ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/15 ಪು. 7
  • ವಿಶ್ವ-ವೀಕ್ಷಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಶ್ವ-ವೀಕ್ಷಣೆ
  • ಎಚ್ಚರ!—2015
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಮೆರಿಕ
  • ಭಾರತ
  • ಸ್ವಿಟ್ಜರ್ಲೆಂಡ್‌
  • ಹಾರ್ನ್‌ ಆಫ್‌ ಆಫ್ರಿಕ
  • ಪರಿವಿಡಿ
    ಎಚ್ಚರ!—2012
  • ಪರಿವಿಡಿ
    ಎಚ್ಚರ!—2012
  • ವಿಶ್ವ-ವೀಕ್ಷಣೆ
    ಎಚ್ಚರ!—2013
  • 2012ರಲ್ಲಿ ಭೂಮಿ ನಾಶವಾಗುವುದೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಎಚ್ಚರ!—2015
g 1/15 ಪು. 7

ವಿಶ್ವ-ವೀಕ್ಷಣೆ

ಅಮೆರಿಕ

ಅಪರಾಧಿಯ ವಾಹನದ ಬಗ್ಗೆ ಜಿಪಿಎಸ್‌ ಸಹಾಯದಿಂದ ಸುಳಿವು ಕೊಡುವ ಸಾಧನವನ್ನು ವಾಹನಕ್ಕೆ ಅಳವಡಿಸಲಾಗಿದೆ

ಪೊಲೀಸರು ಕಾರ್‌ಗಳನ್ನು ಬೆನ್ನಟ್ಟಿ ಹೋಗುವಾಗ ಆಗಬಹುದಾದ ಅಪಾಯಗಳನ್ನು ತಡೆಯಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಉದಾಹರಣೆಗೆ, ಅಪರಾಧಿಯ ಕಾರ್‌ ಎಲ್ಲಿ ಹೋಗುತ್ತಿದೆ ಎಂದು ಜಿಪಿಎಸ್‌ ಸಹಾಯದಿಂದ ಸುಳಿವು ಕೊಡುವ ಸಾಧನ ಒಂದಿದೆ. ಇದನ್ನು ಉಡಾಯಿಸುವ ಒಂದು ಯಂತ್ರವನ್ನು ಪೊಲೀಸರ ಕಾರ್‌ಗಳಿಗೆ ಅಳವಡಿಸಲಾಗುತ್ತದೆ. ಉಡಾಯಿಸುವಾಗ ಈ ಸಾಧನ ಅಪರಾಧಿಯ ಕಾರ್‌ಗೆ ಅಂಟಿಕೊಳ್ಳುತ್ತದೆ. ಆಗ ಪೊಲೀಸರು ಆ ಕಾರನ್ನು ಹಿಡಿಯಲು ಅತಿಯಾದ ವೇಗದಲ್ಲಿ ಬೆನ್ನಟ್ಟಬೇಕಾಗಿಲ್ಲ.

ಭಾರತ

ಭಾರತೀಯ ಮಹಿಳೆ

ವರದಕ್ಷಿಣೆಯ ಕಾರಣ ಪ್ರತಿ ಗಂಟೆಗೆ ಒಬ್ಬ ಮಹಿಳೆಯನ್ನು ಕೊಲ್ಲಲಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ವರದಕ್ಷಿಣೆಯನ್ನು ಕೊಡುವುದು ಅಥವಾ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು. ಆದರೂ ಹೆಣ್ಣಿನ ಕಡೆಯವರು ಕೊಟ್ಟ ವರದಕ್ಷಿಣೆ ಕಡಿಮೆಯಾಯಿತು ಎಂದು ವರ ಅಥವಾ ಅವನ ಕುಟುಂಬದವರಿಗೆ ಅನಿಸಿದ್ದರಿಂದ 2012⁠ರಲ್ಲಿ 8,200ಷ್ಟು ಮಹಿಳೆಯರ ಕೊಲೆ ಆಗಿದೆ.

ಸ್ವಿಟ್ಜರ್ಲೆಂಡ್‌

ಆಲ್ಪೈನ್‌ ಸ್ವಿಫ್ಟ್‌

ಆಲ್ಪೈನ್‌ ಹಕ್ಕಿಗಳು ಮೊಟ್ಟೆ ಇಡುವ ಜಾಗಕ್ಕೆ ಬಂದಾಗ ಅದರಲ್ಲಿ ಮೂರು ಹಕ್ಕಿಗಳಿಗೆ ಚಿಕ್ಕ ಸಂವೇದಕ ಸಾಧನಗಳನ್ನು ಜೋಡಿಸಲಾಯಿತು. ಇದರಿಂದ ತಿಳಿದುಬಂದ ವಿಷಯ ಏನೆಂದರೆ, ಆಫ್ರಿಕ ದೇಶಕ್ಕೆ ವಲಸೆ ಹೋಗುವಾಗ ಈ ಹಕ್ಕಿಗಳು 200ಕ್ಕೂ ಹೆಚ್ಚು ದಿನ ಎಲ್ಲೂ ನಿಲ್ಲದೆ ಹಾರಿದವು. ಇದಕ್ಕೂ ಮುಂಚೆ ಇಷ್ಟು ದೂರ ಬಿಡುವಿಲ್ಲದೆ ವಲಸೆ ಹೋಗಿರುವುದು ಜಲಚರಗಳು ಮಾತ್ರ ಎಂದು ವರದಿಸಲಾಗಿತ್ತು.

ಹಾರ್ನ್‌ ಆಫ್‌ ಆಫ್ರಿಕ

ಎಷ್ಟು ಹಡಗುಗಳನ್ನು ಅಪಹರಿಸಲಾಗಿದೆ ಮತ್ತು ಅವನ್ನು ಬಿಡಿಸಲು ಎಷ್ಟು ಹಣ ಕೊಡಬೇಕಾಯಿತೆಂದು ತೋರಿಸುವ ರೇಖಾಚಿತ್ರ

ಏಪ್ರಿಲ್‌ 2005ರಿಂದ ಡಿಸೆಂಬರ್‌ 2012⁠ರ ಮಧ್ಯದಲ್ಲಿ ಹಾರ್ನ್‌ ಆಫ್‌ ಆಫ್ರಿಕದ ಕರಾವಳಿ ಪ್ರದೇಶದ ಹತ್ತಿರ ಇರುವ ಸಮುದ್ರದಲ್ಲಿ ಕಡಲುಗಳ್ಳರು 179 ಹಡಗುಗಳನ್ನು ಅಪಹರಿಸಿದರು. ವರ್ಲ್ಡ್‌ ಬ್ಯಾಂಕ್‌ನ ಅಧ್ಯಯನ ತಿಳಿಸುವಂತೆ ಈ ಅಪರಾಧದಲ್ಲಿ ಒಳಗೂಡಿದ್ದ ಕಡಲುಗಳ್ಳರಿಗೆ 413 ಮಿಲಿಯನ್‌ ಡಾಲರ್‌ (ಸುಮಾರು 2,500 ಕೋಟಿ ರೂಪಾಯಿ) ಕೊಟ್ಟು ಹಡಗುಗಳನ್ನು ಬಿಡಿಸಲಾಯಿತು. (g14-E 10)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ