ಭಾಗ 7
ಯೇಸು ಯಾರು?
ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿಕೊಟ್ಟನು. 1 ಯೋಹಾನ 4:9
ನಾವು ದೇವರ ಮೆಚ್ಚಿಕೆಯನ್ನು ಪಡೆಯಬೇಕಾದರೆ ಆತನ ಮಗನ ಮಾತನ್ನೂ ಕೇಳಬೇಕು. ಈ ಮಗನನ್ನು, ಆದಾಮನನ್ನು ಉಂಟುಮಾಡುವ ಎಷ್ಟೋ ಮುಂಚೆ ಯೆಹೋವನು ಸ್ವರ್ಗದಲ್ಲಿ ಸೃಷ್ಟಿಸಿದನು. ಇವನೊಬ್ಬ ಬಲಿಷ್ಠ ದೇವದೂತನಾಗಿದ್ದನು.
ಸಮಯಾನಂತರ, ಯೆಹೋವನು ಇವನನ್ನು ಸ್ವರ್ಗದಿಂದ ಭೂಮಿಗೆ ಕಳುಹಿಸಿದನು. ಇವನ ಜೀವವನ್ನು ಮರಿಯಳೆಂಬ ಕನ್ಯೆಯೊಬ್ಬಳ ಗರ್ಭಕ್ಕೆ ಸ್ಥಳಾಂತರಿಸಿದನು. ಬೇತ್ಲೆಹೇಮ್‌ನಲ್ಲಿ ಜನಿಸಿದ ಈ ಮಗುವಿಗೆ ಯೇಸು ಎಂದು ಹೆಸರಿಡಲಾಯಿತು. —ಯೋಹಾನ 6:38.
ದೇವರ ಎಲ್ಲಾ ಗುಣಗಳು ಯೇಸುವಿನಲ್ಲಿ ಅಚ್ಚೊತ್ತಿದಂತೆ ಇದ್ದವು. ಜನರೆಡೆಗೆ ಅವನಿಗೆ ತುಂಬಾ ಪ್ರೀತಿ ಕಾಳಜಿ ಇತ್ತು. ಅವನು ಸ್ನೇಹಪರನಾಗಿದ್ದನು. ಧೈರ್ಯದಿಂದ ಜನರಿಗೆ ಯೆಹೋವನ ಕುರಿತು ಸತ್ಯವನ್ನು ಕಲಿಸಿದನು.
ಯೇಸು ಒಳ್ಳೇದನ್ನೇ ಮಾಡಿದನು. ಆದರೂ ದ್ವೇಷಕ್ಕೆ ಗುರಿಯಾದನು. 1 ಪೇತ್ರ 2:21-24
ಧರ್ಮಗುರುಗಳು ಯೇಸುವನ್ನು ದ್ವೇಷಿಸುತ್ತಿದ್ದರು. ಏಕೆಂದರೆ ಯೇಸು ಅವರ ಸುಳ್ಳು ಬೋಧನೆಗಳನ್ನೂ ಕೆಟ್ಟ ಕ್ರಿಯೆಗಳನ್ನೂ ಬಯಲುಪಡಿಸಿದನು.
ಯೇಸು ಜನರ ಕಾಯಿಲೆಗಳನ್ನು ವಾಸಿಮಾಡಿದನು; ಸತ್ತವರನ್ನು ಪುನಃ ಬದುಕಿಸಿದನು.
ಕೊರಡೆಯೇಟಿನ ಶಿಕ್ಷೆ ಹಾಗೂ ಮರಣದಂಡನೆಯನ್ನು ಯೇಸುವಿಗೆ ವಿಧಿಸುವಂತೆ ಆ ಧರ್ಮಗುರುಗಳು ರೋಮನ್ ಅಧಿಕಾರಿಗಳನ್ನು ಒಪ್ಪಿಸಿದರು.