ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/15 ಪು. 16
  • ಕುದುರೆಯ ಕಾಲು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುದುರೆಯ ಕಾಲು
  • ಎಚ್ಚರ!—2015
  • ಅನುರೂಪ ಮಾಹಿತಿ
  • ನಾಲ್ಕು ರಾಹುತರು ನಾಗಾಲೋಟದಲ್ಲಿ!
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
ಎಚ್ಚರ!—2015
g 1/15 ಪು. 16
ದೌಡಾಯಿಸುತ್ತಿರುವ ಕುದುರೆಗಳು

ವಿಕಾಸವೇ?

ಕುದುರೆಯ ಕಾಲು

ಕುದುರೆ (ಇಕ್ವಸ್‌ ಕ್ಯಾಬಲಸ್‌) ಒಂದು ತಾಸಿಗೆ 50 ಕಿ.ಮಿ. ವೇಗದಲ್ಲಿ ದೌಡಾಯಿಸುತ್ತದೆ. ಇಷ್ಟು ವೇಗವಾಗಿ ಓಡುವುದಕ್ಕೆ ಅದು ತುಂಬ ಶ್ರಮ ಹಾಕಬೇಕಾದರೂ ಹೆಚ್ಚು ಶಕ್ತಿ ಬೇಕಾಗಿಲ್ಲ. ಇದರ ರಹಸ್ಯ? ಅದರ ಕಾಲುಗಳು.

ಕುದುರೆ ಓಡುವಾಗ ಏನಾಗುತ್ತದೆ ನೋಡಿ. ಅದರ ಕಾಲುಗಳಲ್ಲಿ ಇಲ್ಯಾಸ್ಟಿಕ್‌ನಂತಿರುವ ಸ್ನಾಯು-ತಂತುಗಳಿವೆ. ಕುದುರೆಯ ಕಾಲು ನೆಲಮುಟ್ಟುವಾಗ ಈ ಸ್ನಾಯು-ತಂತುಗಳು ಶಕ್ತಿಯನ್ನು ಹೀರಿಕೊಂಡು ಸ್ಪ್ರಿಂಗಿನಂತೆ ಆ ಶಕ್ತಿಯನ್ನು ನೆಲಕ್ಕೆ ವಾಪಸ್ಸು ಹಿಂತಿರುಗಿಸುತ್ತದೆ. ಹೀಗೆ ಕುದುರೆ ಮುಂದಕ್ಕೆ ಓಡುತ್ತದೆ.

ಕುದುರೆ ದೌಡಾಯಿಸುವಾಗ ಅದರ ವೇಗಕ್ಕೆ ಅದರ ಕಾಲುಗಳು ಎಷ್ಟು ಕಂಪಿಸುತ್ತವೆ ಎಂದರೆ ಕಾಲುಗಳ ಸ್ನಾಯು-ತಂತುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಆದರೆ ಯಾಕೆ ಆಗಲ್ಲ? ಯಾಕೆಂದರೆ ಅದರ ಕಾಲುಗಳಲ್ಲಿರುವ ಸ್ನಾಯು ಷಾಕ್‌ ಅಬ್ಸಾರ್ಬರ್‌ನಂತೆ ಕೆಲಸ ಮಾಡುತ್ತದೆ. ಈ ರಚನೆಯನ್ನು ಸಂಶೋಧಕರು “ಅತ್ಯಂತ ವಿಶಿಷ್ಟ ಸ್ನಾಯು-ತಂತು ವಿನ್ಯಾಸ” ಎಂದು ಕರೆಯುತ್ತಾರೆ. ಇದು ಕುದುರೆಯ ಕಾಲುಗಳಿಗೆ ವೇಗ ಹಾಗೂ ಶಕ್ತಿಯನ್ನು ಕೊಡುತ್ತದೆ.

ನಾಲ್ಕು ಕಾಲಿರುವ ರೊಬೋಟುಗಳಲ್ಲಿ ಕುದುರೆಯ ಕಾಲುಗಳ ವಿನ್ಯಾಸವನ್ನು ನಕಲುಮಾಡಲು ಇಂಜಿನಿಯರರು ಪ್ರಯತ್ನಿಸುತ್ತಿದ್ದಾರೆ. ‘ಬಯೋಮಿಮೆಟಿಕ್‌ ರೊಬೋಟಿಕ್ಸ್‌ ಲ್ಯಾಬೋರೆಟರಿ ಆಫ್‌ ದ ಮಸಾಚುಸೆಟ್ಸ್‌ ಇನ್‌ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ’ ಪ್ರಕಾರ ಸದ್ಯಕ್ಕೆ ಲಭ್ಯವಿರುವ ವಸ್ತುಗಳಿಂದ ಹಾಗೂ ಯಂತ್ರಶಿಲ್ಪ ವಿಜ್ಞಾನದಿಂದ ಕುದುರೆ ಕಾಲುಗಳ ಜಟಿಲ ವಿನ್ಯಾಸವನ್ನು ನಕಲುಮಾಡುವುದು ಕಷ್ಟ.

ನೀವೇನು ನೆನಸುತ್ತೀರಿ? ಕುದುರೆ ಕಾಲುಗಳ ರಚನೆ ಆಗಿರುವುದು ವಿಕಾಸದಿಂದಲಾ? ಅಥವಾ ಅದು ಸೃಷ್ಟಿಕರ್ತನ ವಿನ್ಯಾಸವೇ? ◼ (g14-E 10)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ