ದೇವರ ರಾಜ್ಯ ಸರಕಾರವು ಇಂದಿನ ಯುದ್ಧಮಾಡುವ ಪಕ್ಷಗಳನ್ನು ತೆಗೆದುಹಾಕಿ, ತನ್ನ ಪ್ರಜೆಗಳಿಗೆ ಶಾಂತಿಪಥದಲ್ಲಿ ಶಿಕ್ಷಣ ಕೊಡುವರೆ ವಚನಕೊಡುತ್ತದೆ.—ಯೆಶಾಯ 2:2-4; ದಾನಿಯೇಲ 2:44.
ಕೌಟುಂಬಿಕ ಮತ್ತು ನೈತಿಕ ಕುಸಿತ. ಕುಟುಂಬ ವಿಭಜನೆ ಅತಿಯಾಗಿದೆ. ಬಾಲಕರ ಅಪರಾಧಗಳು ಸಮೃದ್ಧವಾಗಿವೆ. ನೈತಿಕ ದುರಾಚಾರವು ಮಾನವ ಸಮಾಜದ ಸಕಲ ಮಟ್ಟಗಳಲ್ಲೂ ಹರಡಿರುತ್ತದೆ. ಆದರೂ, ದೇವರ ಮಟ್ಟಗಳೊ, ಆದಿಯಿಂದಲೂ ಬದಲಾವಣೆಹೊಂದದೆ ಉಳಿದಿವೆ. “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು . . . ಆದದರಿಂದ, ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು” ಎಂದು ಯೇಸು ಸಾಕ್ಷಿನೀಡಿದನು. (ಮತ್ತಾಯ 19:5, 6) ಯೆಹೋವ ದೇವರು ಮತ್ತೂ ಆಜ್ಞಾಪಿಸಿದ್ದು: “ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” (ಎಫೆಸ 6:2, 3) ಇಂತಹ ಮಟ್ಟಗಳು ಭೂಮಿಯಲ್ಲಿ ದೇವರ ರಾಜ್ಯದ ಕೆಳಗೆ ಚಾಲ್ತಿಯಲ್ಲಿರುವವು.
ಅಸ್ವಸ್ಥತೆ ಮತ್ತು ಮರಣ. “ಯೆಹೋವನು . . . ನಮ್ಮನ್ನು ರಕ್ಷಿಸುವನು,” ಎಂದು ಪ್ರವಾದಿ ಯೆಶಾಯನು ವಾಗ್ದಾನ ಮಾಡಿ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ಹೇಳಿದನು. (ಯೆಶಾಯ 33:22, 24) “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” ಎಂದು ಕ್ರೈಸ್ತ ಅಪೊಸ್ತಲ ಪೌಲನು ಒಪ್ಪಿಕೊಂಡನು.—ರೋಮಾಪುರ 6:23.
ಯೆಹೋವ ದೇವರು ಈ ಎಲ್ಲ ಕ್ಲೇಶಗಳನ್ನು ತನ್ನ ಕುಮಾರನಾದ ಕ್ರಿಸ್ತ ಯೇಸುವಿನ ವಶದಲ್ಲಿರುವ ತನ್ನ ಸ್ವರ್ಗೀಯ ರಾಜ್ಯದ ಮುಖೇನ ತೆಗೆದುಹಾಕುವನು. ಆದರೆ, “ಇದು ಅಸಾಧ್ಯಾದರ್ಶವಾದ ಸ್ವಪ್ನವೊಂದರಂತೆ ತೋರುತ್ತದೆ. ಇದು ನೆರವೇರುವುದಾದರೆ ಸಂತೋಷಕರವೇನೊ ನಿಜ, ಆದರೆ ನೆರವೇರುವುದೋ?” ಎಂದು ನೀವು ಕೇಳಬಹುದು.
ಪ್ರಚಲಿತ ವಾಸ್ತವಿಕತೆ
ಅನೇಕರಿಗೆ, ಇಲ್ಲಿ ಭೂಮಿಯ ಮೇಲಿನ ಕ್ಲೇಶಮುಕ್ತ ಪ್ರಮೋದವನವೊಂದರಲ್ಲಿ ಜೀವಿಸುವ ಸಾಧ್ಯತೆಯು ಅವಾಸ್ತವಿಕವಾದ ಆಶಾವಾದವಾಗಿ ಧ್ವನಿಸುತ್ತದೆ. ನಿಮಗೆ ಹಾಗೆನಿಸುವಲ್ಲಿ, ಇದು ನಿಜವಾಗಿಯೂ ಸಂಭವಿಸುವುದೆಂಬುದಕ್ಕಿರುವ ರುಜುವಾತನ್ನು ಪರೀಕ್ಷಿಸಿರಿ.
ಯೆಹೋವನ ಸಾಕ್ಷಿಗಳು 50 ಲಕ್ಷಗಳಿಗೂ ಹೆಚ್ಚು ಜನರಿರುವ ಒಂದು ಪ್ರಚಲಿತ ಅಂತಾರಾಷ್ಟ್ರೀಯ ಸಮಾಜವಾಗಿದ್ದಾರೆ. 233 ದೇಶಗಳಲ್ಲಿ ಹಬ್ಬಿರುವ ಅವರ 82,000 ಸಭೆಗಳಲ್ಲಿ ಈಗಾಗಲೇ ಸಾಪೇಕ್ಷವಾಗಿ ಕ್ಲೇಶಮುಕ್ತವಾದ ಪರಿಸರವಿದೆ. ನೀವು ಅವರ ಯಾವುದೇ ಒಟ್ಟುಗೂಡುವಿಕೆಗಳಿಗೆ—ದೊಡ್ಡದಾಗಿರಲಿ ಚಿಕ್ಕದಾಗಿರಲಿ—ಭೇಟಿಕೊಡುವಲ್ಲಿ, ಏನನ್ನು ಕಂಡುಕೊಳ್ಳುವಿರಿ?
(1) ಸುಖಕರವಾದ, ಶುದ್ಧ ವಾತಾವರಣ. ಇಂಗ್ಲೆಂಡ್ನ ನಾರ್ವಿಚ್ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಒಂದು ಅಧಿವೇಶನದ ಕುರಿತು, ಫುಟ್ಬಾಲ್ ಸ್ಟೇಡಿಯಮ್ನ ಮ್ಯಾನೇಜರ್ ಹೇಳಿದ್ದು: “ನಾಲ್ಕು ದಿನಗಳ ಆ ಶಾಂತ ವಾತಾವರಣವು . . . ಚಿತ್ತಾಕರ್ಷಕವಾದದ್ದಾಗಿದೆ. ನೀವು ಒಂದು ವ್ಯಕ್ತಿಗತವಾದ ಶಾಂತತೆಯನ್ನು ಅನುಭವಿಸುತ್ತೀರಿ. ಉದ್ರಿಕ್ತ ವ್ಯಾಪಾರ ಜಗತ್ತು ಮತ್ತು ನಮ್ಮ ಸುತ್ತಲಿನ ದೈನಂದಿನ ಜೀವನದ ಇನ್ನಾವ ನಾಲ್ಕು ದಿನಗಳಿಗಿಂತಲೂ ಇದು ತೀರ ವ್ಯತಿರಿಕ್ತವಾದದ್ದು. ಸಾಕ್ಷಿಗಳಲ್ಲಿ ನಿಜವಾಗಿ ಭಿನ್ನವಾದ ಮತ್ತು ವಿವರಿಸಲು ಕಷ್ಟವಾಗಿರುವ ಯಾವುದೊ ವಿಷಯವಿದೆ.”
ಯೆಹೋವನ ಸಾಕ್ಷಿಗಳ ಲಂಡನ್ ಆಫೀಸುಗಳಿಗೆ ಭೇಟಿಕೊಟ್ಟ ಒಬ್ಬ ನಿರ್ಮಾಣ ಉದ್ಯಮ ತರಬೇತು ಸಲಹೆಗಾರನು ಹೇಳಿದ್ದು: “ನಾನು ನೋಡಿ, ಕೇಳಿದ ವಿಷಯಗಳೆರಡರಿಂದಲೂ ತುಂಬ ಪ್ರಭಾವಿತನಾದೆ ಮತ್ತು ನಿಮ್ಮ ಕಟ್ಟಡಗಳಲ್ಲಿ ಮಾತ್ರವಲ್ಲ [ಸ್ತ್ರೀ ಪುರುಷರ] ಮಧ್ಯೆಯೂ ಇರುವ ಪೂರ್ತಿ ಶಾಂತಿ ಮತ್ತು ಸೌಹಾರ್ದತೆಯಿಂದಲೂ ತೀರ ಭಾವಪರವಶನಾದೆ. ನಿಮ್ಮ ಜೀವನ ರೀತಿ ಮತ್ತು ಸಂತೋಷಕ್ಕೆ ಈ ಕ್ಲೇಶ ತುಂಬಿದ ಉಳಿದ ಜಗತ್ತಿಗೆ ಕಲಿಸಲು ಎಷ್ಟೋ ವಿಷಯಗಳಿವೆಯೆಂದು ನನ್ನ ಭಾವನೆ.”
(2) ಭದ್ರತೆ ಮತ್ತು ಶಾಂತಿ. ಕೆನಡದ ಸೂರ್ನಾಲ್ ಡ ಮಾನ್ರೇಅಲ್ನ ಅಂಕಣಗಾರ್ತಿಯೊಬ್ಬಳು ಬರೆದುದು: “ನಾನು ಒಬ್ಬ ಸಾಕ್ಷಿಯಲ್ಲ. ಆದರೆ ಸಾಕ್ಷಿಗಳು ಕಾರ್ಯಸಾಧಕತೆ ಮತ್ತು ಯೋಗ್ಯ ವರ್ತನೆಗೆ ಸಾಕ್ಷಿಗಳೆಂಬ ನಿಜತ್ವಕ್ಕೆ ನಾನು ಸಾಕ್ಷ್ಯವಾಗಿದ್ದೇನೆ. . . . ಅವರು ಮಾತ್ರವೇ ಈ ಲೋಕದಲ್ಲಿರುತ್ತಿದ್ದಲ್ಲಿ, ನಾವು ರಾತ್ರಿಯಲ್ಲಿ ಕದಗಳಿಗೆ ಅಗುಳಿ ಹಾಕಬೇಕೆಂದಾಗಲಿ ಕನ್ನ ಎಚ್ಚರಿಕೆ ಘಂಟೆಗಳನ್ನು (ಬರ್ಗ್ಲರ್ ಅಲಾರ್ಮ್) ಇರಿಸಬೇಕೆಂದಾಗಲಿ ಇರುತ್ತಿರಲಿಲ್ಲ.”
(3) ದೇವರ ರಾಜ್ಯ ಸರಕಾರಕ್ಕೆ ನಿಷ್ಠೆಯು ಸಾಕ್ಷಿಗಳನ್ನು ವಿಶಿಷ್ಟೀಕರಿಸುತ್ತದೆ. ಅವರ ತಟಸ್ಥ ಸ್ಥಾನ ಕೆಲವರನ್ನು ಉದ್ರೇಕಿಸುತ್ತದಾದರೂ ಹಾಗಾಗಬೇಕೆಂದಿಲ್ಲ. ಈಗಿನ ತೇಪೆಹಾಕಿದ ರಾಜಕೀಯ ಯೋಜನೆಗಳಲ್ಲಿ ಅವರ ಅಂತರ್ಗತವಾಗದಿರುವಿಕೆಯು, ಸಮಾಜವನ್ನು ಸುಧಾರಿಸುವ ಬದ್ಧತೆಯ ಕೊರತೆಯಿಂದಾಗಿ ಬಂದಿರುವುದಿಲ್ಲ. ಬದಲಿಗೆ, ಸ್ವರ್ಗೀಯ ಸರಕಾರದ ಮೂಲಕ ಆಡಳಿತ ನಡೆಸುವಾತನನ್ನು, ಅಂದರೆ ಭೂಮಿಯ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಮೆಚ್ಚಿಸುವ ವಿಧದಲ್ಲಿ ಅವರು ವರ್ತಿಸಲು ಪ್ರಯತ್ನಿಸುತ್ತಾರೆ.
ದೇವರ ವಾಕ್ಯವಾದ ಬೈಬಲಿನಲ್ಲಿ ಪೂರ್ತಿಯಾಗಿ ಆಧಾರಗೊಂಡಿರುವ ಸಾಕ್ಷಿಗಳ ನಂಬಿಕೆಗಳು, ಅವರು ಒಂದು ಪಂಥ ಅಥವಾ ಒಂದು ಕುಪಂಥವಾಗುವ ಪಾಶಕ್ಕೆ ಬೀಳುವುದರಿಂದ ಅವರನ್ನು ತಡೆಗಟ್ಟುತ್ತವೆ. ಅವರು ಬೇರೆಲ್ಲ ಜನರಲ್ಲಿ—ಅವರು ಯಾವ ಧಾರ್ಮಿಕ ನಂಬಿಕೆಯವರೇ ಆಗಿರಲಿ—ದಯಾಪರ ಆಸಕ್ತಿಯನ್ನು ತೆಗೆದುಕೊಳ್ಳುತ್ತಾರೆ. ಇಲ್ಲ, ಜನರು ತಮ್ಮ ದೃಷ್ಟಿಕೋನವನ್ನು ಬದಲಾಯಿಸುವಂತೆ ಅವರು ಬಲಾತ್ಕರಿಸಲು ಪ್ರಯತ್ನಿಸುವುದಿಲ್ಲ. ಭೂಮಿಯ ಮೇಲೆ ಬೇಗನೆ ಒಂದು ಕ್ಲೇಶಮುಕ್ತ ಪ್ರಮೋದವನವು ಸ್ಥಾಪಿಸಲ್ಪಡುವುದು ಎಂಬುದಕ್ಕೆ ಅವರು ಶಾಸ್ತ್ರೀಯ ಪುರಾವೆಯನ್ನು ನೀಡುತ್ತ, ತಮ್ಮ ನಾಯಕನಾದ ಕ್ರಿಸ್ತ ಯೇಸುವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ.—ಮತ್ತಾಯ 28:19, 20; 1 ಪೇತ್ರ 2:21.
(4) ಆತ್ಮಿಕಾರೋಗ್ಯ ಮತ್ತು ಸಂತೋಷ. ವಸ್ತುಸ್ಥಿತಿ ಪರಿಜ್ಞಾನವುಳ್ಳವರಾಗಿ, ಈ ಸಮಯದಲ್ಲಿ ತಾವು ಪೂರ್ಣ ಕ್ಲೇಶಮುಕ್ತರಾಗಿರುತ್ತೇವೆಂದು ಯೆಹೋವನ ಸಾಕ್ಷಿಗಳು ವಾದಿಸುವುದಿಲ್ಲ. ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪದ ಚೊಕ್ಕಮುದ್ರೆಯನ್ನು ಧರಿಸಿರುವ ಜನರ ಮಧ್ಯೆ ಇದು ಅಸಾಧ್ಯ. ಆದರೆ ದೇವರ ಪವಿತ್ರಾತ್ಮದ ಸಹಾಯದಿಂದ ಅವರು, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”—ಇಂತಹ ವೈಯಕ್ತಿಕ ಗುಣಗಳನ್ನು ವಿಕಸಿಸುವರೆ ಕಾರ್ಯನಡೆಸುತ್ತಾರೆ. (ಗಲಾತ್ಯ 5:22, 23) ಕ್ರಿಸ್ತ ಯೇಸುವಿನ ಮೂಲಕ ಯೆಹೋವನಿಗೆ ಅವರು ಮಾಡುವ ಆರಾಧನೆಯೇ ಅವರನ್ನು ಐಕ್ಯಗೊಳಿಸಿ, ಅವರ ನಿರೀಕ್ಷೆಗಳನ್ನು ಸಜೀವವಾಗಿರಿಸುತ್ತದೆ.
ನೀವು ಸಾಕ್ಷಿಗಳ ಸ್ಥಳಿಕ ಸಭಾಗೃಹಕ್ಕೆ ಕೊಡುವ ಭೇಟಿಯು, ದೇವರು ಭೂಮಿಯನ್ನು ಒಂದು ಅಕ್ಷರಶಃ ಪ್ರಮೋದವನವನ್ನಾಗಿ ಮಾರ್ಪಡಿಸುವನೆಂಬುದನ್ನು ನಿಮಗೆ ಮನದಟ್ಟುಮಾಡುವುದೆಂದು ನಾವು ನಂಬುತ್ತೇವೆ.
ಈಗಿರುವ ಕ್ಲೇಶಗಳೊ ಇಲ್ಲದೆ ಹೋಗುವುವು. ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ವಿಧೇಯ ಮಾನವಕುಲಕ್ಕೆ ಅನ್ವಯಿಸಲ್ಪಟ್ಟಂತೆ, ಬಹುಕಾಲದಿಂದಿರುವ ಅಪರಿಪೂರ್ಣತೆಯೂ ಕ್ರಮೇಣ ಇಲ್ಲದೆ ಹೋಗುವುದು. ಹೌದು, ಪರಿಪೂರ್ಣ ಆರೋಗ್ಯ ಮತ್ತು ಸಂತೋಷ ನಿಮ್ಮದಾಗಿರಸಾಧ್ಯವಿದೆ.
ಇಂತಹ ಪ್ರತೀಕ್ಷೆಯನ್ನು ಅನುಭವಿಸಲು ಸರಳ ರೀತಿಯ ತಯಾರಿಗಳು ನಿಮಗೆ ಸಹಾಯಮಾಡುವುವು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ನಿಮ್ಮ ಸ್ವಂತ ಪ್ರತಿಗಾಗಿ ಸಾಕ್ಷಿಗಳನ್ನು ಕೇಳಿರಿ.a ಇದರಿಂದ ನೀವು ಸ್ವಲ್ಪ ಸಮಯದಲ್ಲೇ, ನೀವೂ ಕ್ಲೇಶಮುಕ್ತ ಪ್ರಮೋದವನದಲ್ಲಿ ಅನಂತವಾಗಿ ಜೀವನವನ್ನು ಅನುಭವಿಸಲಾಗುವಂತೆ ದೇವರು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿತುಕೊಳ್ಳಬಲ್ಲಿರಿ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಕಾಶನ.
[ಪುಟ 21 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೂರ್ತಿಯಾಗಿ ಬೈಬಲಿನ ಮೇಲೆ ಆಧಾರಿತವಾದ ಸಾಕ್ಷಿಗಳ ನಂಬಿಕೆಗಳು, ಅವರು ಒಂದು ಪಂಥ ಅಥವಾ ಒಂದು ಕುಪಂಥವಾಗುವ ಪಾಶಕ್ಕೆ ಬೀಳುವುದರಿಂದ ಅವರನ್ನು ತಡೆಗಟ್ಟುತ್ತವೆ
[Pictures on page 8, 9]
ಕ್ಲೇಶಮುಕ್ತ ಪ್ರಮೋದವನಕ್ಕಾಗಿ ತಳಪಾಯವು ಈಗಲೇ ಹಾಕಲ್ಪಡುತ್ತಿದೆ
ಬೇಗನೆ, ಭೌತಿಕ ಪ್ರಮೋದವನವೊಂದು ಭೂವ್ಯಾಪಕವಾಗಿ ಅಸ್ತಿತ್ವದಲ್ಲಿರುವುದು