ಭಾಗ 12
ಕುಟುಂಬದ ಸುಖಸಂತೋಷಕ್ಕೆ ಏನು ಅವಶ್ಯ?
ಕುಟುಂಬ ಸಂತೋಷಕ್ಕೆ ಪ್ರೀತಿ ಅವಶ್ಯ. ಎಫೆಸ 5:33
ವಿವಾಹ ಸಂಬಂಧವು ಗಂಡು ಹೆಣ್ಣಿನ ನಡುವೆ ಮಾತ್ರ ಇದ್ದು ಒಬ್ಬ ವ್ಯಕ್ತಿಗೆ ಒಂದೇ ಸಂಗಾತಿ ಇರಬೇಕು ಎನ್ನುವುದು ದೇವರ ನಿಯಮ.
ಗಂಡ ತನ್ನ ಹೆಂಡತಿಯ ಭಾವನೆಗಳನ್ನು ಅರ್ಥಮಾಡಿಕೊಂಡು ಅವಳನ್ನು ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳಬೇಕು.
ಹೆಂಡತಿ ಗಂಡನಿಗೆ ಬೆಂಬಲ ಸಹಕಾರ ನೀಡಬೇಕು.
ಮಕ್ಕಳು ತಂದೆತಾಯಿಯ ಮಾತನ್ನು ಕೇಳಬೇಕು.
ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯದಿಂದಿರಿ. ದಾಂಪತ್ಯದ್ರೋಹ, ದೌರ್ಜನ್ಯ ತಪ್ಪು. ಕೊಲೊಸ್ಸೆ 3:5, 8-10
ಗಂಡನು ಹೆಂಡತಿಯನ್ನು ತನ್ನ ಸ್ವಂತ ಶರೀರದಂತೆ ಪ್ರೀತಿಸಬೇಕೆಂದು, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವ ಇರಬೇಕೆಂದು ದೇವರ ವಾಕ್ಯವಾದ ಬೈಬಲ್ ಹೇಳುತ್ತದೆ.
ಪತಿ-ಪತ್ನಿ ಮಧ್ಯೆ ಮಾತ್ರ ಲೈಂಗಿಕ ಸಂಬಂಧ ಇರಬೇಕು. ಬಹುಪತ್ನಿತ್ವ ತಪ್ಪು.
ಕುಟುಂಬದಲ್ಲಿ ಸಂತೋಷ ನೆಮ್ಮದಿ ಕಾಣಲು ಏನು ಮಾಡಬೇಕೆಂದು ಯೆಹೋವನ ವಾಕ್ಯವಾದ ಬೈಬಲ್ ಕಲಿಸುತ್ತದೆ.