ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/10 ಪು. 8
  • ಸೂತ್ರ 6 ಕ್ಷಮಿಸಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೂತ್ರ 6 ಕ್ಷಮಿಸಿರಿ
  • ಎಚ್ಚರ!—2010
  • ಅನುರೂಪ ಮಾಹಿತಿ
  • ವೈವಾಹಿಕ ಜೀವನ ಕ್ಷಮಿಸೋದು ಹೇಗೆ?
    ಎಚ್ಚರ!—2013
  • 4 ಕ್ಷಮೆ
    ಎಚ್ಚರ!—2018
  • ವಿವಾಹದಲ್ಲಿ ನಿರಾಶೆಯ ಅಲೆಗಳೆದ್ದಾಗ
    ಎಚ್ಚರ!—2014
  • 3 ಗೌರವ
    ಎಚ್ಚರ!—2018
ಇನ್ನಷ್ಟು
ಎಚ್ಚರ!—2010
g 1/10 ಪು. 8

ಸೂತ್ರ 6 ಕ್ಷಮಿಸಿರಿ

“ಒಬ್ಬರನ್ನೊಬ್ಬರು ಸಹಿಸಿಕೊಂಡು . . . ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

ಅರ್ಥವೇನು? ಯಶಸ್ವೀ ವೈವಾಹಿಕ ಜೀವನ ನಡೆಸುತ್ತಿರುವ ದಂಪತಿಗಳು ತಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ಆದರೆ ಅವರು ಆ ತಪ್ಪುಗಳನ್ನೇ ಹಿಡಿದು ಪರಸ್ಪರರಿಗೆ, “ನೀನು ಯಾವಾಗಲೂ ತಡಮಾಡುತ್ತೀ,” “ನನ್ನ ಮಾತನ್ನು ಯಾವತ್ತಾದರೂ ಕೇಳಿದ್ದೀಯಾ?” ಎಂಬಂಥ ಸಾರಾಸಗಟಾದ ಹೇಳಿಕೆಗಳನ್ನು ಮಾಡುವುದಿಲ್ಲ. ಅದರ ಬದಲು, “ದೋಷವನ್ನು ಲಕ್ಷಿಸದಿರುವದು . . . ಭೂಷಣ” ಎಂಬ ಮಾತನ್ನು ಪತಿಪತ್ನಿ ಇಬ್ಬರೂ ಅನ್ವಯಿಸುತ್ತಾರೆ.—ಜ್ಞಾನೋಕ್ತಿ 19:11.

ಪ್ರಾಮುಖ್ಯವೇಕೆ? ದೇವರು ‘ಕ್ಷಮಿಸುವುದಕ್ಕೆ ಸಿದ್ಧನು.’ ಆದರೆ ಮನುಷ್ಯನು ಯಾವಾಗಲೂ ಹಾಗಲ್ಲ. (ಕೀರ್ತನೆ 86:5, NIBV) ಒಂದುವೇಳೆ ದಂಪತಿಗಳು ಮನಸ್ತಾಪಗಳನ್ನು ಕೂಡಲೇ ಇತ್ಯರ್ಥಮಾಡದೆ ಹೋದಲ್ಲಿ ಅವು ಒಂದೊಂದಾಗಿ ರಾಶಿಗೂಡುತ್ತಾ ಕ್ಷಮಿಸುವುದೇ ಅಸಾಧ್ಯವಾಗುವ ಹಂತಕ್ಕೆ ತಲಪಬಹುದು. ಪತಿಪತ್ನಿ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳದೆ, ಕಲ್ಲುಮನಸ್ಸಿನವರಾಗಿ ಇದ್ದುಬಿಡಬಹುದು. ಪ್ರೀತಿ ಬತ್ತಿಹೋಗಿರುವ ವೈವಾಹಿಕ ಬಂಧದಲ್ಲಿ ಸಿಕ್ಕಿಬಿದ್ದಿರುವ ಅನಿಸಿಕೆ ಇಬ್ಬರಿಗೂ ಆಗಬಹುದು.

ಹೀಗೆ ಮಾಡಿ. ಮದುವೆಯಾದ ಹೊಸದರಲ್ಲಿ ಇಲ್ಲವೆ ಮದುವೆಗೆ ಮುಂಚೆ ನಿಮ್ಮ ಸಂಗಾತಿಯೊಟ್ಟಿಗೆ ತೆಗೆದ ಹಳೇ ಫೋಟೋಗಳನ್ನು ನೋಡಿ. ಸಮಸ್ಯೆಗಳು ತಲೆದೋರಿ ಮುದುಡಿಹೋದ ನಿಮ್ಮ ಆ ಪ್ರೀತಿಯನ್ನು ಮತ್ತೆ ಅರಳುವಂತೆ ಮಾಡಿ. ಆರಂಭದಲ್ಲಿ ನಿಮ್ಮನ್ನು ನಿಮ್ಮ ಸಂಗಾತಿಯೆಡೆಗೆ ಸೆಳೆದಂಥ ಗುಣಗಳ ಬಗ್ಗೆ ಯೋಚಿಸಿ.

◼ ನಿಮ್ಮ ಸಂಗಾತಿಯ ಯಾವ ಗುಣಗಳನ್ನು ಈಗ ತುಂಬ ಮೆಚ್ಚುತ್ತೀರಿ?

◼ ನೀವು ಉದಾರವಾಗಿ ಕ್ಷಮಿಸುವುದರಿಂದ ನಿಮ್ಮ ಮಕ್ಕಳ ಮೇಲಾಗುವ ಒಳ್ಳೇ ಪರಿಣಾಮಗಳ ಬಗ್ಗೆ ಯೋಚಿಸಿರಿ.

ದೃಢನಿರ್ಣಯ ಮಾಡಿ. ನಿಮ್ಮ ಸಂಗಾತಿಯೊಟ್ಟಿಗೆ ಏನಾದರೂ ಮನಸ್ತಾಪವಾದಲ್ಲಿ, ಹಳೆಯದನ್ನೆಲ್ಲ ಕೆದಕಿ ಹಂಗಿಸದಿರಲು ಒಂದೆರಡು ಮಾರ್ಗಗಳನ್ನು ಯೋಚಿಸಿ.

ಸಂಗಾತಿಯಲ್ಲಿ ನಿಮಗಿಷ್ಟವಾದ ಗುಣಗಳಿಗಾಗಿ ಅವರನ್ನು ಹೊಗಳಬಾರದೇಕೆ?—ಜ್ಞಾನೋಕ್ತಿ 31:28, 29.

ಮಕ್ಕಳ ಎದುರಲ್ಲಿ ಯಾವೆಲ್ಲಾ ವಿಧಗಳಲ್ಲಿ ಕ್ಷಮೆತೋರಿಸಬಹುದೆಂದು ಯೋಚಿಸಿ.

ಕ್ಷಮೆ ಮತ್ತು ಅದರಿಂದ ಮನೆಮಂದಿಗೆಲ್ಲ ಸಿಗುವ ಪ್ರಯೋಜನಗಳ ಬಗ್ಗೆ ನಿಮ್ಮ ಮಕ್ಕಳೊಂದಿಗೆ ಚರ್ಚಿಸಬಹುದಲ್ಲವೇ? (g09-E 10)

[ಪುಟ 8ರಲ್ಲಿರುವ ಚಿತ್ರ]

ಕ್ಷಮಿಸುವುದು ಸಾಲ ಮನ್ನಾ ಮಾಡಿದಂತೆ. ನೀವದನ್ನು ಹಿಂದೆ ಕೇಳುವಂತಿಲ್ಲ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ