ಕುಟುಂಬಕ್ಕಾಗಿ ಇನ್ನಷ್ಟು ನೆರವು
ಬೈಬಲಿನಲ್ಲಿ ತುಂಬ ವಿಶ್ವಾಸಾರ್ಹವಾದ ಮಾರ್ಗದರ್ಶನವಿದೆ ಇದು ದಂಪತಿಗಳಿಗೆ, ಹೆತ್ತವರಿಗೆ ಮತ್ತು ಯುವಜನರಿಗೆ ಸಹಾಯಮಾಡುತ್ತದೆ. ಬೈಬಲಿನ ತತ್ವಗಳು ಒಬ್ಬ ವ್ಯಕ್ತಿಯ ಯೋಚನಾ ಸಾಮರ್ಥ್ಯ ಹಾಗೂ ತೀರ್ಮಾನಶಕ್ತಿಯನ್ನು ಉತ್ತಮಗೊಳಿಸಬಲ್ಲವು.—ಜ್ಞಾನೋಕ್ತಿ 1:1-4.
ಜೀವನಕ್ಕೆ ಸಂಬಂಧಪಟ್ಟ ಇಂಥ ಮುಖ್ಯ ಪ್ರಶ್ನೆಗಳಿಗೂ ಬೈಬಲ್ ಉತ್ತರ ಕೊಡುತ್ತದೆ:
ಜೀವನದ ಉದ್ದೇಶ ಏನು?
ನಮ್ಮ ಕಷ್ಟಗಳಿಗೆ ದೇವರು ಕಾರಣನಾ?
ಸತ್ತ ಮೇಲೆ ಮನುಷ್ಯರಿಗೆ ಏನಾಗುತ್ತದೆ?
ಈ ಪ್ರಶ್ನೆಗಳಿಗೆ ಮತ್ತು ಇತರ ಪ್ರಶ್ನೆಗಳಿಗೆ ಬೈಬಲ್ ಕೊಡುವ ಉತ್ತರಗಳನ್ನು ನೀವೇ ತಿಳಿದುಕೊಳ್ಳುವಂತೆ ಆಮಂತ್ರಿಸುತ್ತೇವೆ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೊ ನೋಡಿ. ಕೋಡ್ ಸ್ಕ್ಯಾನ್ ಮಾಡಿ ಅಥವಾ www.jw.org ಭೇಟಿಮಾಡಿ.