ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/15 ಪು. 12-13
  • ಕಷ್ಟವಾದರೂ ಕ್ಷಮೆ ಕೇಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಷ್ಟವಾದರೂ ಕ್ಷಮೆ ಕೇಳಿ
  • ಎಚ್ಚರ!—2015
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಸ್ಯೆ
  • ನಾನ್ಯಾಕೆ ಸ್ವಾರಿ ಕೇಳ್ಬೇಕು?
    ಯುವಜನರ ಪ್ರಶ್ನೆಗಳು
  • ನೀವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ?
    ಕಾವಲಿನಬುರುಜು—1996
  • ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಕ್ಷಮೆಯಾಚಿಸುವುದು ಅಷ್ಟು ಕಷ್ಟಕರವೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಎಚ್ಚರ!—2015
g 10/15 ಪು. 12-13
ಕೋಪದಿಂದ ಬೇರೆಲ್ಲೋ ನೋಡುತ್ತಿರುವ ಹೆಂಡತಿ ಹತ್ತಿರ ಗಂಡನು ಮಾತಾಡುತ್ತಿದ್ದಾನೆ

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ಕಷ್ಟವಾದರೂ ಕ್ಷಮೆ ಕೇಳಿ

ಸಮಸ್ಯೆ

ಈಗಷ್ಟೇ ನಿಮ್ಮಿಬ್ಬರ ಮಧ್ಯ ಜಗಳ ಆಗಿದೆ. ಆಗ, ‘ನಾನ್ಯಾಕೆ ಕ್ಷಮೆ ಕೇಳ್ಬೇಕು? ಎಲ್ಲ ಅವಳಿಂದನೇ/ಅವರಿಂದನೇ ಆಗಿದ್ದು’ ಅಂತ ನಿಮಗನಿಸುತ್ತೆ.

ಆಗಿದ್ದು ಆಗೋಯ್ತು, ಬಿಟ್ಟುಬಿಡೋಣ ಅಂತ ಅಂದುಕೊಂಡರೂ ಮನಸ್ಸಿಗೆ ಸಮಾಧಾನನೇ ಇಲ್ಲ. ಕ್ಷಮೆ ಕೇಳೋಣ ಅಂತ ಅಂದುಕೊಂಡರೂ ಯಾಕೋ ‘ಕ್ಷಮಿಸು’ ಅಂತ ಹೇಳೋಕೆ ಬಾಯೇ ಬರ್ತಾ ಇಲ್ಲ.

ಯಾಕೆ ಹೀಗಾಗುತ್ತೆ?

ಸ್ವಾಭಿಮಾನ. “ಕೆಲವೊಮ್ಮೆ ಕ್ಷಮೆ ಕೇಳೋಕೆ ನನ್ನ ಸ್ವಾಭಿಮಾನ ಅಡ್ಡ ಬರುತ್ತೆ” ಎಂದು ಚೇತನ್‌a ಹೇಳುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡರೆ ಎಲ್ಲಿ ತಲೆ ತಗ್ಗಿಸಿದಂತಾಗುತ್ತೋ ಅಂತ ಭಾವಿಸಿ ಕೆಲವರು ಕ್ಷಮೆ ಕೇಳಲು ಹಿಂದೇಟು ಹಾಕುತ್ತಾರೆ.

ಯೋಚನಾಧಾಟಿ. ತಪ್ಪು ನಿಮ್ಮದೇ ಇರುವಾಗ ಕ್ಷಮೆ ಕೇಳುವುದು ನ್ಯಾಯ ಅಂತ ನಿಮಗನಿಸಬಹುದು. “ನನ್ನದೇ ತಪ್ಪಿದ್ದಾಗ ಕ್ಷಮೆ ಕೇಳೋಕೆ ನನಗೇನೂ ಕಷ್ಟ ಆಗಲ್ಲ. ಆದರೆ ನಮ್ಮಿಬ್ಬರದ್ದೂ ತಪ್ಪಿರುವಾಗ ‘ನಾನೇ ಯಾಕೆ ಮೊದಲು ಕ್ಷಮೆ ಕೇಳಬೇಕು?’ ಅಂತ ನನಗನಿಸುತ್ತೆ” ಎಂದು ಜ್ಯೋತಿ ಹೇಳುತ್ತಾರೆ.

ತಪ್ಪೆಲ್ಲಾ ನಿಮ್ಮ ಸಂಗಾತಿಯದ್ದೇ ಆಗಿದ್ದಾಗಂತೂ ಕ್ಷಮೆ ಕೇಳದೆ ಇರೋದೇ ಸರಿ ಅಂತ ನಿಮಗನಿಸಬಹುದು. ‘ನಿಜವಾಗಿಯೂ ನಿಮ್ಮ ತಪ್ಪೇ ಇಲ್ಲ ಅಂತ ಅನಿಸಿದಾಗಲೂ ಕ್ಷಮೆ ಕೇಳಿದರೆ, ಮಾಡದೇ ಇರುವ ತಪ್ಪನ್ನು ಒಪ್ಪಿಕೊಂಡ ಹಾಗಾಗುತ್ತೆ’ ಎಂದು ಜಯ್‌ ತಿಳಿಸುತ್ತಾರೆ.

ಬೆಳೆದು ಬಂದ ವಾತಾವರಣ. ನೀವು ಕ್ಷಮೆ ಕೇಳುವ ರೂಢಿನೇ ಇಲ್ಲದಿರೋ ಕುಟುಂಬದಲ್ಲಿ ಬೆಳೆದು ಬಂದಿರಬಹುದು. ಆದ್ದರಿಂದ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಚಿಕ್ಕ ವಯಸ್ಸಿನಲ್ಲಿ ಕ್ಷಮೆ ಕೇಳದೇ ಇದ್ದ ನಿಮಗೆ ಬೆಳೆದ ಮೇಲೂ ಅದೇ ರೂಢಿಯಾಗಿರಬಹುದು.

ನೀವೇನು ಮಾಡಬಹುದು?

ಗಂಡ-ಹೆಂಡತಿ ಉರಿಯುತ್ತಿರುವ ಬೆಂಕಿಗೆ ಬಕೇಟಿನಿಂದ ನೀರನ್ನು ಸುರಿಯುತ್ತಿದ್ದಾರೆ

ಕ್ಷಮೆ ಕೇಳುವುದು ಜಗಳವೆಂಬ ಬೆಂಕಿಗೆ ನೀರು ಸುರಿದಂತೆ

ನಿಮ್ಮ ಸಂಗಾತಿ ಬಗ್ಗೆಯೂ ಯೋಚಿಸಿ. ನಿಮಗೆ ಯಾರಾದರೊಬ್ಬರು ಕ್ಷಮೆ ಕೇಳಿದಾಗ ಹೇಗನಿಸಿತು ಅಂತ ನೆನಪು ಮಾಡಿಕೊಳ್ಳಿ. ಆಗ ನಿಮಗೆಷ್ಟು ನೆಮ್ಮದಿ ಆಗಿರುತ್ತಲ್ವಾ? ನಿಮ್ಮ ಸಂಗಾತಿಯ ಹತ್ತಿರ ಕ್ಷಮೆ ಕೇಳುವ ಮೂಲಕ ಅವರನ್ನೂ ಯಾಕೆ ಸಂತೋಷಪಡಿಸಬಾರದು? ನಿಮ್ಮ ತಪ್ಪೇ ಇಲ್ಲ ಅಂತ ಅನಿಸುವುದಾದರೂ ನಿಮಗೇ ತಿಳಿಯದೆ ನಿಮ್ಮ ಸಂಗಾತಿಗೆ ನೋವು ಮಾಡಿರುವ ಸಾಧ್ಯತೆ ಇದೆ. ಆದ್ದರಿಂದ ಅವರಿಗೆ ಕ್ಷಮೆ ಕೇಳಿ. ಹೀಗೆ ಮಾಡುವಾಗ ನಿಮ್ಮ ಸಂಗಾತಿ ತನಗಾದ ನೋವನ್ನು ಮರೆಯುತ್ತಾರೆ.—ಬೈಬಲ್‌ ತತ್ವ: ಲೂಕ 6:31.

ಮದುವೆ ಬಂಧಕ್ಕೆ ಪ್ರಾಮುಖ್ಯತೆ ಕೊಡಿ. ‘ಕ್ಷಮೆ ಕೇಳಿದರೆ ನೀವು ಸೋಲನ್ನು ಒಪ್ಪಿಕೊಂಡಂತೆ’ ಅಂತ ಯೋಚಿಸದೆ ಅದು ನಿಮ್ಮ ಗೆಲುವು ಅಂತ ಯೋಚಿಸಿ. ಯಾಕೆಂದರೆ ಇದರಿಂದ ನಿಮ್ಮ ಮದುವೆ ಬಂಧ ಬಲವಾಗುತ್ತದೆ. ‘ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂದ ಬೇಸರಗೊಂಡ ವ್ಯಕ್ತಿಯನ್ನು ಗೆಲ್ಲುವುದು ಕಷ್ಟಕರ’ ಎಂದು ಬೈಬಲಿನ ಜ್ಞಾನೋಕ್ತಿ 18:19⁠ರಲ್ಲಿ (ಪವಿತ್ರ ಗ್ರಂಥ ಭಾಷಾಂತರ) ತಿಳಿಸಲಾಗಿದೆ. ಆದ್ದರಿಂದ ಕ್ಷಮೆ ಕೇಳುವ ಮೂಲಕ ನಿಮ್ಮಿಬ್ಬರ ಮಧ್ಯೆ ನಡೆದ ಚಿಕ್ಕ ಜಗಳ ದೊಡ್ಡ ಬಿರುಕನ್ನು ಸೃಷ್ಟಿಸದಂತೆ ತಡೆಯಿರಿ. ಹೀಗೆ, ನಿಮಗಿಂತ ನಿಮ್ಮ ಮದುವೆ ಬಂಧಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ.—ಬೈಬಲ್‌ ತತ್ವ: ಫಿಲಿಪ್ಪಿ 2:3.

ತಡಮಾಡದೇ ಕ್ಷಮೆ ಕೇಳಿ. ನಿಮ್ಮ ಸಂಗಾತಿಯದ್ದೂ ತಪ್ಪಿದ್ದರೆ ಆಗ ಕ್ಷಮೆ ಕೇಳುವುದು ಕಷ್ಟ ಅನ್ನುವುದೇನೋ ನಿಜ. ನಿಮ್ಮ ಸಂಗಾತಿ ತಪ್ಪು ಮಾಡಿದ ಮಾತ್ರಕ್ಕೆ ನೀವೂ ತಪ್ಪು ಮಾಡಬೇಕೆಂದೇನಿಲ್ಲ. ಆದ್ದರಿಂದ, ‘ದಿನ ಕಳೆದಂತೆ ಇದನ್ನೆಲ್ಲಾ ಮರೆತು ಹೋಗುತ್ತಾರೆ’ ಎಂದು ಭಾವಿಸಿ ಹಿಂದೇಟು ಹಾಕದೆ ತಡಮಾಡದೇ ಕ್ಷಮೆ ಕೇಳಿ. ಆಗ ನಿಮ್ಮ ಸಂಗಾತಿ ಸಹ ಕ್ಷಮೆ ಕೇಳಬಹುದು. ಹೀಗೆ ನೀವು ಕ್ಷಮೆ ಕೇಳುವ ರೂಢಿ ಮಾಡಿಕೊಂಡರೆ ಯಾವುದೇ ಸನ್ನಿವೇಶದಲ್ಲೂ ಕ್ಷಮೆ ಕೇಳಲು ನಿಮಗೆ ಕಷ್ಟ ಆಗುವುದಿಲ್ಲ.—ಬೈಬಲ್‌ ತತ್ವ: ಮತ್ತಾಯ 5:25.

ನಿಜವಾಗಿಯೂ ಕ್ಷಮೆ ಕೇಳುತ್ತಿದ್ದೀರೆಂದು ತೋರಿಸಿಕೊಡಿ. ಕಾರಣಗಳನ್ನು ಹೇಳಿದರೆ ಅಥವಾ ಯಾಕೆ ಹಾಗಾಯ್ತು ಅಂತ ವಿವರಿಸಿದರೆ ಕ್ಷಮೆ ಕೇಳಿದಂತಾಗಲ್ಲ. ಅಥವಾ ‘ನೀನು ಇಷ್ಟೊಂದು ದೊಡ್ಡ ರಾದ್ಧಾಂತ ಮಾಡ್ತೀಯ ಅಂತ ನಂಗ್‌ ಗೊತ್ತಿರಲಿಲ್ಲ, ತಪ್ಪಾಯ್ತು, ದಯವಿಟ್ಟು ಕ್ಷಮಿಸಿಬಿಡು’ ಅಂತ ಹೇಳಿದರೆ ನಿಜವಾಗಿ ಕ್ಷಮೆ ಕೇಳಿದಂತಾಗಲ್ಲ. ನಿಮ್ಮ ಸಂಗಾತಿ ಸುಮ್ಮ ಸುಮ್ಮನೆ ಬೇಸರ ಮಾಡಿಕೊಂಡಿದ್ದಾರೆಂದು ನಿಮಗೆ ಅನಿಸಿದರೂ ಅವರಿಗೆ ನಿಮ್ಮಿಂದ ಬೇಸರವಾಗಿರೋದಂತೂ ನಿಜ. ಆದ್ದರಿಂದ ಕ್ಷಮೆ ಕೇಳಿ.

ನೀವೂ ತಪ್ಪು ಮಾಡುತ್ತೀರಿ ಎಂದು ಒಪ್ಪಿಕೊಳ್ಳಿ. ಎಲ್ಲರೂ ತಪ್ಪುಮಾಡುತ್ತಾರೆ. ಅದೇ ರೀತಿ ನೀವು ಸಹ ತಪ್ಪು ಮಾಡುತ್ತೀರಿ ಎನ್ನುವುದನ್ನು ಒಪ್ಪಿಕೊಳ್ಳಿ. ನಿಮ್ಮದೇನೂ ತಪ್ಪೇ ಇಲ್ಲ ಅಂತ ಅನಿಸಿದರೂ ಕೆಲವೊಮ್ಮೆ ಪೂರ್ತಿ ನಿಜಾಂಶ ನಿಮಗೆ ಗೊತ್ತಿಲ್ಲದೇ ಇರಬಹುದು. “ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 18:17) ನೀವು ಸಹ ತಪ್ಪು ಮಾಡುತ್ತೀರಿ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಕ್ಷಮೆ ಕೇಳಲು ಹಿಂಜರಿಯುವುದಿಲ್ಲ. ◼ (g15-E 09)

a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ಬೈಬಲಿನ ನುಡಿಮುತ್ತುಗಳು

  • “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.”—ಲೂಕ 6:31.

  • “ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.”—ಫಿಲಿಪ್ಪಿ 2:3.

  • “ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊ.”—ಮತ್ತಾಯ 5:25.

ಜೇಸನ್‌ ಮತ್ತು ಅಲಿಗ್ಸಾಂಡ್ರ

ಜೇಸನ್‌ ಮತ್ತು ಅಲಿಗ್ಸಾಂಡ್ರ

“ಕ್ಷಮೆ ಕೇಳುವುದರಿಂದ ಬೆಟ್ಟದಂತಿದ್ದ ಸಮಸ್ಯೆಗಳು ಪುಟ್ಟದಾಗುತ್ತವೆ. ಕ್ಷಮೆ ಕೇಳುವ ಮೂಲಕ ನೀವು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತೀರಿ ಎಂದು ತೋರಿಸಿಕೊಡಬಹುದು.”

ಕೈ ಮತ್ತು ಜೂಲ್ಯ

ಕೈ ಮತ್ತು ಜೂಲ್ಯ

“ಕ್ಷಮೆ ಕೇಳುವುದು ಇಬ್ಬರ ಮಧ್ಯೆ ಮತ್ತೆ ಶಾಂತಿ ಸಂತೋಷ ತರಬೇಕೆಂದೇ ಹೊರತು ಇಬ್ಬರಲ್ಲಿ ಯಾರು ಸರಿ, ಯಾರು ತಪ್ಪು ಎಂದು ತೋರಿಸಿಕೊಡುವುದಕ್ಕಲ್ಲ. ನಿಮ್ಮ ಸಂಗಾತಿಗೆ ಯಾವುದೇ ಕಾರಣಕ್ಕೆ ನೋವಾಗಿದ್ದರೂ ಅವರನ್ನು ಸಂತೋಷಪಡಿಸಲು ನಿಮ್ಮಿಂದಾಗುವುದನ್ನೆಲ್ಲ ಮಾಡಿ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ