ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 1 ಪು. 12-15
  • ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ರಾಜ್ಯ ಯಾವಾಗ ಆಳುವುದು?
  • ದೇವರ ರಾಜ್ಯ ಹೇಗೆ ಅಧಿಕಾರವನ್ನು ತನ್ನ ಕೈಗೆತ್ತಿಕೊಳ್ಳುತ್ತದೆ?
  • ಈ ಆಳ್ವಿಕೆಯಿಂದ ಪ್ರಯೋಜನ ಪಡೆಯಲು ಏನು ಮಾಡಬೇಕು?
  • ದೇವರ ಸರ್ಕಾರದ ಬಗ್ಗೆ ಸತ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ‘ಎಂದಿಗೂ ಅಳಿಯದ’ ರಾಜ್ಯ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
ಇನ್ನಷ್ಟು
ಎಚ್ಚರ!—2019
g19 ನಂ. 1 ಪು. 12-15
ಸುಂದರ ತೋಟವಾಗಿ ಮಾರ್ಪಟ್ಟಿರುವ ಭೂಮಿಯ ಮೇಲೆ ಜನರು ಸಂತೋಷದಿಂದ ಜೀವಿಸುತ್ತಿದ್ದಾರೆ

ಸವಾಲುಗಳ ಮೇಲೆ ಸಂಪೂರ್ಣ ಗೆಲುವು

ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ

ನಾವೆಲ್ಲರೂ ಎದುರು ನೋಡುತ್ತಿರುವ ದೇವರ ರಾಜ್ಯವು ಅಂದರೆ ದೇವರು ಸ್ಥಾಪಿಸಿರುವ ವಿಶ್ವವ್ಯಾಪಿ ಸರಕಾರವು ಬಲುಬೇಗನೆ ಇಡೀ ಲೋಕದಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಸ್ಥಾಪಿಸುವುದು. ಆಗ “ಸಮೃದ್ಧಿಯಾದ ಸಮಾಧಾನವು . . . ಇರುವುದು” ಎಂದು ಕೀರ್ತನೆ 72:7​ರಲ್ಲಿ (ಪವಿತ್ರ ಗ್ರಂಥ ಭಾಷಾಂತರ) ಹೇಳಲಾಗಿದೆ. ಆದರೆ ಆ ರಾಜ್ಯ ಯಾವಾಗ ಆಳ್ವಿಕೆ ಆರಂಭಿಸುವುದು? ಅದು ಹೇಗೆ ಸಂಭವಿಸುವುದು? ಆ ರಾಜ್ಯದ ಆಳ್ವಿಕೆಯಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?

ದೇವರ ರಾಜ್ಯ ಯಾವಾಗ ಆಳುವುದು?

ದೇವರ ರಾಜ್ಯ ಆಳಲು ಆರಂಭಿಸುವ ಸ್ವಲ್ಪ ಮುಂಚೆ ಯಾವೆಲ್ಲಾ ಘಟನೆಗಳು ನಡೆಯುತ್ತವೆ ಎಂದು ಬೈಬಲ್‌ನಲ್ಲಿ ಈಗಾಗಲೇ ಸೂಚನೆಗಳನ್ನು ಕೊಡಲಾಗಿದೆ. ಅವು ನಡೆಯುವಾಗ ದೇವರ ರಾಜ್ಯ ಬೇಗ ಬರಲಿದೆ ಎಂದು ನಾವು ತಿಳಿದುಕೊಳ್ಳಬಹುದು. ರಾಷ್ಟ್ರಗಳ ಮಧ್ಯೆ ಯುದ್ಧ, ಬರಗಾಲ, ಕಾಯಿಲೆಗಳು, ಅನೇಕ ಭೂಕಂಪಗಳು ಮತ್ತು ತೀವ್ರ ಅನ್ಯಾಯ ಮುಂತಾದವುಗಳೇ ಆ ‘ಸೂಚನೆಗಳಾಗಿವೆ.’—ಮತ್ತಾಯ 24:3, 7, 12; ಲೂಕ 21:11; ಪ್ರಕಟನೆ 6:2-8.

ಬೈಬಲಿನ ಇನ್ನೊಂದು ಕಡೆಯಲ್ಲಿ ಹೀಗೆ ಮುಂತಿಳಿಸಲಾಗಿದೆ: “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು . . . ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ . . . ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುವರು. (2 ತಿಮೊಥೆಯ 3:1-4) ಹಿಂದಿನಿಂದಲೂ ಕೆಲವು ಜನರಲ್ಲಿ ಈ ಗುಣಗಳು ಇದ್ದರೂ ಈಗ ಎಲ್ಲೆಲ್ಲೂ ಇಂಥವರೇ ಇದ್ದಾರೆ.

ಮೇಲೆ ಮುಂತಿಳಿಸಲಾದ ಘಟನೆಗಳು 1914​ರಿಂದ ನಡೆಯುತ್ತಾ ಇವೆ. ಆಗಿನಿಂದ ಲೋಕ ಹೇಗೆಲ್ಲಾ ಬದಲಾಗಿದೆ ಎಂದು ಇತಿಹಾಸಕಾರರು, ಗಣ್ಯ ವ್ಯಕ್ತಿಗಳು ಮತ್ತು ಲೇಖಕರು ಸಹ ತಿಳಿಸಿದ್ದಾರೆ. ಉದಾಹರಣೆಗೆ, ಡೆನ್ಮಾರ್ಕಿನ ಇತಿಹಾಸಕಾರನಾದ ಪೀಟರ್‌ ಮುಂಕ್‌ ಹೀಗೆ ಬರೆದಿದ್ದಾರೆ: “1914​ರಲ್ಲಿ ನಡೆದ ಯುದ್ಧವು ಮಾನವ ಇತಿಹಾಸದಲ್ಲೇ ದೊಡ್ಡ ತಿರುಗುಬಿಂದು ಆಗಿದೆ. ಪ್ರಗತಿಯ ಹಾದಿಯಲ್ಲಿದ್ದ . . . ನಾವು ವಿಪತ್ತು, ಭಯ, ಹಗೆ ಮತ್ತು ಅಸುರಕ್ಷತೆಯ ದಿನಗಳಿಗೆ ಕಾಲಿಟ್ಟಿದ್ದೇವೆ.”

ಆದರೆ ಸಂತೋಷದ ವಿಷಯವೇನೆಂದರೆ, ಈ ಎಲ್ಲಾ ಕೆಟ್ಟ ವಿಷಯಗಳ ನಂತರ ಬೇಗನೆ ಶಾಂತಿಯ ಪರಿಸ್ಥಿತಿ ಬರಲಿದೆ. ಈ ವಿಷಯಗಳು ದೇವರ ರಾಜ್ಯ ಬೇಗನೆ ಆಳಲು ಆರಂಭಿಸಲಿದೆ ಎಂದು ಸೂಚಿಸುತ್ತದೆ. ಆದರೆ ಯೇಸು ಅಂತ್ಯದ ಬಗ್ಗೆ ತಿಳಿಸುವಾಗ ಒಂದು ಒಳ್ಳೇ ಸೂಚನೆಯನ್ನೂ ತಿಳಿಸಿದ್ದಾನೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾಯ 24:14.

ಆ ಸುವಾರ್ತೆಯೇ ಯೆಹೋವನ ಸಾಕ್ಷಿಗಳ ಮುಖ್ಯ ಸಂದೇಶ. ಅವರ ಮುಖ್ಯ ಪತ್ರಿಕೆಯ ಹೆಸರು ಸಹ ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದಾಗಿದೆ. ಈ ಪತ್ರಿಕೆಯು ಯಾವಾಗಲೂ, ದೇವರ ರಾಜ್ಯವು ಈ ಭೂಮಿಯಲ್ಲಿ ಮಾನವರಿಗಾಗಿ ಮಾಡಲಿರುವ ಅದ್ಭುತ ವಿಷಯಗಳ ಕುರಿತು ತಿಳಿಸುತ್ತದೆ.

ದೇವರ ರಾಜ್ಯ ಹೇಗೆ ಅಧಿಕಾರವನ್ನು ತನ್ನ ಕೈಗೆತ್ತಿಕೊಳ್ಳುತ್ತದೆ?

ಅದಕ್ಕೆ ಉತ್ತರ:

  1. ದೇವರ ರಾಜ್ಯವು ಈಗಿರುವ ರಾಜಕೀಯ ಮುಖಂಡರ ಮೂಲಕ ಆಳ್ವಿಕೆ ಮಾಡುವುದಿಲ್ಲ.

  2. ಲೋಕದ ರಾಜಕೀಯ ಮುಖಂಡರು ತಮ್ಮ ಅಧಿಕಾರವನ್ನು ಕಳೆದುಕೊಳ್ಳದಿರಲು ಮೂರ್ಖತನದಿಂದ ದೇವರ ರಾಜ್ಯದ ವಿರುದ್ಧ ಹೋರಾಡುವರು.—ಕೀರ್ತನೆ 2:2-9.

  3. ಮಾನವರ ಮೇಲಿನ ಅಧಿಕಾರವನ್ನು ಬಿಟ್ಟುಕೊಡಲು ಬಯಸದ ರಾಜಕೀಯ ಸರಕಾರಗಳನ್ನು ದೇವರ ರಾಜ್ಯವು ನಾಶ ಮಾಡುತ್ತದೆ. (ದಾನಿಯೇಲ 2:44; ಪ್ರಕಟನೆ 19:17-21) ಲೋಕವ್ಯಾಪಕವಾಗಿ ನಡೆಯುವ ಈ ಅಂತಿಮ ಯುದ್ಧದ ಹೆಸರು ಹರ್ಮಗೆದೋನ್‌.—ಪ್ರಕಟನೆ 16:14, 16.

  4. ದೇವರ ರಾಜ್ಯದ ಆಳ್ವಿಕೆಗೆ ಸ್ವಇಚ್ಛೆಯಿಂದ ಅಧೀನರಾಗುವವರನ್ನು ಹರ್ಮಗೆದೋನಿನಿಂದ ಪಾರು ಮಾಡಲಾಗುವುದು ಮತ್ತು ಅವರು ಶಾಂತಿಯುತ ಹೊಸ ಲೋಕದಲ್ಲಿ ಜೀವಿಸುವರು. ಅವರು ಲಕ್ಷಗಟ್ಟಲೆ ಇರುವುದರಿಂದ ಬೈಬಲಿನಲ್ಲಿ ಅವರನ್ನು “ಮಹಾ ಸಮೂಹ” ಎಂದು ಕರೆಯಲಾಗಿದೆ.—ಪ್ರಕಟನೆ 7:9, 10, 13, 14.

    ಈ ರಾಜ್ಯ ಆಳುವಾಗ ಜೀವನ ಹೇಗಿರುತ್ತದೆ?

    ದೇವರ ರಾಜ್ಯದ ರಾಜನಾದಾಗ ಯೇಸು ಏನೆಲ್ಲಾ ಮಾಡುವನೆಂದು ಭೂಮಿಯಲ್ಲಿದ್ದಾಗ ಮಾಡಿ ತೋರಿಸಿದನು. ಅವನು ಅಸ್ವಸ್ಥರನ್ನು, ಅಂಗವಿಕಲರನ್ನು ವಾಸಿಮಾಡಿದನು. (ಮತ್ತಾಯ 4:23) ಸಾವಿರಾರು ಜನರಿಗೆ ಊಟ ಕೊಟ್ಟನು. (ಮಾರ್ಕ 6:35-44) ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಿದನು.—ಮಾರ್ಕ 4:37-41.

    ಯೇಸು ತನ್ನ ಸುತ್ತಲೂ ನಿಂತಿರುವ ಜನರಿಗೆ ಬೋಧಿಸುತ್ತಿದ್ದಾನೆ

    ಎಲ್ಲದಕ್ಕಿಂತ ಮುಖ್ಯವಾಗಿ, ಶಾಂತಿ-ಐಕ್ಯತೆಯಿಂದ ಜೀವಿಸುವುದು ಹೇಗೆ ಎಂದು ಅವನು ಜನರಿಗೆ ಕಲಿಸಿದನು. ಈ ಬೋಧನೆಗಳ ಪ್ರಕಾರ ಜೀವಿಸುವ ದೀನರು ಉತ್ತಮ ವ್ಯಕ್ತಿಗಳಾಗುವರು. ಇಂಥವರೇ ಆತನ ರಾಜ್ಯದಲ್ಲಿ ಸದಾಕಾಲ ಸಂತೋಷದಿಂದ ಜೀವಿಸುವ ಅರ್ಹತೆಯನ್ನು ಪಡೆಯುವರು. ಇದು ಬೇರೆ ಯಾವುದೇ ಶಿಕ್ಷಣ ಅಥವಾ ಬೋಧನೆಯಿಂದ ಸಾಧ್ಯವಿಲ್ಲ. ಯೇಸುವಿನ ಬೋಧನೆಗಳ ಒಂದು ಒಳ್ಳೇ ಉದಾಹರಣೆಯು ಬೈಬಲಿನ ಮತ್ತಾಯ ಪುಸ್ತಕದ 5-7​ನೇ ಅಧ್ಯಾಯಗಳಲ್ಲಿದೆ. ಆ ಬೋಧನೆಯನ್ನು ಪರ್ವತ ಪ್ರಸಂಗ ಎಂದು ಕರೆಯಲಾಗುತ್ತದೆ. ನೀವದನ್ನು ಯಾಕೆ ಒಮ್ಮೆ ಓದಿ ನೋಡಬಾರದು? ಆತನ ಮಾತುಗಳು ಅರ್ಥಮಾಡಿಕೊಳ್ಳಲು ಸುಲಭ ಮತ್ತು ವಿವೇಕದಿಂದ ತುಂಬಿವೆ. ಅದು ಖಂಡಿತ ನಿಮಗಿಷ್ಟವಾಗುತ್ತದೆ.

ಈ ಆಳ್ವಿಕೆಯಿಂದ ಪ್ರಯೋಜನ ಪಡೆಯಲು ಏನು ಮಾಡಬೇಕು?

ದೇವರ ರಾಜ್ಯದ ಪ್ರಜೆಗಳಾಗಲು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ ಜ್ಞಾನ ಪಡೆದುಕೊಳ್ಳುವುದೇ ಆಗಿದೆ. ದೇವರಿಗೆ ಪ್ರಾರ್ಥಿಸುವಾಗ ಯೇಸು ಹೀಗೆ ಹೇಳಿದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.

ಜನರು ದೇವರ ಬಗ್ಗೆ ತಿಳಿದು ಆತನಿಗೆ ಆಪ್ತರಾಗುವಾಗ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಅವುಗಳಲ್ಲಿ ಎರಡನ್ನು ಗಮನಿಸಿ: ಮೊದಲನೆಯದಾಗಿ, ಅವರು ಆತನ ಮೇಲೆ ಬಲವಾದ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ನಿಜತ್ವಗಳ ಮೇಲೆ ಆಧರಿಸಿದ ಈ ನಂಬಿಕೆಯಿಂದಾಗಿ ಅವರಿಗೆ, ದೇವರ ರಾಜ್ಯ ನಿಜ ಸರಕಾರ ಮತ್ತು ಅದು ಬೇಗನೆ ಆಳ್ವಿಕೆಯನ್ನು ಮಾಡಲಿದೆ ಎಂದು ಸ್ಪಷ್ಟವಾಗುತ್ತದೆ. (ಇಬ್ರಿಯ 11:1) ಎರಡನೆಯದಾಗಿ, ಅವರಿಗೆ ದೇವರ ಮತ್ತು ನೆರೆಯವರ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ದೇವರ ಮೇಲಿನ ಪ್ರೀತಿಯು ಇಷ್ಟಪೂರ್ವಕವಾಗಿ ಆತನಿಗೆ ವಿಧೇಯರಾಗಲು ಪ್ರೇರೇಪಿಸುತ್ತದೆ. ನೆರೆಯವರ ಮೇಲಿನ ಪ್ರೀತಿಯು ಯೇಸುವಿನ ಈ ಮಾತುಗಳನ್ನು ಪಾಲಿಸುವಂತೆ ಪ್ರೇರೇಪಿಸುತ್ತದೆ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.”—ಲೂಕ 6:31.

ಪ್ರೀತಿಯ ತಂದೆಯಂತೆ ನಮ್ಮ ಸೃಷ್ಟಿಕರ್ತನೂ ನಮಗೆ ಒಳ್ಳೇದನ್ನೇ ಬಯಸುತ್ತಾನೆ. ಬೈಬಲ್‌ನಲ್ಲಿ “ವಾಸ್ತವವಾದ ಜೀವನ” ಎಂದು ಕರೆಯಲಾದ ಜೀವನವನ್ನು ನಾವು ಪಡೆಯಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 6:19) ನಮ್ಮ ಈಗಿನ ಜೀವನ “ವಾಸ್ತವವಾದ ಜೀವನ” ಅಲ್ಲ. ಯಾಕೆಂದರೆ, ಲಕ್ಷಾಂತರ ಜನರ ಜೀವನ ಎಷ್ಟು ಹಾಳಾಗಿದೆಯೆಂದರೆ ಬದುಕುವುದೇ ಕಷ್ಟವಾಗಿದೆ. ಹಾಗಾದರೆ, “ವಾಸ್ತವವಾದ ಜೀವನ” ಹೇಗಿರುತ್ತದೆ ಎಂದು ತಿಳಿಯಲು ನಿಮಗಿಷ್ಟವಿದೆಯಾ? ದೇವರ ರಾಜ್ಯ ತನ್ನ ಪ್ರಜೆಗಳಿಗಾಗಿ ಮಾಡಲಿರುವ ಕೆಲವು ವಿಷಯಗಳನ್ನು ಪರಿಗಣಿಸಿ.

ದೇವರ ರಾಜ್ಯದಲ್ಲಿ ಜೀವನ

  • “ಆತನ ದಿನಗಳಲ್ಲಿ [ಯೇಸು ರಾಜನಾಗಿ ಆಳುವಾಗ] ನೀತಿವಂತನು ವೃದ್ಧಿಯಾಗುವನು. ಸಮೃದ್ಧಿಯಾದ ಸಮಾಧಾನವು . . . ಇರುವುದು. . . . ಭೂಮಿಯ ಕೊನೆಗಳವರೆಗೂ ಆತನು ಆಳುವನು.”—ಕೀರ್ತನೆ 72:7, 8, 13, 14, ಪವಿತ್ರ ಗ್ರಂಥ ಭಾಷಾಂತರ.

  • “[ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ.”—ಕೀರ್ತನೆ 46:9.

  • ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವುದು.’—ಕೀರ್ತನೆ 72:16.

  • “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” —ಯೆಶಾಯ 65:21, 22.

  • “ದೇವರ ಗುಡಾರವು ಮಾನವಕುಲದೊಂದಿಗೆ ಇದೆ; . . . ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:3, 4.

ಸುಂದರ ತೋಟವಾಗಿರುವ ಭೂಮಿಯ ಮೇಲೆ ಜನರು ಸಂತೋಷದಿಂದ ಜೀವಿಸುತ್ತಿದ್ದಾರೆ

ದೇವರ ರಾಜ್ಯ ಆಳುವಾಗ ಜನರು ಸುರಕ್ಷಿತರಾಗಿರುವರು ಮತ್ತು ಅವರಿಗೆ ಆಹಾರ ಸಮೃದ್ಧವಾಗಿರುವುದು

ಮುಖ್ಯಾಂಶ

ಯೇಸುವಿನ ಬೋಧನೆಗಳು ಸರಿಯಾದದ್ದನ್ನೇ ಮಾಡಲು ಬೇಕಾದ ಬಲವನ್ನು ನೀಡುತ್ತವೆ. ಆತನ ಬೋಧನೆಯ ಪ್ರಕಾರ ನಡೆಯುವವರು ವಿಶ್ವವ್ಯಾಪಿ ಸರಕಾರದ ಶಾಂತಿ, ಪ್ರೀತಿಯ ಪ್ರಜೆಗಳಾಗುತ್ತಾರೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ