ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g18 ನಂ. 3 ಪು. 14-15
  • ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ
  • ಎಚ್ಚರ!—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸತ್ತವರಿಗೆ ಮುಂದೆ ಏನಾಗುವುದು ಎನ್ನುವುದರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಿ
  • ಪರಿವಿಡಿ
    ಎಚ್ಚರ!—2018
  • ಸಾವಿನ ನೋವಿನಲ್ಲಿರುವವರಿಗೆ ಸಹಾಯ
    ಎಚ್ಚರ!—2018
  • ದುಃಖಿತರಿಗೆ ನೆರವು
    ಎಚ್ಚರ!—2011
  • ದುಃಖಿಸುತ್ತಿರುವುದಾದರೂ, ನಾವು ನಿರೀಕ್ಷಾಹೀನರಲ್ಲ
    ಕಾವಲಿನಬುರುಜು—1995
ಇನ್ನಷ್ಟು
ಎಚ್ಚರ!—2018
g18 ನಂ. 3 ಪು. 14-15
ತೀರಿಹೋಗಿದ್ದ ತಮ್ಮ ಪ್ರಿಯರನ್ನು ಪರದೈಸಿನಲ್ಲಿ ಸ್ವಾಗತಿಸುತ್ತಿದ್ದಾರೆ

ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ

ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ

ಆಪ್ತರನ್ನು ಕಳೆದುಕೊಂಡಿರುವವರ ದುಃಖದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ಈಗಾಗಲೇ ತಿಳಿಸಿದಂತೆ ತಜ್ಞರ ಅತ್ಯುತ್ತಮ ಸಲಹೆಗಳು ವಿವೇಕ ತುಂಬಿರುವ ಒಂದು ಗ್ರಂಥದಲ್ಲಿರುವ ವಿಷಯಗಳಿಗೆ ಹೊಂದಿಕೆಯಲ್ಲಿವೆ. ಆ ಗ್ರಂಥವೇ ಬೈಬಲ್‌. ಇದರಿಂದ ಬೈಬಲಿನಲ್ಲಿರುವ ಮಾರ್ಗದರ್ಶನೆಯು ಎಲ್ಲಾ ಕಾಲಕ್ಕೂ ಅನ್ವಯಿಸುವಂಥದ್ದಾಗಿದೆ ಎಂದು ರುಜುವಾಗುತ್ತದೆ. ಇದರಲ್ಲಿರುವ ಸಲಹೆಯು ಭರವಸಾರ್ಹ ಮಾತ್ರವಲ್ಲ, ಬೇರೆಲ್ಲಿಯೂ ಸಿಗುವುದಿಲ್ಲ. ಅದು ದುಃಖದಲ್ಲಿರುವವರಿಗೆ ಮಾತಿನಲ್ಲಿ ಹೇಳಲಾಗದಷ್ಟು ಸಾಂತ್ವನ, ಉಪಶಮನ ನೀಡುತ್ತದೆ.

  • ತೀರಿಹೋದ ನಮ್ಮ ಆಪ್ತರು ನರಳುತ್ತಿಲ್ಲವೆಂಬ ಆಶ್ವಾಸನೆ

    ಪ್ರಸಂಗಿ 9:5ರಲ್ಲಿ “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್‌ ಹೇಳುತ್ತದೆ. ಮಾತ್ರವಲ್ಲ, ‘ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು’ ಎಂದೂ ತಿಳಿಸುತ್ತದೆ. (ಕೀರ್ತನೆ 146:4) ಬೈಬಲ್‌ ಮರಣವನ್ನು ಗಾಢ ನಿದ್ರೆಗೆ ಹೋಲಿಸುತ್ತದೆ.—ಯೋಹಾನ 11:11.

  • ಪ್ರೀತಿಭರಿತ ದೇವರ ಮೇಲಿರುವ ನಂಬಿಕೆಯು ಸಾಂತ್ವನ ಕೊಡುತ್ತದೆ

    ಕೀರ್ತನೆ 34:15ರಲ್ಲಿ “ಯೆಹೋವನುa ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ” ಎಂದು ಹೇಳಲಾಗಿದೆ. ಮನದಾಳದ ನಮ್ಮ ನೋವನ್ನು ಪ್ರಾರ್ಥನೆಯಲ್ಲಿ ದೇವರ ಹತ್ತಿರ ಹೇಳಿಕೊಳ್ಳುವುದರಿಂದ ಬೇರಾವುದೇ ಚಿಕಿತ್ಸೆಗಿಂತ ಹೆಚ್ಚಿನ ಸಹಾಯವಾಗುತ್ತದೆ ಮತ್ತು ನಮ್ಮ ಯೋಚನೆಗಳನ್ನು ನಿಯಂತ್ರಣದಲ್ಲಿಡಲು ಆಗುತ್ತದೆ. ಮಾತ್ರವಲ್ಲ, ಪ್ರಾರ್ಥನೆ ನಮ್ಮನ್ನು ಸೃಷ್ಟಿಸಿದ ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಆತನಿಗೆ ನಮ್ಮನ್ನು ಸಂತೈಸುವ ಶಕ್ತಿ ಇದೆ.

  • ಒಳ್ಳೆಯ ಭವಿಷ್ಯದ ನಿರೀಕ್ಷೆ

    ಸಮಾಧಿಯಲ್ಲಿರುವವರೆಲ್ಲರೂ ಜೀವಂತವಾಗಿ ಎದ್ದು ಬರುವುದನ್ನು ಸ್ವಲ್ಪ ಉಹಿಸಿಕೊಳ್ಳಿ! ಇದರ ಕುರಿತು ಬೈಬಲಿನಲ್ಲಿ ಅನೇಕ ಬಾರಿ ತಿಳಿಸಲಾಗಿದೆ. ಆಗ ಭೂಮಿಯ ಮೇಲಿರುವ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಾ ಬೈಬಲ್‌ ಹೀಗನ್ನುತ್ತದೆ: ದೇವರು ನಮ್ಮ “ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4.

ಬೈಬಲಿನಲ್ಲಿ ತಿಳಿಸಿರುವ ಯೆಹೋವ ದೇವರನ್ನು ನಂಬುವ ಅನೇಕರು, ಸತ್ತಿರುವ ತಮ್ಮ ಪ್ರಿಯರನ್ನು ಮತ್ತೆ ಜೀವಂತವಾಗಿ ನೋಡುತ್ತೇವೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದು ಅವರಿಗೆ ದುಃಖದಿಂದ ಹೊರಬರಲು ಸಹಾಯ ಮಾಡಿದೆ. ಉದಾಹರಣೆಗೆ ತನ್ನ 65 ವರ್ಷ ಪ್ರಾಯದ ಗಂಡನನ್ನು ಕಳೆದುಕೊಂಡ ಆ್ಯನ್‌ ಹೇಳುವುದು: “ತೀರಿಹೋದ ನಮ್ಮ ಪ್ರಿಯರು ಕಷ್ಟಪಡುತ್ತಿಲ್ಲ ಮತ್ತು ದೇವರು ತನ್ನ ನೆನಪಿನಲ್ಲಿ ಇರುವವರೆಲ್ಲರನ್ನು ಪುನರುತ್ಥಾನ ಮಾಡುತ್ತಾನೆ ಎಂದು ಬೈಬಲ್‌ ನನಗೆ ಆಶ್ವಾಸನೆ ನೀಡಿದೆ. ಯಾವಾಗೆಲ್ಲಾ ನನಗೆ ತುಂಬ ದುಃಖ ಆಗುತ್ತದೋ ಆಗೆಲ್ಲಾ ಈ ವಿಷಯ ನನಗೆ ನೆನಪಾಗುತ್ತದೆ. ಇದರಿಂದ ನನಗಾಗಿರುವ ಈ ದೊಡ್ಡ ದುರಂತವನ್ನು ತಾಳಿಕೊಳ್ಳಲು ಸಾಧ್ಯವಾಗಿದೆ!”

ಈ ಲೇಖನದಲ್ಲಿ ಮುಂಚೆ ತಿಳಿಸಲಾದ ಟೀನ ಹೇಳುವುದು: “ಟಿಮೊ ತೀರಿಕೊಂಡ ದಿವಸದಿಂದ, ನಾನು ದೇವರ ಸಹಾಯವನ್ನು ಅನುಭವಿಸಿದ್ದೇನೆ. ನಾನು ತುಂಬ ದುಃಖದಲ್ಲಿರುವಾಗ ದೇವರೇ ನನ್ನ ಕೈಹಿಡಿದು ಸಹಾಯ ಮಾಡಿದಂತೆ ನನಗೆ ಅನಿಸಿದೆ. ಬೈಬಲಿನಲ್ಲಿರುವ ಪುನರುತ್ಥಾನದ ವಿಷಯ ಸತ್ಯ ಎಂದು ನಾನು ತಿಳಿದಿದ್ದೇನೆ. ಇದು ನಾನು ಟಿಮೊರನ್ನು ಮತ್ತೆ ನೋಡುವ ಆ ದಿನದ ತನಕ ತಾಳಿಕೊಂಡು ಮುಂದೆ ಹೋಗಲು ಸಹಾಯ ಮಾಡುತ್ತಿದೆ.”

ಬೈಬಲಿನಲ್ಲಿರುವ ಭರವಸಾರ್ಹ ವಿಷಯವನ್ನು ನಂಬುವ ಲಕ್ಷಾಂತರ ಜನರು ಇದೇ ಮಾತುಗಳನ್ನಾಡುತ್ತಾರೆ. ಬೈಬಲಿನಲ್ಲಿರುವ ಈ ವಿಷಯ ಬರೀ ಕನಸು, ನಿಜವಲ್ಲ ಎಂದು ನಿಮಗನಿಸುವುದಾದರೆ ಬೈಬಲಿನಲ್ಲಿರುವ ಸಲಹೆ ಮತ್ತು ಪುನರುತ್ಥಾನದ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆ ಮಾಡಿ. ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ ಮಾಡುವ ಗ್ರಂಥ ಬೈಬಲ್‌ ಅನ್ನುವುದನ್ನು ನೀವು ತಿಳಿದುಕೊಳ್ಳುವಿರಿ.

ಸತ್ತವರಿಗೆ ಮುಂದೆ ಏನಾಗುವುದು ಎನ್ನುವುದರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಿ

ಇದಕ್ಕೆ ಸಂಬಂಧಿಸಿದ ವಿಡಿಯೋಗಳಿಗಾಗಿ ನಮ್ಮ jw.org ವೆಬ್‌ಸೈಟಿನ ಲೈಬ್ರರಿ > ವಿಡಿಯೋಗಳು ಎಂಬಲ್ಲಿ ನೋಡಿ

ತೀರಿಹೋಗಿದ್ದ ತಮ್ಮ ಪ್ರಿಯರನ್ನು ಪರದೈಸಿನಲ್ಲಿ ಸ್ವಾಗತಿಸುತ್ತಿದ್ದಾರೆ

ಸತ್ತ ನಮ್ಮ ಪ್ರಿಯರನ್ನು ಭವಿಷ್ಯದಲ್ಲಿ ನಾವು ಪುನಃ ಸ್ವಾಗತಿಸುವೆವು ಎಂದು ಬೈಬಲ್‌ ಮಾತುಕೊಡುತ್ತದೆ

ಸತ್ತ ಮೇಲೆ ಏನಾಗುತ್ತದೆ?

ಸತ್ತ ಮೇಲೆ ಏನಾಗುತ್ತದೆ?

ನಾವು ಸತ್ತಾಗ ಏನಾಗುತ್ತದೆ? ಎಂಬ ಪ್ರಶ್ನೆಗೆ ಬೈಬಲ್‌ ಕೊಡುವ ಸ್ಪಷ್ಟ ಉತ್ತರದಿಂದ ಸಾಂತ್ವನ ಮತ್ತು ಆಶ್ವಾಸನೆ ಸಿಗುತ್ತದೆ

ಲೈಬ್ರರಿ > ವಿಡಿಯೋಗಳು ಎಂಬಲ್ಲಿ ನೋಡಿ (ವಿಡಿಯೋ ವಿಭಾಗ: ಬೈಬಲ್‌)

ಸಿಹಿಸುದ್ದಿ ಕೇಳಲು ಬಯಸುತ್ತೀರಾ?

ಸಿಹಿಸುದ್ದಿ ಕೇಳಲು ಬಯಸುತ್ತೀರಾ?

ಎಲ್ಲೆಲ್ಲಿಯೂ ಕೆಟ್ಟ ಸುದ್ದಿಗಳೇ ಇರುವಾಗ, ಸಿಹಿಸುದ್ದಿ ಎಲ್ಲಿ ಸಿಗುತ್ತೆ?

ಬೈಬಲ್‌ ಬೋಧನೆಗಳು > ಶಾಂತಿ ಮತ್ತು ಸಂತೋಷ ಎಂಬಲ್ಲಿ ನೋಡಿ

a ಯೆಹೋವ ಎನ್ನುವುದು ಬೈಬಲಿನಲ್ಲಿರುವ ದೇವರ ಹೆಸರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ