ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಯೋಚನೆ ಮೇಲೆ
ಇವತ್ತು ಜನರು ತುಂಬ ವಿಷಯಗಳನ್ನು ಕಲಿಯುತ್ತಿದ್ದಾರೆ. ಮಕ್ಕಳಿಗಾಗಲಿ, ದೊಡ್ಡವರಿಗಾಗಲಿ ತುಂಬ ವಿಷಯ ಕಲಿಯಲು ತಂತ್ರಜ್ಞಾನ ಸಹಾಯ ಮಾಡುತ್ತೆ. ಈಗ ಮನೆಯಲ್ಲಿ ಇದ್ದುಕೊಂಡೇ ನಮ್ಗೆ ಬೇಕಾದ ಎಲ್ಲಾ ಮಾಹಿತಿಯನ್ನು ತಂತ್ರಜ್ಞಾನದ ಸಹಾಯದಿಂದ ತಿಳಿಯಬಹುದು.
ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುವವರಿಗೆ . . .
ಶ್ರದ್ಧೆಯಿಂದ ಓದಲು ಕಷ್ಟವಾಗುತ್ತೆ.
ಒಂದು ವಿಷಯದ ಮೇಲೆ ಗಮನವಿಡಲು ಕಷ್ಟವಾಗುತ್ತೆ.
ಒಬ್ಬರೇ ಇರುವಾಗ ಬೇಗ ಬೋರಾಗುತ್ತೆ.
ನಿಮಗೆ ಗೊತ್ತಿರಬೇಕಾದ ವಿಷಯಗಳು
ಓದುವಾಗ
ಒಂದು ವಿಷಯವನ್ನು ಓದುವಾಗ ಅದನ್ನು ತಾಳ್ಮೆಯಿಂದ ಅರ್ಥಮಾಡಿಕೊಳ್ಳದೆ ಇಂಟರ್ನೆಟ್ಟಲ್ಲಿ ಹುಡುಕುತ್ತಾರೆ.
ಮೇಲ್ಮೇಲೆ ಓದೋದ್ರಿಂದ ಒಂದು ಪ್ರಶ್ನೆಗೆ ಬೇಗ ಉತ್ತರ ಸಿಗುತ್ತೆ. ಆದ್ರೆ ಒಂದು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸುಮ್ಮನೆ ಕಣ್ಣಾಡಿಸಿದ್ರೆ ಸಾಕಾಗಲ್ಲ.
ಯೋಚಿಸಿ: ದೊಡ್ಡ ದೊಡ್ಡ ಪ್ಯಾರ ಓದುವಾಗ ಅರ್ಥಮಾಡಿಕೊಂಡು ಓದ್ತೀರಾ? ಹೀಗೆ ಮಾಡೋದ್ರಿಂದ ಏನು ಪ್ರಯೋಜನ?—ಜ್ಞಾನೋಕ್ತಿ 18:15.
ಗಮನ ಕೇಂದ್ರೀಕರಿಸಿ
ಒಂದೇ ಸಮಯದಲ್ಲಿ ಎರಡು ಮೂರು ಕೆಲಸ ಒಟ್ಟಿಗೆ ಮಾಡೋಕೆ ತಂತ್ರಜ್ಞಾನ ಸಹಾಯ ಮಾಡುತ್ತೆ ಅಂತ ಕೆಲವರು ನೆನಸ್ತಾರೆ. ಉದಾಹರಣೆಗೆ, ಓದುವ ಸಮಯದಲ್ಲಿ ಫ್ರೆಂಡ್ಸಿಗೆ ಮೆಸೇಜ್ ಕಳಿಸಬಹುದು ಅಂತ ನೆನಸ್ತಾರೆ. ಹೀಗೆ ಮಾಡೋದ್ರಿಂದ ಓದಿದ್ದೂ ತಲೆಗೆ ಹತ್ತಲ್ಲ, ಫ್ರೆಂಡಿಗೂ ಗಮನಕೊಟ್ಟ ಹಾಗೆ ಆಗಲ್ಲ.
ನಮಗೆ ಸ್ವಶಿಸ್ತು ಇದ್ರೆ ಒಂದು ಕಡೆ ಗಮನ ಕೇಂದ್ರೀಕರಿಸಲು ಆಗುತ್ತೆ. ಗ್ರೇಸ್ ಅನ್ನೋ ಹುಡುಗಿ ಹೇಳಿದ್ದು “ಸ್ವಶಿಸ್ತು ಇದ್ರೆ ನಮ್ಮಿಂದ ಹೆಚ್ಚು ತಪ್ಪಾಗಲ್ಲ, ಚಿಂತೆನೂ ಕಡಿಮೆಯಾಗುತ್ತೆ. ಒಂದೇ ಟೈಮಲ್ಲಿ ಎರಡು ಮೂರು ಕೆಲಸ ಒಟ್ಟಿಗೆ ಮಾಡಿ ಮನಸ್ಸು ಚಂಚಲ ಆಗೋದಕ್ಕಿಂತ ಒಂದು ವಿಷಯದ ಮೇಲೆ ಗಮನಕೊಡೋದು ಒಳ್ಳೇದು ಅಂತ ಕಲಿತಿದ್ದೀನಿ.”
ಯೋಚಿಸಿ: ನೀವು ಓದುವಾಗ ಬೇರೆಬೇರೆ ವಿಷಯ ಒಟ್ಟಿಗೆ ಮಾಡೋದ್ರಿಂದ ಗಮನ ಕೊಡೋಕೆ ಮತ್ತು ನೆನಪಿಡೋಕೆ ಆಗ್ತಿದೆಯಾ?—ಜ್ಞಾನೋಕ್ತಿ 17:24.
ಒಬ್ಬರೇ ಇರುವಾಗ
ಕೆಲವರಿಗೆ ಒಬ್ಬರೇ ಇರೋಕೆ ಕಷ್ಟ ಆದಾಗ ತಂತ್ರಜ್ಞಾನವನ್ನು ತುಂಬ ಬಳಸ್ತಾರೆ. ಒಲಿವಿಯಾ ಅನ್ನೋ ಸ್ತ್ರೀ ಹೇಳೋದು “ನನಗೆ ಫೋನ್, ಟ್ಯಾಬ್, ಟಿ.ವಿ ಇಲ್ಲದೆ 15 ನಿಮಿಷನೂ ಇರೋಕೆ ಆಗಲ್ಲ.”
ಆದ್ರೆ ನಾವು ಒಬ್ಬರೇ ಇರುವಾಗ ಒಂದು ವಿಷ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಅದ್ರ ಬಗ್ಗೆ ಯೋಚಿಸಲು ಟೈಮ್ ಸಿಗುತ್ತೆ. ಹೀಗೆ ಸಿಗೋ ಸಮಯ ಚೆನ್ನಾಗಿ ಬಳಸಿದ್ರೆ ಚಿಕ್ಕವರಿಗೂ ದೊಡ್ಡವರಿಗೂ ಪ್ರಯೋಜನ ಆಗುತ್ತೆ.
ಯೋಚಿಸಿ: ನೀವು ಒಬ್ಬರೇ ಇರುವಾಗ ಆ ಸಮಯವನ್ನು ಹೇಗೆ ಉಪಯೋಗಿಸ್ತೀರಾ?—1 ತಿಮೊತಿ 4:15.
ನೀವು ಮಾಡಬೇಕಾದ ವಿಷಯಗಳು
ತಂತ್ರಜ್ಞಾನವನ್ನು ಎಷ್ಟು ಬಳಸ್ತೀರಾ ಅಂತ ಪರೀಕ್ಷಿಸಿ
ನಿಮ್ಮ ಯೋಚಿಸುವ ಸಾಮರ್ಥ್ಯ ಹೆಚ್ಚಿಸಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು? ಗಮನಕೊಡಲು ಮತ್ತು ಕಲಿಯಲು ನಿಮಗಿರೋ ಸಾಮರ್ಥ್ಯವನ್ನು ತಂತ್ರಜ್ಞಾನ ಹೇಗೆ ಹಾಳುಮಾಡಬಹುದು?
ಬೈಬಲ್ ತತ್ವ: “ವಿವೇಕವನ್ನ, ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.”— ಜ್ಞಾನೋಕ್ತಿ 3:21.