ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 8 ಪು. 18-19
  • ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ಭಾಗ 8
    ದೇವರ ಮಾತನ್ನು ಆಲಿಸಿ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ರಾಜ್ಯದ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 8 ಪು. 18-19

ಭಾಗ 8

ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?

ಯೇಸು ಮರಣವನ್ನಪ್ಪಿದ್ದು ನಾವು ಜೀವಿಸಲೆಂದೇ. ಯೋಹಾನ 3:16

ಖಾಲಿಯಾಗಿರುವ ಯೇಸುವಿನ ಸಮಾಧಿಯನ್ನು ನೋಡುತ್ತಿರುವ ಸ್ತ್ರೀಯರು

ಯೇಸು ಮರಣ ಹೊಂದಿ ಮೂರನೆಯ ದಿನದಂದು ಕೆಲವು ಸ್ತ್ರೀಯರು ಯೇಸುವಿನ ಸಮಾಧಿಯ ಬಳಿ ಹೋದರು. ಆದರೆ ಅದು ಖಾಲಿಯಾಗಿತ್ತು. ಯೇಸುವನ್ನು ಯೆಹೋವನು ಪುನರುತ್ಥಾನಗೊಳಿಸಿದ್ದನು.

ಯೇಸು ತನ್ನ ಅಪೊಸ್ತಲರಿಗೆ ಕಾಣಿಸಿಕೊಂಡು ನಂತರ ಸ್ವರ್ಗಕ್ಕೆ ಏರಿಹೋಗುತ್ತಿದ್ದಾನೆ

ಪುನರುತ್ಥಾನದ ನಂತರ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು.

ಯೆಹೋವನು ಯೇಸುವನ್ನು ಬಲಿಷ್ಠ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಿ ಅವನಿಗೆ ಅಮರತ್ವ ಕೊಟ್ಟನು. ಯೇಸು ಸ್ವರ್ಗಕ್ಕೆ ಏರಿಹೋಗುವುದನ್ನು ಅವನ ಶಿಷ್ಯರು ನೋಡಿದರು.

  • ಪಾಪದ “ಸಂಬಳ” ಏನಾಗಿದೆ?—ರೋಮನ್ನರಿಗೆ 6:23.

  • ನಾವು ಸದಾಕಾಲ ಜೀವಿಸುವಂತೆ ಯೇಸು ಅವಕಾಶ ಮಾಡಿಕೊಟ್ಟನು.—ರೋಮನ್ನರಿಗೆ 5:21.

ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿ ದೇವರ ರಾಜ್ಯದ ಅರಸನಾಗಿ ನೇಮಿಸಿದನು. ದಾನಿಯೇಲ 7:13, 14

ದೇವರ ರಾಜ್ಯದಲ್ಲಿ ತನ್ನ ಸಿಂಹಾಸನದಲ್ಲಿ ಕುಳಿತು ಸುಂದರ ತೋಟವಾಗಿರುವ ಭೂಮಿಯಲ್ಲಿರುವ ತನ್ನ ಜನರನ್ನು ಆಳುತ್ತಿರುವ ಯೇಸು

ಯೇಸು ತನ್ನ ಜೀವವನ್ನು ಅರ್ಪಿಸಿದ್ದು ಮಾನವಕುಲವನ್ನು ಪಾಪ ಮರಣದ ಬಂಧನದಿಂದ ಬಿಡಿಸುವುದಕ್ಕಾಗಿ. (ಮತ್ತಾಯ 20:28) ಈ ಬಲಿದಾನದ ಏರ್ಪಾಡಿನ ಮೂಲಕ ದೇವರು ನಮಗೆ ಸದಾಕಾಲ ಜೀವಿಸುವ ಅವಕಾಶ ನೀಡುತ್ತಾನೆ.

ಸ್ವರ್ಗದಲ್ಲಿ ಯೆಹೋವನು ಯೇಸುವನ್ನು ರಾಜನಾಗಿ ನೇಮಿಸಿದನು. ಯೇಸು 1,44,000 ಸಹರಾಜರೊಂದಿಗೆ ಈ ಭೂಮಿಯನ್ನು ಆಳುತ್ತಾನೆ. ಭೂಮಿಯಿಂದ ಸ್ವರ್ಗಕ್ಕೆ ಪುನರುತ್ಥಾನಗೊಂಡ ನೀತಿವಂತ ಜನರೇ ಈ 1,44,000 ಸಹರಾಜರು. ಯೇಸು ಹಾಗೂ ಈ ಸಹರಾಜರು ಸೇರಿ ಸ್ವರ್ಗದಲ್ಲಿ ಒಂದು ನೀತಿಯುತ ಸರಕಾರವನ್ನು ರಚಿಸುತ್ತಾರೆ. ಇದೇ ದೇವರ ರಾಜ್ಯ.—ಪ್ರಕಟನೆ 14:1-3.

ದೇವರ ರಾಜ್ಯವು ಭೂಮಿಯನ್ನು ಪರದೈಸನ್ನಾಗಿ ಮಾಡುವುದು. ಯುದ್ಧ, ಅಪರಾಧ, ಬಡತನ, ಆಹಾರದ ಕೊರತೆ ಮುಂತಾದವು ಅಲ್ಲಿರುವುದಿಲ್ಲ. ಜನರು ಸುಖಸಂತೋಷದಿಂದ ಬಾಳುವರು.—ಕೀರ್ತನೆ 145:16.

  • ದೇವರ ರಾಜ್ಯದಿಂದ ನಮಗೆ ಏನೆಲ್ಲ ಪ್ರಯೋಜನ ಸಿಗುತ್ತದೆ?—ಕೀರ್ತನೆ 72.

  • ದೇವರ ರಾಜ್ಯ ಬರಲಿ ಎಂದು ನಾವು ಪ್ರಾರ್ಥಿಸಬೇಕು.—ಮತ್ತಾಯ 6:10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ