ವಿಭಾಗ 2
“ನ್ಯಾಯವನ್ನು ಪ್ರೀತಿಸುವವನು”
ಇಂದಿನ ಲೋಕದಲ್ಲಿ ಅನ್ಯಾಯವು ಎಲ್ಲೆಲ್ಲೂ ಹಬ್ಬಿಕೊಂಡಿದೆ, ಮತ್ತು ಇದಕ್ಕೆ ದೂರನ್ನು ಹೆಚ್ಚಾಗಿ ದೇವರ ಮೇಲೆ ತಪ್ಪಾಗಿ ಹೊರಿಸಲಾಗಿದೆ. ಆದರೂ, ಬೈಬಲು ಹೃದಯೋಲ್ಲಾಸಕರವಾದ ಒಂದು ಸತ್ಯವನ್ನು ಕಲಿಸುತ್ತದೆ, ಏನೆಂದರೆ “ಯೆಹೋವನು ನ್ಯಾಯವನ್ನು ಪ್ರೀತಿಸುವವನು.” (ಕೀರ್ತನೆ 37:28, NW) ಆತನು ಈ ಮಾತುಗಳನ್ನು ಹೇಗೆ ಸತ್ಯವೆಂದು ರುಜುಪಡಿಸಿ, ಸಕಲ ಮಾನವಕುಲಕ್ಕೆ ನಿರೀಕ್ಷೆಯನ್ನು ಕೊಟ್ಟಿದ್ದಾನೆಂಬುದನ್ನು ನಾವು ಈ ವಿಭಾಗದಲ್ಲಿ ಕಲಿಯುವೆವು.