ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 12 ಪು. 34-ಪು. 35 ಪ್ಯಾ. 1
  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಭಿನ್ನರಾಗಿದ್ದ ಅವಳಿಗಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಯಾಕೋಬ ಮತ್ತು ಏಸಾವ ಒಂದಾದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 12 ಪು. 34-ಪು. 35 ಪ್ಯಾ. 1
ಏಸಾವ ತನ್ನ ಜ್ಯೇಷ್ಠ ಪುತ್ರ ಹಕ್ಕನ್ನು ಕೊಟ್ಟಾಗ ಯಾಕೋಬ ಅದಕ್ಕೆ ಬದಲಿಯಾಗಿ ಕೆಂಪು ಸಾರು ಅವನಿಗೆ ಕೊಟ್ಟನು

ಪಾಠ 12

ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಇಸಾಕ ಮತ್ತು ರೆಬೆಕ್ಕ ತಮ್ಮ ಅವಳಿ ಮಕ್ಕಳಾದ ಯಾಕೋಬ ಮತ್ತು ಏಸಾವನ ಜೊತೆ ಇದ್ದಾರೆ

ಇಸಾಕನಿಗೆ 40 ವರ್ಷವಾದಾಗ ಅವನು ರೆಬೆಕ್ಕಳನ್ನು ಮದುವೆಯಾದ. ಅವನು ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ನಂತರ ಅವರಿಗೆ ಇಬ್ಬರು ಅವಳಿ ಗಂಡುಮಕ್ಕಳು ಹುಟ್ಟಿದರು.

ಮೊದಲ ಮಗನ ಹೆಸರು ಏಸಾವ. ಎರಡನೇ ಮಗನ ಹೆಸರು ಯಾಕೋಬ. ಏಸಾವನಿಗೆ ಹೊರಗೆ ಇರಲು ತುಂಬ ಇಷ್ಟ ಮತ್ತು ಅವನೊಬ್ಬ ಒಳ್ಳೇ ಬೇಟೆಗಾರ. ಆದರೆ ಯಾಕೋಬ ಹಾಗಲ್ಲ, ಅವನಿಗೆ ಮನೆಯಲ್ಲಿರಲು ಇಷ್ಟ.

ಆ ಕಾಲದಲ್ಲಿ ತಂದೆ ತೀರಿಕೊಂಡ ನಂತರ ಹಣ, ಹೊಲ-ಗದ್ದೆಯಲ್ಲಿ ಹೆಚ್ಚಿನ ಪಾಲು ಮೊದಲನೇ ಮಗನಿಗೆ ಸಿಗುತ್ತಿತ್ತು. ಅದನ್ನು ಆಸ್ತಿ ಅನ್ನುತ್ತಾರೆ. ಇಸಾಕನ ಕುಟುಂಬದಲ್ಲಿ ಈ ಆಸ್ತಿ ಇನ್ನೂ ವಿಶೇಷವಾಗಿತ್ತು. ಯಾಕೆಂದರೆ ಇದರಲ್ಲಿ ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನದಿಂದ ಬರುವ ಆಶೀರ್ವಾದಗಳೂ ಸೇರಿತ್ತು. ಏಸಾವನಿಗೆ ಆ ಆಶೀರ್ವಾದಗಳ ಬಗ್ಗೆ ಒಂಚೂರು ಗಣ್ಯತೆ ಇರಲಿಲ್ಲ. ಆದರೆ ಯಾಕೋಬನಿಗೆ ಅವು ತುಂಬ ಮುಖ್ಯ ಎಂದು ಗೊತ್ತಿತ್ತು.

ಯಾಕೋಬ ಮತ್ತು ಏಸಾವ

ಒಂದು ದಿನ ಏಸಾವ ಇಡೀ ದಿನ ಬೇಟೆಯಾಡಿ ತುಂಬ ಸುಸ್ತಾಗಿ ಮನೆಗೆ ಬಂದ. ಯಾಕೋಬ ರುಚಿಯಾದ ಅಡುಗೆ ತಯಾರಿಸುತ್ತಿದ್ದ. ಅದರ ಪರಿಮಳ ಏಸಾವನ ಮೂಗಿಗೆ ಹತ್ತಿತು. ಆಗ ಏಸಾವ ಯಾಕೋಬನಿಗೆ ‘ನನಗೆ ತುಂಬ ಹಸಿವಾಗ್ತಿದೆ. ಆ ಕೆಂಪು ಸಾರು ತಿನ್ನೋಕೆ ಕೊಡು’ ಎಂದನು. ಆಗ ಯಾಕೋಬ ‘ಕೊಡುತ್ತೀನಿ, ಆದರೆ ಅದಕ್ಕೆ ಮುಂಚೆ ಜ್ಯೇಷ್ಠ ಪುತ್ರನಾಗಿ ನಿನಗಿರೋ ಹಕ್ಕನ್ನ ಮೊದಲು ನನಗೆ ಕೊಡುತ್ತೀನಿ ಅಂತ ಮಾತುಕೊಡು’ ಎಂದನು. ಅದಕ್ಕೆ ಏಸಾವ ‘ಜ್ಯೇಷ್ಠ ಪುತ್ರನಾಗಿ ನನಗಿರೋ ಹಕ್ಕನ್ನ ಇಟ್ಕೊಂಡು ನಾನೇನು ಮಾಡ್ಲಿ? ನೀನೇ ತಗೋ. ನನಗೀಗ ಊಟ ಕೊಡು ಸಾಕು’ ಎಂದ. ಏಸಾವ ಮಾಡಿದ್ದು ಜಾಣತನನಾ? ಖಂಡಿತ ಇಲ್ಲ. ಬರೀ ಒಂದು ಹೊತ್ತು ಊಟಕ್ಕಾಗಿ ಅವನು ತುಂಬ ಅಮೂಲ್ಯವಾದ ವಿಷಯವನ್ನೇ ಕೊಟ್ಟುಬಿಟ್ಟ.

ವರ್ಷಗಳು ಉರುಳಿತು, ಬಹಳ ವೃದ್ಧನಾದ ಇಸಾಕನು ಮೊದಲ ಮಗನನ್ನು ಆಶೀರ್ವದಿಸುವ ಸಮಯ ಬಂದೇ ಬಿಟ್ಟಿತು. ಆದರೆ ರೆಬೆಕ್ಕ ಆ ಆಶೀರ್ವಾದ ಎರಡನೇ ಮಗನಾದ ಯಾಕೋಬನಿಗೆ ಸಿಗುವಂತೆ ಮಾಡಿದಳು. ಈ ವಿಷಯ ಏಸಾವನಿಗೆ ಗೊತ್ತಾದಾಗ ಅವನ ಕೋಪ ನೆತ್ತಿಗೇರಿತು. ಎಷ್ಟರ ಮಟ್ಟಿಗೆಂದರೆ ಅವನು ತನ್ನ ಜೊತೆ ಹುಟ್ಟಿದ ತಮ್ಮನನ್ನು ಕೊಲ್ಲಲು ಮುಂದಾದ. ಇಸಾಕ ಮತ್ತು ರೆಬೆಕ್ಕ ಯಾಕೋಬನನ್ನು ಏಸಾವನಿಂದ ಕಾಪಾಡಲು ಬಯಸಿದರು. ಆದ್ದರಿಂದ ಅವನಿಗೆ ‘ನಿನ್ನ ತಾಯಿಯ ಅಣ್ಣನಾದ ಲಾಬಾನನ ಮನೆಗೆ ಹೋಗು. ಏಸಾವನ ಕೋಪ ಇಳಿಯೋ ತನಕ ಅಲ್ಲೇ ಇರು’ ಎಂದರು. ಯಾಕೋಬ ಅಪ್ಪ-ಅಮ್ಮನ ಮಾತನ್ನು ಕೇಳಿದ ಮತ್ತು ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋದನು.

“ಒಬ್ಬ ಮನುಷ್ಯ ಲೋಕವನ್ನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ? ಪ್ರಾಣ ಉಳಿಸ್ಕೊಳ್ಳೋಕೆ ಒಬ್ಬ ಮನುಷ್ಯ ಏನು ತಾನೇ ಕೊಡೋಕಾಗುತ್ತೆ?”—ಮಾರ್ಕ 8:36, 37

ಪ್ರಶ್ನೆಗಳು: ಏಸಾವ ಎಂಥವನಾಗಿದ್ದನು? ಯಾಕೋಬ ಎಂಥವನಾಗಿದ್ದನು? ಏಸಾವನ ಆಶೀರ್ವಾದ ಯಾಕೋಬನಿಗೆ ಹೇಗೆ ಸಿಕ್ಕಿತು?

ಆದಿಕಾಂಡ 25:20-34; 27:1–28:5; ಇಬ್ರಿಯ 12:16, 17

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ