ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g21 ನಂ. 3 ಪು. 10-13
  • ಬೈಬಲ್‌ ನಮಗೆ ಏನು ಕಲಿಸುತ್ತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ನಮಗೆ ಏನು ಕಲಿಸುತ್ತೆ
  • ಎಚ್ಚರ!—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಯಾವುದರ ಬಗ್ಗೆ ಹೇಳಲ್ಲ?
  • ದೇವರು ವಿಶ್ವವನ್ನ ಸೃಷ್ಟಿ ಮಾಡೋಕೆ ಶುರುಮಾಡಿದ್ದು ಯಾವಾಗ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?
    ಎಚ್ಚರ!—2006
  • ಆದಿಕಾಂಡ 1:1—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”
    ಬೈಬಲ್‌ ವಚನಗಳ ವಿವರಣೆ
  • ಜೀವ ತನ್ನಿಂದ ತಾನೇ ಬಂತಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಎಚ್ಚರ!—2021
g21 ನಂ. 3 ಪು. 10-13

ಬೈಬಲ್‌ ನಮಗೆ ಏನು ಕಲಿಸುತ್ತೆ?

“ಹೀಗೆ ಭೂಮಿ ಆಕಾಶ ಸೃಷ್ಟಿ ಆಯ್ತು.” (ಆದಿಕಾಂಡ 2:4) ಭೂಮಿ ಹೇಗೆ ಬಂತು ಅಂತ ಬೈಬಲ್‌ ಈ ರೀತಿ ವಿವರಿಸುತ್ತೆ. ಆದ್ರೆ ವಿಜ್ಞಾನ ಹೇಳೋದನ್ನ ಬೈಬಲ್‌ ಒಪ್ಪುತ್ತಾ? ಬನ್ನಿ ಕೆಲವು ಉದಾಹರಣೆ ನೋಡೋಣ.

ಆರಂಭ: ಆಕಾಶ ಮತ್ತು ಭೂಮಿ ಸೃಷ್ಟಿಯಾಯ್ತು

ಈ ವಿಶ್ವ ಮುಂಚಿನಿಂದಲೂ ಇತ್ತಾ?

ಆದಿಕಾಂಡ 1:1 “ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು” ಅಂತ ಹೇಳುತ್ತೆ.

20 ನೇ ಶತಮಾನದ ಕೊನೆಯಷ್ಟಕ್ಕೆ ಅನೇಕ ಪ್ರಮುಖ ವಿಜ್ಞಾನಿಗಳು ಈ ವಿಶ್ವ ಮುಂಚಿನಿಂದಲೂ ಇತ್ತು ಅಂತ ನಂಬುತ್ತಿದ್ದರು. ಆದರೆ ಇತ್ತೀಚಿಗೆ ನಡೆದ ಅಧ್ಯಯನದ ಆಧಾರದ ಮೇಲೆ ಹೆಚ್ಚಿನ ವಿಜ್ಞಾನಿಗಳು ಈ ವಿಶ್ವಕ್ಕೆ ಒಂದು ಆರಂಭ ಇತ್ತು ಅಂತ ಒಪ್ಪಿಕೊಳ್ತಾರೆ.

ಆರಂಭದಲ್ಲಿ ಭೂಮಿ ಹೇಗಿತ್ತು?

ಆದಿಕಾಂಡ 1:2, 9 ರಲ್ಲಿ ಹೇಳಿದ ಹಾಗೆ ಆರಂಭದಲ್ಲಿ “ಭೂಮಿ ಖಾಲಿಯಾಗಿತ್ತು, ವಾಸಕ್ಕೆ ಯೋಗ್ಯವಾಗಿ ಇರಲಿಲ್ಲ.” ಎಲ್ಲ ಕಡೆ ನೀರಿತ್ತು.

ಮೊದಲು ಭೂಮಿ ಹೀಗಿತ್ತು ಅಂತ ವಿಜ್ಞಾನಿಗಳೂ ಒಪ್ಪಿಕೊಳ್ತಾರೆ. ಜೀವಶಾಸ್ತಜ್ಞರಾದ ಪ್ಯಾಟ್ರಿಕ್‌ ಶೀಹ್‌ ಹೇಳಿದ್ದು, ಆರಂಭದ ಭೂಮಿಯಲ್ಲಿ “ಉಸಿರಾಡೋಕೆ ಬೇಕಾದ ಆಮ್ಲಜನಕ ಇರಲಿಲ್ಲ . . . ಇದು ನೋಡೋಕೂ ವಿಚಿತ್ರವಾಗಿತ್ತು.” ಆಸ್ಟ್ರಾನಮಿ ಮ್ಯಾಗಜ಼ಿನ್‌ ಹೇಳೋದು, “ಆರಂಭದಲ್ಲಿ ಭೂಮಿಯಲೆಲ್ಲ ನೀರು ತುಂಬಿತ್ತು. ಎಲ್ಲೂ ಒಣ ನೆಲಾನೇ ಇರಲಿಲ್ಲ ಅಂತ ಹೊಸ ಸಂಶೋಧನೆ ತಿಳಿಸುತ್ತೆ.”

ಕಾಲಾನಂತರ ವಾತಾವರಣ ಹೇಗೆ ಬದಲಾಯ್ತು?

ಆದಿಕಾಂಡ 1:3-5 ರಲ್ಲಿ ಹೇಳಿದ ಹಾಗೆ ಆರಂಭದಲ್ಲಿ ಬೆಳಕು ವಾತಾವರಣದಲ್ಲಿ ಅಷ್ಟೇ ಇತ್ತು. ಅದು ಎಲ್ಲಿಂದ ಬರುತ್ತಿದೆ ಅಂತ ಗೊತ್ತಾಗುತ್ತಿರಲಿಲ್ಲ. ಸಮಯಾನಂತರ ಅದು ಸೂರ್ಯಚಂದ್ರರ ಬೆಳಕು ಅಂತ ಭೂಮಿಯಿಂದ ಗುರುತಿಸೋಕೆ ಆಯ್ತು.—ಆದಿಕಾಂಡ 1:14-18.

ಭೂಮಿ ಮೇಲಿರೋ ಜೀವರಾಶಿಗಳನ್ನು 24-ತಾಸುಗಳ ದಿನದಲ್ಲಿ ಸೃಷ್ಟಿಸಲಾಯ್ತು ಅಂತ ಬೈಬಲ್‌ ಹೇಳಲ್ಲ

ಸ್ಮಿತ್‌ ಸೋನಿಯನ್‌ ಎನ್ವಿರಾನ್ಮೆಂಟಲ್‌ ರಿಸರ್ಚ್‌ ಸೆಂಟರ್‌ ಹೇಳೋ ಪ್ರಕಾರ, ವಾತಾವರಣ ಮೊದಲು ಮಂದವಾದ ಬೆಳಕು ಮಾತ್ರ ಭೂಮಿಗೆ ಬರೋಕೆ ಬಿಡುತ್ತಿತ್ತು. “ಆರಂಭದಲ್ಲಿ ಗಾಳಿಯಲ್ಲಿನ ಮಿಥೇನ್‌ ಹನಿಗಳು ಇಡೀ ಭೂಮಿಯನ್ನು ಆವರಿಸಿಕೊಂಡಿತ್ತು. ಹಾಗಾಗಿ ಎಲ್ಲಾ ಕಡೆ ಮಬ್ಬು ಮಬ್ಬಾಗಿತ್ತು. ಮಿಥೇನ್‌ ಕಣಗಳು ತಿಳಿಯಾದ ಮೇಲೆ ನೀಲಿ ಆಕಾಶ ಕಾಣಿಸ್ತು.”

ಯಾವ ಕ್ರಮದಲ್ಲಿ ಭೂಮಿ ಮೇಲೆ ಜೀವಿಗಳ ಸೃಷ್ಟಿಯಾಯಿತು?

1​—ಮೊದಲ ದಿನ: ಭೂಮಿಯ ವಾತಾವರಣದಲ್ಲಿ ಮಂದ ಬೆಳಕು ಪ್ರವೇಶಿಸಿತು.—ಆದಿಕಾಂಡ 1: 3-5

2​—ಎರಡನೇ ದಿನ: ಭೂಮಿಯ ಮೇಲೆ ನೀರಿತ್ತು ಮತ್ತು ನೀರಿನ ಆವಿ ಒಂದು ಕವಚದಂತೆ ದಟ್ಟವಾಗಿ ತುಂಬಿಕೊಂಡಿತ್ತು. ನಂತರ ಇವೆರಡೂ ಬೇರೆಬೇರೆ ಆಯ್ತು.—ಆದಿಕಾಂಡ 1:6-8

3​—ಮೂರನೇ ದಿನ: ನೀರು ಮತ್ತು ನೆಲ ಬೇರೆಬೇರೆ ಆಯಿತು.—ಆದಿಕಾಂಡ 1:9-13

4​—ನಾಲ್ಕನೇ ದಿನ: ಭೂಮಿಯಿಂದ ಸೂರ್ಯಚಂದ್ರರು ಕಾಣಿಸ್ತಿದ್ರು.—ಆದಿಕಾಂಡ 1:14-19

5​—ಐದನೇ ದಿನ: ದೇವರು ನೀರಲ್ಲಿ ಚಲಿಸೋ ಜೀವಿಗಳನ್ನು ಮತ್ತು ಆಕಾಶದಲ್ಲಿ ಹಾರೋ ಜೀವಿಗಳನ್ನು ಸೃಷ್ಟಿಮಾಡಿದನು. ಅವುಗಳಿಗೆ ಸಂತಾನೋತ್ಪತ್ತಿ ಮಾಡೋ ಸಾಮರ್ಥ್ಯವನ್ನೂ ಕೊಟ್ಟನು.—ಆದಿಕಾಂಡ 1:20-23

6​—ಆರನೇ ದಿನ: ಪ್ರಾಣಿಗಳನ್ನು ಸೃಷ್ಟಿಸಲಾಯಿತು. ಆರನೇ ದಿನದ ಕೊನೆಯಲ್ಲಿ ಮೊದಲ ಮನುಷ್ಯರನ್ನು ಸೃಷ್ಟಿಸಲಾಯಿತು.—ಆದಿಕಾಂಡ 1:24-31

ಆದಿಕಾಂಡ 1:20-27 ರಲ್ಲಿ ಮೀನುಗಳು, ಪಕ್ಷಿಗಳು, ಪ್ರಾಣಿಗಳು ಮತ್ತು ಕೊನೆಯಲ್ಲಿ ಮನುಷ್ಯರು ಸೃಷ್ಟಿಯಾದ್ರು ಅಂತ ಹೇಳುತ್ತೆ. ಮೊದಲ ಸಸ್ತನಿಗಳಿಗಿಂತ ತುಂಬ ಹಿಂದೆನೇ ಮೊದಲ ಮೀನುಗಳು ಕಾಣಿಸಿಕೊಳ್ತು. ಮನುಷ್ಯರು ಎಷ್ಟೋ ಸಮಯದ ನಂತರ ಕಾಣಿಸಿಕೊಂಡ್ರು ಅಂತ ವಿಜ್ಞಾನಿಗಳು ನಂಬುತ್ತಾರೆ.

ಕಾಲಾನಂತರ ಜೀವಿಗಳ ರೂಪದಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ ಅಂತ ಬೈಬಲ್‌ ಹೇಳಲ್ಲ

“ಬೈಬಲಲ್ಲಿ ಸೃಷ್ಟಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಿರೋದಾದ್ರೂ ಅದ್ರಲ್ಲಿರೋ ಹೇಳಿಕೆ ಮತ್ತು ಸಮಯ ಈಗ ವಿಜ್ಞಾನ ಕಂಡುಹಿಡಿದಿರೋ ವಿಷಯಕ್ಕೆ ಹೊಂದಾಣಿಕೆಯಲ್ಲಿದೆ.”—ಜೆರಾಲ್ಡ್‌ ಎಲ್‌ ಶ್ರೋಡರ್‌, ಭೌತಶಾಸ್ತ್ರಜ್ಞ.

ಬೈಬಲ್‌ ಯಾವುದರ ಬಗ್ಗೆ ಹೇಳಲ್ಲ?

ಬೈಬಲ್‌ ಹೇಳೋ ವಿಷಯಕ್ಕೂ ವಿಜ್ಞಾನ ಕಂಡುಹಿಡಿದಿರೋ ವಿಷಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಅಂತ ಕೆಲವರು ಹೇಳ್ತಾರೆ. ಅವರು ಬೈಬಲನ್ನು ತಪ್ಪರ್ಥ ಮಾಡಿಕೊಂಡಿರೋದ್ರಿಂದ ಹಾಗೆ ಹೇಳ್ತಾರೆ.

ಈ ವಿಶ್ವ ಮತ್ತು ಭೂಮಿ ಅಸ್ತಿತ್ವಕ್ಕೆ ಬಂದು ಬರೀ 6000 ವರ್ಷಗಳಾಗಿವೆ ಅಂತ ಬೈಬಲ್‌ ಹೇಳಲ್ಲ. ಬದಲಿಗೆ ಭೂಮಿ ಮತ್ತು ವಿಶ್ವ “ಆರಂಭದಲ್ಲಿ” ಸೃಷ್ಟಿ ಆಯ್ತು ಅಂತ ಹೇಳುತ್ತೆ. (ಆದಿಕಾಂಡ 1:1) ಆದ್ರೆ ನಿರ್ದಿಷ್ಟ ಸಮಯವನ್ನು ಬೈಬಲ್‌ ಹೇಳಲ್ಲ.

ಭೂಮಿ ಮೇಲಿರೋ ಜೀವರಾಶಿಗಳನ್ನು 24-ತಾಸುಗಳ ದಿನದಲ್ಲಿ ಸೃಷ್ಟಿಸಲಾಯ್ತು ಅಂತ ಬೈಬಲ್‌ ಹೇಳಲ್ಲ. ಬದಲಿಗೆ ಸಮಯಾವಧಿಯನ್ನು ಸೂಚಿಸಲು “ದಿನ” ಅನ್ನೋ ಪದವನ್ನು ಬಳಸಲಾಗಿದೆ. ಉದಾಹರಣೆಗೆ ಈ ಭೂಮಿ ಮತ್ತು ಅದ್ರಲ್ಲಿರೋ ಜೀವರಾಶಿಗಳ ಸೃಷ್ಟಿಯ ಆರು ದಿನಗಳು ದೀರ್ಘಾವಧಿಯ ಸಮಯವನ್ನು ಸೂಚಿಸೋದ್ರಿಂದ ಆದಿಕಾಂಡ 1 ನೇ ಅಧ್ಯಾಯದಲ್ಲಿ “ಆ ದಿನ ಯೆಹೋವ ದೇವರು ಭೂಮಿ ಆಕಾಶವನ್ನ ಸೃಷ್ಟಿ ಮಾಡಿದನು”a ಅಂತ ಹೇಳುತ್ತೆ. (ಆದಿಕಾಂಡ 2:4) ಸೃಷ್ಟಿಕಾರ್ಯದ ಆರು ದಿನಗಳಲ್ಲಿ ದೇವರು ಭೂಮಿಯನ್ನು ಮಾಡಿ ಅದರಲ್ಲಿ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಮಾಡಿದ ಸಮಯ ಸುಧೀರ್ಘ ಕಾಲಾವಧಿಯಾಗಿತ್ತು. ಅಂದ್ರೆ ಆರು ದಿನಗಳಲ್ಲಿರೋ ಒಂದೊಂದು ದಿನ ಧೀರ್ಘ ಸಮಯವಾಗಿತ್ತು.

ಕಾಲಾನಂತರ ಜೀವಿಗಳ ರೂಪದಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ ಅಂತ ಬೈಬಲ್‌ ಹೇಳಲ್ಲ. ಆದಿಕಾಂಡ ಪುಸ್ತಕದಲ್ಲಿ “ಎಲ್ಲಾ ಜಾತಿಯ” ಪ್ರಾಣಿಗಳು ಸೃಷ್ಟಿಯಾಯಿತು ಅಂತ ಹೇಳುತ್ತೆ. (ಆದಿಕಾಂಡ 1:24, 25) ಬೈಬಲಲ್ಲಿ ಬಳಸಿರೋ “ಎಲ್ಲಾ ಜಾತಿಯ” ಅನ್ನೋ ಪದ ವೈಜ್ಞಾನಿಕ ಪದವಲ್ಲ. ಆದ್ರೆ ಆ ಪದ ಎಲ್ಲಾ ಜೀವ ಸಂಕುಲವನ್ನು ಸೂಚಿಸುತ್ತೆ. ಹಾಗಾಗಿ ಒಂದು ‘ಜಾತಿಯಲ್ಲಿ’ ಬಗೆಬಗೆಯ ಜೀವಿಗಳು ಬರುತ್ತೆ. ಇದ್ರಿಂದ ಅರ್ಥವಾಗೋದು ಏನಂದ್ರೆ ಒಂದು ಜಾತಿಯಲ್ಲಿ ಬರೋ ಬಗೆಬಗೆಯ ಜೀವಿಗಳಲ್ಲೇ ಕಾಲಾನಂತರ ಬದಲಾವಣೆಗಳಾಗುವ ಸಾಧ್ಯತೆ ಇದೆ.

ನಿಮಗೆ ಏನನಿಸುತ್ತೆ?

ಈಗಾಗಲೇ ಗಮನಿಸಿದ ಹಾಗೆ, ವಿಶ್ವ ಹೇಗೆ ಬಂತು, ಭೂಮಿ ಮುಂಚೆ ಹೇಗೆ ಕಾಣಿಸ್ತಿತ್ತು, ಜೀವ ಹೇಗೆ ಬಂತು ಅನ್ನೋ ವಿಷಯಗಳ ಬಗ್ಗೆ ಬೈಬಲ್‌ ನಿಖರವಾಗಿ ಮತ್ತು ಸರಳವಾಗಿ ತಿಳಿಸುತ್ತೆ. ಹಾಗಾದ್ರೆ ಇದನ್ನೆಲ್ಲ ಸೃಷ್ಟಿಮಾಡಿದವನ ಬಗ್ಗೆನೂ ಬೈಬಲ್‌ ನಿಖರವಾಗಿ ಹೇಳುತ್ತಿರಬಹುದಲ್ವಾ? ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುತ್ತೆ, “ಜೀವ ಆರಂಭವಾಗಿದ್ದು ಅತಿಮಾನುಷ ಶಕ್ತಿಯಿಂದ ಅಂತ ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳೂ ಒಪ್ಪಿವೆ.”b

ಯೋಚಿಸಿ:

ಆದಿಕಾಂಡ 1:1–2:4 ಓದಿ. ಸೃಷ್ಟಿಯ ಬಗ್ಗೆ ಬೈಬಲ್‌ ಹೇಳೋದಕ್ಕೂ ಪುರಾಣ ಕಥೆಗಳು ಹೇಳೋದಕ್ಕೂ ವ್ಯತ್ಯಾಸಗಳಿವೆ. ಉದಾಹರಣೆಗೆ, ಒಬ್ಬ ದೇವತೆಯ ಶವದಿಂದ ಮತ್ತು ಒಬ್ಬ ದೇವರ ರಕ್ತದಿಂದ ಇಡೀ ವಿಶ್ವವನ್ನು ಮತ್ತು ಮನುಷ್ಯರನ್ನು ಮಾಡಲಾಯ್ತು ಅಂತ ಬಾಬೆಲಿನವರು ನಂಬ್ತಾರೆ. ಪುರಾತನ ಕಾಲದ ಈಜಿಪ್ಟಿನವರು, ಕಣ್ಣೀರಿಂದ ರಾ ದೇವರು ಮನುಷ್ಯರನ್ನು ಸೃಷ್ಟಿಮಾಡಿದ್ರು ಅಂತ ನಂಬುತ್ತಿದ್ದರು. ಒಬ್ಬ ದೈತ್ಯನ ಶವ ಭೂಮಿಯ ಮೇಲಿನ ನೈಸರ್ಗಿಕ ಅಂಶಗಳಾಗಿ ರೂಪಾಂತರಗೊಳ್ತು ಮತ್ತು ಅವನ ಶವದ ಮೇಲಿದ್ದ ಕೀಟಗಳಿಂದ ಮನುಷ್ಯರು ಬಂದ್ರು ಅಂತ ಚೈನಾದಲ್ಲಿದ್ದ ಕೆಲವರು ಯೋಚಿಸಿದ್ರು. ಆದ್ರೆ ನಿಮಗೆ ಏನನಿಸುತ್ತೆ? ಆದಿಕಾಂಡ ಪುಸ್ತಕದಲ್ಲಿರುವ ಘಟನೆಗಳು ಕಟ್ಟುಕಥೆಗಳಾ? ಅಥವಾ ವೈಜ್ಞಾನಿಕವಾಗಿ ಅದು ಸಾಬೀತಾಗಿದೆಯಾ?

jw.org ವೆಬ್‌ಸೈಟಲ್ಲಿರೋ ವಿಶ್ವದ ರಚನೆ ಹೇಗಾಯ್ತು? ಅನ್ನೋ 4 ನಿಮಿಷದ ವಿಡಿಯೋ ನೋಡಿ.

a ಯೆಹೋವ ಅನ್ನೋದು ಬೈಬಲಲ್ಲಿ ತಿಳಿಸಿರೋ ದೇವರ ಹೆಸರು.

b ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಜೀವ ಸೃಷ್ಟಿಯಾಯ್ತು ಅಂತ ಹೇಳಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ