ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • my ಕಥೆ 115
  • ಭೂಮಿಯ ಮೇಲೆ ಹೊಸ ಪರದೈಸ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭೂಮಿಯ ಮೇಲೆ ಹೊಸ ಪರದೈಸ್‌
  • ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅನುರೂಪ ಮಾಹಿತಿ
  • ಯಾರಿಗೆ ಪುನರುತ್ಥಾನ ಆಗುವುದು? ಅವರು ಎಲ್ಲಿ ಜೀವಿಸುವರು?
    ಮಹಾ ಬೋಧಕನಿಂದ ಕಲಿಯೋಣ
  • “ಪರದೈಸಲ್ಲಿ ಸಿಗೋಣ!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ದೇವರು ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ?
    ದೇವರಿಂದ ನಿಮಗೊಂದು ಸಿಹಿಸುದ್ದಿ!
  • ಪರದೈಸ್‌
    ಎಚ್ಚರ!—2013
ಇನ್ನಷ್ಟು
ಬೈಬಲ್‌ ಕಥೆಗಳ ನನ್ನ ಪುಸ್ತಕ
my ಕಥೆ 115
ಪರದೈಸಿನಲ್ಲಿ ಜನರು ಪ್ರಾಣಿಗಳೊಟ್ಟಿಗೆ ಖುಷಿಯಾಗಿ ಇದ್ದಾರೆ

ಅಧ್ಯಾಯ 115

ಭೂಮಿಯ ಮೇಲೆ ಹೊಸ ಪರದೈಸ್‌

ಈ ಚಿತ್ರದಲ್ಲಿರುವ ದೊಡ್ಡ ದೊಡ್ಡ ಮರಗಳನ್ನು, ಅಂದಚೆಂದದ ಹೂವುಗಳನ್ನು, ಎತ್ತರವಾದ ಬೆಟ್ಟಗಳನ್ನು ನೋಡಿರಿ. ಇಲ್ಲಿ ಎಷ್ಟು ಚೆನ್ನಾಗಿದೆ ಅಲ್ಲವೇ? ಆ ಜಿಂಕೆಯು ಚಿಕ್ಕ ಹುಡುಗನ ಕೈಯಿಂದ ಏನನ್ನೋ ತಿನ್ನುತ್ತಾ ಇದೆ ನೋಡಿ. ಹುಲ್ಲುಹಾಸಿನ ಮೇಲೆ ಕೂತಿರುವ ಆ ಸಿಂಹಗಳನ್ನೂ ಅಲ್ಲಿ ನಿಂತಿರುವ ಕುದುರೆಗಳನ್ನೂ ನೋಡಿರಿ. ಇಂಥ ಒಂದು ರಮಣೀಯ ಸ್ಥಳದಲ್ಲಿ ಮನೆ ಕಟ್ಟಿ ಜೀವಿಸಲು ನಿಮಗೆ ಇಷ್ಟವಾಗುವುದಿಲ್ಲವೇ?

ಪರದೈಸವಾಗುವ ಭೂಮಿಯಲ್ಲಿ ನೀವು ಸದಾ ಜೀವಿಸಬೇಕೆಂಬುದೇ ದೇವರ ಇಷ್ಟ. ಇಂದು ಜನರು ಅನುಭವಿಸುವಂಥ ಯಾವುದೇ ಕಷ್ಟನೋವುಗಳು ನಿಮಗೆ ಬರಬಾರದೆಂದು ಆತನು ಬಯಸುತ್ತಾನೆ. ಆ ಹೊಸ ಪರದೈಸಿನಲ್ಲಿ ಜೀವಿಸುವವರಿಗೆ ಬೈಬಲ್‌ ವಾಗ್ದಾನಿಸುವುದು: ‘ದೇವರು ಅವರ ಸಂಗಡ ಇರುವನು. ಇನ್ನು ಮರಣವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಹಳೆಯ ವಿಷಯಗಳು ಇಲ್ಲದೆ ಹೋಗುವುದು.’

ಪರದೈಸಿನಲ್ಲಿ ಪುಟ್ಟ ಹುಡುಗಿಯೊಬ್ಬಳು ಕೈಯಲ್ಲಿ ಹೂವನ್ನು ಹಿಡಿದುಕೊಂಡಿದ್ದಾಳೆ

ಈ ಆಶ್ಚರ್ಯಕರ ಬದಲಾವಣೆಯು ಸಂಭವಿಸುವಂತೆ ಯೇಸು ನೋಡಿಕೊಳ್ಳುವನು. ಅದು ಯಾವಾಗ ಎಂದು ನಿಮಗೆ ಗೊತ್ತಿದೆಯೇ? ಹೌದು, ಅವನು ಎಲ್ಲಾ ಕೆಟ್ಟತನವನ್ನು ಮತ್ತು ಎಲ್ಲಾ ಕೆಟ್ಟ ಜನರನ್ನು ತೆಗೆದುಹಾಕಿ ಭೂಮಿಯನ್ನು ಶುದ್ಧೀಕರಿಸಿದ ಮೇಲೆಯೇ ಅದು ಸಂಭವಿಸುವುದು. ಯೇಸು ಭೂಮಿಯಲ್ಲಿದ್ದಾಗ ಜನರನ್ನು ಎಲ್ಲಾ ತರದ ರೋಗಗಳಿಂದ ವಾಸಿಮಾಡಿದನು. ಸತ್ತವರನ್ನು ಸಹ ಜೀವಂತವಾಗಿ ಎಬ್ಬಿಸಿದನು ಎಂಬುದನ್ನು ನೆನಪಿಸಿಕೊಳ್ಳಿರಿ. ಯೇಸು ಇದನ್ನೆಲ್ಲಾ ಮಾಡಿದ್ದು ಯಾಕೆಂದು ಗೊತ್ತೇ? ತಾನು ದೇವರ ರಾಜ್ಯದ ರಾಜನಾಗಿ ಆಳುವಾಗ ಭೂಮಿಯಲ್ಲಿ ಏನೆಲ್ಲಾ ಮಾಡಲಿರುವನೆಂಬದನ್ನು ತೋರಿಸಲಿಕ್ಕಾಗಿಯೇ.

ಭೂಮಿಯ ಮೇಲಿನ ಹೊಸ ಪರದೈಸಿನಲ್ಲಿ ಎಷ್ಟು ಚೆನ್ನಾಗಿರುವುದೆಂದು ತುಸು ಯೋಚಿಸಿ ನೋಡಿ! ಯೇಸು ತಾನು ಆರಿಸಿಕೊಳ್ಳುವ ಕೆಲವು ಜನರೊಂದಿಗೆ ಸೇರಿ ಪರಲೋಕದಿಂದ ಆಳುವನು. ಆ ಸಹರಾಜರು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನು ಕಾಳಜಿಯಿಂದ ನೋಡಿಕೊಂಡು ಅವರೆಲ್ಲರೂ ಸಂತೋಷವುಳ್ಳವರಾಗಿರುವಂತೆ ನೋಡಿಕೊಳ್ಳುವರು. ತನ್ನ ಹೊಸ ಪರದೈಸಿನಲ್ಲಿ ದೇವರು ಕೊಡುವ ನಿತ್ಯಜೀವವನ್ನು ನಾವು ಪಡೆದುಕೊಳ್ಳಲು ಏನು ಮಾಡಬೇಕು? ನಾವದನ್ನು ನೋಡೋಣ.

ಪ್ರಕಟನೆ 21:3, 4; 5:9, 10; 14:1-3.

ಅಧ್ಯಯನ ಪ್ರಶ್ನೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ