ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 31 ಪು. 78-ಪು. 79 ಪ್ಯಾ. 1
  • ಯೆಹೋಶುವ ಮತ್ತು ಗಿಬ್ಯೋನ್ಯರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋಶುವ ಮತ್ತು ಗಿಬ್ಯೋನ್ಯರು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ವಿವೇಕಿಗಳಾದ ಗಿಬ್ಯೋನ್ಯರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಸೂರ್ಯನು ಕದಲದೆ ನಿಲ್ಲುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋಶುವ 1:9—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”
    ಬೈಬಲ್‌ ವಚನಗಳ ವಿವರಣೆ
  • ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 31 ಪು. 78-ಪು. 79 ಪ್ಯಾ. 1
ಗಿಬ್ಯೋನ್ಯರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಯೆಹೋಶುವ ಮತ್ತವನ ಸೈನ್ಯದ ಹತ್ತಿರ ಬರುತ್ತಾರೆ

ಪಾಠ 31

ಯೆಹೋಶುವ ಮತ್ತು ಗಿಬ್ಯೋನ್ಯರು

ಯೆರಿಕೋ ಪಟ್ಟಣದ ಸುದ್ದಿ ಕಾನಾನಿನ ಬೇರೆ ಜನಾಂಗಗಳಿಗೆ ಹಬ್ಬಿತು. ಅಲ್ಲಿನ ರಾಜರು ಒಟ್ಟಿಗೆ ಸೇರಿ ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಲು ತೀರ್ಮಾನ ಮಾಡಿದರು. ಆದರೆ ಗಿಬ್ಯೋನ್ಯರ ಯೋಚನೆಯೇ ಬೇರೆ ಆಗಿತ್ತು. ಅವರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಯೆಹೋಶುವನ ಹತ್ತಿರ ಬಂದು ‘ನಾವು ದೂರದ ದೇಶದಿಂದ ಬಂದಿದ್ದೀವಿ. ನಾವು ಯೆಹೋವನ ಬಗ್ಗೆ ಮತ್ತು ಆತನು ನಿಮಗಾಗಿ ಈಜಿಪ್ಟಿನಲ್ಲಿ ಹಾಗೂ ಮೋವಾಬ್‌ನಲ್ಲಿ ಮಾಡಿದ್ದೆಲ್ಲವನ್ನು ಕೇಳಿದ್ದೀವಿ. ನೀವು ನಮ್ಮ ವಿರುದ್ಧ ಯುದ್ಧ ಮಾಡಲ್ಲ ಎಂದು ಮಾತು ಕೊಡಿ. ನಾವು ನಿಮ್ಮ ದಾಸರಾಗ್ತೀವಿ’ ಅಂದರು.

ಯೆಹೋಶುವ ಅವರ ಮಾತನ್ನು ನಂಬಿ ಯುದ್ಧ ಮಾಡದಿರಲು ಒಪ್ಪಿದ. ಮೂರು ದಿನ ಆದ ಮೇಲೆ ಅವರು ದೂರದ ದೇಶದವರಲ್ಲ, ಕಾನಾನ್‌ ದೇಶದವರೇ ಎಂದು ಗೊತ್ತಾಯಿತು. ಆಗ ಯೆಹೋಶುವನು ಗಿಬ್ಯೋನ್ಯರಿಗೆ ‘ನೀವು ಯಾಕೆ ನಮಗೆ ಸುಳ್ಳು ಹೇಳಿದಿರಿ?’ ಎಂದು ಕೇಳಿದ. ಅದಕ್ಕೆ ಅವರು ‘ನಮಗೆ ತುಂಬ ಭಯ ಆಗಿತ್ತು! ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುತ್ತಿದ್ದಾನೆ ಎಂದು ನಮಗೆ ಗೊತ್ತು. ದಯವಿಟ್ಟು ನಮ್ಮನ್ನು ಕೊಲ್ಲಬೇಡಿ’ ಎಂದು ಉತ್ತರ ಕೊಟ್ಟರು. ಯೆಹೋಶುವನು ಕೊಟ್ಟ ಮಾತಿನಂತೆ ನಡೆದುಕೊಂಡನು ಮತ್ತು ಅವರನ್ನು ಕೊಲ್ಲಲಿಲ್ಲ.

ಇದಾದ ಸ್ವಲ್ಪ ಸಮಯದಲ್ಲೇ ಕಾನಾನಿನ ಐದು ರಾಜರು ಮತ್ತು ಅವರ ಸೈನ್ಯ ಗಿಬ್ಯೋನ್ಯರಿಗೆ ಬೆದರಿಕೆ ಹಾಕಿತು. ಯೆಹೋಶುವ ಮತ್ತು ಅವನ ಸೈನ್ಯ ಗಿಬ್ಯೋನ್ಯರನ್ನು ಕಾಪಾಡಲು ರಾತ್ರಿಯಿಡೀ ನಡೆದರು. ಮಾರನೇ ದಿನ ಬೆಳಗ್ಗೆ ಯುದ್ಧ ಶುರು ಆಯಿತು. ಕಾನಾನ್ಯರು ದಿಕ್ಕಾಪಾಲಾಗಿ ಓಡಿಹೋಗಲು ಆರಂಭಿಸಿದರು. ಅವರು ಹೋದಲ್ಲೆಲ್ಲಾ ಯೆಹೋವನು ಅವರ ಮೇಲೆ ದೊಡ್ಡ ಆಲಿಕಲ್ಲು ಮಳೆ ಸುರಿಸಿದನು. ಆಮೇಲೆ ಸೂರ್ಯನು ಚಲಿಸದೆ ಹಾಗೇ ನಿಲ್ಲುವಂತೆ ಮಾಡಲು ಯೆಹೋಶುವ ಯೆಹೋವನನ್ನು ಬೇಡಿಕೊಂಡ. ಈ ಹಿಂದೆ ನಡೆದಿರದ ವಿಷಯವನ್ನು ಅಂದರೆ ಯಾವತ್ತೂ ಕದಲದ ಸೂರ್ಯನು ಒಂದೇ ಕಡೆ ನಿಲ್ಲುವಂತೆ ಯೆಹೋಶುವನು ಯಾಕೆ ಕೇಳಿಕೊಂಡ? ಯಾಕೆಂದರೆ ಯೆಹೋಶುವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಇಸ್ರಾಯೇಲ್ಯರು ಕಾನಾನಿನ ರಾಜರನ್ನು ಹಾಗೂ ಅವರ ಸೈನಿಕರನ್ನು ಸೋಲಿಸುವ ತನಕ ಒಂದು ಇಡೀ ದಿನ ಸೂರ್ಯ ಮುಳುಗಲೇ ಇಲ್ಲ.

ಯೆಹೋಶುವ ಸ್ವರ್ಗದ ಕಡೆಗೆ ನೋಡುತ್ತಾ ಸೂರ್ಯನು ಚಲಿಸದೆ ಹಾಗೇ ನಿಲ್ಲುವಂತೆ ಮಾಡಲು ಯೆಹೋವನನ್ನು ಬೇಡಿಕೊಳ್ಳುತ್ತಿದ್ದಾನೆ

“ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ. ಇದಕ್ಕಿಂತ ಬೇರೆ ಏನೇ ಬಂದ್ರೂ ಅದು ಸೈತಾನನಿಂದ ಬಂದಿರುತ್ತೆ.”—ಮತ್ತಾಯ 5:37

ಪ್ರಶ್ನೆಗಳು: ಗಿಬ್ಯೋನ್ಯರು ತಮ್ಮ ರಕ್ಷಣೆಗಾಗಿ ಏನು ಮಾಡಿದರು? ಯೆಹೋವನು ಇಸ್ರಾಯೇಲ್ಯರಿಗೆ ಹೇಗೆ ಸಹಾಯ ಮಾಡಿದ?

ಯೆಹೋಶುವ 9:1–10:15

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ