ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 9 ಪು. 20-21
  • ಪರದೈಸ್‌ ಯಾವಾಗ ಬರುವುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರದೈಸ್‌ ಯಾವಾಗ ಬರುವುದು?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ಭಾಗ 9
    ದೇವರ ಮಾತನ್ನು ಆಲಿಸಿ
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಒಂದು ಉತ್ತಮ ಜೀವನ—ಶೀಘ್ರದಲ್ಲೇ!
    ಕಾವಲಿನಬುರುಜು—1995
  • ಲೋಕದ ಅಂತ್ಯ ಹತ್ತಿರವಿದೆಯಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 9 ಪು. 20-21

ಭಾಗ 9

ಪರದೈಸ್‌ ಯಾವಾಗ ಬರುವುದು?

ಭೂಮಿಯಲ್ಲಿ ತುಂಬಿರುವ ಕಷ್ಟಸಂಕಟಗಳು ದೇವರ ರಾಜ್ಯವು ಬೇಗನೆ ಬರಲಿದೆ ಎಂದು ಸೂಚಿಸುತ್ತವೆ. ಲೂಕ 21:10, 11; 2 ತಿಮೊಥೆಯ 3:1-5

ಕಡೇ ದಿವಸಗಳಲ್ಲಿ ಸಾಮಾನ್ಯವಾಗಿರುವ ವಿಷಯಗಳು—ಜೂಜಾಟ, ಯುದ್ಧ, ಕಾಯಿಲೆ, ಆಹಾರದ ಅಭಾವ, ಹೆತ್ತವರಿಗೆ ಅವಿಧೇಯತೆ, ಗ್ರಹ ಹಿಂಸೆ

ನಮ್ಮ ದಿನಗಳಲ್ಲಿ ನಡೆಯುತ್ತಿರುವ ಅನೇಕ ಸಂಗತಿಗಳ ಕುರಿತು ಬೈಬಲ್‌ನಲ್ಲಿ ಮೊದಲೇ ಬರೆದಿಡಲಾಗಿದೆ. ಜನರಲ್ಲಿ ಹಣದಾಸೆ, ಹೆತ್ತವರಿಗೆ ಅವಿಧೇಯತೆ, ಕ್ರೂರತನ, ಸುಖಭೋಗಗಳೆಡೆಗೆ ಮೋಹ ಹೆಚ್ಚೆಚ್ಚಾಗಿ ಇರುವವೆಂದು ಅದು ತಿಳಿಸಿತ್ತು.

ಭಾರಿ ಭೂಕಂಪಗಳು, ಯುದ್ಧಗಳು, ಆಹಾರದ ಕೊರತೆ ಇರುವವು ಮತ್ತು ಎಲ್ಲೆಲ್ಲೂ ರೋಗರುಜಿನ ತಲೆದೋರುವವು ಎಂದೂ ತಿಳಿಸಿತ್ತು. ಈ ಸಂಗತಿಗಳೆಲ್ಲ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ.

ಯೆಹೋವನ ಸಾಕ್ಷಿಗಳಲ್ಲೊಬ್ಬರು ಒಬ್ಬ ವ್ಯಕ್ತಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ

ಅಲ್ಲದೇ ಯೇಸು ಹೇಳಿದಂತೆ ದೇವರ ರಾಜ್ಯದ ಸುವಾರ್ತೆಯನ್ನು ಇಡೀ ಭೂಮಿಯಲ್ಲಿ ಸಾರಲಾಗುವುದು.—ಮತ್ತಾಯ 24:14.

ದೇವರ ರಾಜ್ಯವು ಕೆಟ್ಟತನವನ್ನು ಇಲ್ಲದಂತೆ ಮಾಡುತ್ತದೆ. 2 ಪೇತ್ರ 3:13

ಅರ್ಮಗೆದ್ದೋನ್‌ನಲ್ಲಿ ದುಷ್ಟರು ನಾಶವಾಗುವರು, ನಂತರ ಸೈತಾನ ಮತ್ತವನ ದೆವ್ವಗಳಿಗೆ ದಂಡನೆ ನೀಡಲಾಗುವುದು

ಯೆಹೋವನು ಎಲ್ಲ ಕೆಟ್ಟ ಜನರನ್ನು ಬೇಗನೆ ನಾಶಮಾಡುವನು.

ಸೈತಾನ ಮತ್ತು ದೆವ್ವಗಳು ದಂಡನೆಗೊಳಗಾಗುತ್ತವೆ.

ಸ್ವರ್ಗದಲ್ಲಿ ತನ್ನ ಸಿಂಹಾಸನದ ಮೇಲೆ ಯೇಸು ಕುಳಿತಿದ್ದಾನೆ ಮತ್ತು ವಿಭಿನ್ನ ಕುಲ, ಜನಾಂಗಗಳ ಜನರು ಸಂತೋಷಿಸುತ್ತಿದ್ದಾರೆ

ದೇವರ ಮಾತನ್ನು ಆಲಿಸುವವರು ನಾಶವಾಗದೇ ನೀತಿನಿಷ್ಠೆಯ ಹೊಸ ಲೋಕದಲ್ಲಿ ಭಯವಿಲ್ಲದೆ ಜೀವಿಸುವರು. ಆ ಲೋಕದಲ್ಲಿ ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದಿರುತ್ತಾರೆ.

  • ಯೇಸು ತಿಳಿಸಿದಂತೆ ನಮ್ಮ ದಿನಗಳಲ್ಲಿ ಏನೆಲ್ಲ ನಡೆಯುವುದು?—ಮತ್ತಾಯ 24:3-14.

  • ಕೆಟ್ಟ ಜನರು ನಾಶವಾಗುತ್ತಾರೆ.—2 ಪೇತ್ರ 3:7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ