ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 1 ಪು. 5-7
  • ಒತ್ತಡ ಅಂದರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡ ಅಂದರೇನು?
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಯೋಜನಕರ ಮತ್ತು ಹಾನಿಕರ ಒತ್ತಡ
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
  • ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?
    ಎಚ್ಚರ!—2008
  • ಪರಿವಿಡಿ
    ಎಚ್ಚರ!—2020
ಇನ್ನಷ್ಟು
ಎಚ್ಚರ!—2020
g20 ನಂ. 1 ಪು. 5-7
ಒಬ್ಬ ಬಿಸ್‌ನೆಸ್‌ಮೆನ್‌ ಆಫೀಸಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತುತ್ತಿದ್ದಾನೆ.

ಒತ್ತಡದಿಂದ ಹೊರಗೆ ಬನ್ನಿ

ಒತ್ತಡ ಅಂದರೇನು?

ಕಷ್ಟದ ಸನ್ನಿವೇಶಗಳಲ್ಲಿ ನಮ್ಮ ದೇಹ ಪ್ರತಿಕ್ರಿಯಿಸುವ ರೀತೀನೇ ಒತ್ತಡ. ಆ ಸಮಯದಲ್ಲಿ ಮೆದುಳು ದೇಹದ ಎಲ್ಲಾ ಭಾಗಗಳಿಗೆ ಹಾರ್ಮೋನ್‌ಗಳು ಬಿಡುಗಡೆ ಆಗುವ ಹಾಗೆ ಮಾಡುತ್ತೆ. ಈ ಹಾರ್ಮೋನ್‌ಗಳು ನಿಮ್ಮ ಹೃದಯ ಬಡಿತ, ರಕ್ತದ ಒತ್ತಡ, ಉಸಿರಾಟದ ವೇಗವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಸ್ನಾಯುಗಳನ್ನು ಬಿಗಿ ಮಾಡುತ್ತವೆ. ನಿಮಗೆ ಏನಾಗುತ್ತಿದೆ ಅಂತ ಗೊತ್ತಾಗೋ ಮುಂಚೆನೇ ನಿಮ್ಮ ದೇಹ ಪ್ರತಿಕ್ರಿಯಿಸಲು ಶುರು ಮಾಡಿರುತ್ತೆ. ಒಂದು ಕಷ್ಟದ ಸನ್ನಿವೇಶ ಮುಗಿದ ಮೇಲೆ ನಿಮ್ಮ ದೇಹ ಒತ್ತಡದ ಸ್ಥಿತಿಯಿಂದ ಮೊದಲಿದ್ದ ಸ್ಥಿತಿಗೆ ಬರುತ್ತೆ.

ಪ್ರಯೋಜನಕರ ಮತ್ತು ಹಾನಿಕರ ಒತ್ತಡ

ಕಷ್ಟಕರ ಮತ್ತು ಅಪಾಯಕರ ಸನ್ನಿವೇಶಗಳನ್ನು ನಿಭಾಯಿಸಲು ಒತ್ತಡ ಸಹಾಯ ಮಾಡುತ್ತೆ. ಈ ಪ್ರತಿಕ್ರಿಯೆ ಮೊದಲು ಮೆದುಳಲ್ಲಿ ಶುರು ಆಗುತ್ತೆ. ಇದರಿಂದ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ. ಇಂಥ ಒತ್ತಡ ಖಂಡಿತ ಪ್ರಯೋಜನಕರ. ಯಾಕಂದ್ರೆ ಇದು ನಮ್ಮ ಗುರಿಗಳನ್ನು ಮುಟ್ಟಲು, ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಲು, ಕ್ರೀಡೆಗಳಲ್ಲಿ ಇಂಟರ್‌ವ್ಯೂಗಳಲ್ಲಿ ಚೆನ್ನಾಗಿ ಮಾಡಲು ಸಹಾಯ ಮಾಡುತ್ತೆ.

ಆದರೆ ವಿಪರೀತ ಮತ್ತು ತುಂಬಾ ಸಮಯದಿಂದ ಇರುವ ಒತ್ತಡ ದೇಹಕ್ಕೆ ಹಾನಿಕರ. ಯಾಕಂದ್ರೆ ಇದು ದೇಹದ ಮೇಲೆ, ಮನಸ್ಸಿನ ಮೇಲೆ, ನಿಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತೆ. ಇದರಿಂದ ನಿಮ್ಮ ನಡವಳಿಕೆ ಸ್ವಭಾವ ಎಲ್ಲಾ ಬದಲಾಗಬಹುದು. ತುಂಬ ಸಮಯದ ವರೆಗೆ ಒತ್ತಡ ಇದ್ದರೆ ಕುಡಿಯೋದು, ಡ್ರಗ್ಸ್‌ ತಗೊಳ್ಳುವಂಥ ಚಟಗಳಿಗೂ ಬಲಿ ಬೀಳಬಹುದು. ಇದಿಷ್ಟೇ ಅಲ್ಲ, ಕೆಲವೊಮ್ಮೆ ವಿಪರೀತ ಸುಸ್ತಾಗುತ್ತೆ, ಖಿನ್ನತೆ ಬರುತ್ತೆ, ಆತ್ಮಹತ್ಯೆ ಮಾಡಿಕೊಳ್ಳುವಂಥ ಯೋಚನೆಗಳೂ ಬರಬಹುದು.

ಒತ್ತಡದಿಂದ ಎಲ್ಲರಿಗೂ ಒಂದೇ ರೀತಿಯ ಹಾನಿ ಆಗದೇ ಇದ್ದರೂ ಇದರಿಂದ ಬೇರೆ ಬೇರೆ ರೀತಿಯ ಕಾಯಿಲೆಗಳು ಬರುತ್ತೆ. ಅಷ್ಟೇ ಅಲ್ಲ, ಹೆಚ್ಚು ಕಡಿಮೆ ದೇಹದ ಎಲ್ಲಾ ಭಾಗಗಳ ಮೇಲೂ ಇದು ಪರಿಣಾಮ ಬೀರಬಹುದು.

ಒತ್ತಡದಿಂದ ದೇಹಕ್ಕೆ ಏನೆಲ್ಲಾ ಆಗುತ್ತೆ

ನರವ್ಯೂಹ ವ್ಯವಸ್ಥೆ.

ಒತ್ತಡದ ಪರಿಣಾಮಗಳನ್ನು ಸಹಿಸಲಾಗದೆ ಒಬ್ಬ ತನ್ನ ಹಣೆಯ ಮೇಲೆ ಕೈ ಇಟ್ಟಿದ್ದಾನೆ.

ಒತ್ತಡ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರೋದ್ರಿಂದ ಅಡ್ರಿನಾಲಿನ್‌ ಮತ್ತು ಕಾರ್ಟಿಸಾಲ್‌ ಅನ್ನೋ ಹಾರ್ಮೋನ್‌ಗಳು ಬಿಡುಗಡೆ ಆಗುತ್ತೆ. ಇದರಿಂದ ನಮ್ಮ ಹೃದಯದ ಬಡಿತ, ರಕ್ತದ ಒತ್ತಡ, ರಕ್ತದಲ್ಲಿರೋ ಗ್ಲೂಕೋಸ್‌ ಲೆವಲ್‌ ಕೂಡ ಜಾಸ್ತಿ ಆಗುತ್ತೆ. ಇದು ಕಷ್ಟದ ಸನ್ನಿವೇಶ ಬಂದ ತಕ್ಷಣ ಬೇಗ ಪ್ರತಿಕ್ರಿಯಿಸಲು ಸಹಾಯ ಮಾಡುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಕಿರಿಕಿರಿ, ಆತಂಕ, ಖಿನ್ನತೆ, ತಲೆನೋವು, ನಿದ್ರಾಹೀನತೆ

ಸ್ನಾಯು ಮತ್ತು ಮೂಳೆಗಳ ವ್ಯವಸ್ಥೆ.

ಒತ್ತಡ ಬಂದಾಗ ಸ್ನಾಯುಗಳು ಬಿಗಿ ಆಗೋದ್ರಿಂದ ಏಟಾಗುವ ಸಂದರ್ಭ ಇದ್ದರೆ ನಮ್ಮ ದೇಹಕ್ಕೆ ಸಂರಕ್ಷಣೆ ಸಿಗುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಮೈಕೈ ನೋವು, ತಲೆಸಿಡಿತ, ಸ್ನಾಯುಸೆಳೆತ

ಉಸಿರಾಟದ ವ್ಯವಸ್ಥೆ.

ಒತ್ತಡ ಬಂದಾಗ ನಿಮ್ಮ ಉಸಿರಾಟ ಜಾಸ್ತಿ ಆಗಿ ದೇಹಕ್ಕೆ ಬೇಕಾಗಿರುವ ಹೆಚ್ಚು ಆಕ್ಸಿಜನ್‌ ಸಿಗುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಉಸಿರಾಟದ ತೊಂದರೆ, ತೀವ್ರ ಹೃದಯ ಬಡಿತ

ಹೃದಯ ರಕ್ತ ನಾಳದ ವ್ಯವಸ್ಥೆ.

ಒತ್ತಡ ಬಂದಾಗ ನಿಮ್ಮ ಹೃದಯ ತೀವ್ರವಾಗಿ ಬಡಿದು ಜಾಸ್ತಿ ಕೆಲಸ ಮಾಡುತ್ತೆ. ಇದರಿಂದ ಇಡೀ ದೇಹಕ್ಕೆ ಬೇಕಾಗಿರೋ ರಕ್ತ ವಿತರಣೆ ಆಗುತ್ತೆ. ರಕ್ತ ನಾಳ ಹಿಗ್ಗಿ ಕುಗ್ಗಿ ದೇಹದಲ್ಲಿ ಯಾವ ಅಂಗಕ್ಕೆ ಜಾಸ್ತಿ ರಕ್ತ ಬೇಕೋ ಅಲ್ಲಿಗೆ ತಲಪುವಂತೆ ಮಾಡುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಹೈ ಬಿ.ಪಿ, ಹೃದಯಾಘಾತ, ಲಕ್ವ

ಹಾರ್ಮೋನ್‌ಗಳಿಗೆ ಸಂಬಂಧಿಸಿದ ವ್ಯವಸ್ಥೆ.

ಒತ್ತಡ ಬಂದಾಗ ತಕ್ಷಣ ಪ್ರತಿಕ್ರಿಯಿಸಲು ಈ ವ್ಯವಸ್ಥೆ, ಅಡ್ರಿನಾಲಿನ್‌ ಮತ್ತು ಕಾರ್ಟಿಸಾಲ್‌ ಅನ್ನೋ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತೆ. ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗಲು ಲಿವರ್‌, ರಕ್ತದಲ್ಲಿ ಇರೋ ಶುಗರ್‌ ಲೆವಲ್‌ ಅನ್ನು ಜಾಸ್ತಿ ಮಾಡುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಸಕ್ಕರೆ ಕಾಯಿಲೆ, ರೋಗ ನಿರೋಧಕ ಶಕ್ತಿಯ ಕೊರತೆ, ಮೂಡ್‌ನಲ್ಲಿ ಬದಲಾವಣೆ, ದೇಹದ ತೂಕದಲ್ಲಿ ಹೆಚ್ಚಳ

ಜೀರ್ಣಾಂಗ ವ್ಯವಸ್ಥೆ.

ಒತ್ತಡ ನಿಮ್ಮ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ವಾಕರಿಕೆ, ವಾಂತಿ, ಬೇಧಿ, ಮಲಬದ್ಧತೆ

ಸಂತಾನ ಉತ್ಪತ್ತಿ ವ್ಯವಸ್ಥೆ.

ಒತ್ತಡ, ಲೈಂಗಿಕ ಆಸಕ್ತಿ ಮತ್ತು ಕ್ರಿಯೆ ಮೇಲೆ ಪ್ರಭಾವ ಬೀರುತ್ತೆ. ಆದರೆ ವಿಪರೀತ ಒತ್ತಡದಿಂದ ಆಗುವ ಪರಿಣಾಮಗಳು ಕೆಳಗಿವೆ

  • ಲೈಂಗಿಕ ಕಾರ್ಯಕ್ಷಮತೆಯ ಕೊರತೆ, ಮುಟ್ಟಿನಲ್ಲಿ ಏರುಪೇರು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ