ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 11 ಪು. 32-ಪು. 33 ಪ್ಯಾ. 2
  • ನಂಬಿಕೆಯ ಪರೀಕ್ಷೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಿಕೆಯ ಪರೀಕ್ಷೆ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ದೇವರ ಪ್ರೀತಿಯ ಮಹಾನ್‌ ಪುರಾವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 11 ಪು. 32-ಪು. 33 ಪ್ಯಾ. 2
ಅಬ್ರಹಾಮನು ಮತ್ತು ಇಸಾಕನು ಬೆಟ್ಟದ ವರೆಗೂ ನಡೆದುಹೋದರು

ಪಾಠ 11

ನಂಬಿಕೆಯ ಪರೀಕ್ಷೆ

ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಯೆಹೋವನನ್ನು ಪ್ರೀತಿಸಲು ಮತ್ತು ಆತನ ಎಲ್ಲಾ ವಾಗ್ದಾನಗಳ ಮೇಲೆ ಭರವಸೆ ಇಡಲು ಕಲಿಸಿದನು. ಇಸಾಕನಿಗೆ 25 ವರ್ಷ ಇದ್ದಾಗ ಯೆಹೋವನು ಒಂದು ಕಷ್ಟದ ಕೆಲಸ ಮಾಡಲು ಅಬ್ರಹಾಮನಿಗೆ ಹೇಳಿದನು. ಅದೇನು ಗೊತ್ತಾ?

ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನ ಮೊರೀಯ ದೇಶದ ಬೆಟ್ಟದಲ್ಲಿ ಬಲಿಯಾಗಿ ನನಗೆ ಕೊಡು’ ಅಂದನು. ಯೆಹೋವನು ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅಬ್ರಹಾಮನಿಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ಆದರೂ ಯೆಹೋವನ ಮಾತಿಗೆ ವಿಧೇಯನಾದನು.

ಅಬ್ರಹಾಮ ಮಾರನೇ ದಿನ ಬೆಳಗ್ಗೆ ಇಸಾಕ ಮತ್ತು ಇಬ್ಬರು ಸೇವಕರನ್ನು ಕರೆದುಕೊಂಡು ಮೊರೀಯ ಕಡೆಗೆ ಹೆಜ್ಜೆ ಹಾಕಿದನು. ಮೂರು ದಿನಗಳ ನಂತರ ಅವರು ಬೆಟ್ಟದ ಹತ್ತಿರ ತಲುಪಿದರು. ಆಗ ಅಬ್ರಹಾಮ ತನ್ನ ಸೇವಕರಿಗೆ ‘ನೀವು ಇಲ್ಲೇ ಇರಿ. ನಾನು ನನ್ನ ಮಗ ದೇವರಿಗೆ ಬಲಿ ಅರ್ಪಿಸಿ ಬರ್ತಿವಿ’ ಎಂದು ಹೇಳಿದನು. ಕಟ್ಟಿಗೆಯನ್ನು ಇಸಾಕನ ಮೇಲೆ ಹೊರಿಸಿ ಅಬ್ರಹಾಮ ಕತ್ತಿಯನ್ನು ಕೈಯಲ್ಲಿಡಿದು ಹೋದನು. ಆಗ ಇಸಾಕನು ‘ಅಪ್ಪಾ, ಬಲಿಗೆ ಬೇಕಾದ ಪ್ರಾಣಿ ಎಲ್ಲಿ?’ ಎಂದು ಕೇಳಿದನು. ಅದಕ್ಕೆ ಅಬ್ರಹಾಮ ‘ಮಗನೇ ಅದನ್ನ ಯೆಹೋವನೇ ಕೊಡ್ತಾನೆ’ ಎಂದು ಉತ್ತರಿಸಿದನು.

ಬೆಟ್ಟವನ್ನು ತಲುಪಿದ ನಂತರ ಅವರಿಬ್ಬರು ಸೇರಿ ಯಜ್ಞವೇದಿಯನ್ನು ಕಟ್ಟಿದರು. ಅಬ್ರಹಾಮನು ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು.

ಇಸಾಕನನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು ಮತ್ತು ಅಬ್ರಹಾಮನು ಕತ್ತಿಯನ್ನು ಕೈಗೆತ್ತಿಕೊಂಡನು

ಅಬ್ರಹಾಮ ಕತ್ತಿಯನ್ನು ಕೈಗೆತ್ತಿಕೊಂಡನು. ತಕ್ಷಣ ಯೆಹೋವನ ದೂತನು ಆಕಾಶದಿಂದ ‘ಅಬ್ರಹಾಮ, ನಿನ್ನ ಮಗನನ್ನ ಕೊಲ್ಲಬೇಡ. ನಿನ್ನ ಒಬ್ಬನೇ ಮಗನನ್ನ ನನಗೆ ಅರ್ಪಿಸೋಕೆ ನೀನು ಹಿಂಜರಿಲಿಲ್ಲ. ಇದ್ರಿಂದ ದೇವರ ಮೇಲೆ ನಿನಗೆ ನಂಬಿಕೆ ಇದೆ ಅಂತ ಗೊತ್ತಾಯ್ತು’ ಅಂದನು. ಇದಾದ ಮೇಲೆ ಟಗರೊಂದು ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಅಬ್ರಹಾಮ ಕಂಡನು. ತಕ್ಷಣ ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅವನಿಗೆ ಬದಲಾಗಿ ಟಗರನ್ನು ಬಲಿಯಾಗಿ ಕೊಟ್ಟನು.

ಆ ದಿನದಿಂದ ಯೆಹೋವನು ಅಬ್ರಹಾಮನನ್ನು ‘ನನ್ನ ಸ್ನೇಹಿತ’ ಎಂದು ಕರೆದನು. ಯಾಕೆ ಗೊತ್ತಾ? ಯಾಕೆಂದರೆ ಅಬ್ರಹಾಮ ಯೆಹೋವ ದೇವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಮಾಡುತ್ತಿದ್ದ. ಯೆಹೋವನು ಯಾಕೆ ಹೇಳಿದರು ಅಂತ ಅರ್ಥ ಆಗದೇ ಇದ್ದಾಗಲೂ ಅದನ್ನು ಮಾಡಿದ.

ಅಬ್ರಹಾಮನು ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದನು

ಮತ್ತೊಮ್ಮೆ ಯೆಹೋವ ದೇವರು ಅಬ್ರಹಾಮನಿಗೆ ‘ನಾನು ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಹೆಚ್ಚಿಸ್ತೀನಿ’ ಎಂದು ಮಾತುಕೊಟ್ಟನು. ಇದರರ್ಥ ಯೆಹೋವ ದೇವರು ಎಲ್ಲಾ ಒಳ್ಳೇ ಜನರನ್ನು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸುವನು ಎಂದಾಗಿತ್ತು.

“ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.”—ಯೋಹಾನ 3:16

ಪ್ರಶ್ನೆಗಳು: ಯೆಹೋವ ದೇವರ ಮೇಲೆ ತುಂಬ ನಂಬಿಕೆ ಇದೆ ಎಂದು ಅಬ್ರಹಾಮ ಹೇಗೆ ತೋರಿಸಿದ? ಯೆಹೋವನು ಅಬ್ರಹಾಮನಿಗೆ ಏನೆಂದು ಮಾತು ಕೊಟ್ಟನು?

ಆದಿಕಾಂಡ 22:1-18; ಇಬ್ರಿಯ 11:17-19; ಯಾಕೋಬ 2:21-23

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ