ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • my ಕಥೆ 29
  • ಮೋಶೆ ಓಡಿಹೋಗಲು ಕಾರಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೋಶೆ ಓಡಿಹೋಗಲು ಕಾರಣ
  • ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅನುರೂಪ ಮಾಹಿತಿ
  • ಉರಿಯುತ್ತಿರುವ ಪೊದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಉರಿಯುತ್ತಿರುವ ಪೊದೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಬೈಬಲ್‌ ಕಥೆಗಳ ನನ್ನ ಪುಸ್ತಕ
my ಕಥೆ 29
ಮೋಶೆ ಈಜಿಪ್ಟಿನಿಂದ ಓಡಿ ಹೋಗುತ್ತಾನೆ

ಅಧ್ಯಾಯ 29

ಮೋಶೆ ಓಡಿಹೋಗಲು ಕಾರಣ

ಮೋಶೆ ಐಗುಪ್ತದಿಂದ ಓಡಿಹೋಗುತ್ತಿರುವುದನ್ನು ನೋಡಿರಿ. ಜನರು ಅವನನ್ನು ಬೆನ್ನಟ್ಟಿ ಹೋಗುವುದನ್ನು ನೀವು ನೋಡಬಲ್ಲಿರೋ? ಮೋಶೆಯನ್ನು ಕೊಲ್ಲಲು ಅವರೇಕೆ ಬಯಸುತ್ತಾರೆಂದು ನಿಮಗೆ ಗೊತ್ತೋ? ಬನ್ನಿ, ನಾವದನ್ನು ಕಂಡುಹಿಡಿಯೋಣ.

ಮೋಶೆ ಐಗುಪ್ತದ ಅರಸನಾದ ಫರೋಹನ ಅರಮನೆಯಲ್ಲಿ ಬೆಳೆದನು. ಅವನು ಬಹು ವಿವೇಕಿಯೂ ಮಹಾನ್‌ ವ್ಯಕ್ತಿಯೂ ಆದನು. ತಾನು ಐಗುಪ್ತ್ಯನಲ್ಲವೆಂದೂ ತನ್ನ ನಿಜ ಹೆತ್ತವರು ಇಸ್ರಾಯೇಲ್ಯ ಗುಲಾಮರಾಗಿದ್ದಾರೆಂದೂ ಮೋಶೆಗೆ ತಿಳಿದಿತ್ತು.

ಒಂದು ದಿನ, ತನ್ನ ಜನರು ಹೇಗಿದ್ದಾರೆಂದು ಹೋಗಿ ನೋಡಲು ಮೋಶೆಯು ನಿರ್ಧರಿಸಿದನು. ಆಗ ಅವನಿಗೆ 40 ವರ್ಷವಾಗಿತ್ತು. ಆ ಜನರನ್ನು ನಡೆಸಿಕೊಳ್ಳುತ್ತಿದ್ದ ವಿಧವು ತುಂಬಾ ಭೀಕರವಾಗಿತ್ತು. ಅಲ್ಲಿ ಐಗುಪ್ತ್ಯನೊಬ್ಬನು ಇಸ್ರಾಯೇಲ್ಯ ಗುಲಾಮನನ್ನು ಹೊಡೆಯುತ್ತಿದ್ದನು. ಇದನ್ನು ಕಂಡ ಮೋಶೆ ಸುತ್ತಲೂ ನೋಡಿದನು. ತನ್ನನ್ನು ಯಾರೂ ನೋಡುತ್ತಿಲ್ಲವೆಂದು ಕಂಡಾಗ ಆ ಐಗುಪ್ತ್ಯನನ್ನು ಹೊಡೆದನು ಮತ್ತು ಆ ಐಗುಪ್ತ್ಯನು ಸತ್ತುಹೋದನು. ಆಮೇಲೆ ಅವನ ಶವವನ್ನು ಮೋಶೆಯು ಮರಳಿನಲ್ಲಿ ಮುಚ್ಚಿಟ್ಟನು.

ಮರುದಿನ ಮೋಶೆಯು ತನ್ನ ಜನರನ್ನು ನೋಡಲು ಪುನಃ ಹೋದನು. ಅವರು ಇನ್ನು ಮೇಲೆ ಗುಲಾಮರಾಗಿರದಂತೆ ತಾನು ಅವರಿಗೆ ಸಹಾಯ ಮಾಡಬಲ್ಲೆನೆಂದು ಅವನು ನೆನಸಿದನು. ಆದರೆ ಇಬ್ಬರು ಇಸ್ರಾಯೇಲ್ಯ ಪುರುಷರು ಜಗಳವಾಡುವುದನ್ನು ಅವನು ಕಂಡನು. ಅವರಲ್ಲಿ ತಪ್ಪುಮಾಡಿದಾತನಿಗೆ ಮೋಶೆಯು, ‘ನಿನ್ನ ಸಹೋದರನನ್ನು ಯಾಕೆ ಹೊಡೆಯುತ್ತಿರುವಿ?’ ಎಂದು ಕೇಳಿದನು.

ಅದಕ್ಕೆ ಆ ಮನುಷ್ಯನು, ‘ನಿನ್ನನ್ನು ನಮ್ಮ ಮೇಲೆ ಅಧಿಪತಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ಮಾಡಿದವರು ಯಾರು? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿರುವಿಯೋ?’ ಎಂದನು.

ಮೋಶೆಗೆ ಈಗ ಹೆದರಿಕೆಯಾಯಿತು. ತಾನು ಐಗುಪ್ತ್ಯನನ್ನು ಕೊಂದದು ಜನರಿಗೆ ಗೊತ್ತಾಗಿಬಿಟ್ಟಿದೆ ಎಂದವನಿಗೆ ತಿಳಿಯಿತು. ಫರೋಹನಿಗೆ ಸಹ ಅದು ತಿಳಿದುಬಂತು, ಮತ್ತು ಅವನು ಮೋಶೆಯನ್ನು ಕೊಲ್ಲಲು ಜನರನ್ನು ಕಳುಹಿಸಿದನು. ಆದುದರಿಂದಲೇ ಮೋಶೆ ಐಗುಪ್ತದಿಂದ ಓಡಿಹೋಗಬೇಕಾಯಿತು.

ಮೋಶೆ ಐಗುಪ್ತವನ್ನು ಬಿಟ್ಟು ದೂರದ ಮಿದ್ಯಾನ್‌ ದೇಶಕ್ಕೆ ಹೊರಟು ಹೋದನು. ಅಲ್ಲಿ ಅವನು ಇತ್ರೋ ಎಂಬವನ ಕುಟುಂಬವನ್ನು ಸಂಧಿಸಿದನು. ಮತ್ತು ಅವನ ಹೆಣ್ಣು ಮಕ್ಕಳಲ್ಲಿ ಚಿಪ್ಪೋರ ಎಂಬವಳನ್ನು ಮದುವೆಯಾದನು. ಮೋಶೆಯು ಒಬ್ಬ ಕುರುಬನಾಗಿ, ಇತ್ರೋವನ ಕುರಿಗಳನ್ನು ಮೇಯಿಸುವವನಾದನು. ಅವನು ಮಿದ್ಯಾನ್‌ ದೇಶದಲ್ಲಿ 40 ವರ್ಷ ವಾಸಿಸಿದನು. ಈಗ ಅವನಿಗೆ 80 ವರ್ಷ ವಯಸ್ಸಾಗಿತ್ತು. ಅನಂತರ ಒಂದು ದಿನ ಮೊಶೆ ತನ್ನ ಮಾವನಾದ ಇತ್ರೋವನ ಕುರಿಗಳನ್ನು ಮೇಯಿಸುತ್ತಿದ್ದಾಗ ಒಂದು ಅಚ್ಚರಿಯ ಸಂಗತಿಯು ನಡೆಯಿತು. ಇದು ಮೋಶೆಯ ಇಡೀ ಜೀವನವನ್ನೇ ಮಾರ್ಪಡಿಸಿತು. ಪುಟವನ್ನು ಮಗುಚಿರಿ, ಆ ಅಚ್ಚರಿಯ ಸಂಗತಿಯೇನೆಂದು ನಾವು ನೋಡೋಣ.

ವಿಮೋಚನಕಾಂಡ 2:11-25; ಅ. ಕೃತ್ಯಗಳು 7:22-29.

ಅಧ್ಯಯನ ಪ್ರಶ್ನೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ