ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g23 ನಂ. 1 ಪು. 6-8
  • ಸಮುದ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮುದ್ರ
  • ಎಚ್ಚರ!—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮುದ್ರ ಅಪಾಯದಲ್ಲಿದೆ
  • ಭೂಮಿಗಿರೋ ಸಾಮರ್ಥ್ಯ
  • ಮನುಷ್ಯರ ಪ್ರಯತ್ನ
  • ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ
  • ಸಾಗರಗಳು ಅಮೂಲ್ಯವಾದ ಸಂಪತ್ತೋ ಅಥವಾ ಜಾಗತಿಕ ಚರಂಡಿಯೋ?
    ಎಚ್ಚರ!—1990
  • ಸಾಗರಗಳು—ಅವುಗಳನ್ನು ಯಾರು ರಕ್ಷಿಸಬಲ್ಲರು?
    ಎಚ್ಚರ!—1990
  • “ಸಮುದ್ರದಿಂದ ಐಶ್ವರ್ಯ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಪರಿವಿಡಿ
    ಎಚ್ಚರ!—2023
ಇನ್ನಷ್ಟು
ಎಚ್ಚರ!—2023
g23 ನಂ. 1 ಪು. 6-8
ಒಬ್ಬ ಸ್ಕೂಬಾ ಡೈವರ್‌ ವರ್ಣರಂಜಿತ ಮೀನು, ಹವಳ ಮತ್ತು ಸಸ್ಯಗಳಿಂದ ಸುತ್ತುವರೆದಿರೋ ಸಮುದ್ರದಲ್ಲಿ ಈಜುತ್ತಿದ್ದಾನೆ.

Georgette Douwma/Stone via Getty Images

ಭೂಮಿ ನಾಶವಾಗದೇ ಉಳಿಯುತ್ತಾ?

ಸಮುದ್ರ

ಸಮುದ್ರದಿಂದ ನಮಗೆ ತಿನ್ನೋಕೆ ಆಹಾರ ಸಿಗುತ್ತೆ. ಅಷ್ಟೇ ಅಲ್ಲ, ಇಲ್ಲಿಂದ ಸಿಗೋ ಕೆಲವು ಪದಾರ್ಥಗಳಿಂದ ಔಷಧಿಗಳನ್ನೂ ಮಾಡಬಹುದು. ಭೂಮಿಯಲ್ಲಿರೋ 50% ಆಕ್ಸಿಜನ್‌ ತಯಾರಾಗೋದು ಸಮುದ್ರದಿಂದಾನೇ. ಇದು ಕಾರ್ಬನ್‌ನ ಬೇರೆಬೇರೆ ಅನಿಲಗಳನ್ನ ಹೀರಿಕೊಳ್ಳುತ್ತೆ. ಸಮುದ್ರ ಹವಾಮಾನವನ್ನ ಕೂಡ ನಿಯಂತ್ರಿಸುತ್ತೆ.

ಸಮುದ್ರ ಅಪಾಯದಲ್ಲಿದೆ

ಸಮುದ್ರದಲ್ಲಿರೋ ಹವಳದ ದಿಬ್ಬಗಳಿಂದಾಗಿ (coral reefs) ಸುಮಾರು 50% ಜಲರಾಶಿಗಳು ಬದುಕ್ತಾ ಇವೆ. ಆದ್ರೆ ಹಾವಾಮಾನದಲ್ಲಿ ತುಂಬ ಬದಲಾವಣೆ ಆಗ್ತಾ ಇರೋದ್ರಿಂದ ಹವಳದ ದಿಬ್ಬಗಳು, ಚಿಪ್ಪುಮೀನುಗಳು ಅಳಿದು ಹೋಗ್ತಾ ಇದೆ. ಮುಂದಿನ 30 ವರ್ಷಗಳಲ್ಲಿ ಎಲ್ಲಾ ಹವಳದ ದಿಬ್ಬಗಳು ಕಣ್ಮರೆಯಾಗುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ವರದಿಗನುಸಾರ 90% ಸಮುದ್ರ ಪಕ್ಷಿಗಳು ಪ್ಲಾಸ್ಟಿಕ್‌ ತಿನ್ನುತ್ತಾ ಇದೆ. ಅಷ್ಟೇ ಅಲ್ಲ, ಪ್ರತಿ ವರ್ಷ ಪ್ಲಾಸ್ಟಿಕ್‌ನಿಂದಾಗಿ ಲಕ್ಷಾಂತರ ಜಲರಾಶಿಗಳ ಜೀವ ಹೋಗ್ತಾ ಇದೆ ಅಂತ ವರದಿಗಳು ತಿಳಿಸುತ್ತೆ.

2022ರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಚಿವರಾದ ಆಂಟೊನಿಯೋ ಗುಟೆರೆಸ್‌ ಹೀಗೆ ಹೇಳಿದ್ರು: “ನಾವು ಸಮುದ್ರವನ್ನ ಸರಿಯಾಗಿ ನೋಡ್ಕೊಂಡಿಲ್ಲ, ಅದಕ್ಕೆ ಅದು ಇಂದು ಅಪಾಯದಲ್ಲಿದೆ.”

ಭೂಮಿಗಿರೋ ಸಾಮರ್ಥ್ಯ

ತಮ್ಮನ್ನ ತಾವೇ ಶುದ್ಧ ಮಾಡ್ಕೊಂಡು ಆರೋಗ್ಯವಾಗಿರೋ ತರ ಸಮುದ್ರದಲ್ಲಿರೋ ಗಿಡಗಳನ್ನ, ಜೀವಿಗಳನ್ನ ರಚಿಸಲಾಗಿದೆ. ಆದ್ರೆ ಮನುಷ್ಯರು ಅದನ್ನ ಮಾಲಿನ್ಯ ಮಾಡಬಾರದು. ಹೀಗೆ ಮಾಲಿನ್ಯ ಮಾಡೋದನ್ನ ನಿಲ್ಲಿಸಿದ್ರೆ “ಸಮುದ್ರ ತನ್ನಷ್ಟಕ್ಕೇ ತಾನೇ ಸ್ವಚ್ಛವಾಗುತ್ತೆ” ಅಂತ ಎಂಡಿಂಗ್‌ ದ ಕ್ಲೈಮೇಟ್‌ ಕ್ರೈಸಿಸ್‌ ಇನ್‌ ಒನ್‌ ಜೆನರೇಶನ್‌ (ಇಂಗ್ಲಿಷ್‌) ಅನ್ನೋ ಪುಸ್ತಕ ಹೇಳುತ್ತೆ. ಅದು ಹೇಗೆ ಅಂತ ತಿಳಿಯಲು ಈ ಉದಾಹರಣೆಗಳನ್ನ ನೋಡಿ:

  • ಸಮುದ್ರದಲ್ಲಿ ಫೈಟೊಪ್ಲಾಂಕ್ಟನ್‌ ಅನ್ನೋ ಕಣ್ಣಿಗೆ ಕಾಣದ ಜೀವಿ ಇದೆ. ಇದೊಂದು ರೀತಿಯ ಪಾಚಿ. ಜಾಗತಿಕ ತಾಪಮಾನಕ್ಕೆ ಕಾರಣವಾಗಿರೋ ಕಾರ್ಬನ್‌-ಡೈ-ಆಕ್ಸೈಡ್‌ನ್ನ ಫೈಟೊಪ್ಲಾಂಕ್ಟನ್‌ ಹೀರಿಕೊಳ್ಳುತ್ತೆ. ಭೂಮಿ ಮೇಲಿರೋ ಎಲ್ಲಾ ಗಿಡ, ಮರ, ಹುಲ್ಲು ಸೇರಿ ಒಟ್ಟಾಗಿ ಹೀರಿಕೊಳ್ಳುವಷ್ಟು ಕಾರ್ಬನ್‌-ಡೈ-ಆಕ್ಸೈಡ್‌ನ್ನ ಇದು ಹೀರಿಕೊಂಡು ತನ್ನ ಹತ್ರ ಶೇಕರಿಸಿ ಇಟ್ಕೊಳ್ಳುತ್ತೆ.

  • ಸಮುದ್ರದಲ್ಲಿರೋ ಇತರ ಬ್ಯಾಕ್ಟಿರಿಯಗಳು, ಸತ್ತ ಮೀನುಗಳ ಚರ್ಮ ಮತ್ತು ಮುಳ್ಳನ್ನ ತಿನ್ನುತ್ತೆ. ಇದ್ರಿಂದಾಗಿ ಸಮುದ್ರದಲ್ಲಿ ಯಾವುದೇ ಗಲೀಜು ಹರಡೋದಿಲ್ಲ. ನಂತರ ಈ ಬ್ಯಾಕ್ಟಿರಿಯಗಳನ್ನ ಬೇರೆ ಸಮುದ್ರ ಜೀವಿಗಳು ತಿನ್ನುತ್ತೆ. ಸಮುದ್ರದ ಬಗ್ಗೆ ಸಂಶೋಧನೆ ಮಾಡೋ ಸ್ಮಿತ್‌ಸೋನಿಯನ್‌ ಇನ್‌ಸ್ಟಿಟ್ಯುಷನ್‌ ಒಶನ್‌ ಅನ್ನೋ ಸಂಘಟನೆಯ ವೆಬ್‌ಸೈಟ್‌ನಲ್ಲಿ ಹೀಗಿದೆ: “ಸತ್ತ ಮೀನುಗಳನ್ನ ಬ್ಯಾಕ್ಟಿರಿಯಗಳು ತಿನ್ನೋದ್ರಿಂದ ಮತ್ತು ಈ ಬ್ಯಾಕ್ಟಿರಿಯಗಳನ್ನ ಬೇರೆ ಜೀವಿಗಳು ತಿನ್ನೋದ್ರಿಂದ ಸಮುದ್ರ ಕನ್ನಡಿಯಂತೆ ಸ್ವಚ್ಛವಾಗಿರುತ್ತೆ.”

  • ತುಂಬ ಮೀನುಗಳು ತಾವು ತಿಂದ ಆಹಾರವನ್ನ ಜೀರ್ಣ ಮಾಡಿಕೊಳ್ಳೋ ಪ್ರಕ್ರಿಯೆಯಿಂದ ನೀರಿನಲ್ಲಿರೋ ಆ್ಯಸಿಡ್‌ ಪ್ರಮಾಣ ಕಮ್ಮಿ ಆಗುತ್ತೆ. ಒಂದುವೇಳೆ ನೀರಲ್ಲಿ ಆ್ಯಸಿಡ್‌ ಜಾಸ್ತಿ ಆದ್ರೆ ಹವಳ, ಚಿಪ್ಪುಮೀನು ಮತ್ತು ಬೇರೆ ಜೀವಿಗಳಿಗೆ ತುಂಬ ಹಾನಿ ಆಗುತ್ತೆ.

    ನಿಮಗಿದು ಗೊತ್ತಿತ್ತಾ?

    ಸಮುದ್ರದ ಹುಲ್ಲು, ಸಾಗರಕ್ಕೆ ತರುತ್ತೆ ಚೆಲುವು

    ಕಡಲತೀರವನ್ನ ಸಮೀಪಿಸ್ತಿರೋ ಅಲೆಗಳನ್ನ ತೋರಿಸೋ ಚಿತ್ರ. ಸಮುದ್ರದ ತಳ, ಸಮುದ್ರದ ಹುಲ್ಲು ಮತ್ತು ಸಮುದ್ರದ ಜೀವಿಗಳು ಕಾಣಿಸ್ತಿವೆ. ಅಲೆಗಳು ದಡವನ್ನ ಸಮೀಪಿಸಿದ ಹಾಗೆ, ಸಮುದ್ರ ಹುಲ್ಲು, ಅಲೆಗಳ ಗಾತ್ರ ಮತ್ತು ವೇಗ ಕಮ್ಮಿ ಆಗ್ತಿದೆ ಮತ್ತು ಅದು ನೀರಿನಿಂದ ಕೆಸರನ್ನ ತೆಗೆದುಹಾಕುತ್ತೆ. ಮೀನುಗಳನ್ನ ಮತ್ತು ಬೇರೆ ಸಮುದ್ರ ಜೀವಿಗಳನ್ನ ಹುಲ್ಲು ಆರೋಗ್ಯವಾಗಿ ಇಡುತ್ತೆ. ದಡದ ತನಕ ಬರೋ ನೀರು ತಿಳಿಯಾಗಿರುತ್ತೆ.

    ಈ ಹುಲ್ಲು ಸಮುದ್ರದ ಅಡಿಯಲ್ಲಿ ಬೆಳೆಯುತ್ತೆ. ಇದು ಕೊಳೆ, ಮಣ್ಣು ಮತ್ತು ಮರಳನ್ನ ಹಿಡಿದಿಟ್ಟುಕೊಳ್ಳುತ್ತೆ. ಹವಳಗಳು ಆರೋಗ್ಯವಾಗಿರೋಕೆ ಈ ಹುಲ್ಲುಗಳೇ ಕಾರಣ. ಅಷ್ಟೇ ಅಲ್ಲ, ಸಮುದ್ರದಲ್ಲಿ ದೊಡ್ಡದೊಡ್ಡ ಅಲೆಗಳು ಏಳದಂತೆ ಇದು ತಡಿಯುತ್ತೆ. ಇದ್ರಿಂದ ಸಮುದ್ರದ ತಳಕ್ಕೆ ಯಾವುದೇ ಹಾನಿ ಆಗಲ್ಲ.

ಮನುಷ್ಯರ ಪ್ರಯತ್ನ

ಚಿತ್ರಗಳು: 1. ಒಬ್ಬ ವ್ಯಕ್ತಿ ಅಡುಗೆ ಮನೆಯಲ್ಲಿ ಮರುಬಳಕೆ ಮಾಡಬಹುದಾದ ಬ್ಯಾಗ್‌ನಿಂದ ದಿನಸಿ ವಸ್ತುಗಳನ್ನ ತೆಗೆಯುತ್ತಿದ್ದಾನೆ. 2. ಒಬ್ಬ ಸ್ತ್ರೀ ಅಡುಗೆ ಮನೆಯಲ್ಲಿ ಮರುಬಳಕೆ ಮಾಡಬಹುದಾದ ಬಾಟಲ್‌ನಲ್ಲಿ ನೀರನ್ನ ತುಂಬಿಸ್ತಿದ್ದಾಳೆ.

ಮರುಬಳಕೆ ಮಾಡೋ ಬ್ಯಾಗುಗಳನ್ನ, ಬಾಟಲ್‌ಗಳನ್ನ ಬಳಸಿದ್ರೆ ಸಮುದ್ರದಲ್ಲಿ ಪ್ಲಾಸ್ಟಿಕ್‌ ಕಸವನ್ನ ಕಮ್ಮಿ ಮಾಡಬಹುದು

ಸಮುದ್ರದಲ್ಲಿ ಕಸವನ್ನ ಹಾಕದೇ ಇದ್ರೆ ಅದನ್ನ ಸ್ವಚ್ಛ ಮಾಡೋ ಅವಶ್ಯಕತೆನೇ ಇರಲ್ಲ. ಹಾಗಾಗಿ ಒಂದೇ ಸಲ ಬಳಕೆ ಮಾಡಿ, ನಂತ್ರ ಕಸವಾಗುವ ಪ್ಲಾಸ್ಟಿಕ್‌ ವಸ್ತುಗಳನ್ನ ಬಳಸಬೇಡಿ ಅಂತ ತಜ್ಞರು ಹೇಳ್ತಾರೆ. ಇದ್ರ ಬದಲು ಮರುಬಳಕೆ ಮಾಡೋ ಪಾತ್ರೆಗಳನ್ನ, ಬ್ಯಾಗುಗಳನ್ನ, ತಟ್ಟೆ, ಚಮಚಗಳನ್ನ ನಾವು ಬಳಸಬೇಕು.

ಆದ್ರೆ ಇಷ್ಟು ಮಾಡಿದ್ರೆ ಮಾತ್ರ ಸಾಕಾಗಲ್ಲ. ಪರಿಸರ ಸಂರಕ್ಷಿಸೋ ಒಂದು ಸಂಘಟನೆ ಇತ್ತೀಚಿಗೆ, 112 ದೇಶಗಳಲ್ಲಿರೋ ಸಮುದ್ರದ ದಡದಿಂದ 9,200 ಟನ್‌ಗಳಷ್ಟು ಕಸವನ್ನ ತೆಗಿತು. ಇದು ಸಮುದ್ರದಿಂದ ತೇಲಿಕೊಂಡು ಬಂದ ಕಸ ಆಗಿತ್ತು. ‘ಇಷ್ಟೊಂದು ಕಸನಾ’ ಅಂತ ನಮಗೆ ಅನಿಸಬಹುದು. ಆದ್ರೆ ಇದಕ್ಕಿಂತ 1,000 ಪಟ್ಟು ಹೆಚ್ಚು ಕಸ ಸಮುದ್ರದಲ್ಲಿ ಪ್ರತಿ ವರ್ಷ ಸೇರಿಕೊಳ್ಳುತ್ತೆ.

ನ್ಯಾಷನಲ್‌ ಜಿಯೊಗ್ರಾಫಿಕ್‌ ಪತ್ರಿಕೆಯಲ್ಲಿ ಹೀಗಿದೆ: “ಸಮುದ್ರದಲ್ಲಿ ಆ್ಯಸಿಡ್‌ ಪ್ರಮಾಣ ಎಷ್ಟು ಇದೆ ಅಂದ್ರೆ, ಅದನ್ನ ಕಮ್ಮಿ ಮಾಡೋದು ತುಂಬ ಕಷ್ಟ. ಇವತ್ತು ಮನುಷ್ಯರು ಎಷ್ಟು ಇಂಧನವನ್ನ ಬಳಸ್ತಾ ಇದ್ದಾರೆ ಅಂದ್ರೆ, ಸಮುದ್ರ ಜೀವಿಗಳು ಸಮುದ್ರವನ್ನ ಶುಚಿಮಾಡೋ ಕೆಲಸವನ್ನ ಸರಿಯಾಗಿ ಮಾಡೋಕೆ ಆಗ್ತಾ ಇಲ್ಲ.”

ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ

“ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ. ಸಮುದ್ರ ವಿಶಾಲವಾಗಿದೆ, ದೂರದೂರದ ತನಕ ಹರಡ್ಕೊಂಡಿದೆ, ಲೆಕ್ಕ ಇಲ್ಲದಷ್ಟು ಚಿಕ್ಕದೊಡ್ಡ ಜೀವಿಗಳು ಅದ್ರಲ್ಲಿ ತುಂಬಿಕೊಂಡಿವೆ.”—ಕೀರ್ತನೆ 104:24, 25.

ಸಮುದ್ರಗಳು ತಮ್ಮನ್ನ ತಾವೇ ಸ್ವಚ್ಛ ಮಾಡ್ಕೊಳ್ಳೋ ರೀತಿಯಲ್ಲಿ ದೇವರು ಅದನ್ನ ಸೃಷ್ಟಿ ಮಾಡಿದ್ದಾನೆ. ಸಮುದ್ರದಲ್ಲಿರೋ ಜೀವಿಗಳನ್ನ, ಗಿಡಗಳನ್ನ ರಚಿಸಿರೋದು ದೇವರು ಅಂದಮೇಲೆ ಅದಕ್ಕೆ ಆಗ್ತಾ ಇರೋ ಹಾನಿಯನ್ನ ಆತನಿಗೆ ಸರಿಮಾಡೋಕೆ ಆಗಲ್ವಾ? ಇದರ ಬಗ್ಗೆ ಹೆಚ್ಚು ತಿಳಿಯಲು ಪುಟ 15ರಲ್ಲಿರೋ “ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ” ಅನ್ನೋ ಲೇಖನ ನೋಡಿ.

ಹೆಚ್ಚನ್ನ ಕಲಿಯಿರಿ

ಪೈಲಟ್‌ ತಿಮಿಂಗಿಲಗಳು ಸಮುದ್ರದಲ್ಲಿ ಈಜುತ್ತಿವೆ.

Blue Planet Archive/Doug Perrine

ಯಾವುದೇ ಹಾನಿಕಾರಕ ರಾಸಾಯನಗಳನ್ನ ಬಳಸದೇ ಹಡಗುಗಳನ್ನ ಸ್ವಚ್ಛ ಮಾಡೋ ವಿಧಾನವನ್ನ ವಿಜ್ಞಾನಿಗಳು ಸಮುದ್ರ ಜೀವಿಗಳ ಅಧ್ಯಯನ ಮಾಡಿ ಕಲ್ತಿದ್ದಾರೆ. jw.orgನಲ್ಲಿ “ಪೈಲಟ್‌ ತಿಮಿಂಗಿಲದ ಚರ್ಮ” ಅನ್ನೋ ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ