ಗೀತೆ 113
ದೇವರ ವಾಕ್ಯಕ್ಕಾಗಿ ಕೃತಜ್ಞರು
1. ಯೆಹೋವ ಪಿತನೇ, ಹೇಳುತ್ತೇವಿಂತು:
ವಾಕ್ಯಕ್ಕಾಗಿ ನಾವೆಷ್ಟೋ ಕೃತಜ್ಞರು.
ಜನರ ಪ್ರೇರಿಸಿದಿ ಬರೆಯಲದನ್ನು.
ವಾಕ್ಯ ಮಾರ್ಗದರ್ಶಿ, ಬೋಧಕ ನೀನು.
2. ಮಾನವ ಕೋರಿಕೆ ಅದರಲ್ಲಿದೆ.
ಪ್ರೇಷಿತರಿದ್ದರು ನಮ್ಮ ಹಾಗೆಯೇ.
ನಂಬಿಕೆ, ಧೈರ್ಯವಿತ್ತು ಅವರ ಬಾಳಲ್ಲಿ.
ಅದೆಮ್ಮ ಹೃನ್ಮನ ಚೇತರಿಸಲಿ.
3. ನಿನ್ನ ವಾಕ್ಯ ಶಕ್ತ, ಆಳ ಹೋಗುತೆ,
ಪ್ರಾಣ, ಮನಗಳ ವಿಂಗಡಿಸುತೆ.
ನಮ್ಮಾಶಯ, ಹೇತುವ ಹುಡುಕುತ್ತದದು.
ತಿದ್ದುತೆ ನಮ್ಮನು ವಿವೇಕ ಕೊಟ್ಟು.
(ಕೀರ್ತ. 119:16, 162; 2 ತಿಮೊ. 3:16; ಯಾಕೋ. 5:17; 2 ಪೇತ್ರ 1:21 ಸಹ ನೋಡಿ.)