ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/07 ಪು. 19
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2007
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮನೋರೋಗಿಗಳಿಗೆ ವ್ಯವಸಾಯವೇ ಮದ್ದು
  • ಚೀನಾದಲ್ಲಿ ನೀರಿನ ಗೋಳು
  • ನೀವು ಯೆಹೋವನ ಸಾಕ್ಷಿಗಳಾ?
  • ಲೈಂಗಿಕತೆಗೆ ಪ್ರೇರಿಸುವ ಸಂಗೀತ
  • ನೀರು ಎಲ್ಲಿಗೆ ಹೋಗುತ್ತದೆ?
    ಎಚ್ಚರ!—2003
  • ಪ್ರೀತಿ ಪ್ರೇಮಗೀತಗಳಿಗೆ ಸಮಾನವೋ?
    ಎಚ್ಚರ!—1990
  • ನಾನು ಎಂಥಾ ಮ್ಯೂಸಿಕ್‌ ಮತ್ತು ಹಾಡನ್ನ ಕೇಳಿಸಿಕೊಳ್ತೀನಿ?
    ಯುವಜನರ ಪ್ರಶ್ನೆಗಳು
  • ಪ್ರಾಪಂಚಿಕ ಸಮೃದ್ಧಯು ಸಂತೋಷದ ಖಾತರಿಯನ್ನು ಕೊಡಬಲ್ಲದೊ?
    ಎಚ್ಚರ!—1994
ಇನ್ನಷ್ಟು
ಎಚ್ಚರ!—2007
g 7/07 ಪು. 19

ಜಗತ್ತನ್ನು ಗಮನಿಸುವುದು

◼ ಇಸವಿ 2005ರಲ್ಲಿ ಲೋಕವ್ಯಾಪಕವಾಗಿ 28 ದೊಡ್ಡ ಪ್ರಮಾಣದ ಯುದ್ಧಗಳು ಮತ್ತು 11 ಶಸ್ತ್ರಸಜ್ಜಿತ ಹೋರಾಟಗಳು ನಡೆದಿವೆ.​—⁠ವೈಟಲ್‌ ಸೈನ್ಸ್‌ 2006-2007, ವರ್ಲ್ಡ್‌ವಾಚ್‌ ಇನ್‌ಸ್ಟಿಟ್ಯೂಟ್‌.

◼ “ಫ್ರೋಫೈಲ್‌ ಸೈಟ್‌” ಎಂದು ಕರೆಯಲಾಗುವ ಇಂಟರ್‌ನೆಟ್‌ ಸೈಟ್ಸ್‌ನಲ್ಲಿ ಲಭ್ಯವಿರುವ ಕ್ಯಾಮರವನ್ನು ಬಳಸುವ 12ರಿಂದ 20 ವರ್ಷದ ಡಚ್‌ ಬಳಕೆದಾರರಲ್ಲಿ “40% ಹುಡುಗರು ಮತ್ತು 57% ಹುಡುಗಿಯರು, ಕ್ಯಾಮಾರದ ಎದುರಿಗೆ ಕೆಲವು ಲೈಂಗಿಕ ಕೃತ್ಯಗಳನ್ನು ನಡೆಸಲು ಅಥವಾ ತಮ್ಮ ಬಟ್ಟೆ ಕಳಚಲು ಕೇಳಲ್ಪಟ್ಟಿದ್ದರು ಎಂದು ವರದಿಯಾಗಿದೆ.”​—⁠ರೂಟ್ಗರ್ಸ್‌ ನಿಸ್ಸೂ ಗ್ರೂಪ್‌, ನೆದರ್ಲೆಂಡ್ಸ್‌. (g 4/07)

◼ ತಂತ್ರಜ್ಞಾನದ ಪ್ರಗತಿಯಿಂದಾಗಿ ಯು.ಎಸ್‌.ನಲ್ಲಿ ವಾರದ ಸರಾಸರಿ ಕೆಲಸವು ಒಂದು ಶತಮಾನದಲ್ಲಿ 38% ಕಡಿಮೆಯಾಗಿದೆ. ಆದರೂ ಉದ್ಯೋಗಸ್ಥರಿಗೆ ಹೆಚ್ಚಿನ ಬಿಡುವು ಸಿಗುತ್ತಿಲ್ಲ. ಕಾರಣ, ಕೆಲಸಕ್ಕೆ ಹೋಗಿಬರುವ ಸಮಯ, ಹೆಚ್ಚಿನ ವಯಸ್ಕರು ವ್ಯಾಸಂಗಕ್ಕಾಗಿ ವ್ಯಯಿಸುವ ಕಾಲಾವಧಿ ಹಾಗೂ ಹೆಚ್ಚುತ್ತಿರುವ ಮನೆಗೆಲಸವು ಈ ಉಳಿದ ಸಮಯವನ್ನೆಲ್ಲ ನುಂಗಿಬಿಡುತ್ತದೆ.​—⁠ಫಾರ್ಬ್ಸ್‌, ಯುನೈಟೆಡ್‌ ಸ್ಟೇಟ್ಸ್‌. (g 5/07)

◼ ಸ್ಟೀವನ್‌ ಹಾಕಿನ್ಸ್‌ ಎಂಬ ವಿಜ್ಞಾನಿ ಇಂಟರ್‌ನೆಟ್‌ನಲ್ಲಿ ಸಾರ್ವಜನಿಕವಾಗಿ ಈ ಪ್ರಶ್ನೆ ಹಾಕಿದರು: “ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಪರಿಸರೀಯವಾಗಿ ಅಸ್ತವ್ಯಸ್ತವಾಗಿರುವ ಲೋಕವೊಂದರಲ್ಲಿ ಮಾನವ ಜಾತಿಯು ಇನ್ನೊಂದು 100 ವರ್ಷಕಾಲ ಹೇಗೆ ಬದುಕಿ ಉಳಿದೀತು?” ಒಂದು ತಿಂಗಳ ತರುವಾಯ ಅವರು ಒಪ್ಪಿಕೊಂಡದ್ದು: “ನನಗೆ ಉತ್ತರ ತಿಳಿಯದು. ಜನರು ಅದರ ಕುರಿತು ಆಲೋಚಿಸಿ ನಾವು ಎದುರಿಸುವ ಅಪಾಯಗಳ ಬಗ್ಗೆ ಅರಿತುಕೊಳ್ಳುವ ಸಲುವಾಗಿ ನಾನು ಈ ಪ್ರಶ್ನೆಯನ್ನೆಬ್ಬಿಸಿದೆ.”​—⁠ದ ಗಾರ್ಡಿಯನ್‌, ಬ್ರಿಟನ್‌. (g 6/07)

ಮನೋರೋಗಿಗಳಿಗೆ ವ್ಯವಸಾಯವೇ ಮದ್ದು

ಇತ್ತೀಚೆಗೆ ನಾರ್ವೆಯ ಸ್ಟವಾಂಗರ್‌ನಲ್ಲಿ 14 ದೇಶಗಳಿಂದ 100ಕ್ಕೂ ಮಿಕ್ಕಿದ ತಜ್ಞರು ಗ್ರೀನ್‌-ಕೇರ್‌ ಕುರಿತು ಕಲಿಯಲು ಸೇರಿಬಂದಿದ್ದರು. ಇದು ವ್ಯವಸಾಯ, ಕಲಿಕೆ ಮತ್ತು ಆರೋಗ್ಯ ಆರೈಕೆಯ ಒಂದು ಯೋಜನೆ. ಎನ್‌ಆರ್‌ಕೆ ಬ್ರಾಡ್‌ಕಾಸ್ಟಿಂಗ್‌ ಕಂಪನಿಯು ಹೇಳುವ ಪ್ರಕಾರ, ವರ್ಷಗಳಿಂದ ಮನೋರೋಗಿಗಳಾಗಿದ್ದ ಕೆಲವರನ್ನು ವ್ಯವಸಾಯ ಮಾಡಲು ತೊಡಗಿಸಿದಾಗ ಅವರನ್ನು ಇನ್ನು ಮುಂದೆ ಚಿಕಿತ್ಸಾ ಸಂಸ್ಥೆಯಲ್ಲಿಡುವ ಅಗತ್ಯವಿರಲಿಲ್ಲ. ಏಕೆಂದರೆ ವ್ಯವಸಾಯವು “ತನುಮನಕ್ಕೆ ಆರೋಗ್ಯದಾಯಕವಾಗಿದೆ.” ನಾರ್ವೆಯ ಸುಮಾರು 600 ಕ್ಕಿಂತಲೂ ಹೆಚ್ಚು ವ್ಯವಸಾಯ ಜಮೀನುಗಳು ಗ್ರೀನ್‌-ಕೇರ್‌ನೊಂದಿಗೆ ಸಹಕರಿಸುತ್ತವೆ. ಇದರಿಂದ ರೈತರು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. (g 4/07)

ಚೀನಾದಲ್ಲಿ ನೀರಿನ ಗೋಳು

ಚೀನಾ ದೇಶವು “ಜಲಮಾಲಿನ್ಯ ಮತ್ತು ಶುದ್ಧ ನೀರಿನ ಅಭಾವದಿಂದ” ಸಂಕಟಪಡುತ್ತಿದೆ. ಅನೇಕ ನಗರಗಳಲ್ಲಿ ಮಲಿನ ಜಲವನ್ನು ಶುದ್ಧೀಕರಿಸುವ ಸೌಕರ್ಯಗಳು ಇವೆಯಾದರೂ ಅವುಗಳನ್ನು ನಡೆಸಲು ಬೇಕಾಗುವಷ್ಟು ಹಣ ಅವರಲ್ಲಿಲ್ಲ. “ಕಾರ್ಖಾನೆಗಳಿಂದ ಹಾಗೂ ಮನೆಗಳಿಂದ ಹೊರಬರುವ ಕೊಳಕು ನೀರಿನಿಂದಾಗಿ ಮತ್ತು ಹೊಲಗಳಲ್ಲಿ ಬಳಸುವ ಕೀಟನಾಶಕಗಳು ನೀರಿನೊಂದಿಗೆ ಸೇರುವುದರಿಂದಾಗಿ ದೇಶದ ಅಧಿಕಾಂಶ ನದಿಗಳು, ಸರೋವರಗಳು ಮತ್ತು ಕಾಲುವೆಗಳು ಮಲಿನಗೊಂಡಿವೆ” ಎಂದು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಸುತ್ತದೆ. ಅಲ್ಲದೆ, “ಸುಮಾರು 30 ಕೋಟಿ ಜನರಿಗೆ ಕುಡಿಯುವ ಶುದ್ಧ ನೀರು ಲಭ್ಯವಿಲ್ಲ.” ಸನ್ನಿವೇಶವು “ಚಿಂತಾಜನಕವಾಗಿದೆ” ಮತ್ತು ಹದಗೆಡುತ್ತಿದೆ ಎಂದು ಆ ಜರ್ನಲ್‌ ತಿಳಿಸುತ್ತದೆ. (g 5/07)

ನೀವು ಯೆಹೋವನ ಸಾಕ್ಷಿಗಳಾ?

ಕಳೆದ ವರ್ಷ ಇಟಲಿಯ ಎಲ್ಬ ದ್ವೀಪದ ಬೀಚ್‌ಗಳಲ್ಲಿ ಯುವ ಕ್ಯಾಥೊಲಿಕರು ಪ್ರವಾಸಿಗರನ್ನು ಮಾತಾಡಿಸಿದರು. ಈ ಯುವಕರು ಮಾಸಾ ಮಾರಿಟೀಮಾ ಪ್ಯಾಂಬೀನೋ ಪ್ರಾಂತದ ಬಿಷಪ್‌ರ ಆಮಂತ್ರಣವನ್ನು ಸ್ವೀಕರಿಸಿದವರಾಗಿದ್ದರು. ಕ್ರೈಸ್ತರಾಗಬೇಕಾದರೆ ಮತ್ತು ಕ್ರೈಸ್ತರಾಗಿ ಉಳಿಯಬೇಕಾದರೆ ಅವರು ತಮ್ಮ ನಂಬಿಕೆಯ ಕುರಿತು ಇತರರಿಗೆ ಸಾರಬೇಕೆಂದು ಬಿಷಪ್‌ ಅವರಿಗೆ ತಿಳಿಸಿದ್ದರು. ಯುವ ಕ್ಯಾಥೊಲಿಕರು ಹಾಗೇ ಮಾಡಿದಾಗ ಪ್ರವಾಸಿಗಳು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟರು. ಈಲ್‌ ಟೆಂಪೋ ಎಂಬ ವಾರ್ತಾ ಪತ್ರಿಕೆಗನುಸಾರ, ಹೆಚ್ಚಿನ ಪ್ರವಾಸಿಗಳು ಪ್ರತಿಕ್ರಿಯಿಸಿದ್ದು: “ನೀವು ಯೆಹೋವನ ಸಾಕ್ಷಿಗಳಾ?” (g 5/07)

ಲೈಂಗಿಕತೆಗೆ ಪ್ರೇರಿಸುವ ಸಂಗೀತ

“ಅಶ್ಲೀಲ, ಲೈಂಗಿಕ ಪದಗಳಿರುವ” ಸಂಗೀತವನ್ನು ಆಲಿಸುವ ಹದಿವಯಸ್ಕರು, “ಬೇರೆ ರೀತಿಯ ಸಂಗೀತವನ್ನು ಆಲಿಸುವವರಿಗಿಂತ ಹೆಚ್ಚು ಬೇಗ ಸಂಭೋಗದಲ್ಲಿ ಪಾಲ್ಗೊಳ್ಳುವುದು” ಸಂಭವನೀಯ ಎಂದು ಎಸೊಸಿಯೇಟೆಡ್‌ ಪ್ರೆಸ್‌ ವರದಿಸಿದ ಅಧ್ಯಯನವೊಂದು ತಿಳಿಸುತ್ತದೆ. “ಗಂಡಸರನ್ನು ವಿಷಯ ಲಂಪಟರೆಂದು ಮತ್ತು ಹೆಂಗಸರನ್ನು ಕಾಮುಕರ ಆಟಿಕೆಗಳೆಂದು ಚಿತ್ರಿಸುವ ಮತ್ತು ಸಂಭೋಗಗಳನ್ನು ಸ್ಪಷ್ಟವಾಗಿ ಹೆಸರಿಸಿ ಹೇಳುವ ಹಾಡುಗಳು ಲೈಂಗಿಕತೆಯನ್ನು ಬಲುಬೇಗನೇ ಉದ್ರೇಕಿಸುತ್ತವೆ. ಆದರೆ, ಲೈಂಗಿಕ ಸಂಭೋಗವನ್ನು ನೇರವಾಗಿ ಸೂಚಿಸಿ ಹೇಳದ ಹಾಗೂ ಗಂಡುಹೆಣ್ಣಿನ ಬಾಳುವ ಸಂಬಂಧವನ್ನು ತಿಳಿಸುವ ಹಾಡುಗಳು ಅಷ್ಟು ಉದ್ರೇಕಿಸುವುದಿಲ್ಲ” ಎಂದು ವರದಿಯು ತಿಳಿಸುತ್ತದೆ. “ಹೆತ್ತವರು, ಶಿಕ್ಷಕರು ಮತ್ತು ಹದಿಹರೆಯದವರು ತಾವೇ ಇಂಥ ಸಂದೇಶಗಳನ್ನು ಸಾರಿಹೇಳುವ ಸಂಗೀತದ ಪದಗಳ ಕುರಿತು ಹೆಚ್ಚು ಗಂಭೀರವಾಗಿ ಯೋಚಿಸಬೇಕು” ಎಂಬುದು ಆ ವರದಿಯಲ್ಲಿದ್ದ ಕಿವಿಮಾತಾಗಿತ್ತು. (g 5/07)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ