ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g05 1/8 ಪು. 29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2005
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಿದುಳಿಗೆ ಅತಿಯಾದ ಭಾರ?
  • ಅತ್ಯಧಿಕ ಸಂಖ್ಯೆಯಲ್ಲಿ ಭಾಷಾಂತರವಾಗಿರುವ ಪುಸ್ತಕ
  • ಪುಟ್ಟ ಮಕ್ಕಳಿಗೆ ಟಿ.ವಿ. ಹಾನಿಕರವೊ?
  • ನಗುವು ಒಳ್ಳೇ ಔಷಧ
  • ನಾನು ಸಹ ಹಚ್ಚೆಹಾಕಿಸಿಕೊಳ್ಳಬೇಕೊ?
    ಎಚ್ಚರ!—2003
  • ಹಚ್ಚೆ ಹಾಕಿಸಿಕೊಳ್ಳುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
    ಎಚ್ಚರ!—1995
  • ಸಿಗರೇಟ್‌ಗಳು ನೀವು ಅವನ್ನು ನಿರಾಕರಿಸುತ್ತೀರೊ?
    ಎಚ್ಚರ!—1996
ಇನ್ನಷ್ಟು
ಎಚ್ಚರ!—2005
g05 1/8 ಪು. 29

ಜಗತ್ತನ್ನು ಗಮನಿಸುವುದು

ಮಿದುಳಿಗೆ ಅತಿಯಾದ ಭಾರ?

“ಒಂದೇ ಸಮಯದಲ್ಲಿ ತೀರ ಹೆಚ್ಚು ಕೆಲಸಗಳನ್ನು ಮಾಡುವುದರಿಂದ ಮಿದುಳಿಗೆ ಪ್ರಯಾಸವಾಗುತ್ತದೆ” ಎಂದು ಕೆಲವು ಸಂಶೋಧಕರು ಹೇಳುವುದನ್ನು ಕೆನಡದ ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವುದು, ಕಾರ್ಯದಕ್ಷತೆಯನ್ನು ಕಡಿಮೆಗೊಳಿಸುತ್ತದೆ, ತಪ್ಪುಗಳಲ್ಲೂ ಕಾಯಿಲೆಯಲ್ಲೂ ಪರಿಣಮಿಸುತ್ತದೆಂದು ಅಧ್ಯಯನಗಳು ಸೂಚಿಸುತ್ತವೆ. ಉದಾಹರಣೆಗೆ, ಅದು “ಜ್ಞಾಪಕಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಬೆನ್ನು ನೋವನ್ನು ಉಂಟುಮಾಡುತ್ತದೆ, ಫ್ಲೂ ಮತ್ತು ಅಜೀರ್ಣಕ್ಕೆ ಎಡೆಮಾಡುತ್ತದೆ, ಹಲ್ಲು ಹಾಗೂ ಒಸಡುಗಳಿಗೂ ಹಾನಿಮಾಡುತ್ತದೆ.” ಯು.ಎಸ್‌. ನ್ಯಾಷನಲ್‌ ಇನ್ಸ್‌ಟಿಟ್ಯೂಟ್ಸ್‌ ಆಫ್‌ ಹೆಲ್ತ್‌ ನಡೆಸಿರುವ ಅಧ್ಯಯನಗಳು ತೋರಿಸುವುದೇನೆಂದರೆ, ಜನರು ನಿರ್ದಿಷ್ಟ ಕೆಲಸಗಳನ್ನು ಮಾಡುವಾಗ ಮಿದುಳಿನ ಭಿನ್ನ ಭಿನ್ನ ಭಾಗಗಳು ಸಕ್ರಿಯವಾಗುತ್ತವೆ. ಆದರೆ ಒಂದೇ ಸಮಯದಲ್ಲಿ ಎರಡು ಅಥವಾ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸುವಾಗ, ಉದಾಹರಣೆಗೆ ಕಾರನ್ನು ಚಲಾಯಿಸುತ್ತಿರುವಾಗಲೇ ಮೊಬೈಲ್‌ ಫೋನ್‌ನಲ್ಲಿ ಮಾತಾಡುವಾಗ, “ಮಿದುಳು ವಾಸ್ತವದಲ್ಲಿ ಕೆಲಸಮಾಡುವುದನ್ನು ನಿಲ್ಲಿಸಲಾರಂಭಿಸುತ್ತದೆ” ಎಂದು ಎಮರಿ ವಿಶ್ವವಿದ್ಯಾನಿಲಯದಲ್ಲಿ ನರಶಾಸ್ತ್ರಜ್ಞರಾಗಿರುವ ಡಾ. ಜಾನ್‌ ಸ್ಲಾಡ್ಕೀ ಹೇಳುತ್ತಾರೆ. “ಮಿದುಳು ಅಂಥ ಕೆಲಸವನ್ನು ಮಾಡಲಾರದು ಮಾತ್ರವಲ್ಲ, ಅದನ್ನು ಮಾಡಲು ನಿರಾಕರಿಸುತ್ತದೆ.” ಸಂಶೋಧಕರಿಗನುಸಾರ, ಜನರು ತಮ್ಮ ಗತಿಯ ವೇಗವನ್ನು ಸ್ವಲ್ಪ ನಿಧಾನಿಸಿ, ತಮ್ಮ ಮಿದುಳು ತಾವು ಮಾಡಲು ಕೇಳುವಂಥದ್ದೆಲ್ಲವನ್ನೂ ಮಾಡಲಾರದೆಂಬ ವಾಸ್ತವಾಂಶವನ್ನು ಸ್ವೀಕರಿಸಬೇಕು.(g04 10/22)

ಅತ್ಯಧಿಕ ಸಂಖ್ಯೆಯಲ್ಲಿ ಭಾಷಾಂತರವಾಗಿರುವ ಪುಸ್ತಕ

ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಷಾಂತರವಾಗಿರುವ ಪುಸ್ತಕ ಎಂಬ ಸ್ಥಾನವನ್ನು ಬೈಬಲ್‌ ಈಗಲೂ ಹೊಂದಿರುತ್ತದೆ. ಅಸ್ತಿತ್ವದಲ್ಲಿರುವ ಸುಮಾರು 6,500 ಭಾಷೆಗಳಲ್ಲಿ, ಬೈಬಲ್‌ ಪೂರ್ಣವಾಗಿ ಇಲ್ಲವೆ ಭಾಗಶಃ 2,355 ಭಾಷೆಗಳಲ್ಲಿ ಲಭ್ಯವಿದೆ. ಅದು ಈಗ ಆಫ್ರಿಕದ 665 ಭಾಷೆಗಳಲ್ಲಿ, ಏಷ್ಯಾದ 585 ಭಾಷೆಗಳಲ್ಲಿ, ಓಷೀಯಾನಾದ 414 ಭಾಷೆಗಳಲ್ಲಿ, ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬ್ಯನ್‌ನ 404 ಭಾಷೆಗಳಲ್ಲಿ, ಯೂರೋಪಿನ 209 ಭಾಷೆಗಳಲ್ಲಿ ಮತ್ತು ಉತ್ತರ ಅಮೆರಿಕದ 75 ಭಾಷೆಗಳಲ್ಲಿ ಲಭ್ಯವಿದೆ. ‘ಯುನೈಟೆಡ್‌ ಬೈಬಲ್‌ ಸೊಸೈಟಿಸ್‌’ ಸದ್ಯಕ್ಕೆ ಸುಮಾರು 600 ಭಾಷೆಗಳಲ್ಲಿ ಬೈಬಲ್‌ ಭಾಷಾಂತರ ಕಾರ್ಯಯೋಜನೆಗಳಿಗೆ ನೆರವನ್ನು ನೀಡುತ್ತಿದೆ. (g04 12/8)

ಪುಟ್ಟ ಮಕ್ಕಳಿಗೆ ಟಿ.ವಿ. ಹಾನಿಕರವೊ?

“ಟಿ.ವಿ. ನೋಡುವ ತೀರ ಎಳೆಯ ಮಕ್ಕಳು ಶಾಲಾ ವಯಸ್ಸಿನವರಾಗುವಷ್ಟರಲ್ಲಿ ಗಮನ ರಹಿತ ದೋಷ ಎಂಬ ಸಮಸ್ಯೆಗಳುಳ್ಳವರಾಗುವ ಹೆಚ್ಚಿನ ಅಪಾಯವಿರುತ್ತದೆ” ಎಂದು ಮೆಕ್ಸಿಕೊ ಸಿಟಿಯ ದ ಹೆರಾಲ್ಡ್‌ ವರದಿಸುತ್ತದೆ. ಈ ವರದಿಯು, ಒಟ್ಟು 1,345 ಮಕ್ಕಳಿದ್ದ ಎರಡು ಗುಂಪುಗಳ​—⁠ಒಂದರಲ್ಲಿ ಒಂದು ವರ್ಷದ ಮಕ್ಕಳು ಮತ್ತೊಂದರಲ್ಲಿ ಮೂರು ವರ್ಷದ ಮಕ್ಕಳ​—⁠ಬಗ್ಗೆ ಪೀಡಿಯಾಟ್ರಿಕ್ಸ್‌ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಒಂದು ಅಧ್ಯಯನವನ್ನು ಉಲ್ಲೇಖಿಸುತ್ತದೆ. ಈ ಅಧ್ಯಯನಕ್ಕನುಸಾರ, ಆ ಮಕ್ಕಳು ದಿನನಿತ್ಯವೂ ಟಿ.ವಿ.ಯನ್ನು ನೋಡುತ್ತಿದ್ದ ಪ್ರತಿ ಒಂದು ತಾಸು, ಅವರು ಏಳು ವರ್ಷದವರಾಗುವಷ್ಟರಲ್ಲಿ ಗಮನದ ಸಮಸ್ಯೆಗಳನ್ನು ಅನುಭವಿಸುವ ಅಪಾಯಸಂಭವವನ್ನು 10 ಪ್ರತಿಶತ ಏರಿಸಿತು. “ಹೆಚ್ಚಿನ ಟಿ.ವಿ. ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿರುವ ಅವಾಸ್ತವಿಕ ವೇಗಗತಿಯುಳ್ಳ ದೃಶ್ಯ ಚಿತ್ರಗಳು” ಪುಟಾಣಿಗಳಲ್ಲಿ “ಸಾಧಾರಣವಾದ ಮಿದುಳು ವಿಕಸನವನ್ನು ಬಾಧಿಸಬಹುದು” ಎಂದು ಸಂಶೋಧಕರು ನಂಬುತ್ತಾರೆ. “ಮಕ್ಕಳು ಟಿ.ವಿ. ನೋಡಬಾರದೆಂಬುದಕ್ಕೆ ಬಹಳಷ್ಟು ಕಾರಣಗಳಿವೆ ಎಂಬುದು ಸತ್ಯ ಸಂಗತಿ” ಎಂದು ಆ ಅಧ್ಯಯನದ ಕರ್ತೃ ಡಾಕ್ಟರ್‌ ಡಿಮಿಟ್ರಿ ಕ್ರಿಸ್ಟಾಕಿಸ್‌ ಹೇಳಿದರು. “ಇತರ ಅಧ್ಯಯನಗಳು [ಟಿ.ವಿ. ವೀಕ್ಷಣೆಗೂ] ಬೊಜ್ಜುಮೈ ಮತ್ತು ಆಕ್ರಮಣಕಾರಿ ಸ್ವಭಾವಕ್ಕೂ ಸಂಬಂಧವಿರುವುದನ್ನು ತೋರಿಸಿವೆ.” (g04 12/22)

ನಗುವು ಒಳ್ಳೇ ಔಷಧ

“ನಗುವುದು ಏಕೆ ನಮ್ಮಲ್ಲಿ ಒಳ್ಳೇ ಭಾವನೆಯನ್ನು ಮೂಡಿಸುತ್ತದೆಂಬುದಕ್ಕೆ ಸ್ಟ್ಯಾನ್‌ಫೊರ್ಡ್‌ ವಿಶ್ವವಿದ್ಯಾಲಯದಲ್ಲಿರುವ ನರಶಾಸ್ತ್ರಜ್ಞರು ಇನ್ನೊಂದು ಕಾರಣವನ್ನು ಕಂಡುಹಿಡಿದಿದ್ದಾರೆ” ಎಂದು ಯು.ಸಿ. ಬರ್ಕ್ಲಿ ವೆಲ್ನೆಸ್‌ ಲೆಟರ್‌ ವರದಿಸುತ್ತದೆ. “ಹಾಸ್ಯಮಯ ಕಾರ್ಟೂನುಗಳನ್ನು ಓದುವ ಜನರ ಮಿದುಳಿನ ಚಟುವಟಿಕೆಯ ಮೇಲೆ ಅವರು ಗಮನವಿಟ್ಟರು ಮತ್ತು ಕಂಡುಕೊಂಡದ್ದೇನೆಂದರೆ ಹಾಸ್ಯ ಮತ್ತು ನಗುವುದು ಮಿದುಳಿನ ‘ಪ್ರತಿಫಲಕೊಡುವ ಕೇಂದ್ರಗಳನ್ನು’ ಕೆರಳಿಸುತ್ತದೆ.” ಈ ಕೇಂದ್ರಗಳು, ಚೋದಕ ಔಷಧಗಳು ಪ್ರಭಾವಬೀರುವಂಥ ಕ್ಷೇತ್ರಗಳೇ ಆಗಿವೆ. “ನಗುವುದು ದುಗುಡವನ್ನು ಕಡಿಮೆಗೊಳಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತ್ಮೋನ್ನತಿಮಾಡುತ್ತದೆ” ಎಂದು ವೆಲ್ನೆಸ್‌ ಲೆಟರ್‌ ಹೇಳುತ್ತದೆ. ನಗುವುದು ನಮ್ಮ ಹಾರ್ಮೋನುಗಳ ಉತ್ಪಾದನೆಯನ್ನು ಮತ್ತು ಹೃದಯಬಡಿತದ ಪ್ರಮಾಣವನ್ನು ಹೆಚ್ಚಿಸುತ್ತದೆ ಸಹ ಮತ್ತು ರಕ್ತಸಂಚಾರವನ್ನು ಹಾಗೂ ಮಾಂಸಖಂಡಗಳ ದಾರ್ಢ್ಯವನ್ನು ಉತ್ತಮಗೊಳಿಸುತ್ತದೆ. “ಹೌದು, ಮನಸಾರೆ ನಗುವುದು ಒಂದು ರೀತಿಯ ವ್ಯಾಯಾಮವಾಗಿದೆ” ಎಂದು ವೆಲ್ನೆಸ್‌ ಲೆಟರ್‌ ಹೇಳುತ್ತದೆ. ಆದರೆ “ಅದು ಬಹಳಷ್ಟು ಕ್ಯಾಲೊರಿಗಳನ್ನು ಕರಗಿಸುವುದಿಲ್ಲ. ನೀವು ಹೊಟ್ಟೆ ಹುಣ್ಣಾಗುವ ವರೆಗೆ ನಗಬಲ್ಲಿರಿ ಅಷ್ಟೇ, ತೆಳ್ಳಗಾಗುವ ವರೆಗೆ ಅಲ್ಲ.” (g04 12/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ