ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • od ಪು. 181-188
  • ಭಾಗ 1: ಕ್ರೈಸ್ತ ನಂಬಿಕೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಗ 1: ಕ್ರೈಸ್ತ ನಂಬಿಕೆಗಳು
  • ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಅನುರೂಪ ಮಾಹಿತಿ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಾವು ಸಾರಲೇಬೇಕಾದಂಥ ಸಂದೇಶ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ‘ಸ್ವಾಮೀ, ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
od ಪು. 181-188

ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳುವ ಪ್ರಶ್ನೆಗಳು

ಭಾಗ 1: ಕ್ರೈಸ್ತ ನಂಬಿಕೆಗಳು

ಯೆಹೋವನ ಸಾಕ್ಷಿಗಳ ಸಹಾಯದಿಂದ ನೀವು ಬೈಬಲ್‌ ಕಲಿತು ಸತ್ಯ ತಿಳಿದುಕೊಂಡಿರಿ. ಇದು ಯೆಹೋವನೊಂದಿಗೆ ಆಪ್ತ ಸಂಬಂಧಕ್ಕೆ ಬರಲು ನಿಮಗೆ ಸಹಾಯ ಮಾಡಿದೆ. ನಿಮ್ಮ ಜೀವನಕ್ಕೊಂದು ನಿರೀಕ್ಷೆ ಸಿಕ್ಕಿದೆ. ದೇವರ ರಾಜ್ಯ ಆಳುವಾಗ ಈ ಭೂಮಿ ಸುಂದರ ತೋಟವಾಗುತ್ತೆ. ಅಲ್ಲಿ ನೀವು ಅನೇಕ ಆಶೀರ್ವಾದಗಳನ್ನು ಅನುಭವಿಸಲು ಕಾಯುತ್ತಿದ್ದೀರಿ ಅನ್ನುವುದಕ್ಕೆ ಸಂಶಯವಿಲ್ಲ. ಬೈಬಲಿನಲ್ಲಿ ನಿಮ್ಮ ನಂಬಿಕೆ ಸಹ ಹೆಚ್ಚಾಗಿದೆ. ಸಭೆಯಲ್ಲಿ ಸಹೋದರ ಸಹೋದರಿಯರೊಟ್ಟಿಗೆ ಸಹವಾಸ ಮಾಡುವುದರಿಂದ ಈಗಲೇ ನೀವು ಅನೇಕ ಆಶೀರ್ವಾದಗಳನ್ನು ಪಡೆದಿದ್ದೀರಿ. ಯೆಹೋವನು ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಾನೆ ಅನ್ನೋದೂ ನಿಮಗೀಗ ಅರ್ಥವಾಗಿದೆ.​—ಜೆಕ. 8:23.

ದೀಕ್ಷಾಸ್ನಾನ ಪಡೆಯಲು ನೀವು ತಯಾರಾಗುತ್ತಿರುವ ಈ ಸಮಯದಲ್ಲಿ ಮೂಲಭೂತ ಕ್ರೈಸ್ತ ನಂಬಿಕೆಗಳ ಬಗ್ಗೆ ನೀವು ಪರೀಕ್ಷಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ. ಆ ಬೋಧನೆಗಳನ್ನು ಸಭಾ ಹಿರಿಯರು ನಿಮ್ಮೊಂದಿಗೆ ಚರ್ಚಿಸುತ್ತಾರೆ. (ಇಬ್ರಿ. 6:1-3) ಯೆಹೋವನ ಬಗ್ಗೆ ಹೆಚ್ಚು ತಿಳಿಯಲು ನೀವು ಮಾಡುವ ಪ್ರಯತ್ನವನ್ನು ಆತನು ಆಶೀರ್ವದಿಸಲಿ ಮತ್ತು ಭವಿಷ್ಯದಲ್ಲಿ ನೀವು ಶಾಶ್ವತ ಜೀವ ಪಡೆಯುವಂತಾಗಲಿ.​—ಯೋಹಾ. 17:3.

1. ನೀವು ಯಾಕೆ ದೀಕ್ಷಾಸ್ನಾನ ತಗೊಳ್ಳುತ್ತೀರಾ?

2. ಯೆಹೋವ ಯಾರು?

• “ಆಕಾಶದಲ್ಲೂ ಭೂಮಿಯಲ್ಲೂ ಯೆಹೋವನೇ ಸತ್ಯ ದೇವರು, ಬೇರೆ ಯಾವ ದೇವರೂ ಇಲ್ಲ.”​—ಧರ್ಮೋ. 4:39, NW.

• “ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು.”​—ಕೀರ್ತ. 83:18, NW.

3. ದೇವರ ಹೆಸರನ್ನು ಉಪಯೋಗಿಸುವುದು ಯಾಕೆ ಮುಖ್ಯ?

• “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: ‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.’”​—ಮತ್ತಾ. 6:9, NW.

• “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”​—ರೋಮ. 10:13, NW.

4. ಯೆಹೋವನನ್ನು ವರ್ಣಿಸಲು ಬೈಬಲಿನಲ್ಲಿ ಯಾವ ಪದಗಳನ್ನು ಬಳಸಲಾಗಿದೆ?

• “ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ.”​—ಯೆಶಾ. 40:28, NW.

• “ಸ್ವರ್ಗದಲ್ಲಿರೋ ಅಪ್ಪಾ.”​—ಮತ್ತಾ. 6:9, NW.

• “ದೇವರು ಪ್ರೀತಿಯಾಗಿದ್ದಾನೆ.”​—1 ಯೋಹಾ. 4:8, NW.

5. ಯೆಹೋವ ದೇವರಿಗೆ ನೀವೇನು ಕೊಡಬಹುದು?

• “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು.”​—ಮಾರ್ಕ 12:30, NW.

• “ನಿನ್ನ ದೇವರಾಗಿರೋ ಯೆಹೋವನನ್ನೇ ನೀನು ಆರಾಧಿಸಬೇಕು, ಆತನೊಬ್ಬನಿಗೇ ನೀನು ಪವಿತ್ರ ಸೇವೆ ಸಲ್ಲಿಸಬೇಕು.”​—ಲೂಕ 4:8, NW.

6. ಯೆಹೋವ ದೇವರಿಗೆ ನಿಷ್ಠೆ ತೋರಿಸೋಕೆ ನೀವು ಯಾಕೆ ಇಷ್ಟಪಡ್ತೀರಾ?

• “ನನ್ನ ಮಗನೇ, ವಿವೇಕಿಯಾಗಿ ನನ್ನ ಮನಸ್ಸನ್ನ ಖುಷಿಪಡಿಸು, ಆಗ ನನ್ನನ್ನ ಹಂಗಿಸುವವನಿಗೆ ನಾನು ಉತ್ತರ ಕೊಡಕ್ಕಾಗುತ್ತೆ.”​—ಜ್ಞಾನೋ. 27:11, NW.

7. ನೀವು ಯಾರಿಗೆ ಪ್ರಾರ್ಥನೆ ಮಾಡ್ತಿರಾ? ಯಾರ ಹೆಸರಲ್ಲಿ ಪ್ರಾರ್ಥನೆ ಮಾಡ್ತಿರಾ?

• ‘ನಿಜ ಹೇಳ್ತೀನಿ, ನೀವು ನನ್ನ [ಯೇಸು] ಅಪ್ಪನ ಹತ್ರ ನನ್ನ ಹೆಸ್ರಲ್ಲಿ ಏನೇ ಬೇಡ್ಕೊಂಡ್ರೂ ಅದನ್ನ ಕೊಡ್ತಾನೆ.’​—ಯೋಹಾ. 16:23, NW.

8. ನೀವು ಯಾವೆಲ್ಲ ವಿಷಯಗಳಿಗಾಗಿ ಪ್ರಾರ್ಥಿಸಬಹುದು?

• “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: ‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ. ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ. ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು. ಬೇರೆಯವರ ತಪ್ಪುಗಳನ್ನ ನಾವು ಕ್ಷಮಿಸಿರೋ ತರ ನಮ್ಮ ತಪ್ಪುಗಳನ್ನೂ ಕ್ಷಮಿಸು. ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು.’”​—ಮತ್ತಾ. 6:9-13, NW.

• “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.”​—1 ಯೋಹಾ. 5:14, NW.

9. ಯೆಹೋವ ದೇವರು ಎಂಥವರ ಪ್ರಾರ್ಥನೆ ಕೇಳಲ್ಲ?

• “ಆಗ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡ್ತಾರೆ, ಆದ್ರೆ ಆತನು ಅವ್ರಿಗೆ ಉತ್ತರ ಕೊಡಲ್ಲ. ಅವರು ಕೆಟ್ಟ ಕೆಲಸ ಮಾಡೋದ್ರಿಂದ . . . ಆತನು ಅವ್ರ ಕೈಬಿಡ್ತಾನೆ.”​—ಮೀಕ 3:4, NW.

• “ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ. ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಇಲ್ಲ.”​—1 ಪೇತ್ರ 3:12, NW.

10. ಯೇಸು ಕ್ರಿಸ್ತ ಯಾರು?

• “ಆಗ ಸೀಮೋನ ಪೇತ್ರ “ನೀನು ಕ್ರಿಸ್ತ, ಜೀವವುಳ್ಳ ದೇವರ ಮಗ” ಅಂತ ಉತ್ರಕೊಟ್ಟ.”​—ಮತ್ತಾ. 16:16, NW.

11. ಯೇಸು ಯಾಕೆ ಭೂಮಿಗೆ ಬಂದ?

• “ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ. ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ.”​—ಮತ್ತಾ. 20:28, NW.

• “ನಾನು [ಯೇಸು] ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ.”​—ಲೂಕ 4:43, NW.

12. ಯೇಸು ಮಾಡಿದ ತ್ಯಾಗಕ್ಕೆ ನೀವು ಹೇಗೆ ಕೃತಜ್ಞತೆ ತೋರಿಸಬಹುದು?

• “ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು, ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದುಬಂದವನಿಗಾಗಿ ಜೀವಿಸಬೇಕು ಅನ್ನೋ ಕಾರಣಕ್ಕೆ ಆತನು ಎಲ್ರಿಗೋಸ್ಕರ ಸತ್ತನು.”​—2 ಕೊರಿಂ. 5:15, NW.

13. ಯೇಸುವಿಗೆ ಯಾವ ಅಧಿಕಾರ ಇದೆ?

• “ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ.”​—ಮತ್ತಾ. 28:18, NW.

• “ದೇವರು ಆತನನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು ಮತ್ತು ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠ ಹೆಸ್ರನ್ನ ಆತನಿಗೆ ಕೊಟ್ಟನು.”—ಫಿಲಿ. 2:9, NW.

14. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿನೇ “ನಂಬಿಗಸ್ತ, ವಿವೇಕಿ ಆದ ಆಳು” ಮತ್ತು ಅವರನ್ನ ಯೇಸುನೇ ನೇಮಿಸಿದ್ದು ಅಂತ ನಂಬ್ತೀರಾ?

• “ತನ್ನ ಮನೆಯವ್ರಿಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯಜಮಾನ ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು ನಿಜಕ್ಕೂ ಯಾರು?”​—ಮತ್ತಾ. 24:45, NW.

15. ಪವಿತ್ರಶಕ್ತಿ ಒಬ್ಬ ವ್ಯಕ್ತಿನಾ?

• “ಆಗ ದೇವದೂತ ‘ಪವಿತ್ರಶಕ್ತಿ ನಿನ್ನ ಮೇಲೆ ಬರುತ್ತೆ. ಸರ್ವೋನ್ನತನ ಶಕ್ತಿ ನಿನ್ನನ್ನ ಕಾಪಾಡುತ್ತೆ. ಹಾಗಾಗಿ ನಿನಗೆ ಹುಟ್ಟೋ ಮಗ ಪವಿತ್ರನಾಗಿ ಇರ್ತಾನೆ. ಅವನನ್ನ ದೇವರ ಮಗ ಅಂತ ಕರಿತಾರೆ.’”​—ಲೂಕ 1:35, NW.

• “ಹಾಗಾದ್ರೆ ಪಾಪಿಗಳಾಗಿರೋ ನೀವೇ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ ಕೊಡಲ್ವಾ?”​—ಲೂಕ 11:13, NW.

16. ಯೆಹೋವ ದೇವರು ತನ್ನ ಪವಿತ್ರಶಕ್ತಿಯನ್ನು ಹೇಗೆ ಉಪಯೋಗಿಸಿದ್ದಾನೆ?

• “ಯೆಹೋವನ ಮಾತಿಂದ ಆಕಾಶ ಸೃಷ್ಟಿ ಆಯ್ತು, ಅದ್ರಲ್ಲಿರೋ ಎಲ್ಲ ಆತನ ಬಾಯಿಯ ಉಸಿರಿಂದ ಬಂತು.”​—ಕೀರ್ತ. 33:6, NW.

• “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು . . . ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ.”​—ಅ. ಕಾ. 1:8, NW.

• “ಪವಿತ್ರ ಗ್ರಂಥದಲ್ಲಿ ಇರೋ ಯಾವ ಭವಿಷ್ಯವಾಣಿನೂ ಮನುಷ್ಯನ ಆಲೋಚನೆಯಿಂದ ಹುಟ್ಕೊಂಡಿಲ್ಲ . . . ಯಾಕಂದ್ರೆ ಯಾವ ಭವಿಷ್ಯವಾಣಿನೂ ಮನುಷ್ಯನ ಇಷ್ಟದ ಪ್ರಕಾರ ಬರಲಿಲ್ಲ, ಬದಲಿಗೆ ದೇವರು ಹೇಳಿದ್ದನ್ನೇ ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು.”​—2 ಪೇತ್ರ 1:20, 21, NW.

17. ದೇವರ ಸರ್ಕಾರ ಅಂದರೇನು?

• “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ. ಅದು ಬೇರೆ ಜನ್ರ ಕೈಗೂ ಹೋಗಲ್ಲ. ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ. ಆ ಆಡಳಿತ ಸದಾಕಾಲ ಇರುತ್ತೆ.”​—ದಾನಿ. 2:44, NW.

18. ದೇವರ ಸರ್ಕಾರದಿಂದ ನಿಮಗೆ ಯಾವೆಲ್ಲ ಪ್ರಯೋಜನ ಸಿಗುತ್ತೆ?

• “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”​—ಪ್ರಕ. 21:4, NW.

19. ದೇವರ ಆಳ್ವಿಕೆಯಿಂದ ಸಿಗೋ ಆಶೀರ್ವಾದಗಳು ತುಂಬ ಬೇಗ ಸಿಗುತ್ತೆ ಅಂತ ನೀವು ಹೇಗೆ ಹೇಳ್ತೀರಾ?

• “ಆಮೇಲೆ ಆತನು . . . ಒಬ್ಬನೇ ಕೂತಿದ್ದಾಗ ಶಿಷ್ಯರು ಬಂದು ‘ಆ ವಿಷ್ಯಗಳೆಲ್ಲ ಯಾವಾಗ ನಡೆಯುತ್ತೆ? ನೀನು ಮತ್ತೆ ಬರೋ ಕಾಲಕ್ಕೆ ಮತ್ತು ಈ ಲೋಕದ ಅಂತ್ಯಕ್ಕೆ ಸೂಚನೆ ಏನು? ನಮಗೆ ಹೇಳು’ ಅಂದ್ರು. ಅದಕ್ಕೆ ಯೇಸು ಹೀಗೆ ಹೇಳಿದ ‘. . . ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ, ಭೂಕಂಪ ಆಗುತ್ತೆ. ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.’”​—ಮತ್ತಾ. 24:3, 4, 7, 14, NW.

• “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು, ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು, ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.”​—2 ತಿಮೊ. 3:1-5, NW.

20. ದೇವರ ಆಳ್ವಿಕೆ ನಿಮಗೆ ಮುಖ್ಯ ಅಂತ ಹೇಗೆ ತೋರಿಸ್ತೀರಾ?

• “ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ, ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ.”​—ಮತ್ತಾ. 6:33, NW.

• “ಯೇಸು ಶಿಷ್ಯರಿಗೆ ‘ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ ಹೊತ್ತು ನನ್ನ ಹಿಂದೆನೇ ಬರಲಿ.’”​—ಮತ್ತಾ. 16:24, NW.

21. ಸೈತಾನ ಮತ್ತು ಕೆಟ್ಟ ದೇವದೂತರು ಯಾರು?

• “ನೀವು ಸೈತಾನನ ಮಕ್ಕಳು . . . ಮೊದಲಿನಿಂದಾನೇ ಅವನೊಬ್ಬ ಕೊಲೆಗಾರ.”​—ಯೋಹಾ. 8:44, NW.

• “ಈ ದೊಡ್ಡ ಘಟಸರ್ಪವನ್ನ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ, ಸೈತಾನ, ಹಳೇ ಹಾವು ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ. ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.”​—ಪ್ರಕ. 12:9, NW.

22. ಯೆಹೋವ ದೇವರ ಮೇಲೆ ಮತ್ತು ಆತನ ಆರಾಧಕರ ಮೇಲೆ ಸೈತಾನ ಯಾವ ಆರೋಪ ಹಾಕಿದ?

• “ಸ್ತ್ರೀ ಹಾವಿಗೆ ‘ತೋಟದಲ್ಲಿರೋ ಮರಗಳ ಹಣ್ಣುಗಳನ್ನ ನಾವು ತಿನ್ನಬಹುದು. ಆದ್ರೆ ತೋಟದ ಮಧ್ಯದಲ್ಲಿರೋ ಮರದ ಹಣ್ಣಿನ ಬಗ್ಗೆ ‘ನೀವು ಅದನ್ನ ತಿನ್ನಬಾರದು, ಮುಟ್ಟಬಾರದು, ತಿಂದ್ರೆ ಸಾಯ್ತೀರ’ ಅಂತ ದೇವರು ಹೇಳಿದ್ದಾನೆ” ಅಂದಳು. ಆಗ ಹಾವು “ನೀವು ಖಂಡಿತ ಸಾಯಲ್ಲ. ನೀವು ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ. ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ. ಈ ವಿಷ್ಯ ದೇವರಿಗೆ ಚೆನ್ನಾಗಿ ಗೊತ್ತು’ ಅಂತ ಹೇಳ್ತು.”​—ಆದಿ. 3:2-5, NW.

• “ಸೈತಾನ ಯೆಹೋವನಿಗೆ ‘ಒಬ್ಬ ಮನುಷ್ಯ ತನ್ನ ಜೀವ ಹೋಗುತ್ತೆ ಅನ್ನುವಾಗ ಪ್ರಾಣ ಉಳಿಸ್ಕೊಳ್ಳೋಕೆ ತನ್ನ ಹತ್ರ ಇರೋದನ್ನೆಲ್ಲ ಕೊಟ್ಟುಬಿಡ್ತಾನೆ.’”​—ಯೋಬ 2:4, NW.

23. ಸೈತಾನನ ಆರೋಪ ಸುಳ್ಳು ಅಂತ ಹೇಗೆ ತೋರಿಸುತ್ತೀರಾ?

• “ಪೂರ್ಣ ಹೃದಯದಿಂದ . . . [ದೇವರ] ಸೇವೆ ಮಾಡು.”​—1 ಪೂರ್ವ. 28:9, NW.

• “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!”​—ಯೋಬ 27:5, NW.

24. ಜನರು ಯಾಕೆ ಸಾಯುತ್ತಾರೆ?

• “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”​—ರೋಮ. 5:12, NW.

25. ಸತ್ತ ಮೇಲೆ ಏನಾಗುತ್ತೆ?

• “ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ. ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.”—ಪ್ರಸಂ. 9:5, NW.

26. ಸತ್ತವರಿಗೆ ಯಾವ ನಿರೀಕ್ಷೆ ಇದೆ?

• “ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ.”​—ಅ. ಕಾ. 24:15, NW.

27. ಯೇಸು ಜೊತೆ ಆಳಲು ಎಷ್ಟು ಜನ ಸ್ವರ್ಗಕ್ಕೆ ಹೋಗುತ್ತಾರೆ?

• “ಆ ಕುರಿಮರಿ ಚೀಯೋನ್‌ ಬೆಟ್ಟದ ಮೇಲೆ ನಿಂತಿತ್ತು. ಅದ್ರ ಜೊತೆ 1,44,000 ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.”​—ಪ್ರಕ. 14:1, NW.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ