ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 38 ಪು. 92-ಪು. 93 ಪ್ಯಾ. 1
  • ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಂದ ಶಕ್ತಿ ಪಡೆದ ಸಂಸೋನ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಅತಿ ಬಲಿಷ್ಠ ಪುರುಷ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಬಲದಿಂದ ಸಂಸೋನನು ಜಯಗಳಿಸುತ್ತಾನೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಸಂಸೋನನ ತರ ಯೆಹೋವನನ್ನ ನಂಬಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 38 ಪು. 92-ಪು. 93 ಪ್ಯಾ. 1
ಸಂಸೋನ ದಾಗೋನನ ದೇವಾಲಯದಲ್ಲಿ ಕಂಬಗಳನ್ನು ಎಳೆದಾಗ ಕಟ್ಟಡ ಕುಸಿಯುತ್ತಿದೆ

ಪಾಠ 38

ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಕಾಲ ಕಳೆದಂತೆ ಅನೇಕ ಇಸ್ರಾಯೇಲ್ಯರು ಮತ್ತೊಮ್ಮೆ ಮೂರ್ತಿಗಳನ್ನು ಆರಾಧಿಸಲು ಆರಂಭಿಸಿದರು. ಆದ್ದರಿಂದ ಯೆಹೋವನು ಅವರನ್ನು ಫಿಲಿಷ್ಟಿಯರ ಕೈಗೊಪ್ಪಿಸಿದನು. ಆದರೆ ಕೆಲವು ಇಸ್ರಾಯೇಲ್ಯರು ಯೆಹೋವನನ್ನು ಪ್ರೀತಿಸುತ್ತಿದ್ದರು. ಅವರಲ್ಲಿ ಒಬ್ಬ ಮಾನೋಹ. ಅವನಿಗೆ ಮಕ್ಕಳಿರಲಿಲ್ಲ. ಒಂದಿನ ಯೆಹೋವನು ಒಬ್ಬ ದೇವದೂತನನ್ನು ಮಾನೋಹನ ಹೆಂಡತಿಯ ಬಳಿ ಕಳುಹಿಸಿದ. ದೇವದೂತ ಅವಳಿಗೆ ‘ನಿನಗೊಬ್ಬ ಮಗ ಹುಟ್ತಾನೆ. ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿಯರಿಂದ ಕಾಪಾಡುತ್ತಾನೆ. ಅವನು ನಾಜೀರ ಆಗಿರ್ತಾನೆ’ ಅಂದನು. ನಾಜೀರ ಅಂದರೆ ಯಾರು ಗೊತ್ತಾ? ಯೆಹೋವನ ವಿಶೇಷ ಸೇವಕರೇ ನಾಜೀರರು. ಅವರು ತಮ್ಮ ತಲೆಕೂದಲನ್ನು ಕತ್ತರಿಸಬಾರದಿತ್ತು.

ಸಮಯಾನಂತರ ಮಾನೋಹನಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಸಂಸೋನ ಎಂದು ಹೆಸರಿಡಲಾಯಿತು. ಸಂಸೋನ ದೊಡ್ಡವನಾದಂತೆ ಯೆಹೋವನು ಅವನಿಗೆ ತುಂಬ ಶಕ್ತಿ ಕೊಟ್ಟನು. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಬರೀ ಕೈಯಿಂದ ಸಿಂಹವನ್ನು ಕೊಲ್ಲಬಹುದಿತ್ತು. ಒಂದು ಸಂದರ್ಭದಲ್ಲಿ ಒಬ್ಬನೇ 30 ಫಿಲಿಷ್ಟಿಯರನ್ನು ಕೊಂದ. ಫಿಲಿಷ್ಟಿಯರು ಅವನನ್ನು ದ್ವೇಷಿಸುತ್ತಿದ್ದರು. ಅವನನ್ನು ಸಾಯಿಸಲು ದಾರಿ ಹುಡುಕುತ್ತಿದ್ದರು. ಒಂದಿನ ರಾತ್ರಿ ಸಂಸೋನ ಗಾಜಾ ಎಂಬಲ್ಲಿ ಮಲಗಿದ್ದನು. ಆಗ ಫಿಲಿಷ್ಟಿಯರು ಅಲ್ಲಿಗೆ ಬಂದು ಬೆಳಗಾಗುತ್ತಲೇ ಇವನನ್ನು ಕೊಂದುಹಾಕಬೇಕು ಅಂದುಕೊಂಡು ಪಟ್ಟಣದ ಬಾಗಿಲ ಬಳಿ ಹೊಂಚು ಹಾಕಿ ಕುಳಿತಿದ್ದರು. ಆದರೆ ಸಂಸೋನ ಮಧ್ಯರಾತ್ರಿ ಎದ್ದು ಪಟ್ಟಣದ ಬಾಗಿಲನ್ನು ನೆಲದಿಂದ ಬುಡಸಮೇತ ಹೊರಗೆ ಕಿತ್ತು ತೆಗೆದನು. ಅಲ್ಲದೇ ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೆಬ್ರೋನಿನ ಹತ್ತಿರವಿರುವ ಬೆಟ್ಟದ ತುದಿಗೆ ಹೋದನು!

ನಂತರ ಫಿಲಿಷ್ಟಿಯರು ಸಂಸೋನನ ಪ್ರೇಯಸಿಯಾದ ದೆಲೀಲಳ ಬಳಿ ಹೋಗಿ ‘ಸಂಸೋನನ ಶಕ್ತಿಗೆ ಏನು ಕಾರಣ ಎಂದು ತಿಳಿದುಕೊಂಡು ಅದನ್ನು ನಮಗೆ ತಿಳಿಸಿದರೆ ನಿನಗೆ 5,500 ಬೆಳ್ಳಿ ಶೆಕೆಲನ್ನ ಕೊಡ್ತೀವಿ. ನಾವು ಅವನನ್ನು ಹಿಡಿದು ಜೈಲಿಗೆ ಹಾಕಬೇಕು’ ಅಂದರು. ದೆಲೀಲಳಿಗೆ ಹಣ ಬೇಕಿದ್ದರಿಂದ ಅದಕ್ಕೆ ಒಪ್ಪಿದಳು. ಮೊದಮೊದಲು ಸಂಸೋನ ತನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ. ಆದರೆ ದೆಲೀಲ ಅವನನ್ನು ತುಂಬಾ ಪೀಡಿಸಿದ್ದರಿಂದ ಅವನು ತನ್ನ ಶಕ್ತಿಯ ಗುಟ್ಟನ್ನು ಹೇಳಿಬಿಟ್ಟ. ‘ನಾನು ದೇವರ ನಾಜೀರ. ಹಾಗಾಗಿ ಇಲ್ಲಿ ತನಕ ನನ್ನ ತಲೆಕೂದಲನ್ನ ಕತ್ತರಿಸಿಲ್ಲ. ನಾನು ತಲೆಕೂದಲನ್ನು ಕತ್ತರಿಸಿದರೆ ನನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ’ ಅಂದನು. ಶಕ್ತಿಯ ಗುಟ್ಟನ್ನು ಅವಳಿಗೆ ಹೇಳಿ ಸಂಸೋನ ಅಂದೆಂಥ ದೊಡ್ಡ ತಪ್ಪು ಮಾಡಿದ ಅಲ್ವಾ?

ತಕ್ಷಣ ದೆಲೀಲ ಫಿಲಿಷ್ಟಿಯರಿಗೆ ‘ಸಂಸೋನನ ಶಕ್ತಿಯ ಗುಟ್ಟು ನನಗೆ ಗೊತ್ತಾಯಿತು!’ ಅಂದಳು. ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿ ಬೇರೆಯವರು ಬಂದು ಅವನ ತಲೆಕೂದಲನ್ನು ಕತ್ತರಿಸುವಂತೆ ಮಾಡಿದಳು. ಆಮೇಲೆ, ‘ಸಂಸೋನ, ಫಿಲಿಷ್ಟಿಯರು ಬಂದಿದ್ದಾರೆ!’ ಎಂದು ಕೂಗಿದಳು. ಸಂಸೋನನು ಎದ್ದಾಗ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದನು. ಫಿಲಿಷ್ಟಿಯರು ಅವನನ್ನು ಹಿಡಿದು ಕಣ್ಣುಗಳನ್ನು ಕಿತ್ತು ಜೈಲಿಗೆ ಹಾಕಿದರು.

ಒಂದಿನ ಸಾವಿರಾರು ಫಿಲಿಷ್ಟಿಯರು ತಮ್ಮ ದೇವರಾದ ದಾಗೋನನ ದೇವಾಲಯದಲ್ಲಿ ಸೇರಿದ್ದರು. ‘ನಮ್ಮ ದೇವರು ಸಂಸೋನನನ್ನ ನಮ್ಮ ಕೈಗೆ ಒಪ್ಪಿಸಿದ್ದಾನೆ. ಅವನನ್ನು ಹೊರಗೆ ಎಳೆದು ತನ್ನಿರಿ! ಸ್ವಲ್ಪ ಮಜಾ ನೋಡ್ಬೇಕು’ ಎಂದು ಕಿರುಚಿದರು. ಅವರು ಸಂಸೋನನನ್ನು ಎರಡು ಕಂಬಗಳ ಮಧ್ಯೆ ನಿಲ್ಲಿಸಿ ಅಪಹಾಸ್ಯ ಮಾಡಿದರು. ಆಗ ಸಂಸೋನನು ‘ಯೆಹೋವನೇ, ದಯವಿಟ್ಟು ಇದೊಂದು ಸಲ ನನಗೆ ಶಕ್ತಿ ಕೊಡು’ ಎಂದು ಬೇಡಿಕೊಂಡನು. ಈಗ ಅವನ ತಲೆಕೂದಲು ಬೆಳೆದಿತ್ತು. ತನ್ನೆಲ್ಲಾ ಶಕ್ತಿ ಕೂಡಿಸಿ ಆ ಆಲಯದ ಕಂಬಗಳನ್ನು ತಳ್ಳಿದನು. ಇಡೀ ಕಟ್ಟಡ ಕುಸಿದು ಅಲ್ಲಿದ್ದವರ ಮೇಲೆ ಬಿದ್ದಿತು. ಹೀಗೆ ಅವರ ಜೊತೆ ಸಂಸೋನನೂ ಸತ್ತನು.

“ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.”—ಫಿಲಿಪ್ಪಿ 4:13

ಪ್ರಶ್ನೆಗಳು: ಸಂಸೋನನು ಹೇಗೆ ಅಷ್ಟೊಂದು ಬಲಶಾಲಿಯಾಗಿದ್ದ? ತನ್ನ ಶಕ್ತಿಗೆ ಕಾರಣ ಏನು ಎಂದು ಸಂಸೋನ ದೆಲೀಲಳಿಗೆ ತಿಳಿಸಿದಾಗ ಏನಾಯಿತು?

ನ್ಯಾಯಸ್ಥಾಪಕರು 13:1–16:31

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ