ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 47 ಪು. 114-ಪು. 115 ಪ್ಯಾ. 3
  • ಯೆಹೋವನು ಎಲೀಯನನ್ನು ಬಲಪಡಿಸಿದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಎಲೀಯನನ್ನು ಬಲಪಡಿಸಿದ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಅವರ ನಂಬಿಕೆಯನ್ನು ಅನುಕರಿಸಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ನೀವು ಎಲೀಯನಂತೆ ನಂಬಿಗಸ್ತರಾಗಿರುವಿರೊ?
    ಕಾವಲಿನಬುರುಜು—1997
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 47 ಪು. 114-ಪು. 115 ಪ್ಯಾ. 3
ಎಲೀಯ ಹೋರೇಬ್‌ ಬೆಟ್ಟದ ಗುಹೆಯ ಹೊರಗೆ ನಿಂತು ದೇವದೂತನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾನೆ

ಪಾಠ 47

ಯೆಹೋವನು ಎಲೀಯನನ್ನು ಬಲಪಡಿಸಿದ

ಬಾಳನ ಪ್ರವಾದಿಗಳೆಲ್ಲರೂ ಕೊಲ್ಲಲ್ಪಟ್ಟರು ಎನ್ನುವ ಸುದ್ದಿ ಈಜೆಬೇಲಳಿಗೆ ಗೊತ್ತಾದಾಗ ಅವಳಿಗೆ ತುಂಬಾ ಕೋಪ ಬಂತು. ಅವಳು ಎಲೀಯನಿಗೆ ‘ಬಾಳನ ಪ್ರವಾದಿಗಳಿಗೆ ಆದ ಗತಿ ನಾಳೆ ನಿನಗೂ ಆಗುವುದು’ ಎಂಬ ಸಂದೇಶ ಕಳುಹಿಸಿದಳು. ಈ ವಿಷಯ ಕೇಳಿ ಎಲೀಯನಿಗೆ ತುಂಬಾ ಭಯವಾಯಿತು. ಅವನು ಕಾಡಿಗೆ ಓಡಿ ಹೋದ. ನಂತರ ‘ಯೆಹೋವನೇ, ನನಗೆ ಸಾಕಾಯ್ತು. ನನ್ನ ಜೀವ ತೆಗೆದುಬಿಡು’ ಎಂದು ಬೇಡಿದ. ಎಲೀಯನಿಗೆ ಸುಸ್ತಾಗಿದ್ದರಿಂದ ಒಂದು ಪೊದೆಯ ಕೆಳಗೆ ನಿದ್ರೆಗೆ ಜಾರಿದ.

ಆಗ ದೇವದೂತನೊಬ್ಬ ಅವನನ್ನು ಎಬ್ಬಿಸಿ ‘ಎದ್ದು ಊಟಮಾಡು’ ಅಂದ. ಎಲೀಯ ಎದ್ದು ನೋಡಿದಾಗ ಬಿಸಿಯಾಗಿದ್ದ ಕಲ್ಲುಗಳ ಮೇಲೆ ಒಂದು ರೊಟ್ಟಿ ಮತ್ತು ತಂಬಿಗೆ ನೀರಿತ್ತು. ಅವನು ಊಟ ಮಾಡಿ ಮತ್ತೆ ನಿದ್ರೆಗೆ ಜಾರಿದ. ದೇವದೂತ ಮತ್ತೆ ಅವನನ್ನು ಎಬ್ಬಿಸಿ ‘ಊಟಮಾಡು, ನೀನು ತುಂಬ ಪ್ರಯಾಣ ಮಾಡಬೇಕಿದೆ’ ಅಂದ. ಎಲೀಯ ಎದ್ದು ಊಟ ಮಾಡಿದ. ಆಮೇಲೆ ಅವನು 40 ದಿನ ಹಗಲೂರಾತ್ರಿ ಹೋರೇಬ್‌ ಬೆಟ್ಟ ಮುಟ್ಟುವವರೆಗೆ ಪ್ರಯಾಣ ಮಾಡಿದ. ಅಲ್ಲಿಗೆ ತಲುಪಿದ ಮೇಲೆ ನಿದ್ರೆ ಮಾಡಲು ಒಂದು ಗುಹೆಯೊಳಗೆ ಹೋದ. ಆಗ ಯೆಹೋವನು ಅವನಿಗೆ ‘ಎಲೀಯ, ಇಲ್ಲೇನು ಮಾಡ್ತಿದ್ದೀಯ?’ ಎಂದು ಕೇಳಿದನು. ಆಗ ಎಲೀಯ ‘ಇಸ್ರಾಯೇಲ್ಯರು ನಿನಗೆ ಕೊಟ್ಟ ಮಾತನ್ನು ಮುರಿದಿದ್ದಾರೆ. ಯಜ್ಞವೇದಿಯನ್ನು ಹಾಳುಮಾಡಿ ಪ್ರವಾದಿಗಳನ್ನು ಕೊಂದಿದ್ದಾರೆ. ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ’ ಅಂದ.

ಆಗ ಯೆಹೋವನು ಅವನಿಗೆ ‘ಹೊರಗೆ ಹೋಗಿ ನಿಂತ್ಕೋ’ ಅಂದನು. ಮೊದಲು ಬಲವಾದ ಬಿರುಗಾಳಿ ಅವನಿದ್ದ ಗುಹೆಯನ್ನು ಹಾದು ಹೋಯಿತು. ಆಮೇಲೆ ಭೂಕಂಪವಾಯಿತು. ತರುವಾಯ ಬೆಂಕಿ ಬಂತು. ಕೊನೆಗೆ ಪ್ರಶಾಂತವಾದ ಚಿಕ್ಕ ಧ್ವನಿಯನ್ನ ಎಲೀಯ ಕೇಳಿಸಿಕೊಂಡ. ಅವನು ಬಟ್ಟೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡು ಗುಹೆಯ ಹೊರಗೆ ನಿಂತ. ಯೆಹೋವನು ಮತ್ತೊಮ್ಮೆ ಅವನನ್ನು ‘ನೀನು ಯಾಕೆ ಓಡಿ ಬಂದಿದ್ದೀಯಾ?’ ಎಂದು ಕೇಳಿದ. ಆಗ ಎಲೀಯ ‘ಜೀವಂತವಾಗಿ ಇರುವವನು ನಾನೊಬ್ಬನೇ’ ಅಂದ. ಆಗ ಯೆಹೋವನು ‘ನೀನೊಬ್ಬನೇ ಅಲ್ಲ, ನನ್ನನ್ನು ಆರಾಧಿಸುವ ಇನ್ನೂ 7,000 ಜನ ಇಸ್ರಾಯೇಲಿನಲ್ಲಿ ಇದ್ದಾರೆ. ನೀನು ಎದ್ದು ಪಟ್ಟಣಕ್ಕೆ ಹೋಗಿ ಎಲೀಷನನ್ನು ಪ್ರವಾದಿಯಾಗಿ ನೇಮಿಸು’ ಅಂದನು. ತಕ್ಷಣ ಎಲೀಯ ಯೆಹೋವನು ಹೇಳಿದಂತೆ ಮಾಡಲು ಹೋದನು. ಯೆಹೋವನ ಮಾತು ಕೇಳಿದರೆ ಆತನು ನಿಮಗೂ ಸಹಾಯ ಮಾಡುತ್ತಾನಾ? ಖಂಡಿತ ಮಾಡುತ್ತಾನೆ. ಬರಗಾಲದ ಸಮಯದಲ್ಲಿ ನಡೆದ ಮತ್ತೊಂದು ಘಟನೆಯನ್ನು ಈಗ ನೋಡೋಣ.

“ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6

ಪ್ರಶ್ನೆಗಳು: ಎಲೀಯ ಯಾಕೆ ಓಡಿ ಹೋದ? ಯೆಹೋವನು ಎಲೀಯನಿಗೆ ಏನು ಹೇಳಿದ?

1 ಅರಸು 19:1-18; ರೋಮನ್ನರಿಗೆ 11:2-4

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ