ನಿಮಗೆ ನಮ್ಮ ಆಮಂತ್ರಣ
ಈ ಬ್ರೋಷರ್ನ ಪುಟಗಳ ಮೂಲಕ ನಿಮ್ಮೊಂದಿಗೆ ಮಾತಾಡುವುದರಲ್ಲಿ ನಾವು ಆನಂದಿಸಿದೆವು. ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ಕಲಿಯುವುದರಲ್ಲಿ ನೀವು ಆನಂದಿಸಿದ್ದೀರಿ ಎಂದೆಣಿಸುತ್ತೇವೆ. ನಮ್ಮ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ನಮ್ಮನ್ನು ಸಂದರ್ಶಿಸಲು ನಾವು ಕೊಡುವ ಆಮಂತ್ರಣವನ್ನು ದಯವಿಟ್ಟು ಸ್ವೀಕರಿಸಿರಿ. ನಮ್ಮ ಕೂಟಗಳು ಹೇಗೆ ನಡಿಸಲ್ಪಡುತ್ತವೆಂಬುದನ್ನು ನೋಡಿ. ಕ್ರಿಸ್ತನ ರಾಜ್ಯದ ಕೆಳಗಿನ ಪರದೈಸ ಭೂಮಿಯ ಕುರಿತಾದ ಸುವಾರ್ತೆಯನ್ನು ನಾವು ಇತರರಿಗೆ ಹಂಚಲು ಹೇಗೆ ಪ್ರಯತ್ನಿಸುತ್ತೇವೆಂಬುದನ್ನು ತಿಳಿಯಿರಿ.
ದೇವರು ಅದನ್ನು ವಾಗ್ದಾನಿಸಿದ್ದಾನೆ. “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಅನೇಕ ಶತಮಾನಗಳು ಈಗ ದಾಟಿವೆ. ಕಾಯುವ ಅವಧಿಯು ಅಂತ್ಯಗೊಳ್ಳುತ್ತಾ ಇದೆ. ಲೋಕದ ಪರಿಸ್ಥಿತಿಗಳು ಇದನ್ನೇ ಸಂಕೇತಿಸುತ್ತವೆ.
‘ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ, ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ’ ಇರೋಣ ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 10:24, 25) ಪೌಲನ ಈ ಸಲಹೆಗೆ ಕಿವಿಗೊಟ್ಟು, ನಮ್ಮೊಂದಿಗೆ ಕೂಡಿಬರುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.