ಗೀತೆ 100
ನಾವು ಯೆಹೋವನ ಸೈನ್ಯ!
1. ನಾವು ಯೆಹೋವ ಸೈನ್ಯ
ವಿಮುಕ್ತರೆಲ್ಲ.
ಕ್ರಿಸ್ತನಾಳುವ ರಾಜ್ಯ,
ಇದೆಮ್ಮ ಸಂದೇಶ.
ಸ್ವಯಂ ಸೇವಕರಾಗಿ
ಮುನ್ನಡೆವಾಗ,
ನಮ್ಮ ಮನ ದೃಢ,
ಭಯರಹಿತ.
(ಪಲ್ಲವಿ)
ನಾವು ಯೆಹೋವ ಸೈನ್ಯ,
ಕ್ರಿಸ್ತ ಜೊತೆಗೆ;
‘ಆಳುತ್ತಿದೆ ರಾಜ್ಯ’
ಇದೆಮ್ಮ ಘೋಷ.
2. ನಾವು ದೇವ ದಾಸರು,
ತಪ್ಪಿಹೋಗಿರ್ವ,
ದುಃಖಿಸುವ ಕುರಿಯ
ಹುಡುಕುವವರು.
ಪುನರ್ಭೇಟಿಯ ಮಾಡಿ
ಉಣಿಸುತ್ತೇವೆ,
ಕರೆಕೊಡುತ್ತೇವೆ
ರಾಜ್ಯಗೃಹಕ್ಕೆ.
(ಪಲ್ಲವಿ)
ನಾವು ಯೆಹೋವ ಸೈನ್ಯ,
ಕ್ರಿಸ್ತ ಜೊತೆಗೆ;
‘ಆಳುತ್ತಿದೆ ರಾಜ್ಯ’
ಇದೆಮ್ಮ ಘೋಷ.
3. ಇದು ಯೆಹೋವ ಸೈನ್ಯ
ಕ್ರಿಸ್ತ ಜೊತೆಗೆ,
ಸಮರ ಸನ್ನದ್ಧರು,
ತೋರಿಸಿ ಸ್ಥಿರತೆ.
ಜಾಗರೂಕರಾದರೂ
ಪ್ರಾಮಾಣಿಕರು.
ಅಪಾಯ ಬಂದರೂ
ಸತ್ಯಸಂಧರು.
(ಪಲ್ಲವಿ)
ನಾವು ಯೆಹೋವ ಸೈನ್ಯ,
ಕ್ರಿಸ್ತ ಜೊತೆಗೆ;
‘ಆಳುತ್ತಿದೆ ರಾಜ್ಯ’
ಇದೆಮ್ಮ ಘೋಷ.
(ಎಫೆ. 6:11, 14; ಫಿಲಿ. 1:7; ಫಿಲೆ. 2 ಸಹ ನೋಡಿ.)