ಗೀತೆ 9
ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
1. ಸ್ತುತಿಸು! ಯೆಹೋವನನ್ನು!
ಆತನ ನಾಮ ಘೋಷಿಸು!
ಎಚ್ಚರ! ದಿನ ಸಮೀಪ,
ಜನರೆಲ್ಲರಿಗೆ ತಿಳಿಸು.
ಆಗಿದ್ದಾನೆ ರಾಜ ಕ್ರಿಸ್ತನೀಗ,
ಆಜ್ಞೆಯಿದೆ ನಮಗಿಂದು.
ತಿಳಿಸಲು ಜನಕ್ಕೆ ಇದನ್ನು
ಮತ್ತು ಆಶೀರ್ವಾದವನ್ನು.
(ಪಲ್ಲವಿ)
ಸ್ತುತಿಸು! ಯೆಹೋವನನ್ನು!
ಆತನ ಪಾರಮ್ಯ ಘೋಷಿಸು!
2. ಸ್ತುತಿಸು! ಯೆಹೋವನನ್ನು!
ಗೀತೆಯ ಹರ್ಷದಿ ಹಾಡು!
ಕೃತಜ್ಞ ಹೃದಯದಿಂದ
ಮಹಿಮೆ ತಿಳಿಯಪಡಿಸು.
ಶ್ರೇಷ್ಠ ಸೃಷ್ಟಿಕರ್ತನಾದರೂ
ಆತ ದೀನ, ಒಳ್ಳೆಯವನು.
ಅಪಾರ ದಯೆ, ಕರುಣೆಯಿಂದ
ಬಿನ್ನಹ ಆಲಿಸುವನು.
(ಪಲ್ಲವಿ)
ಸ್ತುತಿಸು! ಯೆಹೋವನನ್ನು!
ಆತನ ಪಾರಮ್ಯ ಘೋಷಿಸು!
(ಕೀರ್ತ. 89:27; 105:1; ಯೆರೆ. 33:11 ಸಹ ನೋಡಿ.)