ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/13 ಪು. 16
  • ಆ್ಯಗಮ ಹಲ್ಲಿಯ ಅದ್ಭುತ ಬಾಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆ್ಯಗಮ ಹಲ್ಲಿಯ ಅದ್ಭುತ ಬಾಲ
  • ಎಚ್ಚರ!—2013
  • ಅನುರೂಪ ಮಾಹಿತಿ
  • ಸಮುದ್ರ ಕುದುರೆಯ ಬಾಲ
    ವಿಕಾಸವೇ? ವಿನ್ಯಾಸವೇ?
  • ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು
    ಎಚ್ಚರ!—2006
ಎಚ್ಚರ!—2013
g 4/13 ಪು. 16

ವಿಕಾಸವೇ? ವಿನ್ಯಾಸವೇ?

ಆ್ಯಗಮ ಹಲ್ಲಿಯ ಅದ್ಭುತ ಬಾಲ

ಆ್ಯಗಮ ಹಲ್ಲಿ ಬಹಳ ಸಲೀಸಾಗಿ ನೆಲದಿಂದ ಗೋಡೆ ಅಥವಾ ಮರಕ್ಕೆ ಜಿಗಿಯುತ್ತೆ. ಆದರೆ ನೆಲ ಜಾರುವಂತಿದ್ದರೆ ಹಲ್ಲಿಯ ಆಯ ತಪ್ಪುವ ಸಾಧ್ಯತೆ ಇದೆ. ಆದರೂ ಸುರಕ್ಷಿತವಾಗಿ ಹಾರಿ ಗೋಡೆಯನ್ನು ಹಿಡಿದುಕೊಳ್ಳುತ್ತೆ. ಹೇಗೆ? ಹಲ್ಲಿಯ ಬಾಲದಲ್ಲಿದೆ ಅದರ ಗುಟ್ಟು.

ಪರಿಗಣಿಸಿ: ಒರಟು ನೆಲದಲ್ಲಿ ಹಲ್ಲಿಗೆ ಹಿಡಿತ ಸಿಗುತ್ತೆ. ಅಂಥ ನೆಲದಿಂದ ಜಿಗಿಯುವಾಗ ಆ್ಯಗಮ ಹಲ್ಲಿ ಮೊದಲು ದೇಹವನ್ನು ಒಂದೇ ಮಟ್ಟದಲ್ಲಿರಿಸಿಕೊಳ್ಳುತ್ತೆ ಮತ್ತು ಬಾಲವನ್ನು ಕೆಳಮುಖವಾಗಿಟ್ಟು ಹಾರುತ್ತೆ. ಇದರಿಂದ ಸರಿಯಾದ ದಿಕ್ಕಿಗೆ ಹಾರಲು ಹಲ್ಲಿಗೆ ಸಹಾಯವಾಗುತ್ತೆ. ಆದರೆ ಜಾರುವ ನೆಲದಿಂದ ಜಿಗಿಯುವಾಗ ಮುಗ್ಗರಿಸಬಹುದು ಮತ್ತು ತಪ್ಪಾದ ದಿಕ್ಕಿಗೆ ಹಾರಬಹುದು. ಹಾಗಾಗಿ ಜಾರುವ ನೆಲದಿಂದ ಹಾರುವಾಗ ಆ್ಯಗಮ ಹಲ್ಲಿ ಏನು ಮಾಡುತ್ತೆ ಅಂದರೆ ಗಾಳಿಯಲ್ಲಿರುವಾಗಲೇ ಸರ್ರನೆ ಬಾಲವನ್ನು ಮೇಲಕ್ಕೆತ್ತಿ ದೇಹವನ್ನು ಸರಿಯಾದ ದಿಕ್ಕಿನೆಡೆಗೆ ಇರಿಸುತ್ತೆ. ಬಾಲದ ಈ ಚಲನೆ ತುಂಬ ಜಟಿಲ. “ತಮ್ಮ ದೇಹವನ್ನು ಸರಿಯಾದ ಮಟ್ಟದಲ್ಲಿ ಇರಿಸಿಕೊಳ್ಳಲು ಹಲ್ಲಿಗಳು ಆಗಾಗ್ಗೆ ತಮ್ಮ ಬಾಲದ ದಿಕ್ಕನ್ನು ಸರಿಪಡಿಸುತ್ತಿರಬೇಕು” ಎನ್ನುತ್ತೆ ಬರ್ಕ್ಲೆಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಒಂದು ವರದಿ. ನೆಲ ಎಷ್ಟು ಹೆಚ್ಚು ಜಾರುವಂತಿರುತ್ತೋ ಅದಕ್ಕೆ ತಕ್ಕಂತೆ ಹಲ್ಲಿ ತನ್ನ ಬಾಲವನ್ನು ಮೇಲಕ್ಕೆತ್ತಿದರೆ ಮಾತ್ರ ಸುರಕ್ಷಿತವಾಗಿ ಗೋಡೆಯನ್ನು ಮುಟ್ಟುತ್ತೆ.

ಆ್ಯಗಮ ಹಲ್ಲಿಯ ಬಾಲದ ವಿನ್ಯಾಸ ಇಂಜಿನಿಯರರಿಗೆ ಸಹಾಯಕ್ಕೆ ಬರಬಹುದು. ಭೂಕಂಪ ಅಥವಾ ದುರಂತಗಳು ಸಂಭವಿಸಿದ ನಂತರ ಬದುಕುಳಿದವರನ್ನು ಹುಡುಕುವ ಕೆಲಸಕ್ಕಾಗಿ ಅತ್ಯಂತ ಚುರುಕಿನ ರೊಬೋಟಿಕ್‌ ವಾಹನಗಳನ್ನು ತಯಾರಿಸಲು ಈ ಹಲ್ಲಿಯ ಬಾಲದ ವಿನ್ಯಾಸ ಉಪಯುಕ್ತ. “ರೋಬೋಟುಗಳು ಪ್ರಾಣಿಗಳ ತರ ಚುರುಕಾಗಿರಲ್ಲ. ಹಾಗಾಗಿ ರೋಬೋಟುಗಳು ಒಂದೇ ಮಟ್ಟದಲ್ಲಿ ಚಲಿಸಲು ಏನಾದರೂ ಆವಿಷ್ಕಾರಗೊಂಡರೆ ಅದು ನಿಜಕ್ಕೂ ಉತ್ತಮ ಪ್ರಗತಿ” ಎನ್ನುತ್ತಾರೆ ಸಂಶೋಧಕರಾದ ಥಾಮಸ್‌ ಲಿಬಿ.

ನೀವೇನು ನೆನಸುತ್ತೀರಿ? ಆ್ಯಗಮ ಹಲ್ಲಿಯ ಬಾಲ ವಿಕಾಸವಾಗಿ ಬಂತೇ? ಸೃಷ್ಟಿಕರ್ತ ವಿನ್ಯಾಸಿಸಿದರೇ? ◼ (g13-E 02)

[ಪುಟ 16ರಲ್ಲಿರುವ ಚಿತ್ರ]

[ಕೃಪೆ]

© Ariadne Van Zandbergen

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ