ಲಕ್ಷಾಂತರ ಜನರು ಹೋಗಲಿರುವರು—ನೀವು ಹೋಗುವಿರೋ?
ಪ್ರತಿ ವರ್ಷ ಯೆಹೋವನ ಸಾಕ್ಷಿಗಳ ವಾರ್ಷಿಕ ಜಿಲ್ಲಾ ಅಧಿವೇಶನಗಳಿಗೆ, ಲೋಕದಾದ್ಯಂತ ಸುಮಾರು ಎಂಬತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಹಾಜರಾಗುತ್ತಾರೆ. ಈ ವರ್ಷ, ಭಾರತದಲ್ಲಿ 27 “ದೇವರ ಪ್ರವಾದನ ವಾಕ್ಯ” ಎಂಬ ಮೂರು ದಿನದ ಜಿಲ್ಲಾ ಅಧಿವೇಶನಗಳು ನಡೆಸಲ್ಪಡುವುವು. ಪ್ರಾಯಶಃ, ನೀವು ವಾಸಿಸುವ ಸ್ಥಳಕ್ಕೆ ಹತ್ತಿರದಲ್ಲಿಯೇ ಒಂದು ಅಧಿವೇಶನವು ನಡೆಯಬಹುದು. ಶುಕ್ರವಾರ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮವು ಸಂಗೀತದೊಂದಿಗೆ ಆರಂಭವಾಗುವಾಗ ನೀವು ಅಲ್ಲಿ ಉಪಸ್ಥಿತರಿರುವಂತೆ ನಾವು ಪ್ರೋತ್ಸಾಹಿಸುತ್ತೇವೆ.
ಬೆಳಗ್ಗಿನ ಕಾರ್ಯಕ್ರಮವು, ಸ್ವಾಗತ ಭಾಷಣ ಹಾಗೂ “ದೇವರ ಪ್ರವಾದನ ವಾಕ್ಯಕ್ಕೆ ಕಿವಿಗೊಡಿರಿ” ಎಂಬ ಮುಖ್ಯ ಭಾಷಣವನ್ನು ಒಳಗೊಂಡಿರುವುದು. ಮಧ್ಯಾಹ್ನದಲ್ಲಿ, “ದೇವರ ವಾಕ್ಯವನ್ನು ಓದುವುದರಲ್ಲಿ ಆನಂದವನ್ನು ಕಂಡುಕೊಳ್ಳಿರಿ” ಎಂಬ ಭಾಷಣಮಾಲೆಯು, ಬೈಬಲ್ ಓದುವಿಕೆಯನ್ನು ಹೇಗೆ ಪ್ರಯೋಜನಕಾರಿಯೂ ಉಲ್ಲಾಸದಾಯಕವೂ ಆಗಿ ಮಾಡುವುದು ಎಂಬದರ ಕುರಿತು ಪ್ರಾಯೋಗಿಕ ಸಲಹೆಗಳನ್ನು ಒದಗಿಸುವುದು. “ದೇವರ ವಿರುದ್ಧ ಹೋರಾಡುವವರು ಜಯಹೊಂದಲಾರರು” ಎಂಬ ಆ ದಿನದ ಸಮಾಪ್ತಿ ಭಾಷಣವು, ದೇವರ ರಾಜ್ಯದ ಘೋಷಕರ ವಿರುದ್ಧವಾಗಿ ಆಧುನಿಕ ಸಮಯಗಳಲ್ಲಿ ಮಾಡಲ್ಪಟ್ಟ ಹೋರಾಟವನ್ನು ಪುನರ್ವಿಮರ್ಶಿಸುವುದು.
ಶನಿವಾರ ಬೆಳಗ್ಗಿನ ಕಾರ್ಯಕ್ರಮದಲ್ಲಿ ದೀಕ್ಷಾಸ್ನಾನದ ಚರ್ಚೆಯು ಒಳಗೊಂಡಿರುತ್ತದೆ ಮತ್ತು ಅರ್ಹ ವ್ಯಕ್ತಿಗಳಿಗಾಗಿ ದೀಕ್ಷಾಸ್ನಾನದ ಅವಕಾಶವು ಒದಗಿಸಲ್ಪಡುವುದು. ಮಧ್ಯಾಹ್ನದ ಸಮಯದಲ್ಲಿ, ಲ್ಯಾಟಿನ್ ಅಮೆರಿಕ, ಆಫ್ರಿಕ, ಮತ್ತು ಪೂರ್ವ ಯೂರೋಪ್ ಹಾಗೂ ಏಷ್ಯಾದ ಬೃಹತ್ ದೇಶವಾದ ಕಸಾಕ್ಸ್ತಾನಿನಲ್ಲಿ ಬೈಬಲ್ ಸತ್ಯಕ್ಕೆ ಜನರು ತೋರಿಸುತ್ತಿರುವ ಅದ್ಭುತಕರವಾದ ಪ್ರತಿಕ್ರಿಯೆಯ ಬಗ್ಗೆ ಉತ್ತೇಜನಕಾರಿ ವರದಿಗಳನ್ನು ನೀಡಲಾಗುವುದು. “‘ಅಪೇಕ್ಷಣೀಯ ವಸ್ತುಗಳು’ ದೇವರ ಮನೆಯನ್ನು ತುಂಬುತ್ತಿವೆ” ಎಂಬುದು ಈ ಭಾಗದ ಶೀರ್ಷಿಕೆಯಾಗಿದೆ. “ಪ್ರವಾದನಾತ್ಮಕ ಶಾಸ್ತ್ರವಚನಗಳು ಜಾಗರೂಕರಾಗಿರುವಂತೆ ನಮ್ಮನ್ನು ಎಚ್ಚರಿಸುತ್ತದೆ” ಮತ್ತು “ಅಂತ್ಯದ ಸಮಯದಲ್ಲಿ ಪ್ರವಾದನಾತ್ಮಕ ವಾಕ್ಯ” ಎಂಬ ಎರಡು ಭಾಷಣಗಳೊಂದಿಗೆ ಶನಿವಾರದ ಕಾರ್ಯಕ್ರಮವು ಕೊನೆಗೊಳ್ಳುವುದು. ಕಡೆಯ ಭಾಷಣವು ದಾನಿಯೇಲನ ಬೈಬಲ್ ಪುಸ್ತಕದ ಮೇಲೆ ಕೇಂದ್ರೀಕರಿಸುವುದು ಮತ್ತು ಅದರ ಪ್ರವಾದನೆಗೆ ಗಮನವನ್ನು ಕೊಡುವುದಕ್ಕಾಗಿ ಕಾರಣಗಳನ್ನು ಒದಗಿಸುವುದು.
ಶನಿವಾರ ಬೆಳಗ್ಗೆ “ನೇಮಿತ ಸಮಯಕ್ಕಾಗಿ ಪ್ರವಾದನಾತ್ಮಕ ವಾಕ್ಯಗಳು” ಎಂಬ ಶೀರ್ಷಿಕೆಯುಳ್ಳ ಮೂರು ಭಾಗದ, ಒಂದು ತಾಸಿನ ಭಾಷಣಮಾಲೆಯು, ಹಬಕ್ಕೂಕನ ಪ್ರವಾದನೆಯನ್ನು ಚರ್ಚಿಸುವುದು. ಇಂದು ಕ್ರೈಸ್ತರಿಗೆ ಈ ಪುಟ್ಟ ಬೈಬಲ್ ಪುಸ್ತಕವು ಎಷ್ಟು ಉತ್ತೇಜನಕಾರಿಯಾಗಿ ಇರಸಾಧ್ಯವಿದೆ ಎಂಬುದನ್ನು ನೀವು ನೋಡಲಿರುವಿರಿ. ಆಮೇಲೆ, ಯಾಕೋಬ ಮತ್ತು ಏಸಾವನ ಬೈಬಲ್ ವೃತ್ತಾಂತವನ್ನು ಎತ್ತಿತೋರಿಸುವ ವೇಷಭೂಷಣದ ಡ್ರಾಮವು, “ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು” ಎಂಬ ಮುಖ್ಯವಿಷಯವನ್ನು ಎತ್ತಿತೋರಿಸುವುದು. ಭಾನುವಾರದ ಬೆಳಗ್ಗಿನ ಕಾರ್ಯಕ್ರಮವು “ನಮ್ಮ ಅಮೂಲ್ಯ ಪರಂಪರೆಯು ನಿಮಗೆ ಯಾವ ಅರ್ಥದಲ್ಲಿದೆ?” ಎಂಬ ಪ್ರಚೋದನಾತ್ಮಕ ಭಾಷಣದೊಂದಿಗೆ ಕೊನೆಗೊಳ್ಳುವುದು. ಅನಂತರ ಮಧ್ಯಾಹ್ನದ ಕಾರ್ಯಕ್ರಮದಲ್ಲಿ, “ಮುಂತಿಳಿಸಲ್ಪಟ್ಟಿರುವಂತೆ—ಸಕಲ ವಿಷಯಗಳನ್ನೂ ಹೊಸದು ಮಾಡುವುದು” ಎಂಬ ಸಾರ್ವಜನಿಕ ಭಾಷಣವನ್ನು ನೀವು ಸವಿಯಲಿರುವಿರಿ.
ಈ ಅಧಿವೇಶನಕ್ಕೆ ಹಾಜರಾಗಲು ಈಗಲೇ ಯೋಜನೆಗಳನ್ನು ಮಾಡಿರಿ. ನಿಮ್ಮ ಮನೆಗೆ ಹತ್ತಿರವಿರುವ ಅಧಿವೇಶನದ ಸ್ಥಳವನ್ನು ಕಂಡುಕೊಳ್ಳಲು, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಇಲ್ಲವೆ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರವನ್ನು ಬರೆಯಿರಿ.