ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 3 ಪು. 12-13
  • ಪ್ರೀತಿ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರೀತಿ ತೋರಿಸಿ
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾಕೆ ಪ್ರಾಮುಖ್ಯ?
  • ಪವಿತ್ರ ಗ್ರಂಥದಲ್ಲಿರೋ ಸಲಹೆ
  • ನೀವೇನು ಮಾಡಬಹುದು?
  • ಅವರು ಭೇದಭಾವ ಮಾಡೋದನ್ನ ಬಿಟ್ಟುಬಿಟ್ರು
    ಎಚ್ಚರ!—2020
  • ಭೇದಭಾವ—ಈ ಸೋಂಕು ನಿಮಗೆ ತಗಲಿದೆಯಾ?
    ಎಚ್ಚರ!—2020
  • ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ
    ಬದುಕು ಬದಲಾದ ವಿಧ
  • ಪೂರ್ವಗ್ರಹದ ಕಾರಣಗಳು
    ಎಚ್ಚರ!—2004
ಇನ್ನಷ್ಟು
ಎಚ್ಚರ!—2020
g20 ನಂ. 3 ಪು. 12-13
ಒಬ್ಬ ಭಾರತೀಯ ಮಹಿಳೆ ವಯಸ್ಸಾದ ಕಕೇಶಿಯನ್‌ ಮಹಿಳೆಗೆ ತರಕಾರಿಯ ಬ್ಯಾಗ್‌ ಹಿಡಿದುಕೊಂಡು ಮೆಟ್ಟಿಲು ಹತ್ತಲು ಸಹಾಯ ಮಾಡುತ್ತಿದ್ದಾಳೆ.

ಪ್ರೀತಿ ತೋರಿಸಿ

ಯಾಕೆ ಪ್ರಾಮುಖ್ಯ?

ಪ್ರೀತಿ ತೋರಿಸಲಿಲ್ಲ ಅಂದ್ರೆ ಭೇದಭಾವನ ನಮ್ಮ ಮನಸ್ಸಿಂದ ತೆಗೆದುಹಾಕೋದು ಕಷ್ಟ. ಉದಾಹರಣೆಗೆ ಕೆಲವು ಕಾಯಿಲೆಗಳಿಂದ ಹುಷಾರಾಗೋಕೆ ಸ್ವಲ್ಪ ಟೈಂ ಮತ್ತು ಪ್ರಯತ್ನ ಬೇಕು. ಅದೇ ತರ ಭೇದಭಾವ ಅನ್ನೋದು ನಮ್ಮ ಮನಸ್ಸಲ್ಲಿ ಬೇರೂರಿಬಿಟ್ಟಿದ್ರೆ ಅದನ್ನ ತೆಗೆದುಹಾಕೋಕೆ ಸ್ವಲ್ಪ ಟೈಂ ಮತ್ತು ಪ್ರಯತ್ನ ಬೇಕು. ಹಾಗಾಗಿ ಪ್ರೀತಿ ತೋರಿಸಿ.

ಪವಿತ್ರ ಗ್ರಂಥದಲ್ಲಿರೋ ಸಲಹೆ

ಕೊಲಾಜ್‌: 1. ಏಷ್ಯಾದ ಒಬ್ಬ ವ್ಯಕ್ತಿ ಕಾಫಿ ಕಪ್‌ಗಳನ್ನ ಹಿಡ್ಕೊಂಡಿರುವ ಒಬ್ಬ ಕಪ್ಪು ಮನುಷ್ಯನಿಗಾಗಿ ಬಾಗಿಲು ತೆರೆಯುತ್ತಿದ್ದಾನೆ. 2. ಅದೇ ಕಪ್ಪು ಮನುಷ್ಯ ಹಿಂದಿನ ಚಿತ್ರಿದಲ್ಲಿದ್ದ ಭಾರತೀಯ ಮಹಿಳೆಗೆ ಮತ್ತು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆಯವರಿಗೆ ಕಾಫಿ ತಂದುಕೊಡ್ತಾ ಇದ್ದಾನೆ.

“ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.”—ಕೊಲೊಸ್ಸೆ 3:14.

ಈ ಸಲಹೆಯಿಂದ ನಾವೇನು ಕಲಿಬಹುದು? ನೀವು ಯಾರಿಗಾದ್ರು ಸಹಾಯ ಮಾಡಿದ್ರೆ ನಿಮ್ಮ ಮಧ್ಯ ಇರೋ ಪ್ರೀತಿ ಜಾಸ್ತಿ ಆಗುತ್ತೆ. ಪ್ರೀತಿ ಜಾಸ್ತಿ ಆಗ್ತಾ ಹೋದಂತೆ ನಿಮ್ಮ ಮನಸ್ಸಲ್ಲಿ ಅವರ ಬಗ್ಗೆ ಭೇದಭಾವ ಅಥವಾ ದ್ವೇಷ ಇದ್ರೆ ಕಮ್ಮಿ ಆಗುತ್ತೆ.

ನೀವೇನು ಮಾಡಬಹುದು?

ಕೊಲಾಜ್‌: 1.ಒಬ್ಬ ಭಾರತೀಯ ಮಹಿಳೆ ವಯಸ್ಸಾದ ಕಕೇಶಿಯನ್‌ ಮಹಿಳೆಗೆ ತರಕಾರಿಯ ಬ್ಯಾಗ್‌ ಹಿಡಿದುಕೊಂಡು ಮೆಟ್ಟಿಲು ಹತ್ತಲು ಸಹಾಯ ಮಾಡುತ್ತಿದ್ದಾಳೆ. 2. ವಯಸ್ಸಾದ ಕಕೇಶಿಯನ್‌ ಮಹಿಳೆ ತನ್ನ ನೆರೆಯವನಿಗೆ ಅಂದ್ರೆ ಈ ಮೊದಲು ಚಿತ್ರಿದಲ್ಲಿದ್ದ ಏಷ್ಯನ್‌ ವ್ಯಕ್ತಿಗೆ ಕುಕೀಸ್‌ಗಳನ್ನ ತಂದುಕೊಡುತ್ತಿದ್ದಾಳೆ.

ನಿಮಗೆ ತಪ್ಪಭಿಪ್ರಾಯ ಇದ್ದ ಗುಂಪಿನ ಜನರಿಗೆ ಪ್ರೀತಿ ತೋರಿಸಿ. ಪ್ರೀತಿ ತೋರಿಸೋಕೆ ದೊಡ್ಡ ದೊಡ್ಡ ವಿಷಯಗಳನ್ನೇ ಮಾಡಬೇಕಂತಿಲ್ಲ, ಚಿಕ್ಕ-ಪುಟ್ಟ ವಿಷಯಗಳನ್ನ ಮಾಡಿದ್ರು ಸಾಕು. ಉದಾಹರಣೆಗೆ:

ಚಿಕ್ಕ-ಪುಟ್ಟ ಸಹಾಯ ಮಾಡ್ತಾ ಪ್ರೀತಿ ತೋರಿಸಿ, ಆಗ ಭೇದಭಾವನ ಮನಸ್ಸಿಂದ ತೆಗೆದುಹಾಕೋಕೆ ಆಗುತ್ತೆ

  • ಬಸ್ಸಲ್ಲಿ ಪ್ರಯಾಣಿಸುವಾಗ ನಿಮ್ಮ ಸೀಟು ಬಿಟ್ಟುಕೊಡಬಹುದು. ಅವರಿಗೆ ಯಾವುದಾದ್ರು ವಿಳಾಸ ಗೊತ್ತಿಲ್ಲ ಅಂದ್ರೆ ದಾರಿ ತೋರಿಸಿ ಸಹಾಯ ಮಾಡಬಹುದು.

  • ಅವ್ರಿಗೆ ನಿಮ್ಮ ಭಾಷೆ ಅಷ್ಟಾಗಿ ಗೊತ್ತಿಲ್ಲ ಅಂದ್ರೂ ಅವರ ಯೋಗಕ್ಷೇಮ ವಿಚಾರಿಸಲು ಪ್ರಯತ್ನಿಸಬಹುದು.

  • ಅವರು ಮಾಡೋ ಕೆಲವು ವಿಷಯಗಳು ನಿಮಗೆ ಇಷ್ಟ ಆಗದಿದ್ದರೆ ಕೋಪ ಮಾಡಿಕೊಳ್ಳದೆ ತಾಳ್ಮೆ ತೋರಿಸಬಹುದು.

  • ಅವರು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳುವಾಗ ಕಿವಿಗೊಟ್ಟು ಕೇಳಬಹುದು.

ಬದಲಾದ ಯೋಚ್ನೆ, ಒಳ್ಳೇ ಜೀವನ: ನಜ಼ರೀ (ಗಿನಿ-ಬಿಸ್ಸಾವ್‌)

“ಒಂದು ಸಮಯದಲ್ಲಿ ನಂಗೆ ಬೇರೆ ದೇಶದಿಂದ ನಮ್ಮ ದೇಶಕ್ಕೆ ಬರೋ ಜನರ ಕಂಡ್ರೆ ಆಗ್ತಿರಲಿಲ್ಲ. ಯಾಕಂದ್ರೆ ಅವರು ಹಣ ಮಾಡೋಕೆ ಸರ್ಕಾರಕ್ಕೆ ಸುಳ್ಳು ಹೇಳ್ತಾರೆ, ಕೆಟ್ಟ ವಿಷಯಗಳನ್ನ ಮಾಡ್ತಾರೆ ಅಂತ ಜನರು ಹೇಳೋದನ್ನ ಕೇಳಿಸಿಕೊಂಡಿದ್ದೆ. ನಾನು ಅವ್ರಿಗೆ ಭೇದಭಾವ ಮಾಡ್ತಿದ್ದೀನಿ ಅಂತ ಅನಿಸುತ್ತಿರಲಿಲ್ಲ. ಯಾಕಂದ್ರೆ ಎಲ್ಲ ಜನರು ಅವರ ಬಗ್ಗೆ ಹೀಗೆ ಹೇಳುತ್ತಿದ್ರು.

“ಆದ್ರೆ ಸಮಯ ಹೋದಂತೆ ನನ್ನ ಮನಸ್ಸಲ್ಲೇ ಅವ್ರಿಗೆ ಭೇದಭಾವ ಮಾಡ್ತಿದ್ದೀನಿ ಅಂತ ಅರ್ಥಮಾಡ್ಕೊಂಡೆ. ಬೈಬಲ್‌ ಸಲಹೆಗಳನ್ನ ಪಾಲಿಸಿ ನಾನು ಯೋಚಿಸೋ ರೀತಿನ ಬದಲಾಯಿಸಿಕೊಂಡು ಅವ್ರಿಗೆ ಪ್ರೀತಿ ತೋರಿಸೋದನ್ನ ಕಲಿತೆ. ಈಗ ನಾನು ಅವರು ಸಿಕ್ಕಾಗ ಮಾತಾಡಿಸ್ತೀನಿ. ಅವರ ಜೊತೆ ಮಾತಾಡೋದು ಅಂದ್ರೆ ನನಗೀಗ ಇಷ್ಟ ಆಗುತ್ತೆ.”

“ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ”

ರಫಿಕಾ ಮೊರಿಸ್‌.

ರಫಿಕಾ ಅನ್ಯಾಯದ ವಿರುದ್ಧ ಹೋರಾಡೋಕೆ ಒಂದು ಕ್ರಾಂತಿಕಾರಿ ಗುಂಪಿನಲ್ಲಿ ಸೇರಿಕೊಂಡ್ರು. ಅವರು ಒಂದ್ಸಲ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹೋದ್ರು. ಅಲ್ಲಿ ಬೇರೆಬೇರೆ ದೇಶದ ಜನರು ಒಟ್ಟಾಗಿ ಇರೋದನ್ನ, ಒಬ್ಬರಿಗೊಬ್ಬರು ಪ್ರೀತಿ ತೋರಿಸೋದನ್ನ ಅವರು ನೋಡಿದ್ರು. ಅವರಿಗೂ ಇದೇ ಬೇಕಾಗಿತ್ತು.

ರಫಿಕಾ ಮೊರಿಸ್‌: ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ ಅನ್ನೋ ವಿಡಿಯೋನ jw.org ವೆಬ್‌ಸೈಟಲ್ಲಿ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ