ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 3 ಪು. 14-ಪು. 15 ಪ್ಯಾ. 3
  • ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ದೇವರು ಎಲ್ಲರಿಗಿಂತಲೂ ಉನ್ನತನಾಗಿದ್ದಾನೆ
    ಮಹಾ ಬೋಧಕನಿಂದ ಕಲಿಯೋಣ
  • ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?
    ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಕಷ್ಟದ ಜೀವನ ಆರಂಭ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 3 ಪು. 14-ಪು. 15 ಪ್ಯಾ. 3
ಆದಾಮ ಮತ್ತ ಹವ್ವ ಏದೆನ್‌ ತೋಟದಿಂದ ಹೊರಗೆ ಬರುತ್ತಿದ್ದಾರೆ

ಪಾಠ 3

ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಹವ್ವಳು ಕೊಟ್ಟ ತಿನ್ನಬಾರದಾಗಿದ್ದ ಹಣ್ಣನ್ನು ಆದಾಮ ಕೈಯಲ್ಲಿ ಹಿಡಿದಿದ್ದಾನೆ

ಒಂದಿನ ಹವ್ವ ಒಬ್ಬಳೇ ಇದ್ದಾಗ ಒಂದು ಹಾವು ಅವಳ ಜೊತೆ ಮಾತಾಡಿತು. ಅದು ‘ನೀವು ಯಾವ ಮರದ ಹಣ್ಣನ್ನೂ ತಿನ್ನಬಾರದು ಅಂತ ದೇವರು ಹೇಳಿರೋದು ನಿಜನಾ?’ ಎಂದು ಕೇಳಿತು. ಅದಕ್ಕೆ ಹವ್ವ ‘ಹಾಗೇನಿಲ್ಲ, ನಾವು ಎಲ್ಲಾ ಮರದ ಹಣ್ಣನ್ನು ತಿನ್ನಬಹುದು. ಆದರೆ ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದು, ತಿಂದ್ರೆ ಸಾಯ್ತೀರ ಅಂತ ದೇವರು ಹೇಳಿದ್ದಾನೆ’ ಎಂದಳು. ಅದಕ್ಕೆ ಹಾವು ‘ನೀವು ಖಂಡಿತ ಸಾಯಲ್ಲ. ಆ ಹಣ್ಣು ತಿಂದ್ರೆ ನೀವು ದೇವರಂತೆ ಆಗ್ತೀರ’ ಎಂದಿತು. ಅದು ನಿಜನಾ? ಇಲ್ಲ, ಅದು ಶುದ್ಧಸುಳ್ಳು. ಆದರೆ ಹವ್ವ ಆ ಸುಳ್ಳನ್ನು ನಂಬಿದಳು. ಆ ಹಣ್ಣನ್ನು ನೋಡುತ್ತಾ ಇದ್ದಂತೆ ತಿನ್ನಬೇಕು ಎನ್ನುವ ಆಸೆ ಅವಳಲ್ಲಿ ಬೆಳೆಯಿತು. ಕೊನೆಗೆ ಆ ಹಣ್ಣನ್ನು ತಿಂದೇ ಬಿಟ್ಟಳು ಮತ್ತು ಆದಾಮನಿಗೂ ಕೊಟ್ಟಳು. ಆ ಹಣ್ಣು ತಿಂದರೆ ಸಾಯುತ್ತೇವೆ ಎಂದು ಆದಾಮನಿಗೆ ಗೊತ್ತಿದ್ದರೂ ಅವನು ತಿಂದುಬಿಟ್ಟ.

ಆದಾಮ ಮತ್ತ ಹವ್ವ ಏದೆನ್‌ ತೋಟದಿಂದ ಹೊರಗೆ ಬರುತ್ತಿದ್ದಾರೆ. ತೋಟವನ್ನು ಕಾಯಲು ಅದರ ಮುಂದೆ ದೇವದೂತರು ಹಾಗೂ ಧಗಧಗನೇ ಉರಿಯುತ್ತಿರುವ ಕತ್ತಿ ಇದೆ

ಸಂಜೆ ಯೆಹೋವನು ಆದಾಮ-ಹವ್ವರಿಗೆ, ‘ಯಾಕೆ ಆ ಹಣ್ಣನ್ನು ತಿಂದಿರಿ’ ಎಂದು ಕೇಳಿದನು. ‘ಹವ್ವ ಕೊಟ್ಟಳು ತಿಂದೆ’ ಎಂದನು ಆದಾಮ. ‘ಹಾವು ಹೇಳಿತು ಅದಕ್ಕೆ ತಿಂದೆ’ ಎಂದಳು ಹವ್ವ. ಆದಾಮ ಹವ್ವ ದೇವರ ಮಾತನ್ನು ಕೇಳದೆ ತಪ್ಪು ಮಾಡಿದ್ದರಿಂದ ಆತನು ಅವರನ್ನು ತೋಟದಿಂದ ಹೊರಗೆ ಹಾಕಿದನು. ತೋಟದೊಳಗೆ ಅವರು ಯಾವತ್ತೂ ಬರದೇ ಇರುವ ಹಾಗೆ ದೇವದೂತರನ್ನು ಹಾಗೂ ಧಗಧಗನೆ ಉರಿಯುವ ಕತ್ತಿಯನ್ನು ತೋಟದ ಮುಂದೆ ಕಾವಲಿಟ್ಟನು.

ಹಣ್ಣನ್ನು ತಿನ್ನಲು ಕುಮ್ಮಕ್ಕು ಕೊಟ್ಟವನನ್ನೂ ಶಿಕ್ಷಿಸುತ್ತೇನೆ ಎಂದು ಯೆಹೋವನು ಹೇಳಿದನು. ಹವ್ವಳ ಜೊತೆ ಮಾತಾಡಿದ್ದು ನಿಜವಾದ ಹಾವಲ್ಲ. ಯೆಹೋವ ದೇವರು ಹಾವಿಗೆ ಮಾತಾಡುವ ಶಕ್ತಿ ಕೊಟ್ಟಿರಲಿಲ್ಲ. ಹಾವು ಮಾತಾಡುವಂತೆ ಮಾಡಿದ್ದು ಒಬ್ಬ ಕೆಟ್ಟ ದೇವದೂತ. ಅವನು ಹವ್ವಳಿಗೆ ಮೋಸಮಾಡಲು ಹೀಗೆ ಮಾಡಿದ. ಅವನೇ ಪಿಶಾಚನಾದ ಸೈತಾನ. ಮುಂದೆ ಒಂದಿನ ಯೆಹೋವನು ಈ ಸೈತಾನನನ್ನು ನಾಶ ಮಾಡುತ್ತಾನೆ. ಆಗ ಜನರನ್ನು ಮೋಸಮಾಡಲಿಕ್ಕಾಗಲಿ ಅಥವಾ ತಪ್ಪುಮಾಡುವಂತೆ ಕುಮ್ಮಕ್ಕು ಕೊಡಲಿಕ್ಕಾಗಲಿ ಅವನಿರಲ್ಲ.

‘ಸೈತಾನನು ಮೊದಲಿನಿಂದಾನೇ ಕೊಲೆಗಾರ, ಅವನು ಸತ್ಯ ಬಿಟ್ಟು ಹೋದ. ಯಾಕಂದ್ರೆ ಸತ್ಯ ಅವನಿಗಿಷ್ಟ ಇಲ್ಲ.’—ಯೋಹಾನ 8:44

ಪ್ರಶ್ನೆಗಳು: ಹವ್ವ ಯಾಕೆ ಹಣ್ಣು ತಿಂದಳು? ಆದಾಮ ಹವ್ವ ದೇವರ ಮಾತು ಕೇಳದೇ ಹೋದದ್ದರಿಂದ ಏನಾಯಿತು? ಪಿಶಾಚನಾದ ಸೈತಾನ ಯಾರು?

ಆದಿಕಾಂಡ 3:1-24; ಯೋಹಾನ 8:44; 1 ಯೋಹಾನ 3:8; ಪ್ರಕಟನೆ 12:9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ