ನೀವೂ ವಿವೇಕಿಗಳಾಗಬಹುದು
“ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” (2 ತಿಮೊತಿ 3:16) ಈ ವಚನದಲ್ಲಿರೋ “ದೇವರೇ ಕೊಟ್ಟಿದ್ದು” ಅನ್ನೋದ್ರ ಅರ್ಥ ಪವಿತ್ರ ಗ್ರಂಥದಲ್ಲಿ ದೇವರು ತನ್ನ ಯೋಚನೆಗಳನ್ನ ಮನುಷ್ಯರಿಂದ ಬರೆಸಿದರು.
ದೇವರ ವಿವೇಕದಿಂದ ನಾವು ಪ್ರಯೋಜನ ಪಡಿಬೇಕಂತ ಆತನು ಬಯಸ್ತಾನೆ
“ಯೆಹೋವನಾದ ನಾನೇ . . . ನಿನ್ನ ಒಳಿತಿಗಾಗಿ ನಿನಗೆ ಬೋಧಿಸುವವನು . . . ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ. ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ! ನಿನ್ನ ಶಾಂತಿ ನದಿ ತರನೂ ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.”—ಯೆಶಾಯ 48:17, 18.
ಇದನ್ನು ದೇವರು ನಮಗೆ ಹೇಳ್ತಿದ್ದಾರೆ. ನಾವು ಮನಶ್ಶಾಂತಿಯಿಂದ ಯಾವಾಗಲೂ ಖುಷಿಯಾಗಿ ಇರಬೇಕು ಅನ್ನೋದೇ ಆತನ ಆಸೆ. ಅದನ್ನ ಪಡ್ಕೊಳ್ಳೋಕೆ ದೇವರು ನಮಗೆ ಸಹಾಯಮಾಡ್ತಾರೆ.
ದೇವರು ನಿಮಗೆ ವಿವೇಕ ಕೊಡುತ್ತಾರೆ
“ಎಲ್ಲ ದೇಶಗಳಲ್ಲಿ ಮೊದಲು ಸಿಹಿಸುದ್ದಿ ಸಾರಬೇಕು.”—ಮಾರ್ಕ 13:10.
ಈ “ಸಿಹಿಸುದ್ದಿ” ಏನಂದ್ರೆ ಯೆಹೋವ ದೇವರು ನಮ್ಮ ಕಷ್ಟಗಳನ್ನೆಲ್ಲ ತೆಗೆದುಹಾಕಿ, ಸತ್ತವರನ್ನ ಮತ್ತೆ ಜೀವಂತ ಎಬ್ಬಿಸಿ, ಇಡೀ ಭೂಮಿಯನ್ನ ಸುಂದರ ತೋಟವಾಗಿ ಮಾಡ್ತಾರೆ. ಈ ಸಿಹಿಸುದ್ದಿಯನ್ನೇ ಯೆಹೋವನ ಸಾಕ್ಷಿಗಳು ಇಡೀ ಲೋಕದಲ್ಲಿ ಸಾರ್ತಿದ್ದಾರೆ.